ಮನೆಯೆಂಬುದು ಮನಸ್ಸಿಗೆ ನೆಮ್ಮದಿ, ಸಂತೋಷ ನೀಡುವ ಜಾಗ. ಅದೆಷ್ಟೇ ಒತ್ತಡ, ಆಯಾಸವಿದ್ದರೂ ಮನೆ ಅದನ್ನೆಲ್ಲವನ್ನು ದೂರಮಾಡುತ್ತದೆ. ಆದರೆ ಅಂತಹ ನೆಮ್ಮದಿಯನ್ನುನೀಡುವ ಜಾಗದಲ್ಲಿ ಇನ್ನಿಲ್ಲದ ಕಿರಿಕಿರಿಯುಂಟಾದರೆ ಆಗ ಮಾತ್ರ ಅತೀ ಬೇಸರವಾಗುತ್ತದೆ. ಮನೆಯಲ್ಲಿ ಪದೇ ಪದೇ ಕ್ಷುಲ್ಲಕ ಕಾರಣಕ್ಕೆ ಕುಟುಂಬ ಸದಸ್ಯರ ನಡುವೆ ಜಗಳ, ಮುನಿಸು ಉಂಟಾಗುತ್ತಿದ್ದರೆ ಆಗ ಮಾನಸಿಕ ಅಶಾಂತಿ ಮತ್ತು ಸಂತೋಷದ ಕೊರತೆಯ ಭಾವನೆ ಮೂಡುತ್ತದೆ. ವಾಸ್ತು ಶಾಸ್ತ್ರದ ಪ್ರಕಾರ ಮನೆಯಲ್ಲಿ ಈ ರೀತಿಯ ಕಲಹಗಳಾಗಲು ಅಲ್ಲಿ ತುಂಬಿರುವ ನಕಾರಾತ್ಮಕ ಶಕ್ತಿಗಳೇ ಕಾರಣ ಎನ್ನಲಾಗಿದೆ. ಅದಕ್ಕೆ ಸರಳ ಉಪಾಯವನ್ನು ಸಹ ಶಾಸ್ತ್ರದಲ್ಲಿ ಹೇಳಲಾಗಿದೆ. ಅದೇನೆಂದರೆ ಕರ್ಪೂರದ ಉಪಯೋಗ. ಕರ್ಪೂರವನ್ನು ಮನೆಯಲ್ಲಿ ಯಾವ ರೀತಿ ಬಳಸುವುದರಿಂದ ವಾತಾವರಣವನ್ನು ಶುದ್ಧೀಕರಿಸಿ, ನೆಮ್ಮದಿ, ಸಂತೋಷ ಮರಳುವಂತೆ ಮಾಡುತ್ತದೆ.
ಸುವಾಸನೆಯನ್ನು ಬೀರುವ ಕರ್ಪೂರದಲ್ಲಿ ನಕಾರಾತ್ಮಕ ಶಕ್ತಿಯನ್ನು ಓಡಿಸುವ ಸಾಮರ್ಥ್ಯವಿದೆ. ಮನೆಯಲ್ಲಿ ಕರ್ಪೂರವನ್ನು ಬಳಸುವುದರಿಂದ ಮನೆಯಲ್ಲಿ ಶಾಂತಿ, ನೆಮ್ಮದಿ ನೆಲೆಸುತ್ತದೆ. ವಾತಾವರಣ ತಿಳಿಯಾಗುತ್ತದೆ. ವಾಸ್ತು ಶಾಸ್ತ್ರದಲ್ಲಿ ಕರ್ಪೂರವನ್ನು ಬಳಸುವುದರಿಂದ ಸಿಗುವ ಪ್ರಯೋಜನಗಳ ಬಗ್ಗೆ ಹೇಳಲಾಗಿದೆ.
* ಪ್ರತಿದಿನ ಸಂಜೆ ಕರ್ಪೂರವನ್ನು ಹಚ್ಚುವುದರಿಂದ ನಿಮ್ಮ ಮನೆಯ ವಾತಾವರಣ ಶುದ್ಧವಾಗುತ್ತದೆ. ಇದರ ಸುವಾಸನೆಯು ಒತ್ತಡವನ್ನು ಕಡಿಮೆ ಮಾಡುತ್ತದೆ ಮತ್ತು ಕುಟುಂಬ ಸದಸ್ಯರ ನಡುವಿನ ಪ್ರೀತಿಯನ್ನು ಹೆಚ್ಚಿಸುತ್ತದೆ.
ಇದನ್ನೂ ಓದಿ : ಕಟಕ ರಾಶಿಯಲ್ಲಿ ಅಪರೂಪದ ಸರಸ್ವತಿ ರಾಜಯೋಗ 2026 : ಮೇಷ ಸೇರಿ ಈ 4 ರಾಶಿಯವರಿಗೆ ಸಿಗಲಿದೆ ವಿದ್ಯಾಧಿದೇವತೆಯ ವರದಾನ
* ಶುಕ್ರವಾರದಂದು ಎರಡು ಲವಂಗ ಮತ್ತು ಕರ್ಪೂರ ಸೇರಿಸಿ ಹಚ್ಚಿ, ಲಕ್ಷ್ಮಿ ದೇವಿಯನ್ನು ಧ್ಯಾನಿಸಿ. ಇದರಿಂದ ಮನೆಯ ಆರ್ಥಿಕ ಸಮಸ್ಯೆ ದೂರ ಮಾಡುವುದರ ಜೊತೆಗೆ ಸಂಘರ್ಷವೂ ದೂರವಾಗುತ್ತದೆ.
*ನಿಮ್ಮ ಸ್ನಾನದ ನೀರಿಗೆ ಸ್ವಲ್ಪ ಕರ್ಪೂರವನ್ನು ಸೇರಿಸಿ ಸ್ನಾನ ಮಾಡಿ. ಇದು ದೇಹ ಮತ್ತು ಮನಸ್ಸು ಎರಡನ್ನೂ ಶುದ್ಧಗೊಳಿಸುತ್ತದೆ. ವಾಸ್ತು ಪ್ರಕಾರ ಅಭ್ಯಾಸವು ಅದೃಷ್ಟವನ್ನು ಬಲಪಡಿಸುತ್ತದೆ. ಸಕಾರಾತ್ಮಕ ಶಕ್ತಿಯನ್ನು ಹೆಚ್ಚಿಸುತ್ತದೆ.
* ಮನಿ ಪ್ಲಾಂಟ್ ಸಂಪತ್ತಿನ ಸಂಕೇತವೆಂದು ಪರಿಗಣಿಸಲಾಗಿದೆ. ಅದರ ಕುಂಡದಲ್ಲಿ ಬಿಳಿ ಸಣ್ಣ ಕರ್ಪೂರದ ತುಂಡನ್ನು ಇಡುವುದರಿಂದ ಸಕಾರಾತ್ಮಕ ಶಕ್ತಿ ಹೆಚ್ಚಾಗುತ್ತದೆ. ಇದು ಆರ್ಥಿಕ ತೊಂದರೆಯನ್ನು ತೊಡೆದುಹಾಕುತ್ತದೆ.
* ಶನಿವಾರದಂದು ಕರ್ಪೂರವನ್ನು ಹಚ್ಚುವುದರಿಂದ ಶನಿ ಮತ್ತು ಹನುಮಂತನ ಆಶೀರ್ವಾದ ದೊರೆಯುತ್ತದೆ. ಇದರಿಂದ ರಾಹು ಮತ್ತು ಕೇತುವಿನ ದುಷ್ಪರಿಣಾಮಗಳು ಕಡಿಮೆಯಾಗುತ್ತದೆ. ಇದು ಜೀವನದಲ್ಲಿರುವ ಅಡೆತಡೆ, ಮಾನಸಿಕ ಯಾತನೆಯನ್ನು ದೂರ ಮಾಡುತ್ತದೆ. ಮನೆಯನ್ನು ಶುದ್ಧೀಕರಿಸಿ, ಶಾಂತಿ ನೆಲೆಸುವಂತೆ ಮಾಡುತ್ತದೆ.



