ಮಂಗಳೂರಲ್ಲಿ 200 ಕೋಟಿ ವಂಚನೆ : ವಿದೇಶಿ ಮದ್ಯ, ಮಲೇಶ್ಯಾ ಹುಡುಗಿಯರು – ಹೇಗಿದೆ ಗೊತ್ತಾ ವಂಚಕನ ಐಷಾರಾಮಿ ಜೀವನ

Mangaluru Roshan Saldanha : ಮಂಗಳೂರು : ಮಂಗಳೂರಿನಲ್ಲಿ ಸಾಲ ಕೊಡಿಸುವುದಾಗಿ ಆಸೆ ತೋರಿಸಿ, ಕೋಟ್ಯಾಂತರ ರೂಪಾಯಿ ವಂಚನೆ ಮಾಡುತ್ತಿದ್ದ ಆರೋಪಿಯನ್ನು ಮಂಗಳೂರು ಪೊಲೀಸರು ಕೊನೆಗೂ ಬಂಧಿಸಿದ್ದಾರೆ.

ವಂಚಕನ ಐಷಾರಾಮಿ ಜೀವನನ್ನು ನೋಡಿ ಮಂಗಳೂರು ಪೊಲೀಸರೇ ದಂಗಾಗಿದ್ದಾರೆ. ಮಂಗಳೂರು ನಗರದ ನಿವಾಸಿ ಆಗಿರುವ ರೋಹನ್‌ ಸಲ್ದಾನ (45ವರ್ಷ) ಎಂಬಾತನೇ ಪೊಲೀಸರಿಂದ ಬಂಧನಕ್ಕೆ ಒಳಗಾಗಿರುವ ವಂಚಕ.

ಮಂಗಳೂರು ನಗರದ ಹೊರವಲಯದಲ್ಲಿ ಇರುವ ಜಪ್ಪಿನಮೊಗರು ಎಂಬಲ್ಲಿರುವ ಐಷಾರಾಮಿ ಬಂಗಲೆಯಲ್ಲಿ ಮಲೇಶಿಯಾದ ಯುವತಿಯರ ಜೊತೆಗೆ ಪಾರ್ಟಿ ಮಾಡುತ್ತಿದ್ದಾಗ ಬಂಧಿಸಲಾಗಿದೆ.

Mangaluru Roshan Saldanha : ಏನಿದು ರೋಹನ್‌ ವಂಚನೆ ಪುರಾಣ ?

ರೋಹನ್‌ ಸಲ್ದಾನ, ದೇಶದ ಶ್ರೀಮಂತ ಉದ್ಯಮಿಗಳು ಮತ್ತು ದೊಡ್ಡ ವ್ಯಕ್ತಿಗಳನ್ನು ಟಾರ್ಗೇಟ್‌ ಮಾಡ್ತಾ ಇದ್ದ. ತಾನು ದೊಡ್ಡ ಉದ್ಯಮಿ ಅಂತಾ ಪರಿಚಯ ಮಾಡಿಕೊಳ್ಳುತ್ತಿದ್ದ.

ಈತ ಬ್ಯಾಂಕ್‌ಗಳು ಮತ್ತು ಹಣಕಾಸು ಸಂಸ್ಥೆಗಳಿಂದ ನೂರಾರು ಕೋಟಿ ರೂಪಾಯಿಗಳ ಸಾಲ ಕೊಡಿಸುವುದಾಗಿ ಶ್ರೀಮಂತರನ್ನು ನಂಬಿಸುತ್ತಿದ್ದ.

ಸಾಲ ಮಂಜೂರಾತಿಗಾಗಿ ಪ್ರೊಸೆಸಿಂಗ್ ಶುಲ್ಕ, ಸ್ಟ್ಯಾಂಪ್ ಡ್ಯೂಟಿ, ಕಾನೂನು ಶುಲ್ಕಗಳು ಇತ್ಯಾದಿ ಕಾರಣಗಳನ್ನು ನೀಡಿ 50 ಲಕ್ಷದಿಂದ 4 ಕೋಟಿ ರೂಪಾಯಿಗಳವರೆಗೆ ಮುಂಗಡ ಹಣವನ್ನು ಪಡೆಯುತ್ತಿದ್ದ.

ಉದ್ಯಮಿಗಳು ಹಣ ನೀಡುತ್ತಲೇ ಈತ ನಾಪತ್ತೆ ಆಗುತ್ತಿದ್ದ. ಈತನನ್ನು ಹುಡುಕಾಟ ನಡೆಸಿದ್ರೂ ಕೂಡ ಯಾರ ಕೈಗೂ ಸಿಕ್ಕಿಕೊಳ್ಳುತ್ತಿರಲಿಲ್ಲ.

Also Read : ಪಡಿತರ ಕಾರ್ಡ್‌ ತಿದ್ದುಪಡಿಗೆ ಜುಲೈ 31 ಕೊನೆಯ ದಿನ

ಸಾಕಷ್ಟು ಮಂದಿ ಈತನಿಂದ ವಂಚನೆಗೆ ಒಳಗಾಗಿದ್ದಾರೆ ಎನ್ನಲಾಗುತ್ತಿದೆ. ಅದ್ರಲ್ಲೂ 500 ಕೋಟಿ ರೂಪಾಯಿವರೆಗೆ ಸಾಲ ನೀಡುವ ಆಮಿಷವೊಡ್ಡಿದ್ದಾರೆ ಎಂದು ತಿಳಿದು ಬಂದಿದೆ.

ಐಷಾರಾಮಿ ಜೀವನಶೈಲಿ, ಮಲೇಶ್ಯಾದ ಯುವತಿಯರು ..!

ತನ್ನ ಐಷಾರಾಮಿ ಬಂಗಲೆಯಲ್ಲಿ ಬಾರ್, ವಿದೇಶಿ ಮದ್ಯಗಳನ್ನು ಸ್ಟಾಕ್‌ ಮಾಡಿಕೊಂಡಿದ್ದ. ಆಗಾಗ ಮಲೇಶಿಯಾದ ಯುವತಿಯರನ್ನು ಕರೆಸಿಕೊಂಡು ಪಾರ್ಟಿ ಆಯೋಜಿಸಿ ತನ್ನ ಶ್ರೀಮಂತಿಕೆಯನ್ನು ಪ್ರದರ್ಶಿಸುತ್ತಿದ್ದ.

ಅದ್ದೂರಿ ಪಾರ್ಟಿ ಆಯೋಜನೆ ಮಾಡುವ ಮೂಲಕವೇ ಉದ್ಯಮಿಗಳನ್ನು ತನ್ನತ್ತ ಆಕರ್ಷಿಸುತ್ತಿದ್ದ. ಮನೆಯಲ್ಲಿ ರಹಸ್ಯ ಕೊಠಡಿಗಳು, ಸರ್ವೆಲೆನ್ಸ್ ವ್ಯವಸ್ಥೆ ಮತ್ತು ತಪ್ಪಿಸಿಕೊಳ್ಳುವ ಮಾರ್ಗಗಳೂ ಇದ್ದವು.

Mangaluru Roshan Saldanha : 200 ಕೋಟಿಗೂ ಅಧಿಕ ವಂಚನೆ ..!

ಕಳೆದ ಮೂರು ತಿಂಗಳಲ್ಲಿ ಈತನ ಒಂದು ಬ್ಯಾಂಕ್ ಖಾತೆಯಲ್ಲಿ 40 ಕೋಟಿ ರೂ.ಗೂ ಹೆಚ್ಚು ಹಣದ ವಹಿವಾಟು ನಡೆದಿರುವುದು ಬೆಳಕಿಗೆ ಬಂದಿದೆ. ರೋಹನ್‌ ಸಲ್ದಾನ ಇದುವರೆಗೂ 200 ಕೋಟಿ ರೂ.ಗೂ ಹೆಚ್ಚು ವಂಚನೆ ಮಾಡಿರುವ ಬಗ್ಗೆ ಶಂಕಿಸಲಾಗಿದೆ.

ಈತನಿಂದ ವಂಚನೆಗೆ ಒಳಗಾದ ಇಬ್ಬರು ಉದ್ಯಮಿಗಳು ಪೊಲೀಸರಿಗೆ ದೂರು ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಮಂಗಳೂರು ಪೊಲೀಸ್ ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ ನೇತೃತ್ವದಲ್ಲಿ ದಾಳಿ ನಡೆಸಿ ರೋಹನ್ ಸಲ್ಡಾನನನ್ನು ಬಂಧಿಸಲಾಗಿದೆ.

Also Read : ಕೋಟ : ಬಿಯರ್ ಬಾಟಲಿಯಿಂದ ಹಲ್ಲೆ, ಪ್ರಕರಣ ದಾಖಲು

ಮಂಗಳೂರಿನ ಸೈಬರ್ ಮತ್ತು ಆರ್ಥಿಕ ವಂಚನೆಗಳ ಹೆಚ್ಚಳದ ಒಂದು ಭಾಗವಾಗಿದ್ದು, ಇತ್ತೀಚೆಗೆ “ಡಿಜಿಟಲ್ ಅರೆಸ್ಟ್” ಹೆಸರಿನಲ್ಲಿ 3.16 ಕೋಟಿ ರೂ. ವಂಚನೆ, ಅಮೆಜಾನ್ಗೆ 30 ಕೋಟಿ ರೂ. ವಂಚನೆ ಹಾಗೂ ಇತರ ಹಲವು ಪ್ರಕರಣಗಳು ವರದಿಯಾಗಿವೆ.

Mangaluru Roshan Saldanha : ಐಷಾರಾಮಿ ಮನೆಯಲ್ಲಿತ್ತು ಸೀಕ್ರೆಟ್‌ ಕೋಣೆ..!

ಮಂಗಳೂರಿನ ವಂಚಕ ರೋಹನ್ ಸಲ್ಡಾನ ಮನೆಯಲ್ಲಿ ಒಂದು ಸೀಕ್ರೆಟ್ ರೂಮ್ (ರಹಸ್ಯ ಕೊಠಡಿ) ಇತ್ತು. ಜಪ್ಪಿನಮೊಗರು ಬಳಿಯ ಐಷಾರಾಮಿ ಬಂಗಲೆಯಲ್ಲಿ ಈ ರಹಸ್ಯ ಕೊಠಡಿಯನ್ನು ನಿರ್ಮಿಸಿದ್ದ.

ತನ್ನ ವಂಚನೆಯ ಜಾಲವನ್ನು ನಡೆಸಲು, ಪ್ರಮುಖ ದಾಖಲೆಗಳನ್ನು ಅಥವಾ ಅಕ್ರಮ ಹಣವನ್ನು ಸಂಗ್ರಹಿಸಿಡಲು ಈ ಕೊಠಡಿಯನ್ನು ಬಳಸುತ್ತಿದ್ದ.

ಪೊಲೀಸ್ ದಾಳಿಯ ಸಂದರ್ಭದಲ್ಲಿ ಅಥವಾ ಯಾವುದೇ ಅಪಾಯ ಎದುರಾದಾಗ ಅಲ್ಲಿಂದ ತಪ್ಪಿಸಿಕೊಳ್ಳಲು ಪರ್ಯಾಯ ಮಾರ್ಗಗಳನ್ನು ಹೊಂದಿರಲು ಈ ಕೊಠಡಿ ನೆರವಾಗುತ್ತಿತ್ತು.

ಇಷ್ಟೇ ಅಲ್ಲದೇ ಈತನ ಮನೆಯಲ್ಲಿ ಸರ್ವೆಲೆನ್ಸ್ ವ್ಯವಸ್ಥೆ ಮತ್ತು ತಪ್ಪಿಸಿಕೊಳ್ಳುವ ಮಾರ್ಗಗಳೂ ಇದ್ದವು ಎಂದು ವರದಿಗಳು ತಿಳಿಸಿವೆ.

ಕೆಲವು ಮೂಲಗಳ ಪ್ರಕಾರ, ತನ್ನನ್ನು ತಾನು ದೊಡ್ಡ ವ್ಯಕ್ತಿ ಎಂದು ಬಿಂಬಿಸಿಕೊಳ್ಳಲು ಮತ್ತು ತಾನು ಮಾಡುವ ಅಕ್ರಮ ವ್ಯವಹಾರಗಳನ್ನು ರಹಸ್ಯವಾಗಿಡಲು ಇಂತಹ ವ್ಯವಸ್ಥೆಗಳನ್ನು ಮಾಡಿಕೊಂಡಿದ್ದ.

ಪೊಲೀಸರು ದಾಳಿ ನಡೆಸಿದಾಗ ಈ ಸೀಕ್ರೆಟ್ ರೂಮ್ ಸೇರಿದಂತೆ ಮನೆಯ ಇತರ ಭಾಗಗಳನ್ನು ಪರಿಶೀಲಿಸಿ ಪ್ರಮುಖ ಸುಳಿವುಗಳನ್ನು ಸಂಗ್ರಹಿಸಿದ್ದಾರೆ. ಇದು ಆತನ ವಂಚನೆ ಚಟುವಟಿಕೆಗಳ ಸ್ವರೂಪವನ್ನು ಮತ್ತಷ್ಟು ಸ್ಪಷ್ಟಪಡಿಸಿದೆ.

Mangaluru Roshan Saldanha 200 crore fraud case in Kannada news

Kannada News Next Desk

Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021

Related Stories