ಕೋಟ : ಬಿಯರ್ ಬಾಟಲಿಯಿಂದ ಹಲ್ಲೆ, ಪ್ರಕರಣ ದಾಖಲು

ಕೋಟ (Kota) : ಕ್ಲುಲಕ ಕಾರಣಕ್ಕೆ ವ್ಯಕ್ತಿಯೋರ್ವ ಬಿಯರ್‌ ಬಾಟಲಿಯಿಂದ ಹಲ್ಲೆ ನಡೆಸಿದ ಘಟನೆ ತೆಕ್ಕಟ್ಟೆಯ ಗಣೇಶ್‌ ವೈನ್‌ ಶಾಪ್‌ ಬಳಿಯಲ್ಲಿ ನಡೆದಿದೆ. ಗಾಯಾಳುವನ್ನು ಆಸ್ತ್ರೆಗೆ ದಾಖಲು ಮಾಡಲಾಗಿದೆ.

ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕಿನ ಮಣೂರು – ಪಡುಕೆರೆಯ ನಿವಾಸಿಯಾಗಿರುವ ಭರತ್‌ (24 ವರ್ಷ) ಎಂಬಾತನೇ ಗಾಯಗೊಂಡವನು. ಹಲ್ಲೆ ನಡೆಸಿದ ಮನೋಜ್‌ ವಿರುದ್ದ ಕೋಟ ಠಾಣೆಯ ಪ್ರಕರಣ ದಾಖಲಾಗಿದೆ.

ಘಟನೆ ನಡೆದಿದ್ದು ಹೇಗೆ ?

ಪಡುಕೆರೆ ಮಣೂರು ಗ್ರಾಮದ ಭರತ್ (24) ಎಂಬಾತ ಕುಂದಾಪುರ ತಾಲೂಕಿನ ತೆಕ್ಕಟ್ಟೆಯ ಗಣೇಶ ವೈನ್ ಶಾಪ್ ಬಳಿ ನಿಂತಿದ್ದ. ಈ ವೇಳೆ, ಮನೋಜ್ ಎಂಬಾತ ಭರತ್‌ಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ.

“ಯಾಕೆ ಬೈಯುತ್ತೀಯಾ” ಎಂದು ಭರತ್ ಪ್ರಶ್ನಿಸಿದಾಗ, ಮನೋಜ್ ಏಕಾಏಕಿ ತನ್ನ ಕೈಯಲ್ಲಿದ್ದ ಬಿಯರ್ ಬಾಟಲಿಯಿಂದ ಭರತ್ ಅವರ ತಲೆಗೆ ಬಲವಾಗಿ ಹೊಡೆದಿದ್ದಾನೆ.

ಇದನ್ನೂ ಓದಿ : ಕೇರಳ ನರ್ಸ್‌ ನಿಮಿಷಾ ಪ್ರಿಯ ಗಲ್ಲುಶಿಕ್ಷೆ ಮುಂದೂಡಿಕೆ : ಮುಂದೇನಾಗುತ್ತೆ ಪ್ರಕರಣ ?

ಈ ಹಲ್ಲೆಯಿಂದ ಭರತ್ ಅವರ ತಲೆಯ ಎಡಭಾಗದಲ್ಲಿ ರಕ್ತಗಾಯವಾಗಿದ್ದು, ಪ್ರಜ್ಞೆ ತಪ್ಪಿದ್ದಾರೆ. ಕೂಡಲೇ ಭರತ್ ಅವರನ್ನು ಕುಂದಾಪುರ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಪ್ರಥಮ ಚಿಕಿತ್ಸೆ ನೀಡಲಾಗಿದೆ.

ವೈದ್ಯರ ಸಲಹೆಯಂತೆ ಹೆಚ್ಚಿನ ಚಿಕಿತ್ಸೆಗಾಗಿ ಅಜ್ಜರಕಾಡು ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಕುರಿತು ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ : ಬ್ರಹ್ಮಾವರದ ಮಹಿಳೆಗೆ ₹1.20 ಲಕ್ಷರೂ. ಆನ್‌ಲೈನ್‌ ವಂಚನೆ : ಈ ಕರೆ ಸ್ವೀಕರಿಸೋ ಮುನ್ನ ಹುಷಾರ್‌

ಬಾಳ್ಕುದ್ರು : ರೆಸ್ಕ್ಯೂ ಬೋಟ್‌ನ ಇಂಜಿನ್ ಕಳವು

ಬ್ರಹ್ಮಾವರ ತಾಲೂಕಿನ ಬಾಳ್ಕುದ್ರು ಗ್ರಾಮದ ಹಂಗಾರಕಟ್ಟೆ ಹೊಳೆಯಲ್ಲಿ ಲಂಗರು ಹಾಕಿ ನಿಲ್ಲಿಸಿದ್ದ ‘ಅಸ್ಸಿಲ್ಹಾ (ASSILAH)’ ಹಡಗಿಗೆ ಅಳವಡಿಸಿದ್ದ ರೆಸ್ಕ್ಯೂ ಬೋಟ್‌ನಿಂದ ಇಂಜಿನ್ ಕಳವು ಮಾಡಿರುವ ಘಟನೆ ನಡೆದಿದೆ.

ಬ್ರಹ್ಮಾವರದ ಹಂದಾಡಿ ಗ್ರಾಮದ ನಿವಾಸಿಯಾಗಿರುವ ಜೆ.ಬಿ. ಪ್ರಕಾಶ್ (52 ಕೋಟ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಅಸ್ಸಿಲ್ಹಾ ಶಿಪ್‌ಗೆ ಅಳವಡಿಸಲಾಗಿದ್ದ ರೆಸ್ಕ್ಯೂ ಬೋಟ್‌ಗೆ ಹೊಚ್ಚ ಹೊಸದಾಗಿ ಅಳವಡಿಸಿದ್ದ SUZUKI DT 15 AL -15HP 2STROKE TILLER MODEL WITH PROPELLER ಇಂಜಿನ್‌ನ ಫ್ಯೂಯೆಲ್ ಪೈಪ್‌ ಅನ್ನು ಕಿಡಿಗೇಡಿಗಳು ತುಂಡು ಮಾಡಿ, ಇಂಜಿನ್ ಅನ್ನು ಕಳವು ಮಾಡಿಕೊಂಡು ಹೋಗಿದ್ದಾರೆ.

ಕೋಟ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆಯನ್ನು ಮುಂದುವರಿಸಿದ್ದಾರೆ.

Kota Assault with beer bottle, case registered in Kannada News

Kannada News Next Desk

Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021

Related Stories