Udupi Rice Export Fraud : ಉಡುಪಿ : ಅಕ್ಕಿ ರಫ್ತು1.13 ಕೋಟಿ ರೂ. ವಂಚನೆ

Udupi Rice Export Fraud : ಉಡುಪಿ: ವಿದೇಶಕ್ಕೆ ಅಕ್ಕಿ ರಫ್ತು ಮಾಡುವ ಹೆಸರಲ್ಲಿ ಬರೋಬ್ಬರಿ 1.13 ಕೋಟಿ ರೂಪಾಯಿ ವಂಚಿಸಿರುವ ಘಟನೆ ಉಡುಪಿಯಲ್ಲಿ ಬೆಳಕಿಗೆ ಬಂದಿದೆ. ಈ ಕುರಿತು ಉಡುಪಿ ಸೆನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Udupi Rice Export Fraud : ಏನಿದು ಪ್ರಕರಣ?
ಮಹಾರಾಷ್ಟ್ರದ ಪುಣೆ ಮೂಲದ ವಿನಿವಿಂ ಎಕ್ಸಿಮ್ ಇಂಡಿಯಾ ( Winwin Exim India) ಕಂಪನಿಯ ಮಾಲೀಕರಾದ ಧನಶ್ರೀ ಮನೋಹರ್ ಖಾಲೆ ಎಂಬವರೇ ವಂಚನೆ ಒಳಗಾದವರು.
ಈ ಸಂಬಂಧ ಸೆನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಪಿವಿಪಿ ಫೂಡ್ ಟೆಕ್ ಪ್ರೈವೇಟ್ ಲಿಮಿಟೆಡ್ (PWIP Foodtech Private Limited) ಕಂಪನಿಯ ನಿರ್ದೇಶಕರು ಮತ್ತು ಮಾಜಿ ಉದ್ಯೋಗಿಗಳ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
ಧನಶ್ರೀ ಅವರು 2022ರಲ್ಲಿ ತಮ್ಮ ಸ್ನೇಹಿತರ ಮೂಲಕ ಪಿವಿಪಿ ಫೂಡ್ ಟೆಕ್ ಪ್ರೈವೇಟ್ ಲಿಮಿಟೆಡ್ ಕಂಪನಿಯ ಬಗ್ಗೆ ತಿಳಿದುಕೊಂಡಿದ್ದರು.
Also Read : ದಕ್ಷಿಣ ಕನ್ನಡ ಮೂಲದ ನಿವೃತ್ತ ನ್ಯಾಯಮೂರ್ತಿ ಎಸ್.ಅಬ್ದುಲ್ ನಜೀರ್ ಭಾರತದ ಉಪರಾಷ್ಟ್ರಪತಿ
ಕಂಪನಿಯ ನಿರ್ದೇಶಕರಾದ ಧನ್‌ರಾಜ್ ಹಿರಿಯಣ್ಣ ಕಿದಿಯೂರು, ಹಾಗೂ ಮಾಜಿ ಉದ್ಯೋಗಿಗಳಾದ ಅಭಿಷೇಕ್ ರೆಶ್ಮಿ ಮತ್ತು ಕಾರ್ತಿಕ್ ಎಂ. ಅವರು ಅಕ್ಕಿ ರಫ್ತು ವ್ಯವಹಾರಕ್ಕಾಗಿ ಇಂಡೆಂಟಿಂಗ್ ಏಜೆಂಟ್‌ಗಳಾಗಿ ಕಾರ್ಯ ನಿರ್ವಹಿಸುತ್ತಿದ್ದರು.
ಧನಶ್ರೀ ಅವರು 2022ರ ಡಿಸೆಂಬರ್ 12ರಂದು ಬೆಂಗಳೂರಿನ ಮಹಾಲಕ್ಷ್ಮೀ ಲೇಔಟ್‌ನಲ್ಲಿರುವ PWIP ಕಂಪನಿಯ ಕಚೇರಿಗೆ ಭೇಟಿ ನೀಡಿ ಅಕ್ಕಿ ರಫ್ತು ಸಂಬಂಧ ಒಪ್ಪಂದ ಮಾಡಿಕೊಂಡಿದ್ದರು.
Udupi Rice Export Fraud :ಅಕ್ಕಿ ರಫ್ತು ನಿಷೇಧ : ಹಣ ವಾಪಾಸ್ ಮಾಡದೆ ವಂಚನೆ
2023ರ ಜೂನ್ ತಿಂಗಳಲ್ಲಿ, ಧನಶ್ರೀ ಅವರು PWIP ಕಂಪನಿಗೆ ಮುಂಗಡವಾಗಿ ₹1.13 ಕೋಟಿ ಹಣವನ್ನು ಪಾವತಿಸಿದರು. ಆದರೆ, 2023ರ ಜುಲೈನಲ್ಲಿ ಭಾರತ ಸರ್ಕಾರ ಅಕ್ಕಿ ರಫ್ತು ನಿಷೇಧವನ್ನು ಘೋಷಿಸಿತು.
ನಿಷೇಧದ ಬಳಿಕ, PWIP ಕಂಪನಿಯು ಧನಶ್ರೀ ಅವರಿಗೆ ಪಾವತಿಸಿದ ಮುಂಗಡ ಹಣವನ್ನು ಹಿಂದಿರುಗಿಸದೆ, ಅಕ್ಕಿಯನ್ನೂ ರಫ್ತು ಮಾಡಿಲ್ಲ ಎಂದು ತನ್ನ ದೂರಿನಲ್ಲಿ ಆರೋಪಿಸಲಾಗಿದೆ.
Also Read : ಕಾರ್ಕಳದಲ್ಲಿ ಸೈಬರ್ ವಂಚನೆ: ಆನ್‌ಲೈನ್ ಹೂಡಿಕೆಯ ಆಮಿಷಕ್ಕೆ ₹15 ಲಕ್ಷ ಕಳೆದುಕೊಂಡ ಯುವಕ!
ಈ ಹಿನ್ನೆಲೆಯಲ್ಲಿ ಧನಶ್ರೀ ಅವರು ತನಗೆ ₹1,13,00,000 ವಂಚನೆ ನಡೆಸಿದೆ ಎಂದು ದೂರು ನೀಡಿದ್ದಾರೆ. ಸದ್ಯ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ತನಿಖೆ ನಡೆಸುತ್ತಿದ್ದಾರೆ.
Udupi News : Rice Exporting Fraud in Kannada News



