Udupi Heavy Rain Alert : ಉಡುಪಿ : ಒಂದು ವಾರ ಭಾರೀ ಮಳೆ ‘ಆರೆಂಜ್ ಅಲರ್ಟ್’ ಘೋಷಣೆ ಜಿಲ್ಲಾಧಿಕಾರಿ; ಜಿಲ್ಲಾಧಿಕಾರಿಗಳ ಖಡಕ್ ವಾರ್ನಿಂಗ್
Udupi Weather Report : ಉಡುಪಿ ಜಿಲ್ಲೆಯಲ್ಲಿ ಜೂನ್ 30 ರಿಂದ ಒಂದು ವಾರ ಅಂದ್ರೆ ಜುಲೈ 6ರ ವರೆಗೆ ಗಾಳಿ ಸಹಿತ ಭಾರೀ ಮಳೆಯಾಗುವ ಸಾಧ್ಯತೆಯಿದೆ. ಸಾರ್ವಜನಿಕರು ಈ ಸಂದರ್ಭದಲ್ಲಿ ಸಾರ್ವಜನಿಕರು ಎಚ್ಚರಿಕೆಯಿಂದ ಇರುವಂತೆ ಹಾಗೂ ಸಾರ್ವಜನಿಕರ ಹಿತದೃಷ್ಟಿಯಿಂದ ಕಟ್ಟುನಿಟ್ಟಿನ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲು ಆದೇಶಿಸಿದ್ದಾರೆ.

Udupi Weather Report : ಉಡುಪಿ: ಮುಂದಿನ ಒಂದು ವಾರಗಳ ಕಾಲ ಉಡುಪಿ ಜಿಲ್ಲೆಯಾದ್ಯಂತ ಭಾರೀ ಮಳೆ ಸುರಿಯಗಲಿದೆ ಎಂದು ಉಡುಪಿ ಜಿಲ್ಲಾಧಿಕಾರಿಗಳು ಮಾಹಿತಿ ನೀಡಿದ್ದಾರೆ. ಮಳೆಯ ಆರ್ಭಟ ಜೋರಾಗಿರುವ ಹಿನ್ನೆಲೆಯಲ್ಲಿ ಹವಾಮಾನ ಇಲಾಖೆ ಮತ್ತು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ಮುನ್ಸೂಚನೆಯಂತೆ ಜಿಲ್ಲೆಯಾದ್ಯಂತ ಆರೆಂಜ್ ಅಲರ್ಟ್ ಘೋಷಿಸಲಾಗಿದೆ.
ಉಡುಪಿ ಜಿಲ್ಲೆಯಲ್ಲಿ ಜೂನ್ 30 ರಿಂದ ಒಂದು ವಾರ ಅಂದ್ರೆ ಜುಲೈ 6ರ ವರೆಗೆ ಗಾಳಿ ಸಹಿತ ಭಾರೀ ಮಳೆಯಾಗುವ ಸಾಧ್ಯತೆಯಿದೆ. ಸಾರ್ವಜನಿಕರು ಈ ಸಂದರ್ಭದಲ್ಲಿ ಸಾರ್ವಜನಿಕರು ಎಚ್ಚರಿಕೆಯಿಂದ ಇರುವಂತೆ ಹಾಗೂ ಸಾರ್ವಜನಿಕರ ಹಿತದೃಷ್ಟಿಯಿಂದ ಕಟ್ಟುನಿಟ್ಟಿನ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲು ಆದೇಶಿಸಿದ್ದಾರೆ.
Also Read : ಟೂರಿಸಂ ಎಫೆಕ್ಟ್ : ಉಡುಪಿಯ ಎರ್ಮಾಳಿನಲ್ಲಿ ಗಗನಕ್ಕೇರಿದ ಆಸ್ತಿ ಬೆಲೆ !
Udupi Heavy Rain Alert : ಜಿಲ್ಲಾಡಳಿತದ ಪ್ರಮುಖ ಮಾರ್ಗಸೂಚಿ
- ಹೊರಗಡೆ ತಿರುಗಾಡಬೇಡಿ: ಸಾರ್ವಜನಿಕರು, ಮಕ್ಕಳು ಹಾಗೂ ಕಾರ್ಮಿಕರು ಮಳೆ, ಗಾಳಿ ಮತ್ತು ಸಿಡಿಲು ಬೀಳುವ ಸಂದರ್ಭದಲ್ಲಿ ಹೊರಗಡೆ ತಿರುಗಾಡದೆ ಸೂಕ್ತ ಕಟ್ಟಡಗಳಲ್ಲಿ ಆಶ್ರಯ ಪಡೆಯಬೇಕು.
- ಕೃಷಿಕರು ಮತ್ತು ಮೀನುಗಾರರಿಗೆ ಎಚ್ಚರಿಕೆ: ಕೃಷಿಕರು ಮಳೆ/ಸಿಡಿಲಿನ ಸಂದರ್ಭದಲ್ಲಿ ತೋಟದ ಕೆಲಸಗಳಿಂದ ದೂರವಿರಬೇಕು. ಪ್ರವಾಸಿಗರು ಮತ್ತು ಮೀನುಗಾರರು ನದಿ, ಜಲಾವೃತ ಪ್ರದೇಶ ಹಾಗೂ ಸಮುದ್ರಕ್ಕೆ ಇಳಿಯದಂತೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ.
- ವಿದ್ಯುತ್ ಕಂಬಗಳಿಂದ ದೂರವಿರಿ: ಮಕ್ಕಳು ಮತ್ತು ಸಾರ್ವಜನಿಕರು ಅಪಾಯಕಾರಿ ಮರಗಳು, ವಿದ್ಯುತ್ ಕಂಬಗಳು ಹಾಗೂ ಹರಿದು ಬಿದ್ದಿರುವ ವಿದ್ಯುತ್ ತಂತಿಗಳ ಹತ್ತಿರ ಸುಳಿಯಬಾರದು.
- ದುರ್ಬಲ ಕಟ್ಟಡಗಳ ನಿವಾಸಿಗಳಿಗೆ ಸೂಚನೆ: ಹಳೆಯ ಅಥವಾ ದುರ್ಬಲ ಕಟ್ಟಡಗಳಲ್ಲಿ ವಾಸಿಸುವವರು ಮುಂಜಾಗ್ರತಾ ಕ್ರಮವಾಗಿ ಹತ್ತಿರದ ಕಾಳಜಿ ಕೇಂದ್ರಗಳಿಗೆ ಸ್ಥಳಾಂತರಗೊಳ್ಳಬಹುದು. ಮರಗಳ ಕೆಳಗೆ ನಿಲ್ಲಬಾರದು.
- ಭೂಕುಸಿತದ ಭೀತಿ: ಹೆಚ್ಚು ಮಳೆಯಾಗುವ ಕಾರಣ ಕೆಲವು ಪ್ರದೇಶಗಳಲ್ಲಿ ಭೂಕುಸಿತ (Landslide) ಸಂಭವಿಸುವ ಸಾಧ್ಯತೆ ಹೆಚ್ಚಿರುತ್ತದೆ. ಅಂತಹ ಜಾಗದಲ್ಲಿ ವಾಸಿಸುವ ಸಾರ್ವಜನಿಕರು ತಹಶೀಲ್ದಾರ್ ಕಚೇರಿ ಅಥವಾ ಗ್ರಾಮ ಪಂಚಾಯಿತಿ ಸಿಬ್ಬಂದಿಯನ್ನು ಸಂಪರ್ಕಿಸಿ ಮುಂಚಿತವಾಗಿ ಕಾಳಜಿ ಕೇಂದ್ರಗಳನ್ನು ಆಶ್ರಯಿಸಲು ಕೋರಲಾಗಿದೆ.
- ಅಧಿಕಾರಿಗಳ ಕೇಂದ್ರಸ್ಥಾನದಲ್ಲೇ ಇರಬೇಕು: ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳು, ನೋಡಲ್ ಅಧಿಕಾರಿಗಳು ಕಡ್ಡಾಯವಾಗಿ ಕೇಂದ್ರ ಸ್ಥಾನದಲ್ಲಿದ್ದುಕೊಂಡು ವಿಪತ್ತು ನಿರ್ವಹಣಾ ಕಾರ್ಯದಲ್ಲಿ ತೊಡಗಿಸಿಕೊಳ್ಳಬೇಕು.
Udupi Rain Helpline : ತುರ್ತು ಸೇವೆಗಳ ಸಹಾಯವಾಣಿ ಸಂಖ್ಯೆಗಳು (Helpline Numbers)
ಯಾವುದೇ ತುರ್ತು ಸಂದರ್ಭ ಎದುರಾದಲ್ಲಿ ಸಾರ್ವಜನಿಕರು ಉಚಿತ ಸಹಾಯವಾಣಿ ಸಂಖ್ಯೆ 1077 ಅಥವಾ 0820-2574802 ಸಂಖ್ಯೆಗೆ ಕರೆ ಮಾಡಿ ವಿಪತ್ತು ನಿರ್ವಹಣಾ ಕಂಟ್ರೋಲ್ ರೂಂ ಅನ್ನು ಸಂಪರ್ಕಿಸಬಹುದು.
Also Read : ಕರಾವಳಿಯಲ್ಲಿ ಭಾರೀ ಮಳೆ ಎಚ್ಚರಿಕೆ.. ಉಡುಪಿ, ದಕ್ಷಿಣ ಕನ್ನಡಕ್ಕೆ ಯೆಲ್ಲೋ ಅಲರ್ಟ್!
ತಾಲೂಕುವಾರು ತಹಶೀಲ್ದಾರ್ ಕಚೇರಿ ಸಹಾಯವಾಣಿ ವಿವರಗಳು:
ತಾಲೂಕು / ಕಚೇರಿ ಸಹಾಯವಾಣಿ ಸಂಖ್ಯೆ ಉಡುಪಿ : 0820-2520417, ಕುಂದಾಪುರ 08254-230357, ಕಾರ್ಕಳ : 08258-230201, ಕಾಪು : 0820-2551444, ಬ್ರಹ್ಮಾವರ: 0820-2560494, ಬೈಂದೂರು : 08254-251657, ಹೆಬ್ರಿ : 08253-250201, ಉಡುಪಿ ನಗರ ಸಭೆ : 0820-2520306



