ಕಾರ್ಕಳದಲ್ಲಿ ಸೈಬರ್ ವಂಚನೆ: ಆನ್ಲೈನ್ ಹೂಡಿಕೆಯ ಆಮಿಷಕ್ಕೆ ₹15 ಲಕ್ಷ ಕಳೆದುಕೊಂಡ ಯುವಕ!

Karkala Cyber Fraud:: ಕಾರ್ಕಳ : ಕಾರ್ಕಳದಲ್ಲಿ ಆನ್ಲೈನ್ ಹೂಡಿಕೆಯ ಹೆಸರಿನಲ್ಲಿ ವ್ಯಕ್ತಿಯೊಬ್ಬರಿಗೆ ಬರೋಬ್ಬರಿ ₹15.52 ಲಕ್ಷ ವಂಚಿಸಿರುವ ಪ್ರಕರಣ ಬೆಳಕಿಗೆ ಬಂದಿದೆ.
ಸುಲಭವಾಗಿ ಹಣ ಗಳಿಸುವ ಆಮಿಷಕ್ಕೆ ಸಿಲುಕಿ ಯುವಕನೊಬ್ಬ ತಮ್ಮ ದುಡಿದ ಹಣವನ್ನು ಕಳೆದುಕೊಂಡಿದ್ದಾನೆ.
ಸಸಿಹಿತ್ಲು ಮೂಲದ ಮಂಗಳೂರಿನ ನಿವಾಸಿ ಅಶ್ವಿತ್ (34 ವರ್ಷ) ಎಂಬುವರಿಗೆ ದಿನಾಂಕ ಜನವರಿ 28, 2025 ರಂದು ಮೀನಾ ಸಕ್ಪಾಲ್ ಎಂಬುವವರು (+918433053932) ಸಂಖ್ಯೆಯಿಂದ WhatsApp ಮೂಲಕ ಸಂಪರ್ಕಿಸಿದ್ದರು.
ಟೆಲಿಗ್ರಾಮ್ ಆ್ಯಪ್ನಲ್ಲಿನ ‘S-Coin Investment task’ ಗೆ ಸೇರುವಂತೆ ಅವರು ಸೂಚಿಸಿದ್ದರು. ಹೆಚ್ಚು ಹಣ ಹೂಡಿಕೆ ಮಾಡಿದರೆ ಹೆಚ್ಚಿನ ಕಮಿಷನ್ ನೀಡುವುದಾಗಿ ಆಮಿಷವೊಡ್ಡಿದ್ದಾರೆ. ಇದನ್ನು ನಂಬಿಕ ಅಶ್ವಿತ್ ಅದಕ್ಕೆ ಒಪ್ಪಿ ತಮ್ಮ ಬ್ಯಾಂಕ್ ಖಾತೆ ವಿವರಗಳನ್ನು ಹಂಚಿಕೊಂಡಿದ್ದಾರೆ.
ಜನವರು 29, 2025ರಿಂದ ಜೂನ್ 19, 2025ರ ವರೆಗೆ ಅಶ್ವಿತ್ ಅವರು ತಮ್ಮ ಮಹಾರಾಷ್ಟ್ರ ಬ್ಯಾಂಕ್ ಖಾತೆಯಿಂದ ‘S-Coin Investment’ ಗೆ ಹಣ ವರ್ಗಾವಣೆ ಮಾಡಿದ್ದಾರೆ.
ಎಸ್ ಕಾಯಿನ್ ಇನ್ವೆಸ್ಟ್ಮೆಂಟ್ಗೆ ಸೇರಿದ UPI ನಂಬರ್ಗೆ ಹಂತ ಹಂತವಾಗಿ ಒಟ್ಟು 15,52,650 ರೂಪಾಯಿ ಹಣವನ್ನು ವರ್ಗಾವಣೆ ಮಾಡಿದ್ದಾರೆ.
ನಂತರ, ವಂಚಕರು ಇನ್ನೂ ಹೆಚ್ಚಿನ ಹಣ ಹಾಕುವಂತೆ ಕೇಳಿದಾಗ, ಅಶ್ವಿತ್ ಹಣವಿಲ್ಲ ಎಂದು ಹೇಳಿ, ಹೂಡಿಕೆ ಮಾಡಿದ ಮೊತ್ತವನ್ನು ವಾಪಸ್ ನೀಡುವಂತೆ ಕೋರಿದ್ದಾರೆ.
ಆಗ ತೆರಿಗೆ ಪಾವತಿಸಬೇಕು ಎಂದು ತಿಳಿಸಿ ವಂಚಕರು ಹಣವನ್ನು ಹಿಂತಿರುಗಿಸಲು ನಿರಾಕರಿಸಿದ್ದಾರೆ.
Also Read : ಬೈಂದೂರಿನಲ್ಲಿ ಆನ್ಲೈನ್ ವಂಚನೆ: ಜಿಮ್ ಟ್ರೈನರ್ನಿಂದ 61,013 ರೂ. ಸುಲಿಗೆ !
ತಮ್ಮ ಹಣ ವಂಚನೆಯಾಗಿದೆ ಎಂದು ಅರಿತ ಅಶ್ವಿತ್ ಕಾರ್ಕಳ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ ಪ್ರಕರಣ ದಾಖಲು ಮಾಡಿಕೊಂಡಿರುವ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
Karkala Cyber Fraud: ಸೈಬರ್ ವಂಚನೆಗಳಿಂದ ಎಚ್ಚರಿಕೆ
ಅತಿಯಾದ ಲಾಭದ ಭರವಸೆ ನೀಡುವ ಯಾವುದೇ ಆನ್ಲೈನ್ ಹೂಡಿಕೆ ಯೋಜನೆಗಳಿಂದ ಸಾರ್ವಜನಿಕರು ದೂರವಿರಬೇಕು.
ಬ್ಯಾಂಕಿಂಗ್ ವಿವರಗಳು, ಒಟಿಪಿ ಅಥವಾ ಪಿನ್ಗಳನ್ನು ಅಪರಿಚಿತರೊಂದಿಗೆ ಹಂಚಿಕೊಳ್ಳಬಾರದು. ವಂಚನೆಗೆ ಒಳಗಾದರೆ ತಕ್ಷಣವೇ ಸೈಬರ್ ಕ್ರೈಮ್ ಹೆಲ್ಪ್ಲೈನ್ 1930 ಗೆ ಕರೆ ಮಾಡಿ ಅಥವಾ www.cybercrime.gov.in ವೆಬ್ಸೈಟ್ಗೆ ವರದಿ ಮಾಡಿ.
Also Read : ತಲೆಬುರುಡೆ ರಹಸ್ಯ : ಎಸ್ಐಟಿಯಿಂದ ಹೊರ ನಡೆದ ಇಬ್ಬರು ಐಪಿಎಸ್ ಅಧಿಕಾರಿಗಳು
Karkala Cyber Fraud Youth Loses 15 Lakh in Online Investment Scam Kannada News



