Railway Recruitment 2025 ಒಟ್ಟೂ 30,307 ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲು ಚಾಲನೆ
Railway Recruitment 2025: ಭಾರತೀಯ ರೈಲ್ವೆ ನೇಮಕಾತಿ 2025ನೇ ಸಾಲಿನ ತಾಂತ್ರಿಕೇತರ ವರ್ಗಗಗಳ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಳ್ಳುವ ಸಲುವಾಗಿ ಅಧಿಸೂಚನೆ ಹೊರಡಿಸಲಿದೆ.
ಇದು ಸರ್ಕಾರಿ ಉದ್ಯೋಗವನ್ನು ಬಯಸುವ ಪದವೀಧರರಿಗೆ ಉತ್ತಮ ಅವಕಾಶವಾಗಿದೆ.
ಭಾರತೀಯ ರೈಲ್ವೆ ನೇಮಕಾತಿಯು ಒಟ್ಟು 30,307 ಹುದ್ದೆಗಳಿಗೆ ಆನ್‌ಲೈನ್ ಮುಖಾಂತರ ಅರ್ಜಿ ಸಲ್ಲಿಸಬಹುದಾಗಿದೆ.
Railway Recruitment 2025: ಭಾರತೀಯ ರೈಲ್ವೆಯು ಈ ಕೆಳಗಿರುವ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ
ಸ್ಟೇಷನ್ ಮಾಸ್ಟರ್, ಗೂಡ್ಸ್ ರೈಲು ವ್ಯವಸ್ಥಾಪಕ, ಜೂನಿಯರ್ ಅಕೌಂಟ್ ಅಸಿಸ್ಟೆಂಟ್ ಮತ್ತು ಟೈಪಿಸ್ಟ್, ಸೀನಿಯರ್ ಕ್ಲರ್ಕ್ ಮತ್ತು ಟೈಪಿಸ್ಟ್, ಚೀಫ್ ಕಮರ್ಷಿಯಲ್ ಮತ್ತು ಟಿಕೆಟ್ ಸೂಪರ್‌ವೈಸರ್, ಜೂನಿಯರ್ ಕ್ಲರ್ಕ್ ಕಮ್ ಟೈಪಿಸ್ಟ್, ಅಕೌಂಟ್ಸ್ ಕ್ಲರ್ಕ್ ಕಮ್ ಟೈಪಿಸ್ಟ್, ಟ್ರೈನ್ಸ್ ಕ್ಲರ್ಕ್, ಕಮರ್ಷಿಯಲ್ ಕಮ್ ಟಿಕೆಟ್ ಕ್ಲರ್ಕ್.
- ಅರ್ಜಿ ಸಲ್ಲಿಸಲು ಆರಂಭದ ದಿನಾಂಕ ಆಗಸ್ಟ್ 30, 2025
- ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ಸೆಪ್ಟೆಂಬರ್ 29, 2025
ಇದನ್ನೂ ಓದಿ: Alert : ಯೂಟ್ಯೂಬ್‌ನಲ್ಲಿ ಟ್ಯೂಟೋರಿಯಲ್ ವೀಡಿಯೋ ನೋಡುತ್ತೀರಾ? ಎಚ್ಚರ! ನಿಮ್ಮ ಬ್ಯಾಂಕ್ ಅಕೌಂಟ್ ಖಾಲಿಯಾಗಬಹುದು…
ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸುವುದು ಹೇಗೆ ?
ಅಭ್ಯರ್ಥಿಗಳು ಭಾರತೀಯ ರೈಲ್ವೆ ಪೋರ್ಟಲ್ ಅಥವಾ ಪ್ರಾದೇಶಿಕ RRBಯ ಅಧಿಕೃತ ವೆಬ್‌ಸೈಟ್ ಮೂಲಕ ಸಲ್ಲಿಸಬಹುದಾಗಿದೆ.
ಶೈಕ್ಷಣಿಕ ಅರ್ಹತೆ:
ಪದವಿಪೂರ್ವ ಹುದ್ದೆಗಳು: ಪಿಯುಸಿ ಅಥವಾ ಮಾನ್ಯತೆ ಪಡೆದ ಮಂಡಳಿಯಿಂದ 10+2 ಉತ್ತೀರ್ಣರಾಗಿರಬೇಕು. ಕೆಲವು ಹುದ್ದೆಗಳಿಗೆ ಕನಿಷ್ಠ 50% ಅಂಕ ಗಳಿಸಿರಬೇಕು.(SC/ST/PwBD/ಎಕ್ಸ್ ಸರ್ವಿಸ್‌ಮೆನ್ ಅವರಿಗೆ ಸಡಿಲಿಕೆಯಿರುತ್ತದೆ.)
ಟೈಪಿಸ್ಟ್ ಹುದ್ದೆಗಳಿಗೆ ಟೈಪಿಂಗ್‌ನಲ್ಲಿ ಪ್ರಾವಿಣ್ಯತೆ ಅಗತ್ಯವಾಗಿರುತ್ತದೆ.
ಪದವಿ ಹುದ್ದೆಗಳಿಗೆ: ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಯಾವುದೇ ವಿಷಯದಲ್ಲಿ ಪದವಿ ಪಡಿದಿರಬೇಕು. ಟೈಪಿಂಗ್ ಹುದ್ದೆಗಳಿಗೆ ಟೈಪಿಂಗ್ ಕೋರ್ಸ್ ಮುಗಿಸಿರಬೇಕು.
ವಯೋಮಿತಿ (01–01–2025)
ಪದವಿಪೂರ್ವ ಹುದ್ದೆಗಳು: 18 ರಿಂದ 33 ವರ್ಷಗಳು
ಪದವೀಧರ ಹುದ್ದೆಗಳು: 18 ರಿಂದ 36 ವರ್ಷಗಳು
ವಯಸ್ಸಿನ ಸಡಿಲಿಕೆ: ಸರ್ಕಾರಿ ಮಾನದಂಡಗಳ ಪ್ರಕಾರ ಕಾಯ್ದಿರಿಸಿದ ವರ್ಗಗಳಿಗೆ (ಒಬಿಸಿ: 3 ವರ್ಷಗಳು, ಎಸ್‌ಸಿ/ಎಸ್‌ಟಿ: 5 ವರ್ಷಗಳು, ಪಿಡಬ್ಲ್ಯೂಬಿಡಿ: 10-15 ವರ್ಷಗಳು, ಮಾಜಿ ಸೈನಿಕರು, ಇತ್ಯಾದಿ) ವಯಸ್ಸಿನ ಸಡಿಲಿಕೆ ಅನ್ವಯಿಸುತ್ತದೆ
ರಾಷ್ಟ್ರೀಯತೆ: ಭಾರತೀಯ ನಾಗರಿಕರಾಗಿರಬೇಕು. ಭೂತಾನ್, ನೇಪಾಳ ಮತ್ತು ಟಿಬೆಟಿಯನ್ ನಿರಾಶ್ರಿತ ನಾಗರಿಕರು ಕೆಲವು ಷರತ್ತುಗಳೊಂದಿಗೆ ಅರ್ಹರಾಗಿರುತ್ತಾರೆ.
ವೈದ್ಯಕೀಯ ಮಾನದಂಡಗಳು:
ಅಭ್ಯರ್ಥಿಗಳು ಆಯಾ ಹುದ್ದೆಗಳಿಗೆ ನಿಗದಿಪಡಿಸಿದ ವೈದ್ಯಕೀಯ ಮಾನದಂಡಗಳನ್ನು ಪೂರೈಸಬೇಕು. ಇದು ಹುದ್ದೆಯನ್ನು ಅವಲಂಬಿಸಿ ಬದಲಾಗುತ್ತವೆ. ಇದು ದೃಷ್ಟಿ ಪರೀಕ್ಷೆ, ದೈಹಿಕ ಸಾಮರ್ಥ್ಯ ಮುಂತಾದವುಗಳನ್ನು ಒಳಗೊಂಡಿರುತ್ತದೆ.
ಆಯ್ಕೆ ಪ್ರಕ್ರಿಯೆ:
ಸಾಮಾನ್ಯ ಪರೀಕ್ಷೆ ಹಾಗೂ ಸಂದರ್ಶನ. ಟೈಪಿಂಗ್‌ನವರಿಗೆ ಟೈಪಿಂಗ್ ಕೌಶಲ ಪರೀಕ್ಷೆಯಿರುತ್ತದೆ. ಸ್ಟೇಷನ್ ಮಾಸ್ಟರ್ ಮತ್ತು ಟ್ರಾಫಿಕ್ ಅಸಿಸ್ಟೆಂಟ್‌ನಂತಹ ನಿರ್ದಿಷ್ಟ ಹುದ್ದೆಗಳಿಗೆ ಕಂಪ್ಯೂಟರ್ ಆಧಾರಿತ ಆಪ್ಟಿಟ್ಯೂಡ್ ಟೆಸ್ಟ್ ಇರುತ್ತದೆ.
ಅರ್ಜಿ ಸಲ್ಲಿಸುವುದು ಹೇಗೆ?
ಅಧಿಕೃತ ಸೂಚನೆ ಬಿಡುಗಡೆಯಾದ ನಂತರ ಅಭ್ಯರ್ಥಿಗಳು ಆರ್‌ಆರ್‌ಬಿಯ ಅಧಿಕೃತ ವೆಬ್‌ಸೈಟ್ RRB NTPC 2025 ನೇಮಕಾತಿಗೆ ಭೇಟಿ ಕೊಡುವ ಮೂಲಕ ಅರ್ಜಿ ಸಲ್ಲಿಸಬಹುದು.
ಖಾಲಿ ಇರುವ ಹುದ್ದೆ ಮತ್ತು ವಿವರಗಳನ್ನು ತಿಳಿದುಕೊಳ್ಳಲು ಅಧಿಕೃತ ಅಧಿಸೂಚನೆಯ ಪಿಡಿಎಫ್ ಅನ್ನು ಎಚ್ಚರಿಕೆಯಿಂದ ಓದುವುದು ಅಗತ್ಯವಾಗಿದೆ.
ನಿಮ್ಮ ಶಿಕ್ಷಣ, ಅಗತ್ಯ ದಾಖಲೆಗಳು, ಛಾಯಾಚಿತ್ರ ಮತ್ತು ಸಹಿಯನ್ನು ಸ್ಕ್ಯಾನ್ ಮಾಡಿದ ಪ್ರತಿಗಳನ್ನು ಅಪಲೋಡ್ ಮಾಡಬೇಕಾಗುತ್ತದೆ.
ಅರ್ಜಿ ಶುಲ್ಕ ಅನ್ವಯಿಸಿದರೆ ಅದನ್ನು ಆನ್‌ಲೈನ್ ಪೋರ್ಟಲ್‌ಗಳ ಮೂಲಕ ಸಲ್ಲಿಸಿ. ಭವಿಷ್ಯದ ಉಪಯೋಗಕ್ಕಾಗಿ ಅರ್ಜಿ ಸಲ್ಲಿಸಿದ ಪ್ರತಿಯನ್ನು ಡೌನ್‌ಲೋಡ್ ಮಾಡಿಟ್ಟುಕೊಳ್ಳಿ.
ಇದನ್ನೂ ಓದಿ: ಮಳೆಗಾಲದಲ್ಲಿ ಸುರಕ್ಷಿತ ಕಾರು ಚಾಲನೆಗೆ ಉಪಯುಕ್ತ 10 ಸಲಹೆಗಳು



