Pranav Mohanty : ಧರ್ಮಸ್ಥಳ ಎಸ್‌ಐಟಿ ತನಿಖೆಗೆ ಹಿನ್ನೆಡೆ ..? ಕೇಂದ್ರ ಸೇವೆಗೆ ಪ್ರಣವ್ ಮೊಹಾಂತಿ..!

Pranav Mohanty : ಮಂಗಳೂರು : ಧರ್ಮಸ್ಥಳದಲ್ಲಿ ನಡೆದಿದೆ ಎನ್ನಲಾಗುತ್ತಿರುವ ಸಾಮೂಹಿಕ ಅಂತ್ಯಕ್ರೀಯೆ ಪ್ರಕರಣದ ತನಿಖೆ ನಡೆಯುತ್ತಿದೆ. ಈ ನಡುವಲ್ಲೇ ಎಸ್‌ಐಟಿ ಮುಖ್ಯಸ್ಥರಾಗಿರುವ ಪ್ರಣವ್ ಮೊಹಾಂತಿ ಅವರನ್ನು ಕೇಂದ್ರದ ಯೋಜನೆ ಆಗಲಿದ್ದಾರೆ.
ಕಳೆದ ಮೂರು ದಿನಗಳಿಂದಲೂ ಹಿರಿಯ ಪೊಲೀಸ್ ಅಧಿಕಾರಿ ಪ್ರಣವ್ ಮೊಹಾಂತಿ ಅವರ ನೇತೃತ್ವದ ಎಸ್‌ಐಟಿ ತಂಡ ತನಿಖೆ ನಡೆಸುತ್ತಿದೆ.
ಇಂದು ಮಧ್ಯಾಹ್ನ ಪ್ರಣವ್ ಮೊಹಾಂತಿ ಅವರು ಧರ್ಮಸ್ಥಳದ ಘಟನಾ ಸ್ಥಳಕ್ಕೆ ಭೇಟಿ ನೀಡಲಿದ್ದಾರೆ. ಈ ನಡುವಲ್ಲೇ ಎಸ್‌ಐಟಿ ತನಿಖೆಯ ನೇತೃತ್ವ ವಹಿಸಿರುವ ಪ್ರಣವ್ ಮೊಹಾಂತಿ ಅವರನ್ನು ಕೇಂದ್ರ ಸೇವೆಗೆ ನಿಯೋಜನೆ ಆಗ್ತಾರಾ ಅನ್ನೋ ಸುದ್ದಿ ಹರಿದಾಡುತ್ತಿದೆ.
ಇದನ್ನೂ ಓದಿ : ಕಾರ್ಕಳ ಪರಶುರಾಮ ಪ್ರತಿಮೆ ಪ್ರಕರಣ : ನ್ಯಾಯಾಲಯಕ್ಕೆ ಮುನಿಯಾಲು ಪಿಐಎಲ್ ಸಲ್ಲಿಕೆ
36 ಅಧಿಕಾರಿಗಳ ಲಿಸ್ಟ್‌ನಲ್ಲಿದೆ ಪ್ರಣವ್ ಮೊಹಾಂತಿ ಹೆಸರು
ಕರ್ನಾಟಕದಲ್ಲಿ ಸೇವೆ ಸಲ್ಲಿಸುತ್ತಿರುವ 36 ಐಪಿಎಸ್ ಅಧಿಕಾರಿಗಳನ್ನು ಕೇಂದ್ರ ಸೇವೆಗೆ ನಿಯೋಜನೆ ಮಾಡಿದೆ. ಈಗಾಗಲೇ ಬಿಡುಗಡೆ ಮಾಡಿರುವ ಪಟ್ಟಿಯಲ್ಲಿ ಪ್ರಣವ್ ಮೊಹಾಂತಿ ಅವರ ಹೆಸರು 16 ಸ್ಥಾನದಲ್ಲಿದೆ.
ಧರ್ಮಸ್ಥಳದಲ್ಲಿ ಗಂಭೀರವಾದ ತನಿಖೆ ನಡೆಯುತ್ತಿರುವ ಹೊತ್ತಲ್ಲೇ ಪ್ರಣವ್ ಮೊಹಾಂತಿ ಅವರ ಎತ್ತಂಗಡಿ ಆಗುತ್ತಾ ಅನ್ನೋ ಪ್ರಶ್ನೆ ಎದ್ದಿದೆ.
ಇದನ್ನೂ ಓದಿ : ಧರ್ಮಸ್ಥಳದಲ್ಲಿ ಎಸ್‌ಐಟಿ ಉತ್ಕನನ : ಕೆಂಪು ರವಿಕೆ, ಎಟಿಎಂ ಕಾರ್ಡ್, ಬ್ಯಾಗ್ ಪತ್ತೆ..!
ಇನ್ನು ಕೇಂದ್ರ ಸೇವೆಗೆ ಪ್ರಣವ್ ಮೊಹಾಂತಿ ಅವರನ್ನು ಕಳುಹಿಸಲು ರಾಜ್ಯ ಸರಕಾರ ಒಪ್ಪುತ್ತಾ ಅನ್ನೋದು ಕುತೂಹಲ ಮೂಡಿಸಿದೆ. ಅಲ್ಲದೇ ಪ್ರಣವ್ ಮೊಹಾಂತಿ ಅವರ ಒಪ್ಪಿಗೆ ಇಲ್ಲದೆ ಕೇಂದ್ರ ಸರಕಾರಕ್ಕೆ ಅವರನ್ನು ಕರೆಯಿಸಿಕೊಳ್ಳಲು ಅವಕಾಶವಿಲ್ಲ.
Setback to Dharmasthala SIT investigation Pranav Mohanty to serve in the central government



