SBI ಜೂನಿಯರ್ ಅಸೋಸಿಯೇಟ್ 5180 ಹುದ್ದೆಗಳಿಗೆ ಅರ್ಜಿ ಆಹ್ವಾನ: ಪದವೀಧರರಿಗೆ ಗುಡ್ ನ್ಯೂಸ್!
SBI Junior Associate Recruitment 2025 : ಭಾರತದ ರಾಷ್ಟ್ರೀಕೃತ ಬ್ಯಾಂಕ್ ಎಸ್ಬಿಐ (SBI) ಖಾಲಿ ಇರುವ ಜೂನಿಯರ್ ಅಸೋಸಿಯೇಟ್ ಹುದ್ದೆಗಳಿಗೆ ನೇಮಕ ಮಾಡಿಕೊಳ್ಳಲು ಅಧಿಸೂಚನೆ ಹೊರಡಿಸಿದೆ.
ಪದವಿ ಪೂರ್ಣಗೊಳಿಸಿ ಸರಕಾರಿ ಬ್ಯಾಂಕ್ನಲ್ಲಿ ಉದ್ಯೋಗ ಗಿಟ್ಟಿಸಿಕೊಳ್ಳಬೇಕೆಂದು ತಯಾರಿ ನಡೆಸುತ್ತಿರುವವರಿಗೆ ಇದು ಸುರ್ವಾಣಾವಕಾಶವಾಗಿದೆ.
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಎಸ್ಬಿಐ ಕ್ಲರ್ಕ್ (ಜೂನಿಯರ್ ಅಸೋಸಿಯೇಟ್) ಹುದ್ದೆಗಳಿಗೆ ಭರ್ತಿ ಮಾಡಿಕೊಳ್ಳಲು ನೇಮಕಾತಿ ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ.
ಅದರ ಪ್ರಕಾರ ಈ ಅರ್ಜಿ ಸಲ್ಲಿಕೆಯು ಆಗಸ್ಟ್ 6 ರಿಂದ ಪ್ರಾರಂಭವಾಗಿದೆ. ಆಸಕ್ತ ಅರ್ಹ ಅಭ್ಯರ್ಥಿಗಳು ಸೂಕ್ತ ದಾಖಲೆಗಳೊಂದಿಗೆ ಅಧಿಕೃತ ವೆಬ್ಸೈಟ್ sbi.co.in ಗೆ ಬೇಟಿ ನೀಡುವ ಮೂಲಕ ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ.
ಫಾರ್ಮ್ ಭರ್ತಿ ಮಾಡಲು ಕೊನೆಯ ದಿನ ಆಗಸ್ಟ್ 26, 2025
ಎಸ್ಬಿಐ ಕರ್ಕ್ ಹುದ್ದೆಗೆ ಅಗತ್ಯವಿರುವ ಅರ್ಹತೆ ಮತ್ತು ಮಾನದಂಡಗಳು :
ಹುದ್ದೆಯ ಹೆಸರು: ಎಸ್ಬಿಐ ಕರ್ಕ್ (ಜೂನಿಯರ್ ಅಸೋಸಿಯೇಟ್ ಹುದ್ದೆ)
ಶೈಕ್ಷಣಿಕ ಅರ್ಹತೆ: ಈ ಹುದ್ದೆಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ತಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ ಸಂಸ್ಥೆಯಿಂದ ಪದವೀಧರರಾಗಿರಬೇಕು. ಅಭ್ಯರ್ಥಿಯು ಸ್ಥಳೀಯ ಭಾಷೆಯ ಜ್ಞಾನ ಹೊಂದಿರಬೇಕು.
ವಯೋಮಿತಿ: ಅಭ್ಯರ್ಥಿಯ ಕನಿಷ್ಠ ವಯಸ್ಸು 20 ವರ್ಷಗಳಿಗಿಂತ ಕಡಿಮೆಯಿರಬಾರದು ಮತ್ತು ಗರಿಷ್ಠ ವಯಸ್ಸು 28 ವರ್ಷಗಳಿಗಿಂತ ಹೆಚ್ಚಿರಬಾರದು. ಮೀಸಲು ವರ್ಗದಿಂದ ಬರುವ ಅಭ್ಯರ್ಥಿಗಳಿಗೆ ನಿಯಮಾನುಸಾರ ಗರಿಷ್ಠ ವಯಸ್ಸಿನಲ್ಲಿ ಸಡಿಲಿಕೆಯಿರುತ್ತದೆ. ವಯೋಮಿತಿಯನ್ನು ಏಪ್ರಿಲ್ 1, 2025 ಅನ್ನು ಗಮನದಲ್ಲಿಟ್ಟುಕೊಂಡು ಲೆಕ್ಕಹಾಕಲಾಗುತ್ತದೆ ಎಂಬುದನ್ನು ನೆನಪಿನಲ್ಲಿಡಿ.
ಇದನ್ನೂ ಓದಿ: ಭಾರತೀಯ ರೈಲ್ವೆ ಇಲಾಖೆ 50 ಸಾವಿರ ಹುದ್ದೆಗಳಿಗೆ ನೇಮಕಾತಿ : 10ನೇ ತರಗತಿ ವಿದ್ಯಾರ್ಹತೆ
ರಾಜ್ಯವಾರು ಭರ್ತಿ ಮಾಡಿಕೊಳ್ಳುತ್ತಿರುವ ಹುದ್ದೆಗಳು
ಎಸ್ಬಿಐ ಈ ಬಾರಿ 5180 ಹುದ್ದೆಗಳಲ್ಲಿ ನಿಯಮಿತ ಮತ್ತು 810 ಬ್ಯಾಕ್ಲಾಗ್ ಹುದ್ದೆಗಳನ್ನು ನೇಮಕಾತಿ ಮಾಡಿಕೊಳ್ಳುತ್ತಿದೆ. ಕೆಲವು ರಾಜ್ಯಗಳಲ್ಲಿ ನಿಯಮಿತ ಮತ್ತು ಬ್ಯಾಕ್ಲಾಗ್ ಎರಡೂ ಹುದ್ದೆಗಳಿಗೆ ನೇಮಕಾತಿ ನಡೆಯುತ್ತಿದೆ. ರಾಜ್ಯುವಾರು ಹುದ್ದೆಗಳು ಹೀಗಿವೆ…
ಕರ್ನಾಟಕ: 270 ಹುದ್ದೆಗಳು (198 ಬ್ಯಾಕ್ಲಾಗ್)
ಗುಜರಾತ್: 220 ಹುದ್ದೆಗಳು
ಆಂಧ್ರ ಪ್ರದೇಶ: 310 ಹುದ್ದೆಗಳು
ಮಧ್ಯಪ್ರದೇಶ: 100 ಹುದ್ದೆಗಳು (37 ಬ್ಯಾಕ್ಲಾಗ್)
ಛತ್ತೀಸ್ಗಢ: 220 ಹುದ್ದೆಗಳು (32 ಬ್ಯಾಕ್ಲಾಗ್)
ಒಡಿಶಾ: 190 ಹುದ್ದೆಗಳು
ಹರಿಯಾಣ: 138 ಹುದ್ದೆಗಳು
ಜಮ್ಮು ಮತ್ತು ಕಾಶ್ಮೀರ: 29 ಹುದ್ದೆಗಳು
ಹಿಮಾಚಲ ಪ್ರದೇಶ: 68 ಹುದ್ದೆಗಳು
ಲಡಾಖ್ ಕೇಂದ್ರಾಡಳಿತ ಪ್ರದೇಶ: 37 ಹುದ್ದೆಗಳು
ಪಂಜಾಬ್: 178 ಹುದ್ದೆಗಳು
ತಮಿಳುನಾಡು: 380 ಹುದ್ದೆಗಳು
ತೆಲಂಗಾಣ: 250 ಹುದ್ದೆಗಳು (58 ಬ್ಯಾಕ್ಲಾಗ್)
ರಾಜಸ್ಥಾನ: 260 ಹುದ್ದೆಗಳು (27 ಬ್ಯಾಕ್ಲಾಗ್)
ಪಶ್ಚಿಮ ಬಂಗಾಳ: 270 ಹುದ್ದೆಗಳು (4 ಬ್ಯಾಕ್ಲಾಗ್)
ಅಂಡಮಾನ್ ನಿಕೋಬಾರ್ ದ್ವೀಪಗಳು: 30 ಹುದ್ದೆಗಳು (2 ಬ್ಯಾಕ್ಲಾಗ್)
ಸಿಕ್ಕಿಂ: 20 ಹುದ್ದೆಗಳು
ಉತ್ತರ ಪ್ರದೇಶ: 514 ಹುದ್ದೆಗಳು (18 ಬ್ಯಾಕ್ಲಾಗ್)
ಮಹಾರಾಷ್ಟ್ರ: 476 ಹುದ್ದೆಗಳು (74 ಬ್ಯಾಕ್ಲಾಗ್)
ಗೋವಾ: 14 ಹುದ್ದೆಗಳು
ದೆಹಲಿ: 169 ಹುದ್ದೆಗಳು (5 ಬ್ಯಾಕ್ಲಾಗ್)
ಉತ್ತರಾಖಂಡ: 127 ಹುದ್ದೆಗಳು
ಅರುಣಾಚಲ ಪ್ರದೇಶ: 20 ಹುದ್ದೆಗಳು (36 ಬ್ಯಾಕ್ಲಾಗ್)
ಅಸ್ಸಾಂ: 145 ಹುದ್ದೆಗಳು (170 ಬ್ಯಾಕ್ಲಾಗ್)
ಮಣಿಪುರ: 16 ಹುದ್ದೆಗಳು (17 ಬ್ಯಾಕ್ಲಾಗ್)
ಮೇಘಾಲಯ: 32 ಹುದ್ದೆಗಳು (46 ಬ್ಯಾಕ್ಲಾಗ್)
ಮಿಜೋರಾಂ: 13 ಹುದ್ದೆಗಳು (15 ಬ್ಯಾಕ್ಲಾಗ್
ನಾಗಾಲ್ಯಾಂಡ್: 22 ಹುದ್ದೆಗಳು (31 ಬ್ಯಾಕ್ಲಾಗ್)
ತ್ರಿಪುರ: 22 ಹುದ್ದೆಗಳು (28 ಬ್ಯಾಕ್ಲಾಗ್)
ಬಿಹಾರ: 260 ಹುದ್ದೆಗಳು
ಜಾರ್ಖಂಡ್: 130 ಹುದ್ದೆಗಳು
ಕೇರಳ: 247 ಹುದ್ದೆಗಳು (12 ಬ್ಯಾಕ್ಲಾಗ್)
ಲಕ್ಷದ್ವೀಪ: 3 ಹುದ್ದೆಗಳು
ಅರ್ಜಿ ಸಲ್ಲಿಕೆ ಹೇಗೆ ?
– ಎಸ್ಬಿಐ ಕರ್ಕ್ ಹುದ್ದೆಗೆ ಅರ್ಜಿ ಸಲ್ಲಿಸಲು ಮೊದಲು ಎಸ್ಬಿಐನ ಅಧಿಕೃತ ವೆಬ್ಸೈಟ್ಗೆ ಬೇಟಿ ಕೊಡಿ.
– ಅಲ್ಲಿ ನ್ಯೂ ರಿಜಿಸ್ಟ್ರೇಷನ್ ಮೇಲೆ ಕ್ಲಿಕ್ಕಿಸಿ. ಅಗತ್ಯವಿರುವ ಮಾಹಿತಿಗಳನ್ನು ಭರ್ತಿ ಮಾಡಿ ನೋಂದಾಯಿಸಿಕೊಳ್ಳಿ.
– ನೋಂದಣಿ ನಂತರ ಅಭ್ಯರ್ಥಿಗಳು ತಮ್ಮ ವಿವರ, ಸಹಿ ಮತ್ತು ಭಾವಚಿತ್ರವನ್ನ ಅಪ್ಲೋಡ್ ಮಾಡಬೇಕಾಗುತ್ತದೆ.
– ಕೊನೆಯದಾಗಿ ಶುಲ್ಕವನ್ನು ಪಾವತಿಸಿ, ಫಾರ್ಮ್ ಅನ್ನು ಸಲ್ಲಿಸಿ.
– ಇದಾದ ನಂತರ ಭವಿಷ್ಯದ ಉಪಯೋಗಕ್ಕಾಗಿ ಪ್ರಿಂಟ್ ಓಟ್ ತೆಗೆದುಕೊಳ್ಳಿ.
– ಹೆಚ್ಚಿನ ಮಾಹಿತಿಗಾಗಿ ಅಧಿಸೂಚನೆಯನ್ನು ಡೌನ್ಲೋಡ್ ಮಾಡಿಕೊಳ್ಳಲು ಇಲ್ಲಿ ಕ್ಲಿಕ್ಕಿಸಿ.
ಇದನ್ನೂ ಓದಿ: ಭಾರತೀಯ ನೌಕಾಪಡೆಯಲ್ಲಿ ಸುವರ್ಣಾವಕಾಶ: SSC ಕಾರ್ಯನಿರ್ವಾಹಕ ಹುದ್ದೆಗೆ ಇಂದೇ ಅರ್ಜಿ ಸಲ್ಲಿಸಿ
(SBI Junior Associate Recruitment 2025 application starts from August 6)



