ಪುಲ್ವಾಮಾ ದಾಳಿಗೆ ಪ್ರತೀಕಾರವಾಗಿ ಭಾರತೀಯ ಸಶಸ್ತ್ರ ಪಡೆಗಳು ನಡೆಸಿದ ಅತ್ಯಂತ ರಹಸ್ಯ ಮತ್ತು ಐತಿಹಾಸಿಕ ಮಿಲಿಟರಿ ಕಾರ್ಯಾಚರಣೆಯಾದ ‘ಆಪರೇಷನ್ ಸಿಂಧೂರ’ ದೇಶದ ರಕ್ಷಣಾ ಇತಿಹಾಸದಲ್ಲಿ ಸುವರ್ಣಾಕ್ಷರಗಳಲ್ಲಿ ಬರೆಯುವಂಥದ್ದು. ಕಳೆದ ವರ್ಷ ನಡೆದ ಈ ಅತ್ಯಂತ ಸಂಕೀರ್ಣ ಕಾರ್ಯಾಚರಣೆಯಲ್ಲಿ ಶತ್ರುಗಳ ವಿರುದ್ಧ ಹೋರಾಡುತ್ತಾ ಗಡಿಯಲ್ಲಿ ವೀರಾವೇಶದಿಂದ ಪ್ರಾಣಾರ್ಪಣೆ ಮಾಡಿದ ದೇಶದ ಆರು ವೀರ ಯೋಧರ ಹೆಸರುಗಳನ್ನು ಮತ್ತು ಅವರ ಸೇನಾ ವಿವರಗಳನ್ನು ಕೇಂದ್ರ ಸರ್ಕಾರವು ಇದೇ ಮೊದಲ ಬಾರಿಗೆ ಅಧಿಕೃತವಾಗಿ ಸಾರ್ವಜನಿಕವಾಗಿ ಬಹಿರಂಗಪಡಿಸಿದೆ.
ಪಾಕಿಸ್ತಾನ ಮೂಲದ ಉಗ್ರಗಾಮಿ ಸಂಘಟನೆಗಳು ಭಾರತದ ಮೇಲೆ ನಡೆಸಿದ ಪಹಲ್ಗಾಮ್ ಪೈಶಾಚಿಕ ದಾಳಿಗೆ ತಕ್ಕ ಪ್ರತ್ಯುತ್ತರ ನೀಡಲು ಭಾರತೀಯ ಭೂಸೇನೆ ಹಾಗೂ ವಾಯುಸೇನೆ ಜಂಟಿಯಾಗಿ ಈ ಕಾರ್ಯಾಚರಣೆಯನ್ನು ಹಮ್ಮಿಕೊಂಡಿದ್ದವು. ವೈರಿಗಳ ನೆಲೆಗಳನ್ನು ಧ್ವಂಸಗೊಳಿಸುವ ಭರದಲ್ಲಿ ಭಾರತೀಯ ಭೂಸೇನೆಯ ಐವರು ಧೀರ ಸೈನಿಕರು ಮತ್ತು ವಾಯುಸೇನೆಯ ಓರ್ವ ತಾಂತ್ರಿಕ ಅಧಿಕಾರಿ ಸೇರಿ ಒಟ್ಟು ಆರು ಮಂದಿ ರಣರಂಗದಲ್ಲಿ ವೀರಮರಣವನ್ನಪ್ಪಿದ್ದರು.
ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ ಈ ಅಪ್ರತಿಮ ವೀರರಿಗೆ ಗೌರವ ಸಲ್ಲಿಸುವ ಸಲುವಾಗಿ, ನವದೆಹಲಿಯ ಇಂಡಿಯಾ ಗೇಟ್ ಬಳಿ ಇರುವ ರಾಷ್ಟ್ರೀಯ ಯುದ್ಧ ಸ್ಮಾರಕದ ತ್ಯಾಗ ಚಕ್ರದ ಗ್ರಾನೈಟ್ ಗೋಡೆಗಳ ಮೇಲೆ ಇವರ ಹೆಸರುಗಳನ್ನು ಕೆತ್ತಿ ಶಾಶ್ವತ ಸ್ಥಾನ ಕಲ್ಪಿಸಲಾಗಿದೆ.
Also Read: ಕೇಂದ್ರ ಸರ್ಕಾರದ ಬಂಪರ್ ಯೋಜನೆ! ಮಾಸಿಕ 3,000 ಖಚಿತ ಪಿಂಚಣಿ
ಇನ್ನು ಹುತಾತ್ಮ ಯೋಧರು ಯಾರ್ಯಾರು ಅನ್ನೋದನ್ನ ನೋಡೋದಾದ್ರೆ, ಸುಬೇದಾರ್ ಮೇಜರ್ ಪವನ್ ಕುಮಾರ್, ರೈಫಲ್‌ಮ್ಯಾನ್ ಸುನಿಲ್ ಕುಮಾರ್, ಲ್ಯಾನ್ಸ್ ನಾಯಕ್ ದಿನೇಶ್ ಕುಮಾರ್, ಅಗ್ನಿವೀರ್ ಮೂಡ್ ಮುರಳಿ ನಾಯಕ್, ಹವಿಲ್ದಾರ್ ಸುನಿಲ್ ಕುಮಾರ್ ಸಿಂಗ್, ಸಾರ್ಜೆಂಟ್ ಸುರೇಂದ್ರ ಕುಮಾರ್ ಎಂದು ಕೇಂದ್ರ ಸರ್ಕಾರ ಮಾಹಿತಿ ನೀಡಿದೆ.
Immortal tribute to the heroes of Operation Sindhur Names to be immortalized in the war memorial



