ಇಂದಿನಿಂದ ವಿಧಾನ ಮಂಡಲ ಅಧಿವೇಶ : ಸರಕಾರಕ್ಕೆ ಪ್ರತಿಪಕ್ಷಗಳ ಚಾಟಿ

Today News Karnataka Assembly Session : ಬೆಂಗಳೂರು : ರಾಜ್ಯ ವಿಧಾನ ಮಂಡಲದ ಮಳೆಗಾಲದ ಅಧಿವೇಶನ ಇಂದಿನಿಂದ ಆರಂಭಗೊಳ್ಳಲಿದೆ. ಅಗಸ್ಟ್ 22ರ ವರೆಗೆ ನಡೆಯಲಿರುವ ಅಧಿವೇಶದಲ್ಲಿ ರಾಜ್ಯದ ಕಾಂಗ್ರೆಸ್ ಸರಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ಪ್ರತಿಪಕ್ಷಗಳು ಸಜ್ಜಾಗಿವೆ.
ಈ ನಡುವಲ್ಲೇ 24 ವಿಧೇಯಕಗಳು ಮಂಡನೆ ಆಗಲಿವೆ. ಕರ್ನಾಟಕ ಸರಕಾರದ ವಿರುದ್ದ ಹಲವು ಆರೋಪಗಳಿವೆ. ಸರಕಾರದ ಕಾರ್ಯ ವೈಖರಿಯ ವಿರುದ್ದ ಪ್ರತಿಪಕ್ಷಗಳು ಮುನಿಸಿಕೊಂಡಿವೆ. ಗ್ಯಾರಂಟಿ ಯೋಜನೆಗಳಿಂದಾಗಿ ರಾಜ್ಯದ ಬೊಕ್ಕಸ ಬರಿದಾಗಿದೆ.
ಸರಕಾರದ ವಿರುದ್ದ ಜೆಡಿಎಸ್- ಬಿಜೆಪಿ ಅಸ್ತ್ರ
ಕಾರ್ನಾಟಕದ ಕಾಂಗ್ರೆಸ್ ಸರಕಾರದ ವಿರುದ್ದ ಮುಗಿ ಬೀಳು ಪ್ರತಿಪಕ್ಷಗಳು ತುದಿಗಾಲಲ್ಲಿ ನಿಂತಿವೆ. ಐಪಿಎಲ್ ಬೆನ್ನಲ್ಲೇ ಬೆಂಗಳೂರಲ್ಲಿ ನಡೆದಿದುರವ ಆರ್‌ಸಿಬಿ ಸಂಭ್ರಮಾಚರಣೆ ದುರಂತದಲ್ಲಿ ಒಟ್ಟು 11 ಮಂದಿ ಸಾವನ್ನಪ್ಪಿದ್ದರು.
ಇದೇ ವಿಚಾರದ ಕುರಿತು ಪ್ರತಿಪಕ್ಷಗಳು ರಾಜ್ಯ ಸರಕಾರದ ವಿರುದ್ದ ಮುಗಿ ಬೀಳಲಿವೆ. ಕೇಂದ್ರ ಸರಕಾರ ರಾಜ್ಯಕ್ಕೆ ನೀಡಿರುವ ಯೂರಿಯಾ ಅನ್ಯ ರಾಜ್ಯಕ್ಕೆ ಮಾರಾಟದ ಆರೋಪ ಕೇಳಿಬಂದಿದೆ.
ರೈತರಿಗೆ ಯೂರಿಯಾ ಕೊರತೆ ವಿಚಾರವನ್ನು ಮುಂದಿಟ್ಟು ರಾಜ್ಯ ಸರಕಾರ ಹಾಗೂ ವಿಪಕ್ಷಗಳ ನಡುವೆ ಜಟಾಜಟಿ ನಡೆಯೋದು ಖಚಿತ. ರಾಹುಲ್ ಗಾಂಧಿ ಮತಗಳ್ಳತನದ ಆರೋಪ ಮಾಡಿದ್ದು. ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷಗಳ ನಡುವೆ ಇದೇ ವಿಚಾರ ಸಮರಕ್ಕೆ ಕಾರಣವಾಗುವ ಸಾಧ್ಯತೆಯಿದೆ.
Also Read : ಟಿಕೆಟ್ ಖರೀದಿಸಿ ಮೋದಿ ಮೆಟ್ರೋ ಪ್ರಯಾಣ; ನಿಂತುಕೊಂಡೇ ವಿದ್ಯಾರ್ಥಿಗಳ ಜೊತೆಗೆ ಸಂವಾದ
ದ್ವೇಷ ಭಾಷಣ ನಿಯಂತ್ರಣ ಸಂಬಂಧ ವಿಧೇಯಕ ಮಂಡನೆಯಾಗುವ ಸಾಧ್ಯತೆಯಿದೆ. ಬಿಜೆಪಿ ಹಾಗೂ ಜೆಡಿಎಸ್ ಪಕ್ಷಗಳು ವಿಧಾನ ಮಂಡಲ ಅಧಿವೇಶನದ ಹಿನ್ನೆಲೆಯಲ್ಲಿ ಭಾನುವಾರ ಬೆಂಗಳೂರಿನ ಖಾಸಗಿ ಹೋಟೆಲ್‌ನಲ್ಲಿ ಸಮನ್ವಯ ಸಮಿತಿಯ ಸಭೆ ನಡೆಸಿವೆ.
ವಿಧಾನಸಭಾ ಕಲಾಪ ಆರಂಭಕ್ಕೂ ಮೊದಲೇ ವಿಧಾನಸೌದದ ಮುಂಭಾಗದ ಗಾಂಧಿ ಪ್ರತಿಮೆಯ ಮುಂದೆ 10.30ಕ್ಕೆ ಎರಡೂ ಪಕ್ಷಗಳ ಶಾಸಕರು ಹಾಗೂ ವಿಧಾನ ಪರಿಷತ್ ಸದಸ್ಯರು ಪ್ರತಿಭಟನೆ ನಡೆಸಲಿದ್ದಾರೆ.
27 ವಿಧೇಯಕ ಮಂಡನೆಗೆ ಸರಕಾರ ಸಿದ್ದತೆ
ಈ ಬಾರಿಯ ವಿಧಾನಸಭಾ ಅಧಿವೇಶನದಲ್ಲಿ ಒಟ್ಟು 27 ವಿಧೇಯಕಗಳು ಮಂಡನೆ ಆಗುವ ಸಾಧ್ಯತೆಯಿದೆ. ಬಾಲ್ಯ ವಿವಾಹ ತಿದ್ದುಪಡಿ ವಿದೇಯಕ, ಗ್ರೇಟರ್ ಬೆಂಗಳೂರು ತಿದ್ದುಪಡಿ, ದ್ವೇಷ ಭಾಷಣ ಮತ್ತು ದ್ವೇಷ ಅಪರಾಧ ಪ್ರತಿಬಂಧಕ ವಿಧೇಯಕ ಮಂಡನೆ ಆಗಲಿದೆ
ಇತ್ತೀಚಿನ ದಿನಗಳಲ್ಲಿ ಸುಳ್ಳು ಸುದ್ದಿಗಳ ಸಂಖ್ಯೆ ಹೆಚ್ಚುತ್ತಿದ್ದು, ಸರಕಾರ ಈ ಕುರಿತು ವಿಧೇಯಕ ಜಾರಿಗೆ ಮುಂದಾಗಿದೆ. ಅದ್ರಲ್ಲೂ ಫೇಕ್ ನ್ಯೂಸ್ ಮತ್ತು ತಪ್ಪು ಮಾಹಿತಿ ನಿರ್ಬಂಧಕ ವಿಧೇಯಕ ಸೇರಿ ಒಟ್ಟು 27 ವಿಧೇಯಕಗಳು ಮಂಡನೆ ಆಗಲಿವೆ.
Also Read : ಗೃಹಲಕ್ಷ್ಮೀ ಫಲಾನುಭವಿಗಳಿಗೆ ಗುಡ್ ನ್ಯೂಸ್ : 4000 ರೂ. ಖಾತೆಗೆ ಜಮೆ
ಚರ್ಚೆ ಆಗುತ್ತಾ ಧರ್ಮಸ್ಥಳ ಎಸ್ಐಟಿ ತನಿಖೆ ?
ಧರ್ಮಸ್ಥಳದಲ್ಲಿ ನಡೆದಿದೆ ಎನ್ನಲಾಗುತ್ತಿರುವ ಸಾಮೂಹಿಕ ಅಂತ್ಯಕ್ರೀಯೆ ಪ್ರಕರಣ ತನಿಖೆಯನ್ನು ಎಸ್‌ಐಟಿ ಕೈಗೆತ್ತಿಕೊಂಡಿದೆ. ಇದೇ ವಿಚಾರದ ಕುರಿತು ಹಿಂದೂ ಕಾರ್ಯಕರ್ತರು, ಬಿಜೆಪಿ ಮುಖಂಡರು ಸಾಕಷ್ಟು ಆಕ್ರೋಶ ಹೊರ ಹಾಕಿದ್ದಾರೆ.
ಹಿಂದೂ ಧಾರ್ಮಿಕ ಭಾವನೆಗೆ ಧಕ್ಕೆಯಾಗುತ್ತಿದೆ ಅನ್ನೋ ಆರೋಪ ಕೇಳಿಬಂದಿದೆ. ಕೆಲವು ಬಿಜೆಪಿ ನಾಯಕರು ದೂರುದಾರನನ್ನೇ ಬಂಧನಕ್ಕೆ ಒಳಪಡಿಸಬೇಕು ಅಂತಾ ಆಗ್ರಹಿಸಿದ್ದಾರೆ. ಹೀಗಾಗಿ ವಿಧಾನ ಸಭಾ ಅಧಿವೇ಼ಶನದಲ್ಲಿಯೂ ಇದೇ ವಿಚಾರ ಮತ್ತೆ ಚರ್ಚೆ ಆಗುವ ಸಾಧ್ಯತೆಯಿದೆ.
Karnataka Assembly Session Start today BJP Jds Target Today News



