50ರ ಸಂಭ್ರಮಕ್ಕೆ 50ಕ್ಕೂ ಅಧಿಕ ಸೇವಾ ಕಾರ್ಯ : ಹುಟ್ಟುಹಬ್ಬದಂದು ಶಾಸಕ ಸುನಿಲ್ ಕುಮಾರ್ ಜನಸೇವೆ
Karkala MLA Sunil Kumar : ಕಾರ್ಕಳ : ಜನಪ್ರತಿನಿಧಿಗಳ ಹುಟ್ಟು ಹಬ್ಬ ಅಂದ್ರೆ ಸಾಮಾನ್ಯವಾಗಿ ಸಾರ್ವಜನಿಕ ಅಭಿನಂದನೆ, ಸಾಂಸ್ಕೃತಿಕ ಕಾರ್ಯಕ್ರಮ, ಬೃಹತ್ ವೇದಿಕೆಯ ಸಂಭ್ರಮ, ಕೇಕ್ ಕತ್ತರಿಸಿ ಸಂಭ್ರಮಿಸೋದು ಮಾಮೂಲು. ಆದರೆ ಕಾರ್ಕಳ ಶಾಸಕರಾದ ಸುನಿಲ್ ಕುಮಾರ್ ತಮ್ಮ 50ನೇ ವರ್ಷದ ಹುಟ್ಟು ಹಬ್ಬವನ್ನು ವಿಶಿಷ್ಟ ಮಾತ್ರವಲ್ಲ, ವಿಭಿನ್ನವಾಗಿ ಆಚರಿಸಿಕೊಂಡಿದ್ದಾರೆ.
ಕಾರ್ಕಳ ಶಾಸಕರಾದ ಸುನಿಲ್ ಕುಮಾರ್ ಅವರು ಬುಧವಾರ ತನ್ನ 50ನೇ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ಶಾಸಕ ವಿ.ಸುನಿಲ್ ಕುಮಾರ್ ತಮ್ಮ ಹುಟ್ಟು ಹಬ್ಬದ ಆಚರಣೆಯ ಮೂಲಕ ಎಲ್ಲರ ಗಮನಸೆಳೆದಿದ್ದಾರೆ. ಸುನಿಲ್ ಕುಮಾರ್ ಅವರು 50ರ ಸಂಭ್ರಮಕ್ಕೂ ಕೇಕ್ ಕತ್ತರಿಸಲಿಲ್ಲ ಬದಲಾಗಿ ತನ್ನ ಹುಟ್ಟುಹಬ್ಬದ ದಿನವನ್ನು ಸಂಪೂರ್ಣವಾಗಿ ಜನಸೇವೆಗೆ ಮೀಸಲಿಟ್ಟಿದ್ದು ವಿಶೇಷವಾಗಿತ್ತು.

50ರ ಹುಟ್ಟು ಹಬ್ಬದ ಸಂಭ್ರಮದ ದಿನದಂದು 50ಕ್ಕೂ ಅಧಿಕ ಜನಸೇವಾ ಕಾರ್ಯಕ್ರಮವನ್ನು ಮಾಡುವ ಮೂಲಕ ಜನಪರ ಕಾಳಜಿಯನ್ನು ತೋರಿಸಿದ್ದಾರೆ. ಕಾರ್ಕಳದ ಪುಲ್ಕೇರಿ ನಿವಾಸಿಯಾಗಿರುವ ಸುಂದರಿಯವರಿಗೆ ನೂತನ ಮನೆ ನಿರ್ಮಾಣ ಮಾಡಿ ಇಂದು ಹಸ್ತಾಂತರಿಸಿದರು. ಹೆಬ್ರಿಯ ಬಡಕುಟುಂಬ ಚುಕ್ರಿ, ಗಣೇಶ್ ಸಾಣೂರು ಸೇರಿಸಿ ಇತರ ಅಶಕ್ತ ಕುಟುಂಬಗಳ ಮನೆ ನಿರ್ಮಾಣಕ್ಕೆ ಧನಸಹಾಯ ನೀಡಿದರು. ನೊಂದ ಅನಾರೋಗ್ಯ ಪೀಡಿತರ ಚಿಕಿತ್ಸೆಗೆ ನೆರವು ನೀಡಿದರು.
ಮನೆ, ಆರ್ಥಿಕ ಸಹಾಯ, ಸಾಮಾಜಿಕ ಸೇವಾ ಕಾರ್ಯ
ಬಡ ಮಕ್ಕಳ ಶಿಕ್ಷಣಕ್ಕೆ ನೆರವು, ಶ್ರವಣ ಸಾಧನಾ ವಿತರಣೆ, ಸ್ವಚ್ಚತಾ ಸಾಮಗ್ರಿ ವಿತರಣೆ, ಕಟ್ಟಿಂಗ್ ಮೆಷಿನ್, ಟೈಲರಿಂಗ್ ಮೆಷಿನ್, ಸೇವಾ ಮನೋಭಾವನೆಯ ಸಮಾಜ ಸೇವಾ ಸಂಸ್ಥೆಗಳಿಗೆ ಸಹಾಯಧನ ಹಸ್ತಾಂತರ ಸೇರಿದಂತೆ 50ಕ್ಕೂ ಅಧಿಕ ಸೇವಾ ಕಾರ್ಯಗಳಿಗೆ ಚಾಲನೆ ನೀಡಿ, ಈ ದಿನದ ಗಿಪ್ಟ್ ಆಗಿ ರೂಪಾಂತರಿಸಿದ್ದರು.

ಹುಟ್ಟುಹಬ್ಬವನ್ನೂ ಸಹ ಸಮಾಜದ ಹಿತಕ್ಕಾಗಿ ಬಳಸಿಕೊಳ್ಳಬಹುದು ಎಂಬುದು ಶಾಸಕರ ಈ ಕಾರ್ಯದಿಂದ ಸ್ಪಷ್ಟಗೊಂಡಿತು. ವಿಕಾಸ ಕಚೇರಿಯಲ್ಲಿ ನಡೆದ ಸೇವಾ ಕಾರ್ಯ ವಿತರಣೆಯ ಸರಳ ಕಾರ್ಯಕ್ರಮದಲ್ಲಿ ಮಾತನಾಡಿದ ಶಾಸಕ ವಿ. ಸುನಿಲ್ ಕುಮಾರ್ ಅವರು ನನಗೆ 50 ವರ್ಷ ತುಂಬಿದ ಸಂದರ್ಭದಲ್ಲಿ ಅಶಕ್ತರನ್ನು ಗುರುತಿಸಿ, 50ಕ್ಕೂ ಹೆಚ್ಚು ಜನರಿಗೆ ನಮ್ಮ ಕೈಯಿಂದಾದ ಸಹಾಯ ಮಾಡುವ ಪ್ರಯತ್ನ ನಡೆಸಿದ್ದೇವೆ.
ಸೇವಾ ಕಾರ್ಯ, ಸಾಮಾಜಿಕ ಕೆಲಸ ಸೇರಿದಂತೆ ಇನ್ನಿತರ ಸಹಾಯವನ್ನು ನಿರಂತರವಾಗಿ ಮಾಡುತ್ತಲೇ ಬಂದಿದ್ದೇವೆ. ಹೊಸ ಮನೆಗಳನ್ನು ಸಂಪೂರ್ಣವಾಗಿ ರಿಪೇರಿ ಮಾಡುವ ಹೊಣೆಗಾರಿಕೆಯನ್ನು ವಿಕಾಸ ಸೇವಾ ಸಂಸ್ಥೆ ವಹಿಸಿಕೊಂಡಿದೆ ಎಂದಿದ್ದಾರೆ.
Also Read : Udupi Crime Report : ಕಾರ್ಕಳದಲ್ಲಿ ಆಟೋ ಚಾಲಕ ಸಾವು, ಗಂಗೊಳ್ಳಿಯಲ್ಲಿ ವರದಕ್ಷಿಣೆ ಕಿರುಕುಳ
ತರುಣಾ ಭಾರತ ಸಂಘವು ಉತ್ತಮ ಕಾರ್ಯ ಚಟುವಟಿಕೆಗಳನ್ನು ಮಾಡುತ್ತಾ ಬಂದಿದೆ. ಈ ರೀತಿಯ ಎಲ್ಲಾ ಚಟುವಟಿಕೆಗಳಿಗೆ ನಿಮ್ಮ ನಿರಂತರವಾದ ಸಹಕಾರವಿರಲಿ. ನಮ್ಮ ಕಾರ್ಕಳ ಸ್ವಚ್ಛ ಕಾರ್ಕಳ ಎಂಬ ಪರಿಕಲ್ಪನೆಯನ್ನಿಟ್ಟುಕೊಂಡು ಅಭಿವೃದ್ಧಿಯ ಆಶಯವನ್ನು ಇಟ್ಟುಕೊಂಡು ಪ್ರತಿನಿಧಿಯಾಗಿ ಸೇವೆ ಸಲ್ಲಿಸುತ್ತಿರುವ ನಮ್ಮ ಮೇಲೆ ನಿಮ್ಮೆಲ್ಲರ ಸಹಕಾರವಿರಲಿ ಎಂದರು.

ಪ್ರಸ್ತಾವನೆಗೈದ ರವೀಂದ್ರ ಮಡಿವಾಳ ಅವರು ದೇಶ ಸಂಭ್ರಮ ಪಡುವ ಈ ಸಮಯದಲ್ಲಿ ಪ್ರತಿ ವರ್ಷ ಇನ್ನೊಂದು ಸಂಭ್ರಮದ ಖುಷಿ ನಮ್ಮ ಕಾರ್ಕಳದ ಜನರಿಗಿದೆ. ಅದು ಶಾಸಕನ ವಿ ಸುನಿಲ್ ಕುಮಾರ್ ರವರ ಹುಟ್ಟು ಹಬ್ಬ. ಶಾಸಕರು ಕಾರ್ಕಳದ ಜನರಿಗೆ ಸಿಕ್ಕಿದ ಒಂದು ಉತ್ತಮ ಕೊಡುಗೆ.
Also Read : ಶಾಸಕ ಸುನಿಲ್ ಕುಮಾರ್ ವಿರುದ್ದ ಮುತಾಲಿಕ್ ಮಾನನಷ್ಟ ಮೊಕದ್ದಮೆ ವಜಾ
ಜನಪ್ರತಿನಿಧಿ ಎಲ್ಲರೂ ಆಗುತ್ತಾರೆ ಆದರೆ ಸುನಿಲ್ ಕುಮಾರ್ ರವರು ಒಬ್ಬ ಪ್ರತಿನಿಧಿ ಆಗಿದ್ದಾರೆ ಅಂದ್ರೆ ಆ ನಾಡು ಭಾಗ್ಯವಂತರ ನಾಡೇ ಆಗಿರುತ್ತದೆ. ಕಾರ್ಕಳವನ್ನು ಬದಲಾವಣೆಯ ದಾರಿಯಲ್ಲಿ ಕೊಂಡೊಯ್ದು, ಅಭಿವೃದ್ಧಿ, ಸಾಮಾಜಿಕ ಕಳಕಳಿಯ ಮುಖಾಂತರ ಹಲವಾರು ಕೊಡುಗೆ ನೀಡಿ ಪ್ರೇರಣಾ ಶಕ್ತಿ ಯಾಗಿ ನಿಂತವರು ನಮ್ಮ ಸುನಿಲ್ ಕುಮಾರ್ ಎಂದರು.

ಪ್ರಮುಖರಾದ ಬೋಳ ಶ್ರೀನಿವಾಸ್ ಕಾಮತ್ , ಅತ್ರಿ ಪ್ರಸನ್ನ ಶೆಟ್ಟಿ, ಜಯರಾಮ್ ಸಾಲ್ಯಾನ್, ಮತ್ತಿತರರು ಉಪಸ್ಥಿತರಿದ್ದರು. ರಾಕೇಶ್ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು.
Karkala MLA Sunil Kumar 50th Birthday Celebration Social Work in Kannada News



