ಬರ್ತಡೇ ಪಾರ್ಟಿ : 20 ವರ್ಷದ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ

Kolkata women gang rape : ಕೋಲ್ಕತ್ತಾ : ಬರ್ತಡೇ ಪಾರ್ಟಿಗೆ ಆಹ್ವಾನಿಸಿ 20 ವರ್ಷದ ಮಹಿಳೆಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿರುವ ಘಟನೆ ಕೋಲ್ಕತ್ತಾದ ರೀಜೆಂಟ್ಸ್ ಪಾರ್ಕ್ ಪ್ರದೇಶದಲ್ಲಿ ನಡೆದಿದೆ.
ಹುಟ್ಟುಹಬ್ಬದ ಆಚರಣೆಯ ವೇಳೆಯಲ್ಲಿ ಇಬ್ಬರು ಪರಿಚಯಸ್ಥರು ತನ್ನ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ ಎಂದು ಹರಿದೇವ್ಪುರದ 20 ವರ್ಷದ ಮಹಿಳೆ ಆರೋಪಿಸಿದ್ದಾರೆ.
ಅತ್ಯಾಚಾರ ಎಸಗಿದ ಆರೋಪಿಗಳನ್ನು ಚಂದನ್ ಮಲ್ಲಿಕ್ ಮತ್ತು ದ್ವಿಪ್ (ದೀಪ್) ಬಿಸ್ವಾಸ್ ಎಂದು ಗುರುತಿಸಲಾಗಿದೆ. ಆರೋಪಿಗಳು ಸದ್ಯ ತಲೆಮರೆಸಿ ಕೊಂಡಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.
ಪೊಲೀಸ್ ಮೂಲಗಳ ಪ್ರಕಾರ, ಅತ್ಯಾಚಾರಕ್ಕೆ ಒಳಗಾಗಿರುವ ಮಹಿಳೆ ಚಂದನ್ ಮಲ್ಲಿಕ್ ಅವರನ್ನು ಹಲವು ತಿಂಗಳ ಹಿಂದೆ ಭೇಟಿಯಾದರು. ದಕ್ಷಿಣ ಕೋಲ್ಕತ್ತಾ ಪೂಜಾ ಸಮಿತಿಯ ಮುಖ್ಯಸ್ಥ ಎಂದು ಹೇಳಿಕೊಂಡ ಮಲ್ಲಿಕ್, ನಂತರ ಆಕೆಯನ್ನು ದ್ವಿಪ್ಗೆ ಪರಿಚಯಿಸಿದ್ದ.
ಚಂದನ್ ಮಲ್ಲಿಕ್ ಹಾಗೂ ದ್ವೀಪ್ ಜೊತೆ ಮಹಿಳೆ ಆಗಾಗ ಮಾತನಾಡುತ್ತಿದ್ದಳು. ಅತ್ಯಾಚಾರಕ್ಕೆ ಒಳಗಾಗಿರುವ ಮಹಿಳೆಯನ್ನು ರೀಜೆಂಟ್ ಪಾರ್ಕ್ ಪ್ರದೇಶದ ಫ್ಲಾಟ್ಗೆ ಕರೆದೊಯ್ದರು.
ಇದನ್ನೂ ಓದಿ : ಔೈದ್ಯಕೀಯ ಉಪಕರಣ ಖರೀದಿ : ಉಡುಪಿ ವ್ಯಕ್ತಿಗೆ ಆನ್ಲೈನ್ ವಂಚನೆ
ಅಲ್ಲಿ ಮೂವರು ಸೇರಿಕೊಂಡು ಊಟ ಮಾಡಿದ್ದಾರೆ. ಊಟದ ನಂತರ ಮಹಿಳೆ ಹೊರಹೋಗಲು ಪ್ರಯತ್ನಿಸಿದ್ದಾರೆ. ಆದರೆ ಇಬ್ಬರು ಸೇರಿಕೊಂಡು ಬಾಗಿಲು ಲಾಕ್ ಮಾಡಿ, ಹಲ್ಲೆ ನಡೆಸಿದ್ದಾರೆ. ನಂತರ ಇಬ್ಬರು ಸೇರಿಕೊಂಡು ಮಹಿಳೆಯ ಮೇಲೆ ಅತ್ಯಾಚಾರ ಎಸಗಿದ್ದಾರೆ ಎಂದು ಮಹಿಳೆ ಆರೋಪಿಸಿದ್ದಾರೆ.
ಮರುದಿನ ಬೆಳಿಗ್ಗೆ ಆಕೆ ತಪ್ಪಿಸಿಕೊಂಡು ಮನೆಗೆ ಮರಳಿದ್ದಾಳೆ. ಮಹಿಳೆ ಹರಿದೇವ್ಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪೊಲೀಸರು ತಲೆ ಮರೆಯಿಸಿಕೊಂಡಿರುವ ಆರೋಪಿಗಳಿಗಾಗಿ ಬಲೆ ಬೀಸಿದ್ದಾರೆ.
ಇದೇ ವರ್ಷ ದಕ್ಷಿಣ ಕಲ್ಕತ್ತಾ ಕಾನೂನು ಕಾಲೇಜು ಆವರಣದಲ್ಲಿ 24 ವರ್ಷದ ಕಾನೂನು ವಿದ್ಯಾರ್ಥಿನಿಯ ಮೇಲೆ ಮೂವರು ವಿದ್ಯಾರ್ಥಿಗಳು ಮತ್ತು ಒಬ್ಬ ಭದ್ರತಾ ಸಿಬ್ಬಂದಿ ಸಾಮೂಹಿಕ ಅತ್ಯಾಚಾರ ಎಸಗಿದ್ದರು.
ಇದನ್ನೂ ಓದಿ : ಫೇಸ್ಬುಕ್ ಜಾಹೀರಾತು ನಂಬಿ 3 ಲಕ್ಷ ಕಳೆದುಕೊಂಡ ಮಹಿಳೆ
ಮೂವರನ್ನೂ ಬಂಧಿಸಲಾಯಿತು, ಆದರೆ ನಗರದಲ್ಲಿ ಮಹಿಳೆಯರ ಸುರಕ್ಷತೆಯ ಬಗ್ಗೆ ವ್ಯಾಪಕ ಪ್ರತಿಭಟನೆಗಳು ನಡೆದಿದ್ದವು. ಇದೀಗ ಕೋಲ್ಕತ್ತಾದಲ್ಲಿ ಮತ್ತೊಂದು ಮಹಿಳೆಯ ಮೇಲೆ ಸಾಮೂಹಿಕ ಅತ್ಯಾಚಾರ ಪ್ರಕರಣ ದಾಖಲಾಗಿದೆ.



