ಜಾತಿಗಣತಿ ರದ್ದಾಗುತ್ತಾ ? ಹೈಕೋರ್ಟ್‌ಗೆ ಸಲ್ಲಿಕೆ ಆಯ್ತು ಪಿಐಎಲ್‌

Karnataka caste Survey : ಬೆಂಗಳೂರು : ಕರ್ನಾಟಕ ಸರಕಾರದ ಹಿಂದುಳಿದ ವರ್ಗಗಳ ಆಯೋಗ ಜಾತಿ ಸಮೀಕ್ಷೆಗೆ ಮುಂದಾಗಿದೆ. ಜಾತಿ, ಉಪಜಾತಿಗಳ ಪಟ್ಟಿಯಲ್ಲಿ ಸಾಕಷ್ಟು ಗೊಂದಲಗಳಿದ್ದು, ಜಾತಿಗಣತಿ ರದ್ದುಗೊಳಿಸುವಂತೆ ಕೋರಿ ಹೈಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಕೆಯಾಗಿದೆ.

ಹಿರಿಯ ವಕೀಲರಾಗಿರುವ ಕೆಎನ್‌ ಸುಬ್ಬಾರೆಡ್ಡಿ ಅವರು ಕರ್ನಾಟಕ ಹೈಕೋರ್ಟ್ ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಕೆ ಮಾಡಿದ್ದಾರೆ. ಜಾತಿಗಣತಿಯ ಮೂಲಕ ರಾಜ್ಯ ಸರಕಾರ ಜಾತಿ ಮತ್ತು ಉಪಜಾತಿಗಳ ನಡುವೆ ಎತ್ತಿಕಟ್ಟುತ್ತಿದೆ.

ಹೀಗಾಗಿ ಜಾತಿ ಗಣತಿ ರದ್ದುಪಡಿಸುವಂತೆ ಅರ್ಜಿಯಲ್ಲಿ ಕೋರಲಾಗಿದೆ. ಸೆಪ್ಟೆಂಬರ್‌ 22ರಿಂದ ಕರ್ನಾಟಕದಲ್ಲಿ ಜಾತಿಗಣತಿ ಆರಂಭವಾಗುತ್ತಿದೆ.

ಜಾತಿಗಣತಿ ನಡೆಸುವ ಕುರಿತು ರಾಜ್ಯ ಸರಕಾರ ಈಗಾಗಲೇ ಜಾತಿ ಹಾಗೂ ಉಪ ಜಾತಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಆದರೆ ಕೈಪಿಡಿಯಲ್ಲಿರುವ ಕೆಲವು ಜಾತಿಗಳ ಬಗ್ಗ ಈಗಾಗಲೇ ಆಕ್ಷೇಪ ವ್ಯಕ್ತವಾಗಿದೆ.

ಹಿಂದೂ ಜಾತಿಗಳ ಮುಂದೆ ಕ್ರಿಶ್ಚಿಯನ್‌ ಅಂತಾ ನಮೂದಿಸಲಾಗಿದೆ. ಬ್ರಾಹ್ಮಣ ಕ್ರಿಶ್ಚಿಯನ್‌, ದೇವಾಂಗ ಕ್ರಿಶ್ಚಿಯನ್‌, ಮಡಿವಾಳ ಕ್ರಿಶ್ಚಿಯನ್‌, ಕುರುಬ ಕ್ರಿಶ್ಚಿಯನ್‌, ಒಕ್ಕಲಿಗ ಕ್ರಿಶ್ಚಿಯನ್‌, ವಿಶ್ವಕರ್ಮ ಬ್ರಾಹ್ಮಣ ಕ್ರಿಶ್ಚಿಯನ್‌, ನೇಕಾರ ಕ್ರಿಶ್ಚಿಯನ್‌, ಜಂಗಮ ಕ್ರಿಶ್ಚಿಯನ್‌ ಅಂತಾ ಸೇರಿಸಿರೋದು ಆಕ್ರೋಶಕ್ಕೆ ಕಾರಣವಾಗಿದೆ.

ಇದನ್ನೂ ಓದಿ : ಮಾಜಿ ಸಿಎಂ ಡಿವಿ ಸದಾನಂದ ಗೌಡರಿಗೆ ಹ್ಯಾಕರ್ಸ್‌ಕಾಟ : 3 ಲಕ್ಷ ಕನ್ನ, ಸೈಬರ್‌ ಕ್ರೈಂಗೆ ದೂರು

ಕೇಂದ್ರ ಸರಕಾರಕ್ಕಷ್ಟೇ ಜಾತಿಗಣತಿ ಅಧಿಕಾರ

ಜಾತಿಗಣತಿ ನಡೆಸುವ ಅಧಿಕಾರ ಕೇಂದ್ರ ಸರಕಾರಕ್ಕೆ ಮಾತ್ರವೇ ಇದೆ. ರಾಜ್ಯ ಸರಕಾರದ ನಿರ್ಧಾರವನ್ನು ರದ್ದುಪಡಿಸಬೇಕು. ದಸರಾ ರಜೆಯ ದಿನಗಳಲ್ಲಿ ರಾಜ್ಯ ಸರಕಾರ ಜಾತಿಗಣತಿ ನಡೆಸುತ್ತಿದೆ. ಜನರು ಹಬ್ಬದ ಸಂಭ್ರಮದಲ್ಲಿದ್ದ ವೇಳೆಯಲ್ಲಿ ಜಾತಿಗಣತಿ ಸರಿಯಲ್ಲ.

ಸುಮಾರು 1500 ಜಾತಿಗಳಿಗೂ ಪ್ರತ್ಯೇಕವಾದ ಅಸ್ತಿತ್ವ ನೀಡುತ್ತಿದೆ. ಹೀಗಾಗಿ ಜಾತಿಗಣತಿಗೆ ಅವಕಾಶ ನೀಡಬಾರದು ಎಂದು ಅರ್ಜಿಯಲ್ಲಿ ತಿಳಿಸಿದ್ದಾರೆ.

ಇದನ್ನೂ ಓದಿ : ಸೆಪ್ಟೆಂಬರ್‌ 22ರಿಂದ ಅಕ್ಟೋಬರ್‌ 7ರವರೆಗೆ ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ : ಮುಖ್ಯಮಂತ್ರಿ ಸಿದ್ದರಾಮಯ್ಯ

Karnataka caste Survey be cancelled PIL filed in the Karnataka High Court

Kannada News Next Desk

Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021

Related Stories