ಕ್ರಿಶ್ಚಿಯನ್ ಹಿಂದು ಪದ ಕೈ ಬಿಟ್ಟ ಆಯೋಗ : ಬಿಜೆಪಿ ನಾಯಕರ ಹೋರಾಟಕ್ಕೆ ಜಯ

Karnataka caste Survey Big Updates : ಕ್ರಿಶ್ಚಿಯನ್ ಪದ ಜೋಡಿತ ಹಿಂದು ಉಪ ಜಾತಿಗಳ ಪಟ್ಟಿಯನ್ನು ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆ ಸಂದರ್ಭದಲ್ಲಿ ಕೈ ಬಿಡುವುದಕ್ಕೆ ಕೊನೆಗೂ ಹಿಂದುಳಿದ ವರ್ಗಗಳ ಆಯೋಗ ನಿರ್ಧರಿಸಿದ್ದು, ಬಿಜೆಪಿ ಓಬಿಸಿ ನಾಯಕರ ಹೋರಾಟಕ್ಕೆ ಜಯ ದೊರೆತಂತಾಗಿದೆ.
46 ಇಂತ ಹೊಸ ಜಾತಿಯನ್ನು ಆಯೋಗ ಪಟ್ಟಿ ಮಾಡಿತ್ತು. ಇದು ಸಾಮಾಜಿಕ ಹಾಗೂ ಮೀಸಲಾತಿ ವ್ಯವಸ್ಥೆಯಲ್ಲಿ ಭಾರಿ ಮಟ್ಟದ ಏರುಪೇರು ಹಾಗೂ ವಿಪ್ಲವಕ್ಕೆ ಕಾರಣವಾಗಬಹುದೆಂದು ಬಿಜೆಪಿ ಗುರುತಿಸಿತ್ತು. ಸಾಮಾನ್ಯವಾಗಿ ಇಂಥ ವಿಚಾರಗಳಲ್ಲಿ ಒಂದು ನರೇಟಿವ್ ಸೃಷ್ಟಿ ಮಾಡುವಲ್ಲಿ ವಿಫಲವಾಗುತ್ತಲೇ ಇದ್ದ ಬಿಜೆಪಿ ಈ ಬಾರಿ ಮಾತ್ರ ಜಾಗೃತಗೊಂಡಿತು.
ಸಾಮಾಜಿಕ ಹೋರಾಟಗಾರ ವಾದಿರಾಜ್ ಸಾಮರಸ್ಯ, ಮಾಜಿ ಸಚಿವ ವಿ.ಸುನೀಲ್ ಕುಮಾರ್, ಸಂಸದ ಪಿ.ಸಿ.ಮೋಹನ್ ಮುಂಚೂಣಿಯಲ್ಲಿ ನಿಂತು ಹೋರಾಟಕ್ಕೆ ಅಣಿಯಾಗಿದ್ದರಿಂದ ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಂಡು ಹಿಂದು ಜಾತಿ ಉಪನಾಮ ಬಳಕೆಯ ವಿರುದ್ಧ ಒಂದು ಜಾಗೃತಿ ಮೂಡಿತು.
ಸುನೀಲ್ ಕುಮಾರ್ ಹಾಗೂ ಪಿ.ಸಿ.ಮೋಹನ್ ನೇತೃತ್ವದಲ್ಲಿ ಹಿಂದುಳಿದ ವರ್ಗಗಳ ಆಯೋಗಕ್ಕೆ ಭೇಟಿ ನೀಡಿ ಈ ಬಗ್ಗೆ ಮೊದಲು ಮನವಿ ಸಲ್ಲಿಸಲಾಯಿತು.
ಇದನ್ನೂ ಓದಿ : ಕ್ರಿಶ್ಚಿಯನ್ ಧರ್ಮದಲ್ಲಿ ಜಾತಿವ್ಯವಸ್ಥೆ ಸೃಷ್ಟಿ ಕೈಬಿಡಿ : ಸಿಎಂಗೆ ಕ್ರಿಶ್ಚಿಯನ್ ಸೇವಾ ಸಂಘ ಒತ್ತಾಯ
ಆ ಬಳಿಕ ಕ್ರಿಶ್ಚಿಯನ್ನರನ್ನು ಹಿಂದು ಜಾತಿಗಳೊಳಗೆ ತುರುಕುವುದನ್ನು ಖಂಡಿಸಿ ಸಾಮಾಜಿಕ ಜಾಗೃತಿ ವೇದಿಕೆ ಅಡಿಯಲ್ಲಿ ವಾದಿರಾಜ್ ಹಾಗೂ ಸುನೀಲ್ ಕುಮಾರ್ ಸಂಘಟಿಸಿದ ದುಂಡು ಮೇಜಿನ ಸಭೆಗಳು ಇತರೆ ಜಾತಿಯವರಲ್ಲೂ ಈ ಬಗ್ಗೆ ಜಾಗೃತಿ ಮೂಡಿಸಿತು.
(Karnataka caste Survey Big Updates) ಈ ಬಗ್ಗೆ ರಾಜ್ಯಪಾಲರಿಗೂ ದೂರು ನೀಡಿ ಕ್ರಿಶ್ಚಿಯನ್ ಧರ್ಮ ಜೋಡಿತ ಹಿಂದು ಜಾತಿಗಳ ಪ್ರತ್ಯೇಕ ಸೃಷ್ಟಿಯಿಂದ ಆಗುವ ಅನಾಹುತದ ಬಗ್ಗೆ ಮನವರಿಕೆ ಮಾಡಲಾಯಿತು.
ಇದು ಸಮಾಜದ ಎಲ್ಲ ವರ್ಗದಲ್ಲೂ ಎಚ್ಚರಿಕೆಯ ಗಂಟೆ ಮೊಳಗಿಸುವ ಜತೆಗೆ ಸಮೀಕ್ಷೆ ಸಂದರ್ಭದಲ್ಲಿ ಎಲ್ಲರೂ ಧರ್ಮದ ಕಾಲಮ್ಮಿನಲ್ಲಿ ಹಿಂದು ಎಂದೇ ನಮೂದಿಸಬೇಕೆಂದು ಪಕ್ಷವಾಗಿ ಬಿಜೆಪಿ ಅಧಿಕೃತ ನಿರ್ಣಯ ತೆಗೆದುಕೊಳ್ಳುವುದಕ್ಕೆ ಕಾರಣವಾಗಿದೆ.
ಇದನ್ನೂ ಓದಿ : ಜಾತಿಗಣತಿ ರದ್ದಾಗುತ್ತಾ ? ಹೈಕೋರ್ಟ್‌ಗೆ ಸಲ್ಲಿಕೆ ಆಯ್ತು ಪಿಐಎಲ್
ಒಕ್ಕಲಿಗ, ಲಿಂಗಾಯತ ಸೇರಿದಂತೆ ಪ್ರಬಲ ಸಮುದಾಯಗಳು ಕೂಡಾ ಇದಕ್ಕೆ ಕೈಜೋಡಿಸಿವೆ. ಸಾಮಾನ್ಯವಾಗಿ ಹಿಂದುತ್ವದ ವಿಚಾರದಲ್ಲಿ ಮಾತ್ರ ನರೇಟಿವ್ ಕಟ್ಟುತ್ತಿದ್ದ ಬಿಜೆಪಿ ಈ ಬಾರಿ ಸಾಮಾಜಿಕ – ಶೈಕ್ಷಣಿಕ ವಿಚಾರದಲ್ಲೂ ಎಚ್ಚರಿಕೆಯ ಹೆಜ್ಜೆ ಇಟ್ಟಿದ್ದು ಶ್ಲಾಘನೀಯ.



