ಅತ್ಯಂತ ಕಡಿಮೆ ಬೆಲೆಗೆ ಬಿಡುಗಡೆಯಾದ ಫ್ಯಾಮಿಲಿ ಕಾರ್: ಮಹೀಂದ್ರಾ ಬೊಲೆರೊ ನಿಯೊ ವೈಶಿಷ್ಟ್ಯ ಏನು?
Mahindra Bolero Neo: ಭಾರತದಲ್ಲಿ 7 ಸೀಟುಗಳಿರುವ ಕಾರುಗಳ ಬೇಡಿಕೆ ದಿನೇ ದಿನೇ ಹೆಚ್ಚುತ್ತಿದೆ. ಅದರಲ್ಲೂ ಕುಟುಂಬದೊಂದಿಗೆ ಪ್ರಯಾಣ ಬೆಳೆಸುವ ಜನರು ಇದನ್ನೇ ಹೆಚ್ಚಾಗಿ ಇಷ್ಟ ಪಡುತ್ತಿದ್ದಾರೆ.
ಇದೀಗ ಮಹೀಂದ್ರಾ, ಬೊಲೆರೊ ಮತ್ತು ಬೊಲೆರೊ ನಿಯೋದ ವೈಶಿಷ್ಟ್ಯಗಳನ್ನು ನವೀಕರಿಸಿ ಹೊಸ ಆವೃತ್ತಿಯನ್ನು ಬಿಡುಗಡೆಮಾಡಿದೆ. ಈಗ ಬಿಡುಗಡೆಯಾದ ಈ ಹೊಸ ಕಾರುಗಳ ಯಂತ್ರದಲ್ಲಿ ಬದಲಾವಣೆಯಿಲ್ಲದಿದ್ದರೂ, ಹೊರ ಮತ್ತು ಒಳ ಭಾಗದಲ್ಲಿ ಸಾಕಷ್ಟು ಬದಲಾವಣೆಗಳನ್ನು ಕಾಣಬಹುದಾಗಿದೆ.
ಇದರ ಬಿಡುಗಡೆಯ ಸಮಯದಲ್ಲಿ ಮಹೀಂದ್ರಾದ ಈ ಬ್ಯಾಂಡ್‌ನ ಕಾರುಗಳು 1.68 ಮಿಲಿಯನ್ ಯುನಿಟ್ ಮಾರಾಟವನ್ನು ದಾಖಲಿಸಿದೆ ಎಂದು ಕಂಪನಿ ಹೇಳಿಕೊಂಡಿದೆ.
ಹೊಸ ವಿನ್ಯಾಸದೊಂದಿಗೆ ಬಿಡುಗಡೆಯಾದ ಬೊಲೆರೊ ನಿಯೋ ಕಾರಿನ ವೈಶಿಷ್ಟ್ಯ ಹಾಗೂ ಬೆಲೆಗಳೇನು? ವಿನ್ಯಾಸದಲ್ಲಿ ಏನೆಲ್ಲಾ ಬದಲಾವಣೆಗಳಾಗಿವೆ ಎಂದು ನೋಡೋಣ.
ಮಹೀಂದ್ರಾ ಬೊಲೆರೊ ನಿಯೋ ವೈಶಿಷ್ಟ್ಯಗಳು
ಈಗ ಬಿಡುಗಡೆಯಾಗಿರುವ ಬೊಲೆರೊ ನಿಯೋ ಕಾರು ಈಗಾಗಲೇ ಇರುವ ಆವೃತ್ತಿಯ ಯಂತ್ರ ವಿನ್ಯಾಸವನ್ನು ಹಾಗೆಯೇ ಉಳಿಸಿಕೊಂಡಿದೆ. ಇದು 1.5 ಲೀಟರ್‌ನ mHawk ಡೀಸೆಲ್ ಎಂಜಿನ್ ಅನ್ನು ಹೊಂದಿದ್ದು, ಸುಮಾರು 100 bhp ಮತ್ತು 260 Nm ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಜೊತೆಗೆ ಮ್ಯಾನುವಲ್ ಅಥವಾ ಆಟೋಮ್ಯಾಟಿಕ್ ಟ್ರಾನ್ಸ್ಮಿಷನ್ ಆಯ್ಕೆಗಳು ಕೂಡಾ ಮೊದಲಿನ ರೀತಿಯಲ್ಲೇ ಇದೆ.
ಬಾಹ್ಯ ವಿನ್ಯಾಸ
2025ರ ಆವೃತ್ತಿಯ ಹೊಸ ಮಹೀಂದ್ರಾ ಬೊಲೆರೊ ನಿಯೋ ತನ್ನ ಹಳೆಯ ಮಾದರಿಯನ್ನು ಹೋಲುತ್ತದೆ. ಆದರು ಕೆಲವು ಪ್ರಮುಖ ಬಾಹ್ಯ ವಿನ್ಯಾಸಗಳಲ್ಲಿ ಬದಲಾವಣೆ ಕಾಣಬಹುದು.
ಲಂಬವಾದ ಸ್ಲ್ಯಾಟ್‌ಗಳೊಂದಿಗೆ ಹೊಸದಾಗಿ ವಿನ್ಯಾಸಗೊಳಿಸಲಾದ ಗ್ರಿಲ್, ಹೊಸದಾಗಿ ವಿನ್ಯಾಸಗೊಳಿಸಲಾದ R16 ಅಲಾಯ್ ಚಕ್ರಗಳು ಸೇರ್ಪಡೆಯಾಗಿವೆ.
ಅಲ್ಲದೆ, ಹೊಸ ಮಹೀಂದ್ರಾ ಬೊಲೆರೊ ನಿಯೋವನ್ನು ಜೀನ್ಸ್ ಬ್ಲೂ ಎಂಬ ಪ್ಯಾಲೆಟ್‌ನಲ್ಲಿ ಹೊಸ ಬಣ್ಣದೊಂದಿಗೆ ನವೀಕರಿಸಲಾಗಿದೆ. ಇದರಿಂದ ಕಾರು ನೋಡಲು ಬಹಳ ಆಕರ್ಷಕವಾಗಿ ಕಾಣಿಸುತ್ತಿದೆ.
ಇದನ್ನೂ ಓದಿ: mahindra : 10 ಲಕ್ಷಕ್ಕೆ ಮಹೀಂದ್ರಾ ಥಾರ್ 2025 : ಏನಿದರ ವಿಶೇಷತೆ ?
ಒಳಾಂಗಣ ವಿನ್ಯಾಸ
ನವೀಕರಿಸಿ ಬಿಡುಗಡೆ ಮಾಡಲಾದ ಹೊಸ ಬೊಲೆರೊ ನಿಯೋ ಕಾರಿನ ಕ್ಯಾಬಿನ್‌ನಲ್ಲ ಬದಲಾವಣೆಗಳಾಗಿದನ್ನು ಗಮನಿಸಬಹುದಾಗಿದೆ. ಇದರ ಕ್ಯಾಬಿನ್ ಲೆದರೆಟ್ ಅಪ್ಹೋಲ್ಸ್ಟರಿ ಮತ್ತು ಮೆಶ್ ಪ್ಯಾಟರ್ನ್‌ಗಳೊಂದಿಗೆ ರಿಫ್ರೆಶ್ ಮಾಡಲಾಗಿದೆ.
ಇದರ ಟಾಪ್ ಎಂಡ್ ರೂಪಾಂತರವು ಲೂನಾರ್ ಗ್ರೇ ಬಣ್ಣದ ಥೀಮ್ ಪಡೆದರೆ, ಇದರ ಕೆಳಗಿನ ರೂಪಾಂತರಗಳು ಬ್ರೌನ್ ಥೀಮ್ ಪಡೆದುಕೊಂಡು ಪ್ರೀಮಿಯಂ ಅನುಭವವನ್ನ ನೀಡುತ್ತದೆ. ಜೊತೆಗೆ 22.9 ಸೆಂ.ಮೀ. ಇನ್ಫೋಟೈನ್‌ಮೆಂಟ್ ಘಟಕ ಮತ್ತು ರಿಯರ್ ಕ್ಯಾಮೆರಾ ನವೀಕರಿಸಿದ್ದನ್ನು ಇದರಲ್ಲಿ ಕಾಣಬಹುದಾಗಿದೆ.
ರೂಪಾಂತರ ಮತ್ತು ಬೆಲೆ
ಈಗ ಬಿಡುಗಡೆಯಾದ ಹೊಸ ಮಹೀಂದ್ರಾ ಬೊಲೆರೊ ನಿಯೋ ಎನ್4, ಎನ್8, ಎನ್10 ಹಾಗೂ ಎನ್11 ಎಂಬ ಒಟ್ಟು 4 ರೂಪಾಂತರಗಳನ್ನು ಪಡೆದುಕೊಂಡಿದೆ. ಎನ್4 ರೂಪಾಂತರದ ಬೆಲೆ 8.49 ಲಕ್ಷ ರೂ., ಎನ್8 ರೂಪಾಂತರದ ಬೆಲೆ 9.29 ಲಕ್ಷ ರೂ., ಎನ್ 10 ರೂಪಾಂತರದ ಬೆಲೆ 9.79 ಲಕ್ಷ ರೂ. ಹಾಗೂ ಎನ್ 11 ರೂಪಾಂತರದ ಬೆಲೆ 9.99 ಲಕ್ಷ ರೂ. ಗಳಾಗಿವೆ. (ಬೆಲೆಗಳು ಎಕ್ಸ್ ಶೋ ರೂಂ ಬೆಲೆಗಳಾಗಿವೆ.)
ಹೊಸ ಮಹೀಂದ್ರಾ ಬೊಲೆರೊ ನಿಯೋ ಸುಧಾರಿತ ಸವಾರಿ ಮತ್ತು ರೈಡ್‌ಫ್ಲೋ ನಂತಹ ನಿರ್ವಹಣಾ ತಂತ್ರಜ್ಞಾನವನ್ನು ಹೊಂದಿದೆ. ಯಾವುದೇ ಭೂಪ್ರದೇಶದಲ್ಲಾದರೂ ಉತ್ತಮ ಸವಾರಿ ನೀಡುವಂತೆ ಇದನ್ನು ವಿನ್ಯಾಸಗೊಳಿಸಲಾಗಿದೆ. ಸುಧಾರಿತ ಸಸ್ಪೆನ್ಷನ್ ಆರ್ಕಿಟೆಕ್ಚರ್‌ನೊಂದಿಗೆ ವರ್ಧಿತ ಸ್ಥಿರತೆ ಮತ್ತು ನಿಯಂತ್ರಣವನ್ನು ಇದು ನೀಡುತ್ತದೆ.
ಇದನ್ನೂ ಓದಿ: ಇನ್ನಷ್ಟು ಅಗ್ಗವಾದ ಮಾರುತಿ ಆಲ್ಲೊ ಕೆ10: ಹಬ್ಬದ ಸೀಸನ್‌ನ್ನಲ್ಲಿ ಕಾರು ಖರೀದಿಸುವವರಿಗೆ ಗುಡ್ ನ್ಯೂಸ್!
(Mahindra Bolero Neo launched in India know the price and specification)



