mahindra : 10 ಲಕ್ಷಕ್ಕೆ ಮಹೀಂದ್ರಾ ಥಾರ್ 2025 : ಏನಿದರ ವಿಶೇಷತೆ ?

mahindra thar 3 : ಭಾರತದ ಅತ್ಯಂತ ಬೇಡಿಕೆಯ ಮಹೀಂದ್ರಾ ಥಾರ್ ಇದೀಗ ಅತ್ಯಂತ ಕಡಿಮೆ ಬೆಲೆಗೆ ಹೊಸ ಮಾಡೆಲ್ ಪರಿಚಯಿಸಿದೆ. ಮಹೀಂದ್ರಾ ಥಾರ್ ಅತೀ ಹೆಚ್ಚು ಮಾರಾಟವಾಗುವ ಮೂಲಕ ಹೊಸ ದಾಖಲೆ ಬರೆದಿದೆ. ಇದೀಗ ಮಹೀಂದ್ರ ಥಾರ್೩ ಡೋರ್ ಮಾರುಕಟ್ಟೆಗೆ ಎಂಟ್ರಿ ಕೊಟ್ಟಿದೆ.
2025ರಲ್ಲಿ ಮಹೀಂದ್ರಾ 2 ಲಕ್ಷಕ್ಕೂ ಹೆಚ್ಚು ಅಧಿಕ ಥಾರ್ ಮಾರಾಟ ಮಾಡಿದ ದಾಖಲೆಯನ್ನು ಹೊಂದಿದೆ. ಮಹೇಂದ್ರ ಕಂಪೆನಿ ಇದೀಗ 3 ಡೋರ್ ಹೊಂದಿರುವ ಮಹೀಂದ್ರ ಥಾರ್ ಪರಿಚಯಿಸಿದೆ.
ಹೊಸ ಥಾರ್ ರೂ. 9.99 ಲಕ್ಷ ರೂಪಾಯಿ ಬೆಲೆಯಿಂದ ಆರಂಭವಾಗುತ್ತಿದೆ. ಹಾಗಾದ್ರೆ ಹೊಸ ಥಾರ್ ಯಾವ ರೂಪಾಂತರದಲ್ಲಿ ಬಿಡುಗಡೆ ಆಗ್ತಿದೆ, ಇದರ ವಿಶೇಷತೆ ಏನು ಅನ್ನೋದನ್ನು ತಿಳಿದುಕೊಳ್ಳೋಣಾ.

mahindra thar 3 : ಮಹೀಂದ್ರಾ ಥಾರ್ 3-ಡೋರ್ ಬೆಲೆ ಎಷ್ಟು ?
ಡೀಸೆಲ್ (D117 CRDe)
- AXT RWD MT – ರೂ 9.99 ಲಕ್ಷ
LXT RWD MT – ರೂ 12.19 ಲಕ್ಷ
ಡೀಸೆಲ್ (2.2L mHawk) - LXT 4WD MT – ರೂ 15.49 ಲಕ್ಷ
LXT 4WD AT – ರೂ 16.99 ಲಕ್ಷ
ಪೆಟ್ರೋಲ್ (2.0L mStallion) - LXT RWD AT – ರೂ 13.99 ಲಕ್ಷ
LXT 4WD MT – ರೂ 14.69 ಲಕ್ಷ
LXT 4WD AT – ರೂ 16.25 ಲಕ್ಷ
ಡ್ಯುಯಲ್-ಟೋನ್ಗಾಗಿ 2 ಬೆಳ್ಳಿ ಟ್ರಿಮ್ ಅಳವಡಿಸಲಾಗಿದೆ. ಕಾರಿನ ಹಿಂಭಾಗದಲ್ಲಿ ಪಾರ್ಕಿಂಗ್ ಕ್ಯಾಮೆರಾ ಮತ್ತು ಹಿಂಭಾಗದ ವಾಷರ್ ಮತ್ತು ವೈಪರ್ ಅಳವಡಿಸಲಾಗಿದೆ. ಇಂಧನ ಮುಚ್ಚಳವನ್ನು ಚಾಲಕ ಸೀಟಿನಿಂದಲೇ ತೆರೆಯಲು ಸ್ವಿಚ್ ನೀಡಲಾಗಿದೆ.
ಮಹೀಂದ್ರಾ ಥಾರ್ ಸದ್ಯ ಎರಡು ಬಣ್ಣಗಳ ಆಯ್ಕೆಯಲ್ಲಿ ಲಭ್ಯವಿದೆ. ಟ್ಯಾಂಗೋ ರೆಡ್ ಮತ್ತು ಬ್ಯಾಟಲ್ಶಿಪ್ ಗ್ರೇಗಳ ಆಯ್ಕೆಯಲ್ಲಿ ಗ್ರಾಹಕರು ಥಾರ್ ಖರೀದಿ ಮಾಡಬಹುದಾಗಿದೆ.
ಇನ್ನು ಪಿಲ್ಲರ್-ಮೌಂಟೆಡ್ ಗ್ರಾಬ್-ಹ್ಯಾಂಡಲ್ ನೀಡಲಾಗಿದೆ. ಮಹೀಂದ್ರಾ ಥಾರ್ ಡೋರ್ ಪ್ಯಾನೆಲ್ನಲ್ಲಿ ಪವರ್ ವಿಂಡೋ ಸ್ವಿಚ್ ಇರಲಿದೆ. ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್ಪ್ಲೇ ಹೊಂದಿರುವ 10.25-ಇಂಚಿನ ಟಚ್ಸ್ಕ್ರೀನ್ ಯುನಿಟ್, ಸ್ಲೈಡಿಂಗ್ ಫ್ರಂಟ್ ಆರ್ಮ್ರೆಸ್ಟ್ ಮತ್ತು ಹಿಂಭಾಗದ ಎಸಿ ವೆಂಟ್ಗಳು. ಟಚ್ ಡಿಸ್ಪ್ಲೇ ಅಡ್ವೆಂಚರ್ ಸ್ಟ್ಯಾಟ್ಸ್ ಎಂಬ ಸೂಟ್ ಅಡಿಯಲ್ಲಿ ಎತ್ತರ, ಬ್ಯಾಂಕ್ ಆಂಗಲ್, ಪಿಚ್ ಮತ್ತು ಯಾವ್ ಆಂಗಲ್ಗಳು ಉತ್ತಮ ಡ್ರೈವಿಂಗ್ ಅನುಭವವನ್ನು ನೀಡುತ್ತದೆ.

ಮಹೀಂದ್ರಾ ಥಾರ್ನಲ್ಲಿ ಹೊಸದೇನಿದೆ ?
ಮಹೀಂದ್ರಾ ಥಾರ್ ಸಸ್ಪೆನ್ಷನ್ ಸೆಟಪ್ ಮತ್ತು ಡ್ರೈವ್ಟ್ರೇನ್ನೊಂದಿಗೆ ಅದೇ ಎಂಜಿನ್-ಟ್ರಾನ್ಸ್ಮಿಷನ್ ಆಯ್ಕೆಯ ಜೊತೆಗೆ ಮುಂದುವರಿಯಲಿದೆ. ಅಲ್ಲದೇ ಥಾರ್ ಮುಂಭಾಗದಲ್ಲಿ ತಾಂತ್ರಿಕವಾಗಿ ಯಾವುದೇ ಬದಲಾವಣೆಯನ್ನು ಮಾಡಿಲ್ಲ.
ಹೊಸ ಥಾರ್ 3 ರೋಡ್ ಒಟ್ಟು 3 ಎಂಜಿನ್ ಆಯ್ಕೆಗಳ ಆಯ್ಕೆಯನ್ನು ನೀಡಲಾಗಿದೆ. 1.5L ಡೀಸೆಲ್, 2.2L ಡೀಸೆಲ್ ಮತ್ತು 2.0L ಟರ್ಬೊ-ಪೆಟ್ರೋಲ್. ಗೇರ್ಬಾಕ್ಸ್ ಆಯ್ಕೆಗಳಲ್ಲಿ 6-ಸ್ಪೀಡ್ MT ಮತ್ತು 6-ಸ್ಪೀಡ್ AT ಸೇರಿವೆ.
ಹೊಸ ಥಾರ್ನಲ್ಲಿ ಗ್ರಾಹಕರಿಗಾಗಿ ಹೊಸ ತಂತ್ರಜ್ಞಾನಗಳನ್ನು ಅಳವಡಿಸಲಾಗಿದೆ. 360-ಡಿಗ್ರಿ ಪಾರ್ಕಿಂಗ್ ಕ್ಯಾಮೆರಾ ಜೊತೆಗೆ ಪ್ರಯಾಣಕ್ಕೆ ಅನುಕೂಲಕರವಾದ ಆಸನದ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ.



