ಪತ್ನಿ ಹತ್ಯೆಗೈದು ನಾಪತ್ತೆ ನಾಟಕವಾಡಿದ ಪತಿ ಕಳ್ಳಾಟ ಖಾಕಿ ಎದುರು ಬಯಲು : ಪಾಪಿ ಪತಿ ಬಂಧನ

west bengal wife Murder : ನಿರ್ಮಾಣ ಹಂತದಲ್ಲಿರುವ ಮನೆಯ ಬಳಿಯಲ್ಲಿ ಪತ್ನಿಯನ್ನು ಕೊಂದು ಆಕೆಯ ಶವವನ್ನು ಪತಿಯೇ ಹೂತು ಹಾಕಿರುವ ಘಟನೆಯು ಕೇರಳದ ಆಯರ್ಕುನ್ನಂನಲ್ಲಿ ಸಂಭವಿಸಿದೆ. ಈ ಸಂಬಂಧ ಪಶ್ಚಿಮ ಬಂಗಾಳದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ.

ಆರೋಪಿಯನ್ನು ಪಶ್ಚಿಮ ಬಂಗಾಳದ ಮುರ್ಷಿದಾಬಾದ್ ಜಿಲ್ಲೆಯ ಧರಪಾರ ಮೂಲದ ಸೋನಿ ಎಸ್‌ಕೆ (31) ಎಂದು ಗುರುತಿಸಲಾಗಿದೆ. ಆತ ಆಯರ್ಕುನ್ನಂನಲ್ಲಿ ನಿರ್ಮಾಣ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದನು ಮತ್ತು ತನ್ನ ಊರಿಗೆ ಪರಾರಿಯಾಗಲು ಯತ್ನಿಸುತ್ತಿದ್ದಾಗ ಎರ್ನಾಕುಲಂನ ರೈಲ್ವೆ ನಿಲ್ದಾಣದಿಂದ ಬಂಧಿಸಲಾಗಿದೆ.

ಸೋನಿ ತಮ್ಮ ಪತ್ನಿ ಅಲ್ಪನಾ ಖಾತೂನ್ (28) ರನ್ನು ಕೊಲೆ ಮಾಡಿ, ದಂಪತಿಗಳು ಕೆಲಸ ಮಾಡುತ್ತಿದ್ದ ಆಯರ್ಕುನ್ನಂನಲ್ಲಿ ನಿರ್ಮಾಣ ಹಂತದಲ್ಲಿರುವ ಮನೆಯ ಬಳಿ ಹೂತುಹಾಕಿದ್ದ ಎನ್ನಲಾಗಿದೆ.
ತಾನೇ ಪತ್ನಿಯನ್ನು ಕೊಂದು ಹೂತು ಹಾಕಿದ ಬಳಿಕ ನಾಪತ್ತೆ ನಾಟಕವಾಡಿದ ಸೋನಿಯು ತನ್ನ ಪತ್ನಿ ಎಲ್ಲಿಯೂ ಕಾಣುತ್ತಿಲ್ಲ ಎಂದು ಆರೋಪಿಸಿದ್ದರು,

ಅಕ್ಟೋಬರ್​ 17ರಂದು ನಾಪತ್ತೆ ದೂರು ದಾಖಲಿಸಿದ್ದ ಎನ್ನಲಾಗಿದೆ. ಪೊಲೀಸರಿಗೆ ನೀಡಿದ ದೂರಿನಲ್ಲಿ ಈತ ತನ್ನ ಪತ್ನಿ ಕಳೆದ ಮೂರು ದಿನಗಳಿಂದ ಎಲ್ಲಿಯೂ ಕಾಣುತ್ತಿಲ್ಲ ಎಂದು ಹೇಳಿಕೊಂಡಿದ್ದಾನೆ ಎನ್ನಲಾಗಿದೆ.

ಅಕ್ಟೋಬರ್ 14 ರಂದು ಬೆಳಿಗ್ಗೆ 8 ಗಂಟೆ ಸುಮಾರಿಗೆ ಖಾತೂನ್ ದಿನಸಿ ಖರೀದಿಸಲು ಮಾರುಕಟ್ಟೆಗೆ ತನ್ನೊಂದಿಗೆ ಹೋಗಿದ್ದಳು, ಆದರೆ ಸಂಜೆ 6.30 ರ ಸುಮಾರಿಗೆ ಕೆಲಸದಿಂದ ಹಿಂತಿರುಗಿದಾಗ ಮನೆಯಲ್ಲಿ ಇರಲಿಲ್ಲ ಎಂದು ಸೋನಿ ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದ.

ಈ ಘಟನೆ ಸಂಭವಿಸಿ ಮೂರು ದಿನಗಳ ಬಳಿಕ ಈತ ದೂರು ನೀಡಿದ ಹಿನ್ನೆಲೆಯಲ್ಲಿ ಪೊಲೀಸರಿಗೆ ಸೋನಿ ಮೇಲೆ ಅನುಮಾನ ಮೂಡಿತ್ತು. ಇದಾದ ಬಳಿಕ ಆತ ಹೇಳಿದ ಸ್ಥಳಗಳಲ್ಲಿ ಸಿಸಿ ಕ್ಯಾಮರಾ ಪರಿಶೀಲಿಸಿದಾಗ ಖಾತೂನ್​ ಬಗ್ಗೆ ಯಾವುದೇ ಸುಳಿವು ಸಿಗದ ಹಿನ್ನೆಲೆಯಲ್ಲಿ ಪೊಲೀಸರಿಗೆ ಅನುಮಾನ ಬಲವಾಗಿತ್ತು ಎನ್ನಲಾಗಿದೆ.

ಶನಿವಾರ ಸಂಜೆ 4 ಗಂಟೆಗೆ ವಿಚಾರಣೆಗಾಗಿ ಪೊಲೀಸರ ಮುಂದೆ ಹಾಜರಾಗಲು ಸೋನಿ ಅವರನ್ನು ಕೇಳಲಾಗಿತ್ತು, ಆದರೆ ಆತ ವಿಚಾರಣೆಗೆ ಹಾಜರಾಗಲಿಲ್ಲ ಮತ್ತು ಅವರ ಇಬ್ಬರು ಮಕ್ಕಳೊಂದಿಗೆ ಪಶ್ಚಿಮ ಬಂಗಾಳಕ್ಕೆ ರೈಲು ಹತ್ತಲು ಎರ್ನಾಕುಲಂಗೆ ತೆರಳಿದ್ದರು ಎಂದು ವರದಿಯಾಗಿದೆ.

ಸೋನಿ ಸ್ಥಳದಿಂದ ಪರಾರಿಯಾಗುವ ಸುಳಿವು ದೊರೆತ ಹಿನ್ನೆಲೆಯಲ್ಲಿ ಪೊಲೀಸರು ಆತನನ್ನು ವಶಕ್ಕೆ ಪಡೆದು ವಿಚಾರಣೆಗಾಗಿ ಆಯರ್ಕುನ್ನಂಗೆ ಕರೆತಂದರು.

ಅಕ್ಟೋಬರ್ 14 ರಂದು ಬೆಳಿಗ್ಗೆ ಖತೂನ್ ಅವರನ್ನು ನಿರ್ಮಾಣ ಸ್ಥಳದಲ್ಲಿ ಮೊದಲು ಕತ್ತು ಹಿಸುಕಿ, ನಂತರ ಕಬ್ಬಿಣದ ರಾಡ್‌ನಿಂದ ತಲೆಗೆ ಹೊಡೆದು ಕೊಲೆ ಮಾಡಿರುವುದಾಗಿ ಸೋನಿ ಒಪ್ಪಿಕೊಂಡಿದ್ದಾನೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಪತ್ನಿಗೆ ಅಕ್ರಮ ಸಂಬಂಧದ ಶಂಕೆ ಹಿನ್ನೆಲೆಯಲ್ಲಿ ತಾನು ಈ ಕೃತ್ಯ (west bengal wife Murder) ಎಸಗಿರುವುದಾಗಿ ವಿಚಾರಣೆ ವೇಳೆ ಆತ ತಪ್ಪೊಪ್ಪಿಕೊಂಡಿದ್ದಾನೆ. ಸ್ಥಳ ಮಹಜರುವಿಗೆ ಸೋನಿಯನ್ನು ಕರೆದುಕೊಂಡ ಹೋದ ಪೊಲೀಸರು ಹೂತಿದ್ದ ಶವವನ್ನು ಹೊರತೆಗೆದಿದ್ದು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ.

west bengal Murshidabad Husband Murder Wife pretend to Missing

ರಶ್ಮಿ ಎಸ್. | Rashmi S.

ರಶ್ಮಿ ಎಸ್. ನ್ಯೂಸ್‌ ನೆಕ್ಸ್ಟ್‌ ಕನ್ನಡ ( News Next Kannada) ದಲ್ಲಿ ಕಂಟೆಂಟ್‌ ರೈಟರ್‌ ಆಗಿ ಕೆಲಸ ಮಾಡುತ್ತಿದ್ದಾರೆ. ಪತ್ರಿಕೋದ್ಯಮ ವಿಭಾಗದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದು, ಹತ್ತು ವರ್ಷಗಳ ಕಾಲ ಕನ್ನಡ ಸುದ್ದಿ ಮಾಧ್ಯಮಗಳಲ್ಲಿ ಕೆಲಸ ಮಾಡಿದ್ದಾರೆ. ರಾಜಕೀಯ, ಕ್ರೀಡೆ, ವಾಣಿಜ್ಯ, ಸಿನಿಮಾ, ಸ್ಥಳೀಯ ಸುದ್ದಿಗಳನ್ನು ಪ್ರಕಟಿಸುತ್ತಿದ್ದಾರೆ. More »

Related Stories