ನಾವು ನಮ್ಮ ಭವಿಷ್ಯಕ್ಕಾಗಿ ಹೇಗೆ ಹೂಡಿಕೆಯನ್ನು ಮಾಡಬಹುದು ಎಂಬ ಆಸಕ್ತಿದಾಯಕ ಮಾಹಿತಿ ಇಲ್ಲಿದೆ

ಕೇವಲ ಹಣವನ್ನು ಉಳಿತಾಯ ಮಾಡುವುದರಿಂದ ಅದರ ಮೌಲ್ಯ ಕಡಿಮೆಯಾಗಬಹುದು. ಆದ್ದರಿಂದ ಹೀಗೆ ಮಾಡಿ.

ಹೂಡಿಕೆ ಎಂದರೆ ನಮ್ಮ ಮುಂದಿನ ಭವಿಷ್ಯವನ್ನು ಉತ್ತಮ ರೀತಿಯಲ್ಲಿ ಮುಂದುವರೆಸಿಕೊಂಡು ಹೋಗಲು ಇರುವಂತಹ ಉತ್ತಮ ದಾರಿ. ಇದು ನಮ್ಮ ಹಣದ ಮೌಲ್ಯವನ್ನು ಹಣದುಬ್ಬರದಿಂದ ರಕ್ಷಿಸಲು ಮತ್ತು ನಮ್ಮ ಕುಟುಂಬವನ್ನು ರಕ್ಷಿಸಲು ಹೂಡಿಕೆಯ ಅತ್ಯಂತ ಮುಖ್ಯವಾಗಿದೆ, ಸಂಪತ್ತನ್ನು ಹೆಚ್ಚಿಸಲು ಒಂದು ಉತ್ತಮ ಮಾರ್ಗವಾಗಿದೆ. ಕೇವಲ ಹಣವನ್ನು ಉಳಿತಾಯ ಮಾಡುವುದರಿಂದ ಅದರ ಮೌಲ್ಯ ಕಡಿಮೆಯಾಗಬಹುದು,

ನಾವು ಹೂಡಿಕೆ ಮಾಡಲು ನಮಗಿರುವ ಮಾರ್ಗಗಳು ;

ಸ್ಥಿರ ಠೇವಣಿಗಳು (Fixed Deposits – FD): ಗಳು ಸಾಮಾನ್ಯವಾಗಿ ಕಡಿಮೆ ಅಪಾಯದ ಹೂಡಿಕೆಗಳಾಗಿದ್ದು ಮತ್ತು ಕಡಿಮೆ ಬಡ್ಡಿ ದರವನ್ನು ಹೊಂದಿರುತ್ತದೆ, ಬ್ಯಾಂಕ್‌ಗಳಲ್ಲಿ, ಪೋಸ್ಟ್ ಆಫೀಸ್ ಗಳಲ್ಲಿ ಇನ್ನಿತರ ಹಲವು ಪ್ಲ್ಯಾಟ್ ಫಾರ್ಮ್ ಗಳಲ್ಲಿ ನಿರ್ದಿಷ್ಟ ಅವಧಿಗೆ ಹಣವನ್ನು ಇಡಲಾಗುತ್ತದೆ ಮತ್ತು ನಿಗದಿತ ಬಡ್ಡಿಯನ್ನು ಪಡೆಯಬಹುದು.

ಮ್ಯೂಚುವಲ್ ಫಂಡ್‌ಗಳು (Mutual Funds): ಅನೇಕ ಹೂಡಿಕೆದಾರರಿಂದ ಹಣವನ್ನು ಸಂಗ್ರಹಿಸಿ, ಸ್ಟಾಕ್ ಮಾರ್ಕೆಟ್ನಲ್ಲಿ ಅದನ್ನು ಷೇರುಗಳು, ಬಾಂಡ್‌ಗಳು ಅಥವಾ ಇತರ ವೇದಿಕೆ ಗಳಲ್ಲಿ ಹೂಡಿಕೆ ಮಾಡುತ್ತಾರೆ. ಇದು ವೃತ್ತಿಪರ ನಿಧಿ ವ್ಯವಸ್ಥಾಪಕರಿಂದ ನಿರ್ವಹಿಸಲ್ಪಡುತ್ತದೆ ಮತ್ತು ಅಪಾಯವನ್ನು ಹಂಚಿಕೊಳ್ಳಲು ಸಹಾಯ ಮಾಡುತ್ತದೆ. ಮತ್ತು ಇದರಲ್ಲಿ ನೀವು ಸ್ಥಿರ ಠೇವಣಿ ಗಿಂತ ಹೆಚ್ಚು ಆದಾಯವನ್ನು ನಿರೀಕ್ಷಿಸಬಹುದು.

ಷೇರು ಮಾರುಕಟ್ಟೆ (Stock Market): ಇಲ್ಲಿ ನೀವು ನೇರವಾಗಿ ಕಂಪನಿಗಳ ಗುಣಮಟ್ಟದ ಮೇರೆಗೆ ಷೇರುಗಳನ್ನು ಖರೀದಿಸಬಹುದು. ಇಲ್ಲಿ ಅಪಾಯವು ಹೆಚ್ಚಿರುತ್ತದೆ, ಆದರೆ ದೀರ್ಘಾವಧಿಯಲ್ಲಿ ಉತ್ತಮ ಆದಾಯ ಗಳಿಸುವ ಸಾಧ್ಯತೆಯೂ ಇರುತ್ತದೆ. ಮತ್ತು ಇಲ್ಲಿ ಹೂಡಿಕೆ ಮಾಡುವಾಗ ನಿಮಗೆ ಸಂಪೂರ್ಣ ಷೇರು ಮಾರುಕಟ್ಟೆಯ ಬಗ್ಗೆ ಮಾಹಿತಿಗಳು ಇರಬೇಕಾಗುತ್ತದೆ ಇಲ್ಲದಿದ್ದರೆ ನಿಮ್ಮ ಸಂಪೂರ್ಣ ಹಣವನ್ನು ಕಳೆದುಕೊಳ್ಳಬೇಕಾಗುತ್ತದೆ. ಇಲ್ಲಿ ನೀವು ಮ್ಯೂಚುವಲ್ ಫಂಡ್ ಮತ್ತು ಸ್ಥಿರ ಠೇವಣಿ ಗಿಂತ ಹೆಚ್ಚಿನ ಆದಾಯವನ್ನು ನಿರೀಕ್ಷಿಸಬಹುದು.

ಚಿನ್ನ ಮತ್ತು ಇತರೆ ಸರಕುಗಳು (Gold and other Commodities):
ಇದು ಒಂದು ಅತ್ಯುತ್ತಮವಾದ ಆಯ್ಕೆಯಾಗಿದೆ ಚಿನ್ನದ ಬೆಲೆ ಮತ್ತು ಬೆಳ್ಳಿಯ ಬೆಲೆ ಯಾವಾಗಲೂ ಕೂಡ ನಮಗೆ ಒಂದು ನಿರ್ದಿಷ್ಟ ಬಡ್ಡಿಯನ್ನು ಒದಗಿಸುತ್ತದೆ ಯಾವುದೇ ತರಹದ ಅಪಾಯ ಕಡಿಮೆ ಮತ್ತು ಹೆಚ್ಚಿನ ಆದಾಯವನ್ನು ಗಳಿಸಬಹುದು ಅದಕ್ಕೆ ನಾವು ಹೂಡಿಕೆಯ ವಿಚಾರದಲ್ಲಿ ವ್ಯವಹರಿಸುವುದಾದರೆ ಗೋಲ್ಡ್ ಬಾಂಡ್ ಸಿಲ್ವರ್ ಬಾಂಡ್ goldbees Silverbees ಗಳಲ್ಲಿ ಹೂಡಿಕೆ ಮಾಡುವುದು ಉತ್ತಮ.

ಹೂಡಿಕೆಯ ಮೂಲಭೂತ ಅಂಶಗಳು:

ಅಪಾಯ ಸಹಿಷ್ಣುತೆ (Risk Tolerance): ನೀವು ಎಷ್ಟು ಅಪಾಯವನ್ನು ತೆಗೆದುಕೊಳ್ಳಲು ಸಿದ್ಧರಿದ್ದೀರಿ ಎಂಬುದನ್ನು ನಿರ್ಧರಿಸಿ. ಹೆಚ್ಚಿನ ಅಪಾಯ, ಹೆಚ್ಚಿನ ಲಾಭದ ಸಂಭಾವ್ಯತೆ ಇರುತ್ತದೆ.

ನಿಯಮಿತವಾಗಿ ಹೂಡಿಕೆ ಮಾಡಿ: ವಿಶೇಷವಾಗಿ ಮ್ಯೂಚುವಲ್ ಫಂಡ್‌ಗಳಲ್ಲಿ ಸಿಪ್ (SIP – Systematic Investment Plan) ಮೂಲಕ ಸಣ್ಣ ಮೊತ್ತಗಳನ್ನು ನಿಯಮಿತವಾಗಿ ಹೂಡಿಕೆ ಮಾಡುವುದರಿಂದ ದೀರ್ಘಾವಧಿಯಲ್ಲಿ ದೊಡ್ಡ ಸಂಪತ್ತನ್ನು ನಿರೀಕ್ಷಿಸಬಹುದು.

ತಾಳ್ಮೆ ಮುಖ್ಯ: ಹೂಡಿಕೆಗೆ ತಾಳ್ಮೆ ಮತ್ತು ಸಮಯ ಬೇಕು. ಅಲ್ಪಾವಧಿಯ ಏರಿಳಿತಗಳಿಗೆ ಹೆದರಿ ತಕ್ಷಣವೇ ನಿರ್ಧಾರಗಳನ್ನು ತೆಗೆದುಕೊಳ್ಳುವುದು ಸೂಕ್ತವಲ್ಲ.

ಸೂಚನೆ :
ಮಾರುಕಟ್ಟೆ ಹೂಡಿಕೆಗಳು ಮಾರುಕಟ್ಟೆ ಅಪಾಯಗಳಿಗೆ ಒಳಪಟ್ಟಿರುತ್ತವೆ. ಎಚ್ಚರಿಕೆಯಿಂದ ಓದಿ. ನಿಮ್ಮ ನಿರ್ಧಾರಗಳಿಗೆ ನೀವೇ ಜವಾಬ್ದಾರರಾಗಿರುತ್ತೀರಿ

Vidhya | ವಿದ್ಯಾಶ್ರೀ

ವಿದ್ಯಾಶ್ರೀ ಅವರು ನ್ಯೂಸ್‌ ನೆಕ್ಸ್ಟ್‌ ಕನ್ನಡ ( Kannada News Next) ದಲ್ಲಿ ಕಂಟೆಂಟ್‌ ಕ್ರಿಯೆಟರ್‌ ಆಗಿ ಕೆಲಸ ಮಾಡುತ್ತಿದ್ದಾರೆ. ಕನ್ನಡದ ನ್ಯೂಸ್‌ ಚಾನೆಲ್‌, ದಿನ ಪತ್ರಿಕೆ ಹಾಗೂ ಡಿಜಿಟಲ್‌ ಮಾಧ್ಯಮದಲ್ಲಿ ಹಲವು ವರ್ಷಗಳ ಕಾಲ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ.

Related Stories