Bhatkala : ಕೆರೆಯಲ್ಲಿ ಮೀನು ಹಿಡಿಯಲು ತೆರಳಿದ್ದ ಬಾಲಕ ಸಾವು

ಭಟ್ಕಳ (Bhatkal ) : ಕೆರೆಯಲ್ಲಿ ಮೀನು ಹಿಡಿಯಲು ತೆರಳಿದ್ದ ಬಾಲಕನೋರ್ವ ಕೆರೆಯಲ್ಲಿ ಮುಳುಗಿ ಸಾವನ್ನಪ್ಪಿದ ಘಟನೆ ಉತ್ತರ ಕನ್ನಡ ಜಿಲ್ಲೆಯ ಭಟ್ಕಳದ ಸೋನಾರಕೇರಿಯ ಜಬರಮಠದ ಕೆರೆಯಲ್ಲಿ ನಡೆದಿದೆ.

ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ಪಟ್ಟಣದ ದಿ ನ್ಯೂ ಇಂಗ್ಲೀಷ್‌ ಶಾಲೆಯ 10ನೇ ತರಗತಿಯ ವಿದ್ಯಾರ್ಥಿ ಶಶಿಧರ ಯೋಗೇಶ ಮೊಗೇರ ಎಂಬಾತನೇ ಮೃತ ವಿದ್ಯಾರ್ಥಿ. ಇಂದು ಕೆರೆಯಲ್ಲಿ ಮೀನು ಹಿಡಿಯಲು ತೆರಳಿದ್ದ ವೇಳೆಯಲ್ಲಿ ಈ ಘಟನೆ ನಡೆದಿದೆ.

ಜಂಬೂರು ಕೆರೆಯಲ್ಲಿ ಮೀನು ಹಿಡಿಯುವ ವೇಳೆಯಲ್ಲಿ ಶಶಿಧರ ಕೆರೆಗೆ ಬಿದ್ದಿದ್ದಾನೆ. ಈ ವೇಳೆಯಲ್ಲಿ ಕೆರೆಯಲ್ಲಿದ್ದ ಅಂಟು ಕೆಸರಿನ ಕಾರಣದಿಂದಾಗಿ ಶಶಿಧರ್‌ ಮೊಗೇರ ಕೆರೆಯಲ್ಲಿ ಮುಳುಗಿ ಸಾವನ್ನಪ್ಪಿರ ಬಹುದು ಎಂದು ಶಂಕಿಸಲಾಗಿದೆ.

Also Read : ಜಮೀನು ಸರ್ವೆಗೆ ಬಂದ ಅಧಿಕಾರಿಗಳ ಎದುರು ಕಾಂತಾರ ದೈವ ಬಂದಂತೆ ಹೈಡ್ರಾಮಾ ಮಾಡಿದ ವ್ಯಕ್ತಿ

ಮೃತ ಶಶಿಧರ್‌ ಭಟ್ಕಳದಲ್ಲಿ ಟ್ಯಾಕ್ಸಿ ಚಾಲಕರಾಗಿರುವ ಯೋಗೇಶ್‌ ಮೊಗೇರ ಅವರ ಮಗ ಎಂದು ತಿಳಿದು ಬಂದಿದೆ. ಭಟ್ಕಳ ಶಹರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಸ್ಥಳೀಯರ ನೆರವಿನಿಂದ ಮೃತದೇಹವನ್ನು ಕೆರೆಯಿಂದ ಹೊರಗೆ ತೆಗೆಯಲಾಗಿದೆ. ಮಗನನ್ನು ಕಳೆದುಕೊಂಡ ತಂದೆಯ ಆಕ್ರಂಧನ ಮುಗಿಲು ಮುಟ್ಟಿತ್ತು. ಸುದ್ದಿ ತಿಳಿಯುತ್ತಲೇ ನೂರಾರು ಮಂದಿ ಸ್ಥಳಕ್ಕೆ ಆಗಮಿಸಿದ್ದರು.

Also Read : ಶ್ವಾನಪ್ರಿಯರೇ ಗಮನಿಸಿ….ನಾಯಿಗಳಿಗೆ ಆಹಾರ ಹಾಕೋಕೆ ಬೇಕು ಲೈಸೆನ್ಸ್‌ ..!

ಈ ಕುರಿತು ಭಟ್ಕಳ ಶಹರ ಪೊಲೀಸ್‌ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆಯನ್ನು ಮುಂದುವರಿಸಿದ್ದಾರೆ. ಯಾವ ಕಾರಣದಿಂದ ಈತ ಸಾವನ್ನಪ್ಪಿದ್ದಾನೆ ಅನ್ನೋದು ಪೊಲೀಸರ ತನಿಖೆಯಿಂದಷ್ಟೇ ತಿಳಿದು ಬರಬೇಕಾಗಿದೆ.

Bhatkal : A boy who had gone fishing in the lake died

Kannada News Next Desk

Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021

Related Stories