ಮನೆಯ ಸಕಾರಾತ್ಮಕ ಶಕ್ತಿಯನ್ನು ಸಮತೋಲನಗೊಳಿಸುವುದಾದರೆ ಈ ದಿಕ್ಕನ್ನು ಎಂದಿಗೂ ಮರೆಯಬೇಡಿ

Feng Shui Vastu Tips: ಜ್ಯೋತಿಷ್ಯ ಶಾಸ್ತ್ರದಂತೆ ವಾಸ್ತು ಶಾಸ್ತ್ರದಲ್ಲಿಯೂ ಬಹಳಷ್ಟು ನಂಬಿಕೆ ಇಡಲಾಗಿದೆ. ಫೆಂಗ್‌ ಶೂಯಿ ಎಂಬುದು ಜನಪ್ರಿಯ ಚೀನಿ ವಾಸ್ತು ಶಾಸ್ತ್ರವಾಗಿದೆ.

ಇದರಲ್ಲಿ ಯಾವ ರೀತಿಯಲ್ಲಿ ಮನೆಗೆ ಸಕಾರಾತ್ಮಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಬಹುದು ಎನ್ನುವುದರ ಬಗ್ಗೆ ಸರಳವಾಗಿ ಹೇಳಲಾಗಿದೆ. ಫೆಂಗ್‌ ಶೂಯಿಯಲ್ಲಿ ಹೇಳಲಾದ ಹಲವಾರು ಸಲಹೆಗಳು ಸುಖ, ಸಮೃದ್ಧಿಯನ್ನು ಹೆಚ್ಚಿಸುವ ಸರಳ ಮಾರ್ಗೋಪಾಯಗಳಾಗಿವೆ.

ಫೆಂಗ್‌ ಶೂಯಿ ವಸ್ತುಗಳಿಂದ ಹೊರಹೊಮ್ಮುವ ಶಕ್ತಿ ಕುಟುಂಬದ ಎಲ್ಲ ಸದಸ್ಯರ ಜೀವನದ ಮೇಲೆ ಸರಕಾರಾತ್ಮಕ ಪರಿಣಾಮ ಬೀರುತ್ತದೆ. ಹಿಂದೂ ವಾಸ್ತು ಶಾಸ್ತ್ರದಂತೆ ಇದರಲ್ಲಿಯೂ ದಿಕ್ಕುಗಳು ಎಷ್ಟು ಪ್ರಮುಖವಾಗಿವೆ ಎಂದು ವಿವರಿಸಲಾಗಿದೆ.

ಮನೆಯ ಪಶ್ಚಿಮ ಭಾಗವು ಮಕ್ಕಳ ಆರೋಗ್ಯ ಹಾಗೂ ಧನಾತ್ಮಕ ಅಂಶಗಳಿಗೆ ಸಂಬಂಧಿಸಿದೆ. ಆದ್ದರಿಂದ ಫೆಂಗ್‌ ಶೂಯಿ ಈ ದಿಕ್ಕಿನಲ್ಲಿ ಕೆಲವು ವಸ್ತುಗಳನ್ನು ಇಡುವುದರಿಂದ ಹೆಚ್ಚಿನ ಲಾಭ ಪಡೆದುಕೊಳ್ಳಬಹುದು ಎಂದು ಹೇಳುತ್ತದೆ. ಹಾಗಾದರೆ ಆ ವಸ್ತುಗಳು ಯಾವುವು ಎಂದು ನೋಡೋಣ.

ಮನೆಯ ಪಶ್ಚಿಮ ದಿಕ್ಕಿಗೆ ಈ ವಸ್ತುವನ್ನು ಇಡಿ

ಫೆಂಗ್‌ ಶೂಯಿ ಪ್ರಕಾರ ಪಶ್ಚಿಮ ದಿಕ್ಕು ಸಕಾರಾತ್ಮಕ ಶಕ್ತಿಯನ್ನು ಸಮತೋಲನ ಗೊಳಸುವ ದಿಕ್ಕಾಗಿದೆ. ಇದು ಮನೆಯಲ್ಲಿ ವಾಸಿಸುವ ಜನರ ವೈಯಕ್ತಿಕ ಹಾಗೂ ವೃತ್ತಿ ಜೀವನದ ಮೇಲೆ ಧನಾತ್ಮಕ ಪರಿಣಾಮ ಬೀರುತ್ತದೆ.

ಆದ್ದರಿಂದ ಪಶ್ಚಿಮ ದಿಕ್ಕಿಗೆ ವಿಂಡ್‌ ಚೈನ್‌ ಅನ್ನು ಅಳವಡಿಸುವುದು ತುಂಬಾ ಶುಭವೆಂದು ಫೆಂಗ್‌ ಶೂಯಿಯಲ್ಲಿ ಪರಿಗಣಿಸಲಾಗಿದೆ. ವಾಸ್ತವಾಗಿ ಗಾಳಿ ಬೀಸಿದಾಗ ಮಧುರವಾದ ಶಬ್ದವನ್ನು ಉಂಟು ಮಾಡುವ ವಿಂಡ್‌ ಚೈನ್‌ ಮನೆಯ ವಾತಾವರಣವನ್ನು ಶುದ್ಧೀಕರಿಸುತ್ತದೆ.

ಪಶ್ಚಿಮ ದಿಕ್ಕಿನಲ್ಲಿರುವ ಕಿಟಕಿಯ ಬಳಿ ವಿಂಡ್‌ ಚೈನ್‌ ಹಾಕುವುದರಿಂದ ನಕಾರಾತ್ಮಕ ಶಕ್ತಿಗಳು ಮನೆಯೊಳಗೆ ಪ್ರವೇಶ ಮಾಡುವುದನ್ನು ತಡೆಯುತ್ತದೆ. ಜೊತೆಗೆ ಮನೆಯಲ್ಲಿರುವ ನಕಾರಾತ್ಮಕ ಶಕ್ತಿಗಳು ಕ್ರಮೇಣ ಕಡಿಮೆಯಾಗುವಂತೆಯೂ ಮಾಡುತ್ತದೆ. ಆದ್ದರಿಂದ ಫೆಂಗ್ ಶೂಯಿಯಲ್ಲಿ ಈ ದಿಕ್ಕಿನಲ್ಲಿ ವಿಂಡ್‌ ಚೈನ್‌ ಅಳವಡಿಸಲು ಶಿಫಾರಸು ಮಾಡಲಾಗಿದೆ.

ಈ ವಸ್ತುಗಳನ್ನೂ ಪಶ್ಚಿಮ ದಿಕ್ಕಿನಲ್ಲಿಡಿ

ನಿಮ್ಮ ಮನೆಯ ಪಶ್ಚಿಮ ದಿಕ್ಕಿನಲ್ಲಿ ಸಕಾರಾತ್ಮಕ ಅಂಶಗಳನ್ನು ಸಮತೋಲನಗೊಳಿಸಲು ಬಯಸಿದರೆ ಅದಕ್ಕೆ, ಚಿನ್ನ, ಬೆಳ್ಳಿ, ಅಥವಾ ಬಿಳಿ ಬಣ್ಣದ ವಸ್ತುಗಳನ್ನು ಇಡಬಹುದು.

ಇದನ್ನೂ ಓದಿ: ಅಪಾರ್ಟ್‌ಮೆಂಟ್‌ನಲ್ಲಿ ನಿಮ್ಮ ಮನೆಯ ಎದುರಿಗೇ ಲಿಫ್ಟ್ ಇದೆಯಾ? ಹಾಗಾದ್ರೆ ಫೆಂಗ್ ಶೂಯಿ ವಾಸ್ತು ಹೇಳುವುದೇನು?

ಅವುಗಳಿಂದ ಸುಂದರವಾಗಿ ಅಲಂಕಾರ ಮಾಡಿದರೆ ಮನಸ್ಸಿಗೆ ನೆಮ್ಮದಿಯೂ ದೊರಕುತ್ತದೆ. ನಿಮಗೆ ಸುಂದರ ಫೋಟೋಗಳನ್ನು ಇಡುವ ಹವ್ಯಾಸವಿದ್ದರೆ ಈ ದಿಕ್ಕಿಗೆ ಸಂಬಂಧಿಸಿದ ಫೋಟೋಗಳನ್ನು ಸಹ ಇಡಬಹುದು.

ಆದರೆ ಪಶ್ಚಿಮ ದಿಕ್ಕಿನಲ್ಲಿ ಎಂದಿಗೂ ಹಳೆಯ ಅಥವಾ ಮುರಿದ ವಸ್ತುಗಳನ್ನು ಇಡಬೇಡಿ. ಜೊತೆಗೆ ಕಪ್ಪು ಅಥವಾ ಕಪ್ಪು ಬಣ್ಣಕ್ಕೆ ಸಮೀಪವಾದ ಗಾಢ ಬಣ್ಣದ ವಸ್ತುಗಳನ್ನೂ ಇಡಬೇಡಿ.

Archana V. Bhat |ಅರ್ಚನಾ ವಿ. ಭಟ್

ಅರ್ಚನಾ ವಿ. ಭಟ್‌ ಮೂಲತಃ ಉತ್ತರ ಕನ್ನಡ ಜಿಲ್ಲೆಯ ಕುಮಟಾ ಮೂಲದವರು. ಕಳೆದ ಹಲವು ವರ್ಷಗಳಿಂದಲೂ ಪತ್ರಕರ್ತರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ನ್ಯೂಸ್‌ನೆಕ್ಸ್ಟ್‌ ಕನ್ನಡ ಸುದ್ದಿ ಸಂಸ್ಥೆಯಲ್ಲಿ ನಾಲ್ಕು ವರ್ಷಗಳಿಂದ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ವ್ಯವಹಾರ, ಆಟೋಮೊಬೈಲ್‌, ಟೆಕ್ನಾಲಜಿ, ಕ್ರೀಡೆ ಸುದ್ದಿ ವಿಭಾಗದಲ್ಲಿ ಕಂಟೆಂಟ್‌ ಕ್ರಿಯೆಟರ್‌ ಆಗಿದ್ದಾರೆ.. ನೈಜ, ಸತ್ಯ ಸುದ್ದಿಯನ್ನು ಪ್ರಕಟಿಸುತ್ತಿದ್ದಾರೆ.

Related Stories