ಅಪಾರ್ಟ್ಮೆಂಟ್ನಲ್ಲಿ ನಿಮ್ಮ ಮನೆಯ ಎದುರಿಗೇ ಲಿಫ್ಟ್ ಇದೆಯಾ? ಹಾಗಾದ್ರೆ ಫೆಂಗ್ ಶೂಯಿ ವಾಸ್ತು ಹೇಳುವುದೇನು?
Feng Shui Vasu Tips For Lift: ಹಿಂದಿನ ಕಾಲದಲ್ಲಿ ಮನೆ ಎಂದರೆ ಒಂದು ಊರಿನಲ್ಲಿ ಪ್ರತ್ಯೇಕವಾದ ಜಾಗದಲ್ಲಿ ತಮ್ಮ ಅನುಕೂಲಕ್ಕೆ ತಕ್ಕಂತೆ ಕಟ್ಟಿಕೊಂಡು ವಾಸಿಸುವ ಜಾಗವಾಗಿತ್ತು.
ಕ್ರಮೇಣ ಊರು ನಗರವಾಗುತ್ತಿದ್ದಂತೆ ಒಂದೇ ಕಡೆ ಬಹಳಷ್ಟು ಜನರು ಬಂದು ಸೇರತೊಡಗಿದರು. ಅವರಿಗೆಲ್ಲ ವಸತಿ ವ್ಯವಸ್ಥೆ ಕಲ್ಪಿಸಲು ಜಾಗದ ಅಭಾವ ಪ್ರಾರಂಭವಾಗತೊಡಗಿತು.
ಆಗ ಹುಟ್ಟಿಕೊಂಡ ಪರಿಕಲ್ಪನೆಯೇ ಅಪಾರ್ಟ್ಮೆಂಟ್ (ಬಹುಮಹಡಿ) ಕಟ್ಟಡಗಳು. ಒಂದಕ್ಕಿಂತ ಹೆಚ್ಚು ಕುಟುಂಬಗಳು ಒಂದೇ ಜಾಗದಲ್ಲಿ ಪ್ರತ್ಯೇಕವಾಗಿ ಬಹುಮಹಡಿಗಳಲ್ಲಿ ನೆಲೆಸುವ ಸಂಸ್ಕೃತಿ ಆಧುನಿಕ ಜಗತ್ತಿನಲ್ಲಿ ದಿನೇ ದಿನೇ ಹೆಚ್ಚುತ್ತಲೇ ಇದೆ.
ಅದು ಅಲ್ಲಿ ವಾಸಿಸುವವರಿಗೆ ಬಹಳಷ್ಟು ಅನುಕೂಲವನ್ನು ಕಲ್ಪಿಸುತ್ತದೆ. ಒಂದೇ ಅಂಗಳದಲ್ಲಿ ಪಾರ್ಕಿಂಗ್, ಜಿಮ್, ಸ್ವಿಮ್ಮಿಂಗ್ ಫುಲ್, ಆಟದ ಮೈದಾನ ಜೊತೆಗೆ ಸುರಕ್ಷತೆ ಎಲ್ಲವನ್ನು ನೀಡುತ್ತದೆ.
ಹಾಗಾಗಿ ಅಪಾರ್ಟ್ಮೆಂಟ್ ಕಲ್ಪನೆಯನ್ನು ಬಹಳಷ್ಟು ಜನರು ಇಷ್ಟಪಡುತ್ತಾರೆ. ಆದರೆ ಆ ಬಹುಮಹಡಿಯ ಕಟ್ಟಡವನ್ನು ಏರಲು ಲಿಫ್ಟ್ ಅಥವಾ ಎಲಿವೇಟರ್ಗಳು ಅತ್ಯವಶ್ಯಕ.
ಕೆಲವು ಅಪಾರ್ಟ್ಮೆಂಟ್ಗಳಲ್ಲಿ ಲಿಫ್ಟ್ ಚಲಿಸದಿದ್ದರೆ ಮನೆಗೆ ಹೋಗಲೂ ಸಾಧ್ಯವಿಲ್ಲವೆಂಬ ಪರಿಸ್ಥಿತಿಯಿದೆ. ಏಕೆಂದರೆ ಈಗ ಅಷ್ಟು ಎತ್ತರದ ಅಪಾರ್ಟ್ಮೆಂಟ್ಗಳು ಕಾಣಸಿಗತ್ತವೆ.
ಅಪಾರ್ಟ್ಮೆಂಟ್ಗಳಲ್ಲಿ ಪ್ರತಿ ಫ್ಲೋರ್ಗೆ ಹೋಗಲು ಲಿಫ್ಟ್ ಇರುತ್ತದೆ. ಕೆಲವು ಮನೆಯ ಮೇನ್ ಡೋರ್ ತೆಗೆದ ತಕ್ಷಣ ಮೊದಲಿಗೆ ಕಾಣುವುದೇ ಲಿಫ್ಟ್ ಆಗಿರುತ್ತದೆ.
ಇದು ಆ ಮನೆಯಲ್ಲಿ ವಾಸಿಸುವ ಜನರ ತೊಂದರೆಗಳಿಗೆ ಮೂಲವಾಗಿದೆ ಎಂದು ಫೆಂಗ್ ಶೂಯಿ ವಾಸ್ತು ಶಾಸ್ತ್ರ ಹೇಳುತ್ತದೆ.
ಅದರ ಪ್ರಕಾರ ಅಪಾರ್ಟ್ಮೆಂಟ್ನಲ್ಲಿ ಮನೆಯ ಮುಖ್ಯದ್ವಾರದ ಎದುರಿಗೆ ಲಿಫ್ಟ್ ಇರುವುದು ಅನೇಕ ನಕಾರಾತ್ಮಕ ಪರಿಣಾಮಗಳಿಗೆ ಕಾರಣವಾಗಿದೆ ಎಂದು ಹೇಳುತ್ತದೆ.
ಹಾಗಾದರೆ ಒಂದುವೇಳೆ ನೀವು ವಾಸಿಸುವ ಮನೆಯ ಮೇನ್ ಡೋರ್ ಎದುರಿಗೆ ಲಿಫ್ಟ್ ಇದ್ದರೆ ಏನು ಮಾಡುವುದು? ಫೆಂಗ್ ಶೂಯಿ ವಾಸ್ತುವಿನಲ್ಲಿ ಈ ಸಮಸ್ಯೆಗೆ ಏನಾದರೂ ಪರಿಹಾರವಿದೆಯಾ ಎಂದು ನೋಡೋಣ.
ಇದನ್ನೂ ಓದಿ: ಮನೆಯ ಯಾವ ದಿಕ್ಕಿಗೆ ಪೂರ್ವಜರ ಫೋಟೋ ಹಾಕುವುದರಿಂದ ಜೀವನದಲ್ಲಿ ಸದಾ ಸಂತೋಷ, ಸಮೃದ್ಧಿ ತುಂಬಿರುತ್ತದೆ?
ಮನೆಯ ಮುಖ್ಯ ದ್ವಾರದ ಎದುರಿಗೆ ಲಿಫ್ಟ್ ಇದ್ದರೆ ಏನು ಮಾಡಬೇಕು?
ಫೆಂಗ್ ಶೂಯಿ ವಾಸ್ತು ಶಾಸ್ತ್ರವು ಮನೆಯ ಮುಖ್ಯ ದ್ವಾರದ ಎದುರಿಗೆ ಲಿಫ್ಟ್ ಇರಬಾರದು ಎಂದು ಹೇಳುತ್ತದೆ. ಇದರ ಹಿಂದೆ ಮಹತ್ವದ ಕಾರಣವೂ ಇದೆ ಎಂದು ಶಾಸ್ತ್ರ ಹೇಳುತ್ತದೆ.
ಮನೆಯ ಮುಂದೆ ಲಿಫ್ಟ್ ಇದ್ದರೆ ಅದು ನಕಾರಾತ್ಮಕ ಶಕ್ತಿಯನ್ನು ಹೆಚ್ಚು ಆಕರ್ಷಿಸುತ್ತದೆ. ಮನೆಯ ಮಾಲಿಕ ಅಥವಾ ಯಜಮಾನನಿಗೆ ಶುಭವನ್ನು ತರುವುದಿಲ್ಲ.
ಅದು ಅನೇಕ ಕಠಿಣ ಪರಿಸ್ಥಿತಿಗಳನ್ನು ಎದುರಿಸುವಂತೆ ಮಾಡುತ್ತದೆ. ಹಾಗಾಗಿ ಫೆಂಗ್ ಶೂಯಿಯಲ್ಲಿ ಮನೆಯ ಮುಂಬಾಗಿಲಿನ ಎದುರಿಗೆ ಲಿಫ್ಟ್ ಇರಬಾರದು ಎಂದು ಹೇಳಲಾಗಿದೆ.
ಒಂದುವೇಳೆ ಈಗಾಗಲೇ ನೀವು ಅಂತಹ ಮನೆಯಲ್ಲಿ ವಾಸಿಸುತ್ತಿದ್ದರೆ, ಅದಕ್ಕೆ ಪರಿಹಾರವನ್ನು ಕೂಡಾ ಫೆಂಗ್ ಶೂಯಿಯಲ್ಲಿ ತಿಳಿಸಲಾಗಿದೆ. ಅದೇನೆಂದರೆ…
- ನೀವು ಮನೆಯ ಮುಖ್ಯ ಬಾಗಿಲಿನ ಮೇಲೆ, ಸರಿಯಾಗಿ ಲಿಫ್ಟ್ ಕಾಣಿಸುವಂತೆ ಅಷ್ಟಭುಜಾಕೃತಿಯ ಒಂದು ಕನ್ನಡಿಯನ್ನು ಇರಿಸಿ. ಹಾಗೆ ಮಾಡುವುದರಿಂದ ನಕಾರಾತ್ಮಕ ಶಕ್ತಿಗಳು ಕನ್ನಡಿಯ ಮೇಲೆ ಬಿದ್ದು ಅದು ಹಿಮ್ಮೆಟ್ಟುವಂತಾಗುತ್ತದೆ. ಇದರಿಂದ ಮನೆ ಸುರಕ್ಷಿತವಾಗಿರುತ್ತದೆ. ನಕಾರಾತ್ಮಕ ಶಕ್ತಿ ದೂರವಾಗುತ್ತದೆ.
- ಎರಡನೇಯದಾಗಿ ಮನೆಯ ಮುಂದೆ ಹಸಿರು ಗಿಡಗಳನ್ನು ನೆಡುವುದು. ಫೆಂಗ್ ಶೂಯಿ ವಾಸ್ತು ಪ್ರಕಾರ ಮನೆಯ ಮುಂದೆ ಹಸಿರುವ ಗಿಡಗಳನ್ನು ಇರಿಸುವುದರಿಂದ ಸಕಾರಾತ್ಮಕ ಶಕ್ತಿ ಪ್ರಸಾರವಾಗಲು ಸಹಾಯ ಮಾಡುತ್ತದೆ. ಇದರಿಂದ ಮನೆಯಲ್ಲಿ ಸುಖ, ಶಾಂತಿ, ಸಂಪತ್ತು ನೆಲೆಸುತ್ತದೆ. ಹಾಗಾಗಿ ಮನೆಯ ಮುಂದೆ ಗುಡ್ಲಕ್ ಹೆಚ್ಚಿಸುವ ಗಿಡಗಳನ್ನು ಪಾಟ್ನಲ್ಲಿ ಬೆಳೆಸಿ. ಜೊತೆಗೆ ಮನೆಯ ಮುಂಭಾಗಗದ ಸ್ವಚ್ಛತೆಗೂ ಗಮನ ಕೊಡಿ.



