ಶಕ್ತಿಶಾಲಿ 7000 mAh ಬ್ಯಾಟರಿಯೊಂದಿಗೆ ಮಾರುಕಟ್ಟೆಗೆ ಬಂದ ರಿಯಲ್ಮಿ P4x 5G ಸ್ಮಾರ್ಟ್ಪೋನ್
Realme P4x 5G: ಭಾರತದ ಸ್ಮಾರ್ಟ್ಫೋನ್ ಮಾರುಕಟ್ಟೆಯಲ್ಲಿ ರಿಯಲ್ಮಿ ಇನ್ನೊಮ್ಮೆ ಧೂಳೆಬ್ಬಿಸಲು ತಯಾರಾಗಿದೆ.
ಕಂಪನಿಯು ತನ್ನ ಹೊಚ್ಚಹೊಸ 5ಜಿ ಸ್ಮಾರ್ಟ್ಫೋನ್ ರಿಯಲ್ಮಿ P4x 5G ಬಿಡುಗಡೆ ಮಾಡಿದೆ.
ಕೆಲವು ದಿನಗಳ ಹಿಂದೆ ಕಂಪನಿಯು P4x 5G ಪೋನ್ನ ವಿನ್ಯಾಸ, ಬಣ್ಣಗಳ ಆಯ್ಕೆ ಮತ್ತು ಕೆಲವು ವೈಶಿಷ್ಟ್ಯಗಳನ್ನು ಬಹಿರಂಗಪಡಿಸಿತ್ತು.
ಆಗ 7000 mAh ಶಕ್ತಿಶಾಲಿ ಬ್ಯಾಟರಿಯೊಂದಿಗೆ ಭಾರಿ ಕುತೂಹಲವುಂಟು ಮಾಡಿದ್ದ ರಿಯಲ್ಮಿಯ ಈ ಫೋನ್ ಇಂದು (ಡಿಸೆಂಬರ್ 4) ಮಾರುಕಟ್ಟೆ ಪ್ರವೇಶಿಸಿದೆ.
ಈ ಫೋನ್ ಮಿಲಿಟರಿ ದರ್ಜೆಯ ಬಾಳಿಕೆ ಬರುತ್ತದೆ ಎಂದು ಕಂಪನಿ ಹೇಳಿಕೊಂಡಿದೆ. ರಿಯಲ್ಮಿಯ ಈ ಬಜೆಟ್ ಫೋನ್ ಮೀಡಿಯಾ ಟೆಕ್ ಡೈಮೆನ್ಸಿಟಿ 7400 ಅಲ್ಪಾ ಚಿಪ್ಸೆಟ್ನಿಂದ ಚಾಲಿತವಾಗಲಿದೆ.
ಜೊತೆಗೆ ಇದರಲ್ಲಿ 18GB ವರೆಗೆ RAM ಮತ್ತು 256GB ವರೆಗೆ ಸಂಗ್ರಹಣೆಯನ್ನು ಪಡೆಯಬಹುದು. ಇದರಲ್ಲಿ ಧೂಳು ಮತ್ತು ಸ್ಪ್ಯಾಶ್ ಪ್ರತಿರೋಧಕ್ಕಾಗಿ IP64 ಅಳವಡಿಸಲಾಗಿದೆ.
P4x 5G ಫೋನ್ನ ವೈಶಿಷ್ಟ್ಯ, ಬೆಲೆ ಮತ್ತು ಬ್ಯಾಟರಿ ಕ್ಷಮತೆ ಬಗ್ಗೆ ವಿವರವಾಗಿ ತಿಳಿಯೋಣ.
ರಿಯಲ್ಮಿ P4x 5G ಫೋನ್ ವೈಶಿಷ್ಟ್ಯ
ರಿಯಲ್ಮಿ ಬಿಡುಗಡೆಮಾಡಿರುವ P4x 5G ಫೋನ್ ಒಂದು ಬಜೆಟ್ ಫ್ರೆಂಡ್ಲಿ ಶಕ್ತಿಶಾಲಿ ಸ್ಮಾರ್ಟ್ಫೋನ್ ಆಗಿದೆ.
ಈ ಫೋನ್ನ ಅತಿ ದೊಡ್ಡ ವೈಶಿಷ್ಟ್ಯವೆಂದರೆ ಇದರ ದೊಡ್ಡದಾದ 7000 mAh ಟೈಟಾನ್ ಬ್ಯಾಟರಿಯಾಗಿದೆ.
ಇದರಿಂದ ಈ ಫೋನ್ ಒಂದು ಇಡೀ ದಿನ ಬ್ಯಾಟರಿ ಬ್ಯಾಕಪ್ ನೀಡುತ್ತದೆ. 45W ವೇಗದ ಚಾರ್ಜಿಂಗ್ ಇರುವುದರಿಂದ ಕಡಿಮೆ ಸಮಯದಲ್ಲಿ ಫುಲ್ ಚಾರ್ಜ್ ಮಾಡಬಹುದಾಗಿದೆ.
4nm-ಆಧಾರಿತ ಮೀಡಿಯಾಟೆಕ್ ಡೈಮೆನ್ಸಿಟಿ 7400 ಅಲ್ಪಾ 5G ಚಿಪ್ಸೆಟ್ನಿಂದ ಕಾರ್ಯನಿರ್ವಹಿಸುವ P4x ಫೋನ್ 144Hz ರಿಫ್ರೆಶ್ ದರ ಮತ್ತು 1000 nits ವರೆಗಿನ ಗರಿಷ್ಠ ಹೊಳಪನ್ನು ಬೆಂಬಲಿಸುವ 6.72-ಇಂಚಿನ FHD+ LCD ಪ್ಯಾನೆಲ್ ಅನ್ನು ಹೊಂದಿದೆ.
ಇನ್ನು ಈ ಫೋನ್ನಲ್ಲಿ ಸಂಗ್ರಹಣೆ ಮತ್ತು ಮಲ್ಟಿಟಾಸ್ಕಿಂಗ್ ಸಲುವಾಗಿ ಸಂಗ್ರಹಣೆ ಮತ್ತು ಬಹುಕಾರ್ಯಕಕ್ಕಾಗಿ, UFS 3.1 ಸಂಗ್ರಹಣೆಯೊಂದಿಗೆ 8GB ವರೆಗೆ RAM ಅನ್ನು ನೀಡುತ್ತದೆ.
ಇದರಲ್ಲಿ 18 ಜಿಬಿಯ ವರೆಗೆ RAM ಅಪ್ಗ್ರೇಡ್ ಮಾಬಹುದಾಗಿದೆ. ಇನ್ನು P4x ನ ಫೋನ್ನಲ್ಲಿ ಪ್ರಾಥಮಿಕ ಸಂವೇದಕವು 4K ವೀಡಿಯೊ ರೆಕಾರ್ಡಿಂಗ್ ಸಾಮರ್ಥ್ಯವನ್ನು ಹೊಂದಿರುವ 50MP AI ಹಿಂಬದಿಯ ಕ್ಯಾಮೆರಾ ಹೊಂದಿದ್ದು, ದ್ವಿತೀಯ ಲೆನ್ಸ್ ಕೂಡಾ ಹೊಂದಿದೆ.
ವೀಡಿಯೊ ಕರೆ ಮತ್ತು ಸೆಲ್ಸಿಗಳಿಗಾಗಿ ಮುಂಭಾಗದ 8MP ಕ್ಯಾಮೆರಾ ಇದೆ.
ಇದನ್ನೂ ಓದಿ: BSNLನಿಂದ ಸಿಗ್ನಲ್ ಇಲ್ಲದ ಸ್ಥಳದಿಂದಲೂ ಕಾಲಿಂಗ್ ಸೌಲಭ್ಯ! ಕರ್ನಾಟಕದಲ್ಲೂ ಲಭ್ಯ
ರಿಯಲ್ಮಿ P4x 5G ಫೋನ್ ಬೆಲೆ ಮತ್ತು ಬಣ್ಣ
ರಿಯಲ್ಮಿ P4x 5G ಫೋನ್ ಭಾರತದಲ್ಲಿ 3 ಸ್ಟೊರೇಜ್ ಆಯ್ಕೆಗಳಲ್ಲಿ ಲಭ್ಯವಿರುತ್ತದೆ. ಈ ಫೋನ್ನ ಮೂಲ ರೂಪಾಂತರ ಅಂದರೆ 6GB RAM ಮತ್ತು 128GB ಸ್ಟೋರೇಜ್ ಇರುವ ಫೋನ್ ಬೆಲೆ ಸುಮಾರು 15,999 ರೂ. ಆಗಲಿದೆ.
ಆದರೆ 8GB RAM + 128GB ಮಾದರಿಯ ಬೆಲೆ ಸುಮಾರು 17,499 ರೂ. ಗಳಾದರೆ ಇದರ ಟಾಪ್-ಆಫ್-ದಿ-ಲೈನ್ ರೂಪಾಂತರವು 8GB RAM ಮತ್ತು 256GB ಸ್ಟೋರೇಜ್ನೊಂದಿಗೆ ಬರುತ್ತದೆ.
ಇದರ ಬೆಲೆ ಸುಮಾರು 19,499 ರೂ. ಆಗಿದೆ. ಈ ಫೋನ್ ಹಸಿರು, ಗುಲಾಬಿ ಮತ್ತು ಬಿಳಿಯಂತಹ ಟ್ರೆಂಡಿ ಬಣ್ಣ ಆಯ್ಕೆಗಳಲ್ಲಿ ಲಭ್ಯವಿದೆ.
ಈ ಫೋನ್ ಆನ್ಲೈನ್ನಲ್ಲಿ ಪ್ಲಿಪ್ಕಾರ್ಟ್ ಮತ್ತು ರಿಯಲ್ಮಿಯ ಅಧಿಕೃತ ವೆಬ್ಸೈಟ್ನಲ್ಲಿ ಖರೀದಿಸಬಹುದು.
ರಿಯಲ್ಮಿ P4x 5G ಫೋನ್ಗೆ ಬಿಡುಗಡೆಯ ಕೊಡುಗೆಗಳನ್ನು ಸಹ ನೀಡಲಾಗಿದೆ. ಇದರ ಮೂಲ ರೂಪಾಂತರದ ಫೋನ್ಗೆ 13,499 ರೂ.ಗಳ ಭರ್ಜರಿ ರಿಯಾಯಿತಿ ಬೆಲೆಯನ್ನು ನೀಡಲಾಗಿದೆ.



