seasonal flu : ಕೊರೆವ ಚಳಿಯಲ್ಲೇ ಸೀಸನಲ್‌ ಪ್ಲೂ ಭೀತಿ : ಹೊಸ ಮಾರ್ಗಸೂಚಿ, ಏನಿದರ ಲಕ್ಷಣ

seasonal flu : ಬೆಂಗಳೂರು : ಕರ್ನಾಟಕ ತೀವ್ರ ಚಳಿಗೆ ತತ್ತರಿಸಿದೆ. ದಿನದಿಂದ ದಿನಕ್ಕೆ ಹವಾಮಾನದಲ್ಲಿ ಬದಲಾವಣೆ ಉಂಟಾಗುತ್ತಿದೆ. ಹವಾಮಾನ ಬದಲಾವಣೆ ಆರೋಗ್ಯದ ಮೇಲೆ ತೀವ್ರ ಪರಿಣಾಮವನ್ನುಂಟು ಮಾಡುತ್ತಿದೆ. ಈ ನಡುವಲ್ಲೇ ಸೀಸನಲ್‌ ಪ್ಲೂ ಭೀತಿ ಕಾಡುತ್ತಿದ್ದು, ಮಕ್ಕಳು ಹಾಗೂ ಗರ್ಭಿಣಿಯರಿಗೆ ಅಪಾಯ ಎದುರಾಗಿದೆ.

ಈ ಹಿನ್ನೆಲೆಯಲ್ಲಿ ರಾಜ್ಯದ ಆರೋಗ್ಯ ಇಲಾಖೆ ಹೊಸ ಮಾರ್ಗಸೂಚಿ ಬಿಡುಗಡೆ ಮಾಡಿದೆ. ಡಿಸೆಂಬರ್‌ ಸೇರಿದಂತೆ ಜನವರಿಯಿಂದ ಮಾರ್ಚ್​​ ತಿಂಗಳವರೆಗೆ ಸೀಸನಲ್ ಫ್ಲೂ ಹೆಚ್ಚಳವಾಗ್ತಿರುವ ಹಿನ್ನೆಲೆಯಲ್ಲಿ ಸೂಕ್ತಕ್ರಮ ಕೈಗೊಳ್ಳುವಂತೆ ಆಸ್ಪತ್ರೆಗಳಿಗೆ ಆರೋಗ್ಯ ಇಲಾಖೆ ಸೂಚನೆ ನೀಡಿದೆ.

ಎಲ್ಲಾ ಲ್ಯಾಬ್‌ಗಳಲ್ಲಿ ಸೂಕ್ತ ಟೆಸ್ಟಿಂಗ್‌ ಕಿಟ್‌ ಗಳನ್ನು ಇರಿಸಿಕೊಂಡು ಪ್ಲೂ ಬಗ್ಗೆ ಜಾಗೃತಿ ಮೂಸಿಸಬೇಕು. ಅಲ್ಲದೇ ಸೂಕ್ತ ಸಮಯದಲ್ಲಿ ಮಾನಿಟರಿಂಗ್‌ ನಡೆಸುವಂತೆ ಸೂಚಿಸಲಾಗಿದೆ. ಸೀಸನಲ್‌ ಪ್ಲೂ ಸೋಂಕಿತರ ಎಂಜಲಿನಿಂದ ಸೋಂಕು ವ್ಯಾಪಕವಾಗಿ ಹರಡುತ್ತಿದ್ದು, ಮಕ್ಕಳು, ಗರ್ಭಿಣಿಯರು, ಔಷಧಿಗಳ ಮೇಲೆ ಅವಲಂಬಿತರಾಗಿ ಇರುವವರಿಗೆ ಹೆಚ್ಚಿನ ಅಪಾಯಕ್ಕೆ ತುತ್ತಾಗುವ ಸಾಧ್ಯತೆಯಿದೆ.

ಜ್ವರ, ಕೆಮ್ಮು, ಮೈಕೈ ನೋವು, ಒಣಕೆಮ್ಮು, ಶೀತ ಸೇರಿದಂತೆ ಸಾಮಾನ್ಯ ಲಕ್ಷಣಗಳು ಕಂಡು ಬರುತ್ತದೆ. ಸೀಸನಲ್‌ ಪ್ಲೂ 3 ವಾರಗಳ ಕಾಲ ಮುಂದುವರಿಕೆ ಆಗುವ ಸಾಧ್ಯತೆಯೂ ಇದೆ. ಸೀಸನಲ್ ಫ್ಲೂ (Seasonal Flu) ಅಥವಾ ಕಾಲೋಚಿತ ಜ್ವರವು ಇನ್ ಫ್ಲುವೆಂಜಾ ವೈರಸ್‌ಗಳಿಂದ ಹರಡುವ ಸೋಂಕು. ಇದು ಸಾಮಾನ್ಯವಾಗಿ ಹವಾಮಾನ ಬದಲಾದಾಗ ಅಂದ್ರೆ ಮಳೆಗಾಲ ಮತ್ತು ಚಳಿಗಾಲದಲ್ಲಿ ಹೆಚ್ಚಾಗಿ ಕಂಡು ಬರುತ್ತದೆ.

seasonal flu : ಸೀಸನಲ್ ಫ್ಲೂ ಲಕ್ಷಣಗಳೇನು ?

ಸೀಸನಲ್ ಫ್ಲೂ ಲಕ್ಷಣಗಳು ಸಾಮಾನ್ಯ ಶೀತಕ್ಕಿಂತ ಸ್ವಲ್ಪ ತೀವ್ರವಾಗಿರುತ್ತವೆ

  • ತೀವ್ರ ಜ್ವರ : ಇದ್ದಕ್ಕಿದ್ದಂತೆ ಕಾಣಿಸಿಕೊಳ್ಳುವ ಜ್ವರ ಮತ್ತು ಮೈ ನಡುಕ.
  • ಕೆಮ್ಮು : ಸಾಮಾನ್ಯವಾಗಿ ಒಣ ಕೆಮ್ಮು ಕಾಣಿಸಿಕೊಳ್ಳುತ್ತದೆ.
  • ಗಂಟಲು ನೋವು : ನುಂಗಲು ಕಷ್ಟವಾಗುವುದು ಅಥವಾ ಗಂಟಲಿನಲ್ಲಿ ಕಿರಿಕಿರಿ.
  • ಮೈಕೈ ನೋವು : ಸ್ನಾಯುಗಳು ಮತ್ತು ಕೀಲುಗಳಲ್ಲಿ ತೀವ್ರವಾದ ನೋವು.
  • ಸುಸ್ತು: ವಿಪರೀತ ಆಯಾಸ ಮತ್ತು ಅಶಕ್ತಿ.
  • ತಲೆನೋವು: ತೀವ್ರವಾದ ತಲೆನೋವು ಇರಬಹುದು.
  • ಮೂಗು ಸೋರುವುದು: ಮೂಗು ಕಟ್ಟುವಿಕೆ ಅಥವಾ ನೀರು ಸುರಿಯುವುದು.

ಸೀಸನಲ್ ಫ್ಲೂ ಚಿಕಿತ್ಸೆ ಹೇಗೆ ?

  • ಫ್ಲೂ ವಿಶ್ರಾಂತಿ ಮತ್ತು ಮನೆಮದ್ದಿನಿಂದಲೇ ಗುಣವಾಗುತ್ತದೆ. ಆದರೆ ವೈದ್ಯರ ಸಲಹೆ ಪಡೆಯುವುದು ಉತ್ತಮ.
  • ವಿಶ್ರಾಂತಿ: ದೇಹಕ್ಕೆ ಪೂರ್ಣ ಪ್ರಮಾಣದ ವಿಶ್ರಾಂತಿ ನೀಡಿ.
  • ಹೆಚ್ಚು ನೀರು ಕುಡಿಯಿರಿ: ನಿರ್ಜಲೀಕರಣ ತಪ್ಪಿಸಲು ನೀರು, ಹಣ್ಣಿನ ರಸ, ಎಳನೀರು ಅಥವಾ ಬಿಸಿ ಸೂಪ್ ಸೇವಿಸಿ.
  • ಜ್ವರ ನಿವಾರಕಗಳು: ಜ್ವರ ಮತ್ತು ನೋವು ಕಡಿಮೆ ಮಾಡಲು ಪ್ಯಾರಸಿಟಮಾಲ್ ಮಾತ್ರೆಗಳನ್ನು ವೈದ್ಯರ ಸಲಹೆಯಂತೆ ತೆಗೆದುಕೊಳ್ಳಬಹುದು.
  • ಆ್ಯಂಟಿವೈರಲ್ ಔಷಧಗಳು: ಸೋಂಕು ತೀವ್ರವಾಗಿದ್ದರೆ ವೈದ್ಯರು ಆ್ಯಂಟಿವೈರಲ್ (Antiviral) ಔಷಧಿಗಳನ್ನು ಸೂಚಿಸಬಹುದು.

ನೆನಪಿರಲಿ

ಸೀಸನಲ್ ಫ್ಲೂ ಕುರಿತು ವೈದ್ಯರ ಚೀಟಿ ಇಲ್ಲದೆ ಆ್ಯಂಟಿಬಯೋಟಿಕ್ಸ್‌ಗಳನ್ನು (Antibiotics) ತೆಗೆದುಕೊಳ್ಳಬೇಡಿ, ಏಕೆಂದರೆ ಇವು ವೈರಸ್ ವಿರುದ್ಧ ಕೆಲಸ ಮಾಡುವುದಿಲ್ಲ.

ಮುನ್ನೆಚ್ಚರಿಕೆ ಕ್ರಮಗಳು – ಬಾರದಂತೆ ತಡೆಯುವುದು ಹೇಗೆ ?

ಮುನ್ನೆಚ್ಚರಿಕೆ ವಹಿಸುವುದರಿಂದ ಫ್ಲೂ ಹರಡುವುದನ್ನು ಸುಲಭವಾಗಿ ತಡೆಯಬಹುದು:

  • ಲಸಿಕೆ (Flu Vaccine): ಪ್ರತಿ ವರ್ಷಕ್ಕೊಮ್ಮೆ ಫ್ಲೂ ಲಸಿಕೆ ಹಾಕಿಸಿಕೊಳ್ಳುವುದು ಅತ್ಯುತ್ತಮ ಮಾರ್ಗ.
  • ಕೈಗಳ ಸ್ವಚ್ಛತೆ: ಸೋಪಿನಿಂದ ಪದೇ ಪದೇ ಕೈಗಳನ್ನು ತೊಳೆದುಕೊಳ್ಳಿ ಅಥವಾ ಸ್ಯಾನಿಟೈಸರ್ ಬಳಸಿ.
  • ದೂರವಿರಿ: ಜ್ವರ ಅಥವಾ ಕೆಮ್ಮು ಇರುವವರಿಂದ ಕನಿಷ್ಠ 3-6 ಅಡಿ ದೂರವಿರಿ.
  • ಮುಖ ಮುಟ್ಟಿಕೊಳ್ಳಬೇಡಿ: ಕಣ್ಣು, ಮೂಗು ಅಥವಾ ಬಾಯಿಯನ್ನು ಅನಗತ್ಯವಾಗಿ ಮುಟ್ಟಬೇಡಿ.
  • ಕೆಮ್ಮುವಾಗ ಜಾಗ್ರತೆ: ಕೆಮ್ಮುವಾಗ ಅಥವಾ ಸೀನುವಾಗ ಕರ್ಚೀಫ್ ಅಥವಾ ಮೊಣಕೈ ಅಡ್ಡ ಹಿಡಿಯಿರಿ.
  • ಮಾಸ್ಕ್ ಧರಿಸಿ: ಜನದಟ್ಟಣೆ ಇರುವ ಪ್ರದೇಶಗಳಲ್ಲಿ ಮಾಸ್ಕ್ ಧರಿಸುವುದು ಸುರಕ್ಷಿತ.
  • ಪೌಷ್ಟಿಕ ಆಹಾರ: ರೋಗನಿರೋಧಕ ಶಕ್ತಿ ಹೆಚ್ಚಿಸಲು ಹಸಿರು ತರಕಾರಿ, ಹಣ್ಣುಗಳನ್ನು ಸೇವಿಸಿ.

ಯಾವಾಗ ವೈದ್ಯರನ್ನು ಕಾಣಬೇಕು ? ಉಸಿರಾಟದ ತೊಂದರೆ, ಎದೆ ನೋವು, ಸತತ ವಾಂತಿ, ಅಥವಾ ಜ್ವರ 3-4 ದಿನಗಳಾದರೂ ಕಡಿಮೆ ಆಗದಿದ್ದರೆ ತಕ್ಷಣವೇ ವೈದ್ಯರನ್ನು ಸಂಪರ್ಕಿಸಿ.

seasonal flu New guidelines for Karnataka Health department what are the symptoms

Kannada News Next Desk

Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021

Related Stories