ಮೃತ ನೌಕರನ ವಿವಾಹಿತ ಪುತ್ರಿಯೂ ಅನುಕಂಪದ ಹುದ್ದೆಗೆ ಅರ್ಹಳು : ಹೈಕೋರ್ಟ್ನಿಂದ ಹೊರಬಿತ್ತು ಐತಿಹಾಸಿಕ ತೀರ್ಪು
ಕರ್ತವ್ಯದ ಅವಧಿಯಲ್ಲಿ ಮೃತಪಡುವ ಸರ್ಕಾರಿ ನೌಕರರ ಕುಟುಂಬದ ವಿವಾಹಿತ ಹೆಣ್ಣುಮಕ್ಕಳಿಗೆ ಹೈಕೋರ್ಟ್ ಸಿಹಿ ಸುದ್ದಿ ನೀಡಿದೆ. ತಂದೆ ಅಥವಾ ತಾಯಿಯನ್ನು ಕಳೆದುಕೊಂಡು ಸಂಕಷ್ಟದಲ್ಲಿರುವ, ಅವರನ್ನೇ ಸಂಪೂರ್ಣವಾಗಿ ನೆಚ್ಚಿಕೊಂಡಿದ್ದ ವಿವಾಹಿತ ಪುತ್ರಿಯರಿಗೂ ಅನುಕಂಪದ ಆಧಾರದ ಮೇಲೆ ಉದ್ಯೋಗ ಪಡೆಯುವ ಸಂಪೂರ್ಣ ಹಕ್ಕಿದೆ ಎಂದು ಉನ್ನತ ನ್ಯಾಯಾಲಯವು ಐತಿಹಾಸಿಕ ತೀರ್ಪು ಪ್ರಕಟಿಸಿದೆ.
ಕರ್ತವ್ಯದ ಅವಧಿಯಲ್ಲಿ ಮೃತಪಡುವ ಸರ್ಕಾರಿ ನೌಕರರ ಕುಟುಂಬದ ವಿವಾಹಿತ ಹೆಣ್ಣುಮಕ್ಕಳಿಗೆ ಹೈಕೋರ್ಟ್ ಸಿಹಿ ಸುದ್ದಿ ನೀಡಿದೆ. ತಂದೆ ಅಥವಾ ತಾಯಿಯನ್ನು ಕಳೆದುಕೊಂಡು ಸಂಕಷ್ಟದಲ್ಲಿರುವ, ಅವರನ್ನೇ ಸಂಪೂರ್ಣವಾಗಿ ನೆಚ್ಚಿಕೊಂಡಿದ್ದ ವಿವಾಹಿತ ಪುತ್ರಿಯರಿಗೂ ಅನುಕಂಪದ ಆಧಾರದ ಮೇಲೆ ಉದ್ಯೋಗ ಪಡೆಯುವ ಸಂಪೂರ್ಣ ಹಕ್ಕಿದೆ ಎಂದು ಉನ್ನತ ನ್ಯಾಯಾಲಯವು ಐತಿಹಾಸಿಕ ತೀರ್ಪು ಪ್ರಕಟಿಸಿದೆ. ಕೇವಲ ಮದುವೆಯಾಗಿದೆ ಎಂಬ ಒಂದೇ ಕಾರಣಕ್ಕೆ ಇಲಾಖೆಗಳು ಇಂತಹ ಅರ್ಜಿಗಳನ್ನು ತಿರಸ್ಕರಿಸುವಂತಿಲ್ಲ ಎಂದು ನ್ಯಾಯಪೀಠ ಸ್ಪಷ್ಟಪಡಿಸಿದೆ.
ಚಿತ್ರದುರ್ಗ ಜಿಲ್ಲೆಯ ಜೋಗಿಮಟ್ಟಿ ನಿವಾಸಿಯಾದ ಆರ್. ಸವಿತಾ ಎಂಬುವವರು ಉದ್ಯೋಗ ನಿರಾಕರಣೆ ಪ್ರಶ್ನಿಸಿ ಸಲ್ಲಿಸಿದ್ದ ವಿಶೇಷ ಅರ್ಜಿಯ ಸುದೀರ್ಘ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಎಸ್.ಜೆ. ಪಂಡಿತ್ ಹಾಗೂ ಕೆ. ರಾಜೇಶ್ ಅವರನ್ನೊಳಗೊಂಡ ವಿಭಾಗೀಯ ನ್ಯಾಯಪೀಠವು ಈ ಮಹತ್ವದ ಆದೇಶವನ್ನು ಹೊರಡಿಸಿದೆ. ಈ ಹಿಂದೆ ಕರ್ನಾಟಕ ಆಡಳಿತಾತ್ಮಕ ನ್ಯಾಯಮಂಡಳಿ (ಕೆಎಟಿ) ನೀಡಿದ್ದ ಆದೇಶವನ್ನು ಹೈಕೋರ್ಟ್ ರದ್ದುಗೊಳಿಸಿದೆ.
ರಾಜ್ಯ ಸರ್ಕಾರದ ನಾಗರಿಕ ಸೇವೆಗಳ (ಅನುಕಂಪದ ಆಧಾರದ ಮೇಲಿನ ನೇಮಕಾತಿ) 1996ರ ನಿಯಮಗಳ ತಿದ್ದುಪಡಿಯ ಅನ್ವಯ, ‘ಕುಟುಂಬ’ ಮತ್ತು ‘ಅವಲಂಬಿತರು’ ಎಂಬ ಪದಗಳ ವ್ಯಾಖ್ಯಾನವು ಅತ್ಯಂತ ವಿಶಾಲವಾಗಿದೆ. ಮೃತ ನೌಕರರನ್ನು ಆಶ್ರಯಿಸಿ ಒಟ್ಟಿಗೆ ವಾಸಿಸುತ್ತಿದ್ದ ಹೆಣ್ಣುಮಗಳು ಅವಿವಾಹಿತಳಾಗಿರಲಿ, ವಿವಾಹಿತಳಾಗಿರಲಿ, ವಿಚ್ಛೇದನ ಪಡೆದಿರಲಿ ಅಥವಾ ವಿಧವೆಯಾಗಿರಲಿ, ಅವರೆಲ್ಲರೂ ಅನುಕಂಪದ ನೌಕರಿ ಪಡೆಯಲು ಸಮಾನ ಅರ್ಹತೆ ಹೊಂದಿರುತ್ತಾರೆ. ಈ ನಿಯಮವು ಪೂರ್ವಾನ್ವಯವಾಗಿ ಜಾರಿಗೆ ಬರಲಿದ್ದು, ಹೆಣ್ಣುಮಕ್ಕಳ ಹಕ್ಕನ್ನು ಕಸಿದುಕೊಳ್ಳಲು ಬರುವುದಿಲ್ಲ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ.
Also Read: ಮುಂದಿನ ನಾಲ್ಕು ದಿನಗಳ ಕಾಲ ಇರಲಿದೆ ಮಳೆಯ ಅಬ್ಬರ : ಕರಾವಳಿ-ಮಲೆನಾಡಿಗೆ ‘ಆರೆಂಜ್ ಅಲರ್ಟ್’ ಘೋಷಣೆ
ಅರ್ಜಿದಾರರ ತಾಯಿ ಬದುಕಿದ್ದು ಅವರು ನಿವೃತ್ತಿ ವೇತನ (ಪಿಂಚಣಿ) ಪಡೆಯುತ್ತಿದ್ದಾರೆ ಎಂಬ ನೆಪವೊಡ್ಡಿ ಸಮಾಜ ಕಲ್ಯಾಣ ಇಲಾಖೆಯು ಉದ್ಯೋಗ ನೀಡಿಕೆಯನ್ನು ಮುಂದೂಡುವಂತಿಲ್ಲ. ಅರ್ಜಿದಾರ ಮಹಿಳೆಯು ಕಾನೂನುಬದ್ಧವಾಗಿ ಇತರೆ ಎಲ್ಲಾ ಅರ್ಹತೆಗಳನ್ನು ಹೊಂದಿದ್ದರೆ, ಆಕೆಯನ್ನು ತಕ್ಷಣವೇ ಅನುಕಂಪದ ನೇಮಕಾತಿಗೆ ಪರಿಗಣಿಸಬೇಕು ಎಂದು ಸರ್ಕಾರ ಹಾಗೂ ಸಂಬಂಧಪಟ್ಟ ಇಲಾಖೆಗೆ ನ್ಯಾಯಾಲಯವು ಕಡಕ್ ಆದೇಶ ನೀಡಿದೆ. ಈ ಆದೇಶವು ಆಶ್ರಯ ಕಳೆದುಕೊಂಡ ನೂರಾರು ಮಹಿಳೆಯರಿಗೆ ಆಶಾಕಿರಣವಾಗಿದೆ.
The married daughter of a deceased employee is also eligible for compassionate appointment Historic verdict issued by the High Court



