ಭಾರತದಲ್ಲಿ ಟೆಸ್ಲಾ ಮಾಡೆಲ್ ವೈ ಮಾರಾಟ? 2025 ರಲ್ಲಿ ಎಲಾನ್ ಮಸ್ಕ್ ಕಾರು ಮಾರಾಟವಾದದ್ದೆಷ್ಟು?
Tesla Model Y: ಎಲಾನ್ ಮಸ್ಕ್ ಒಂದಲ್ಲಾ ಒಂದು ವಿಷಯಕ್ಕೆ ಸದಾ ಚರ್ಚೆಯಲ್ಲಿರುವ ಪ್ರಪಂಚದ ಅತಿ ಶ್ರೀಮಂತ ವ್ಯಕ್ತಿ. ತನ್ನ ಹೊಸ ಹೊಸ ಯೋಚನೆಯಿಂದಲೇ ಜಗತ್ತಿನ ಗಮನ ಸೆಳೆದವನು.
ಎಲಾನ್ ಮಸ್ಕ್ 2025ರಲ್ಲಿ ತನ್ನ ಟೆಸ್ಲಾ ಮಾಡೆಲ್ ವೈ ಕಾರನ್ನು ಭಾರತದ ವಾಹನ ಮಾರುಕಟ್ಟೆಗೆ ಪರಿಚಯಿಸಿದ್ದನು. 2025ರ ಜುಲೈನಲ್ಲಿ ಬಿಡುಗಡೆಯಾಗಿ ರಸ್ತೆಗಿಳಿದ ಟೆಸ್ಲಾ ಮಾಡೆಲ್ ವೈ ವಾಹನ ಪ್ರಿಯರ ಕುತೂಹಲ ಹೆಚ್ಚಿಸಿತ್ತು.
59.89 ಲಕ್ಷ ರೂ. ( ಎಕ್ಸ್ ಶೋ ರೂಂ) ಆರಂಭಿಕ ಬೆಲೆಗೆ ಮಾರಾಟ ಪ್ರಾರಂಭಿಸಿತ್ತು. ಐಶಾರಾಮಿ ಕಾರುಗಳ ಸಾಲಿನಲ್ಲಿ ವಿಶ್ವದಾದ್ಯಂತ ಜನಪ್ರಿಯತೆ ಗಳಿಸಿರುವ ಟೆಸ್ಲಾ ಕಾರು ಕಳೆದ ವರ್ಷ ಭಾರತದಲ್ಲಿ ಎಷ್ಟು ಯುನಿಟ್ ಮಾರಾಟ ಮಾಡಿದೆ ಎಂದು ನೋಡೋಣ.
2025ರಲ್ಲಿ ಮಾರಾಟವಾದ ಯುನಿಟ್ ಎಷ್ಟು?
2025ರಲ್ಲಿ ಭಾರತದಲ್ಲಿ ಟೆಸ್ಲಾ ಮಾಡೆಲ್ ವೈ ಕಾರನ್ನು ಬಿಡುಗಡೆ ಮಾಡಿದ್ದ ಎಲಾನ್ ಮಸ್ಕ್ ಕಳೆದ ವರ್ಷ ದೇಶಾದ್ಯಂತ 225 ಯುನಿಟ್‌ಗಳನ್ನು ಮಾತ್ರ ಮಾರಾಟ ಮಾಡಿದೆ. ಮಾಧ್ಯಮ ವರದಿಗಳ ಪ್ರಕಾರ, ಇದು ಭಾರತದಲ್ಲಿ ಕಾರು ಬಿಡುಗಡೆಯಾದಾಗಿನಿಂದ ಡಿಸೆಂಬರ್‌ವರೆಗಿನ ಮಾರಾಟವಾದ ಅಂಕಿಅಂಶವಾಗಿದೆ.
ಎಲ್ಲೆಲ್ಲಿ ಮಾರಾಟವಾಗುತ್ತಿದೆ?
ಭಾರತದಲ್ಲಿ ಟೆಸ್ಲಾ ಕಾರು ತಯಾರಕರು ಮೊದಲ ಶೋ ರೂಂ ಅನ್ನು ಮುಂಬೈನಲ್ಲಿ ತೆರೆಯಿತು. ನಂತರ ಎರಡನೇ ಶೋ ರೂಂ ಅನ್ನು ದೆಹಲಿಯಲ್ಲಿ ತೆರೆಯಿತು.
ಸ್ವಲ್ಪ ಸಮಯದ ನಂತರ ಗುರುಗ್ರಾಮ್‌ನಲ್ಲೂ ಆಲ್-ಇನ್-ಒನ್ ಕೇಂದ್ರವನ್ನು ತೆರೆಯಿತು. ಈಗ ಕಂಪನಿಯು ಭಾರತದಲ್ಲಿ ನಿರಂತರವಾಗಿ ತನ್ನ ಶೋ ರೂಂ ವಿಸ್ತರಣೆಯನ್ನು ಮುಂದುವರೆಸಿದೆ. ಇದು 2026 ರಲ್ಲಿ ಮಾರಾಟದಲ್ಲಿ ಏರಿಕೆಯ ನಿರೀಕ್ಷೆಯಲ್ಲಿದೆ.
ಟೆಸ್ಲಾ ಮಾಡೆಲ್ ವೈ ವೈಶಿಷ್ಟ್ಯವೇನು?
ಭಾರತದಲ್ಲಿ ಟೆಸ್ಲಾದ ಏಕೈಕ ಎಲೆಕ್ಟ್ರಿಕ್ SUV ಆಗಿರುವ ಮಾಡೆಲ್ ವೈ, 15.4-ಇಂಚಿನ ಟಚ್‌ಸ್ಕ್ರೀನ್, ಹವಾನಿಯಂತ್ರಿತ ಸೀಟುಗಳು, ಏಂಬಿಯಂಟ್ ಲೈಟ್, ರಿಯರ್ ವ್ಹೀಲ್ ಡ್ರೈವ್, ಒಂಬತ್ತು ಸ್ಪೀಕರ್‌ಗಳು, AEB, ಬ್ಲೈಂಡ್-ಸ್ಪಾಟ್ ಕಾಲಿಜನ್ ವಾರ್ನಿಂಗ್ ಮತ್ತು ಟಿಂಟೆಡ್ ಗ್ಲಾಸ್ ರೂಫ್ ಸೇರಿದಂತೆ ಹಲವಾರು ಐಶಾರಾಮಿ ಹಾಗೂ ಅತ್ಯಾಕರ್ಷಕ ವೈಶಿಷ್ಟ್ಯಗಳನ್ನು ನೀಡುತ್ತದೆ.
ಹೇಗಿದೆ ಬ್ಯಾಟರಿ?
ಟೆಸ್ಲಾ ಮಾಡೆಲ್ ವೈ ಕಾರನ್ನು ತಯಾರಕರಿಂದ ಕಡಿಮೆ ಬೆಲೆ ಮತ್ತು ದೀರ್ಘ-ಶ್ರೇಣಿಯ ಬ್ಯಾಟರಿ ಆಯ್ಕೆಗಳೊಂದಿಗೆ ನೀಡಲಾಗುತ್ತಿದೆ. ಈ ಕಾರನ್ನು ಒಂದೇ ಚಾರ್ಜ್‌ನಲ್ಲಿ 500 ಮತ್ತು 622 ಕಿಲೋಮೀಟರ್ ಓಡಿಸಬಹುದು.
ಇದನ್ನೂ ಓದಿ: ನಾಳೆ ಬಿಡುಗಡೆಯಾಗಲಿದೆ ಕಿಯಾ ಸೆಲ್ಟೋಸ್‌ನ ನ್ಯೂ ಜನರೇಷನ್ ಕಾರು
ಬೆಲೆ ಎಷ್ಟು?
ಟೆಸ್ಲಾ ಮಾಡೆಲ್ ವೈ ಆರಂಭಿಕ ಬೆಲೆ 59.89 ಲಕ್ಷ ರೂ. (ಎಕ್ಸ್ ಶೋ ರೂಂ) ಆಗಿದ್ದರೆ, ಟಾಪ್-ಆಫ್-ಲೈನ್ ಲಾಂಗ್ ರೇಂಜ್ ರೂಪಾಂತರದ ಬೆಲೆ 67.89 ಲಕ್ಷ ರೂ. (ಎಕ್ಸ್ ಶೋ ರೂಂ) ಆಗಿದೆ.



