ಗಿಲ್ಲಿ ನಟನನ್ನು ಬಿಗ್‌ ಬಾಸ್‌ನಲ್ಲಿ ಗೆಲ್ಲಿಸಿ; ಮಳವಳ್ಳಿ ಶಾಸಕ ನರೇಂದ್ರ ಸ್ವಾಮಿ ಮನವಿ!

Bigg Boss 12 | Gilli Nata: ಮಂಡ್ಯ: ಬಿಗ್ ಬಾಸ್ ಕನ್ನಡ ಸೀಸನ್ 12ರ ಫಿನಾಲೆ ವಾರವು ಅತ್ಯಂತ ಕುತೂಹಲಕಾರಿಯಾದ ಘಟ್ಟವನ್ನು ತಲುಪಿದೆ. ಈ ಬಾರಿ ಮಳವಳ್ಳಿ ಮೂಲದ ಸ್ಪರ್ಧಿ ‘ಗಿಲ್ಲಿ’ ನಟರಾಜ್ ಅವರು ಮನೆಯಲ್ಲಿ ತೋರುತ್ತಿರುವ ಪ್ರದರ್ಶನಕ್ಕೆ ಮೆಚ್ಚುಗೆ ವ್ಯಕ್ತವಾಗಿದ್ದು, ಅವರ ಪರವಾಗಿ ಮಳವಳ್ಳಿ ಕ್ಷೇತ್ರದ ಶಾಸಕರಾದ ಪಿ.ಎಂ. ನರೇಂದ್ರ ಸ್ವಾಮಿ ಅವರು ಮತ ಯಾಚನೆ ಮಾಡಿದ್ದಾರೆ.

ನಮ್ಮೂರಿನ ಹುಡುಗನಿಗೆ ಬೆಂಬಲ ನೀಡಿ:
ವಿಡಿಯೋ ಸಂದೇಶದ ಮೂಲಕ ಮಾತನಾಡಿರುವ ಶಾಸಕ ನರೇಂದ್ರ ಸ್ವಾಮಿ ಅವರು, “ನಮ್ಮ ಮಳವಳ್ಳಿ ತಾಲ್ಲೂಕಿನ ಪ್ರತಿಭೆ ಗಿಲ್ಲಿ ನಟರಾಜ್ ಬಿಗ್ ಬಾಸ್ ಮನೆಯಲ್ಲಿ ಅತ್ಯುತ್ತಮವಾಗಿ ಆಟವಾಡುತ್ತಿದ್ದಾರೆ. ಅಂತಿಮ ಹಂತ ತಲುಪಿರುವ ಅವರಿಗೆ ನಮ್ಮೆಲ್ಲರ ಪ್ರೋತ್ಸಾಹದ ಅಗತ್ಯವಿದೆ. ಮಳವಳ್ಳಿ ಮತ್ತು ಮಂಡ್ಯ ಜಿಲ್ಲೆಯ ಜನತೆ ಸೇರಿದಂತೆ ಎಲ್ಲರೂ ಅವರಿಗೆ ಹೆಚ್ಚಿನ ಸಂಖ್ಯೆಯಲ್ಲಿ ಮತ ಹಾಕುವ ಮೂಲಕ ವಿನ್ನರ್ ಮಾಡಬೇಕು,” ಎಂದು ಮನವಿ ಮಾಡಿದ್ದಾರೆ.

ಕ್ಷೇತ್ರದಲ್ಲಿ ಶುರುವಾದ ವೋಟಿಂಗ್ ಅಭಿಯಾನ:
ಬಿಗ್ ಬಾಸ್ ಮನೆಯಲ್ಲಿ ಸದ್ಯ ಏಳು ಮಂದಿ ಪ್ರಬಲ ಸ್ಪರ್ಧಿಗಳಿದ್ದು, ಗಿಲ್ಲಿ ನಟರಾಜ್ ಅವರ ಸಹಜ ಆಟ ಮತ್ತು ಹಾಸ್ಯ ಪ್ರಜ್ಞೆಗೆ ಮಂಡ್ಯ ಭಾಗದಲ್ಲಿ ದೊಡ್ಡ ಅಭಿಮಾನಿ ಬಳಗ ಸೃಷ್ಟಿಯಾಗಿದೆ. ಶಾಸಕರೇ ನೇರವಾಗಿ ಬೆಂಬಲ ಸೂಚಿಸಿರುವುದರಿಂದ ಗಿಲ್ಲಿ ಅಭಿಮಾನಿಗಳಲ್ಲಿ ಹೊಸ ಚೈತನ್ಯ ಬಂದಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೋಟಿಂಗ್ ಅಭಿಯಾನ ಚುರುಕುಗೊಂಡಿದೆ.

ಬಿಗ್ ಬಾಸ್ ಮನೆಯಲ್ಲಿರುವ ಗಿಲ್ಲಿ ನಟನ ಆಸೆಗಳೇನು ಗೊತ್ತಾ? ನೀವು ನಗೋದು ಪಕ್ಕಾ!

ಫಿನಾಲೆ ಫೈಟ್:
ಇದೇ ಭಾನುವಾರ ಬಿಗ್ ಬಾಸ್ ಸೀಸನ್ 12ರ ಮಹಾಸಂಗ್ರಾಮಕ್ಕೆ ತೆರೆ ಬೀಳಲಿದ್ದು, ಅಶ್ವಿನಿ, ಗಿಲ್ಲಿ ನಟರಾಜ್, ರಘು, ರಕ್ಷಿತಾ, ಕಾವ್ಯಾ, ಧ್ರುವಂತ್ ಮತ್ತು ಧನುಶ್ ನಡುವೆ ಕಠಿಣ ಪೈಪೋಟಿ ಇದೆ. ಅಂತಿಮವಾಗಿ ಯಾರು ವಿನ್ನರ್ ಟ್ರೋಫಿ ಎತ್ತಲಿದ್ದಾರೆ ಎಂಬ ಕುತೂಹಲ ಮನೆ ಮಾಡಿದೆ.

Vidhya | ವಿದ್ಯಾಶ್ರೀ

ವಿದ್ಯಾಶ್ರೀ ಅವರು ನ್ಯೂಸ್‌ ನೆಕ್ಸ್ಟ್‌ ಕನ್ನಡ ( Kannada News Next) ದಲ್ಲಿ ಕಂಟೆಂಟ್‌ ಕ್ರಿಯೆಟರ್‌ ಆಗಿ ಕೆಲಸ ಮಾಡುತ್ತಿದ್ದಾರೆ. ಕನ್ನಡದ ನ್ಯೂಸ್‌ ಚಾನೆಲ್‌, ದಿನ ಪತ್ರಿಕೆ ಹಾಗೂ ಡಿಜಿಟಲ್‌ ಮಾಧ್ಯಮದಲ್ಲಿ ಹಲವು ವರ್ಷಗಳ ಕಾಲ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ.

Related Stories