ಬಿಗ್ ಬಾಸ್ ಮನೆಯಲ್ಲಿರುವ ಗಿಲ್ಲಿ ನಟನ ಆಸೆಗಳೇನು ಗೊತ್ತಾ? ನೀವು ನಗೋದು ಪಕ್ಕಾ!
ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಬಿಗ್ ಬಾಸ್ ಶೋ ಫೈನಲ್ ಹಂತಕ್ಕೆ ಬಂದು ತಲುಪಿದೆ. ಇನ್ನು ಒಂದು ವಾರ ಮಾತ್ರ ಬಾಕಿ ಇದೆ. ಇನ್ನೂ 8 ಸ್ಪರ್ಧಿಗಳು ಇದ್ದಾರೆ. ಅವರಲ್ಲಿ 6 ಜನಕ್ಕೆ ಮಾತ್ರ ಫಿನಾಲೆಗೆ ಹೋಗಲು ಅವಕಾಶ. ಇನ್ನು ಫಿನಾಲೆ ವಾರದಲ್ಲಿರುವ ಸ್ಪರ್ಧಿಗಳಿಗೆ ಬಿಗ್ ಬಾಸ್ ನಿಮ್ಮ 3 ಆಸೆಗಳನ್ನು ಬರೆದು ಪತ್ರ ಬರೆಯಿರಿ. ಅದರಲ್ಲಿ ಒಂದನ್ನು ನೆರವೇರಿಸುತ್ತೇವೆ ಎಂದು ಹೇಳಿದ್ದಾರೆ. ಗಿಲ್ಲಿ ಏನ್ ಬರೆದಿದ್ದಾರೆ ನೋಡಿ.
ಗಿಲ್ಲಿ ಹವಾ ಜೋರು
ಬಿಗ್ ಬಾಸ್ ಮನೆಯಲ್ಲಿರುವ ಗಿಲ್ಲಿ ನಟನ ಹವಾ ಮೊದಲಿನಿಂದಲೂ ಹೆಚ್ಚಾಗಿಯೇ ಇದೆ. ಈಗ ಮತ್ತಷ್ಟು ಹೆಚ್ಚಾಗಿದೆ. ಫಿನಾಲೆ ವಾರದಲ್ಲಿರುವ ಆತ ಗೆಲ್ಲಬೇಕು ಎಂದು ಅಭಿಮಾನಿಗಳು ಆಸೆ ಪಡ್ತಾ ಇದ್ದಾರೆ. ಅಲ್ಲದೇ ಅಲ್ಲಲ್ಲಿ ಕಟೌಟ್ ಮಾಡಿ ಜೈಕಾರ ಕೂಗುತ್ತಿದ್ದಾರೆ.
ಗಿಲ್ಲಿಯ ಆಸೆ ಏನು?
ಇನ್ನು ಬಿಗ್ ಬಾಸ್ ಹೇಳಿದಂತೆ ಗಿಲ್ಲಿ ತನ್ನ ಮೂರು ಆಸೆಗಳನ್ನು ಬರೆದಿದ್ದಾರೆ. ಅವು ಏನು ಅಂತ ನೋಡಿ.
- ಬಿಗ್ ಬಾಸ್ ಮನೆಯಲ್ಲಿರುವ ಟಿವಿಯಲ್ಲಿ ಒಳ್ಳೆ ಸಿನಿಮಾ ನೋಡಬೇಕು.
- ಬಿಗ್ ಬಾಸ್ ಮನೆ ಒಳಗಿರುವ ಆನೆ ಮೇಲೆ ಕೂರಬೇಕು.
- ನನಗೆ ನಲ್ಲಿ ಮೂಳೆ ತುಂಬಾ ಇಷ್ಟ. ಅದನ್ನು ಮಧ್ಯಾಹ್ನ ಕುಟ್ಟಿ, ಕುಟ್ಟಿ ತಿಂದು, ಮಲಗಬೇಕು. ಮಧ್ಯಾಹ್ನ ಮಲಗಿದಾಗ ನೀವು ನಾಯಿ ಕೂಗುವ ಸೌಂಡ್ ಹಾಬಾರದು ಎಂದು ಹೇಳಿದ್ದಾರೆ.
ಅಡುಗೆ ಮಾಡಿದ ಗಿಲ್ಲಿ
ಇನ್ನು ವೀಕೆಂಡ್ ನಲ್ಲಿ ಸುದೀಪ್ ಅವರು ನೀನು ಅಡುಗೆ ಮಾಡಬೇಕು ಎಂದು ಹೇಳಿರ್ತಾರೆ. ಅದಕ್ಕೆ ಗಿಲ್ಲಿ ಕೈಗೆ ಸಿಕ್ಕ ತರಕಾಗಿ ಹಾಕಿ ರೈಸ್ ಬಾತ್ ಮಾಡ್ತಾರೆ. ಆದ್ರೆ ಅದು ಮನೆಯವರಿಗೆ ಇಷ್ಟ ಆಗಿಲ್ಲ.
ಗೆದ್ದು ಬಾ ಗಿಲ್ಲಿ
ಸೋಷಿಯಲ್ ಮಿಡಿಯಾದಲ್ಲಿ ಹವಾ ಸೃಷ್ಟಿರುವ ಗಿಲ್ಲಿಗೆ ಭಾರೀ ಪ್ರಚಾರ ದೊರೆಯುತ್ತಿದೆ. ಎಲ್ಲೆಡೆ ಗಿಲ್ಲಿ ಗೆದ್ದು ಬಾ ಎಂದು ಹಾಕುತ್ತಿದ್ದಾರೆ.
ಜನಪ್ರಿಯ ಹಾಸ್ಯ ನಟ
ಗಿಲ್ಲಿ ನಟ ಕನ್ನಡದ ಜನಪ್ರಿಯ ಹಾಸ್ಯ ನಟ. ಅವರು ಬಿಗ್ ಬಾಸ್ ಕನ್ನಡ ಸೀಸನ್ 12ರ ಸ್ಪರ್ಧಿಯಾಗಿದ್ದು, ಅವರ ಕಾಮಿಡಿ ಮತ್ತು ನಟನೆಗೆ ಹೆಸರಾಗಿದ್ದಾರೆ. ಗಿಲ್ಲಿ ನಟ ಅವರು ‘ಕ್ವಾಟ್ಲೆ ಕಿಚನ್’ ಮತ್ತು ‘ಕಾಮಿಡಿ ಕಿಲಾಡಿಗಳು’ ಕಾರ್ಯಕ್ರಮಗಳಲ್ಲೂ ಭಾಗವಹಿಸಿದ್ದರು.
ಇದನ್ನೂ ಓದಿ: https://kannada.newsnext.live/cinema/this-season-final-kichhana-chappale-goes-to-ashwini-and-dhruvanth/
ಪ್ರೇಕ್ಷಕರ ಮನ ಗೆದ್ದ ಗಿಲ್ಲಿ
ಬಿಗ್ ಬಾಸ್ ಮನೆಯಲ್ಲಿ ಕಾವ್ಯ ಶೈವ ಅವರೊಂದಿಗೆ ತಮಾಷೆಯ ಲವ್ ಸ್ಟೋರಿ ನಡೆಸ್ತಾ ಇದ್ದಾರೆ.ಗಿಲ್ಲಿ ನಟ ಅವರ ಹಾಸ್ಯ ಮತ್ತು ನಟನೆಯಿಂದ ಕನ್ನಡ ಪ್ರೇಕ್ಷಕರ ಮನ ಗೆದ್ದಿದ್ದಾರೆ.



