ರಾಷ್ಟ್ರೀಯ ಇಂಡಿಯನ್ ಮಿಲಿಟರಿ ಕಾಲೇಜಿಗೆ 8ನೇ ತರಗತಿಗೆ ಪ್ರವೇಶ ಸಿಗುತ್ತೆ; ಹೀಗೆ ಅಪ್ಲೈ ಮಾಡಿ

National Military School Dehradun 2026 admission: ಬೆಂಗಳೂರು: ಡೆಹ್ರಾಡೂನ್‌ನಲ್ಲಿರುವ ಪ್ರತಿಷ್ಠಿತ ರಾಷ್ಟ್ರೀಯ ಇಂಡಿಯನ್ ಮಿಲಿಟರಿ ಕಾಲೇಜಿನಲ್ಲಿ (RIMC) ಜನವರಿ 2027ರ ಅಧಿವೇಶನಕ್ಕೆ 8ನೇ ತರಗತಿ ಪ್ರವೇಶಕ್ಕಾಗಿ ಕರ್ನಾಟಕ ಮೂಲದ ಅರ್ಹ ಬಾಲಕ ಮತ್ತು ಬಾಲಕಿಯರಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಈ ಕುರಿತು ನಿಮಗೆಂದೇ ಇಲ್ಲಿದೆ ವಿವರ:

ಶೈಕ್ಷಣಿಕ ಅರ್ಹತೆ:
ಅಭ್ಯರ್ಥಿಗಳು ಪ್ರಸ್ತುತ ಯಾವುದೇ ಮಾನ್ಯತೆ ಪಡೆದ ಶಾಲೆಯಲ್ಲಿ 7ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರಬೇಕು ಅಥವಾ 7ನೇ ತರಗತಿ ಉತ್ತೀರ್ಣರಾಗಿರಬೇಕು.

ವಯೋಮಿತಿ: ಅಭ್ಯರ್ಥಿಗಳ ವಯಸ್ಸು 1 ಜನವರಿ 2027ಕ್ಕೆ ಅನ್ವಯವಾಗುವಂತೆ 11.5 ವರ್ಷದಿಂದ 13 ವರ್ಷದ ಒಳಗಿರಬೇಕು (ಅಂದರೆ 2 ಜನವರಿ 2014 ಕ್ಕಿಂತ ಮೊದಲು ಮತ್ತು 1 ಜುಲೈ 2015 ಕ್ಕಿಂತ ನಂತರ ಜನಿಸಿರಬಾರದು).

ಪ್ರವೇಶ ಪರೀಕ್ಷೆ: ಪ್ರವೇಶ ಪರೀಕ್ಷೆಯು ಜೂನ್ 7, 2026 ರಂದು ಬೆಂಗಳೂರು ಕೇಂದ್ರದಲ್ಲಿ ನಡೆಯಲಿದೆ.
ಅರ್ಜಿ ಸಲ್ಲಿಸುವ ವಿಧಾನ:

ಅರ್ಜಿ ನಮೂನೆ ಮತ್ತು ಮಾಹಿತಿ ಪುಸ್ತಕವನ್ನು ನಿರ್ದೇಶಕರು, ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ, ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಭವನ, ನಂ. 58, ಹೊಸೂರು ರಸ್ತೆ, ಬೆಂಗಳೂರು – 560025 ಇವರಿಂದ ಪಡೆಯಬಹುದು.

ಬೆಂಗಳೂರಿನ S-VYASA ವಿಶ್ವವಿದ್ಯಾಲಯದಲ್ಲಿ HR ಅಸಿಸ್ಟೆಂಟ್, CA ಇಂಟರ್ನ್‌ಶಿಪ್, ಯೋಗ, ಲೈಫ್ ಸೈನ್ಸಸ್, ಪ್ರಾಧ್ಯಾಪಕ ಹುದ್ದೆಗಳಿಗೆ ಅಪ್ಲೈ ಮಾಡಿ; ಇಲ್ಲಿದೆ ವಿವರ

ಅರ್ಜಿಯನ್ನು ಅಗತ್ಯ ದಾಖಲೆಗಳೊಂದಿಗೆ ದ್ವಿಪ್ರತಿಯಲ್ಲಿ (Two sets) ಸಲ್ಲಿಸಬೇಕು.

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ಭರ್ತಿ ಮಾಡಿದ ಅರ್ಜಿಗಳನ್ನು ಸಲ್ಲಿಸಲು ಏಪ್ರಿಲ್ 5, 2026 ಕೊನೆಯ ದಿನವಾಗಿದೆ.

ಹೆಚ್ಚಿನ ಮಾಹಿತಿಗಾಗಿ:
ಅಭ್ಯರ್ಥಿಗಳು ಮತ್ತು ಪೋಷಕರು ಹೆಚ್ಚಿನ ವಿವರಗಳಿಗಾಗಿ ಕೆಳಗಿನ ದೂರವಾಣಿ ಸಂಖ್ಯೆಗಳನ್ನು ಸಂಪರ್ಕಿಸಬಹುದು: 080-25589459 ಅಥವಾ 08382-226538

Vidhya | ವಿದ್ಯಾಶ್ರೀ

ವಿದ್ಯಾಶ್ರೀ ಅವರು ನ್ಯೂಸ್‌ ನೆಕ್ಸ್ಟ್‌ ಕನ್ನಡ ( Kannada News Next) ದಲ್ಲಿ ಕಂಟೆಂಟ್‌ ಕ್ರಿಯೆಟರ್‌ ಆಗಿ ಕೆಲಸ ಮಾಡುತ್ತಿದ್ದಾರೆ. ಕನ್ನಡದ ನ್ಯೂಸ್‌ ಚಾನೆಲ್‌, ದಿನ ಪತ್ರಿಕೆ ಹಾಗೂ ಡಿಜಿಟಲ್‌ ಮಾಧ್ಯಮದಲ್ಲಿ ಹಲವು ವರ್ಷಗಳ ಕಾಲ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ.

Related Stories