ಮುಂಬೈ ಇಂಡಿಯನ್ಸ್ ತೊರೆದು ಬೆಂಗಳೂರಿಗೆ ಹಾರ್ದಿಕ್ ಪಾಂಡ್ಯ ಶಿಫ್ಟ್
ಐಪಿಎಲ್ 2026ರಲ್ಲಿ ಮುಂಬೈ ಇಂಡಿಯನ್ಸ್ ತಂಡವನ್ನು ಮುನ್ನೆಡೆಸುವಲ್ಲಿ ವಿಫಲರಾಗಿರುವ ಹಾರ್ದಿಕ್ ಪಾಂಡ್ಯ ಸದ್ಯ ಮುಂಬೈ ತೊರೆದು ಬೆಂಗಳೂರಿಗೆ ಶಿಫ್ಟ್ ಆಗಿದ್ದಾರೆ. ಬರೋಡ ಮೂಲದ ಹಾರ್ದಿಕ್ ಪಾಂಡ್ಯ ಶಾಶ್ವತವಾಗಿ ಬೆಂಗಳೂರಿನಲ್ಲಿಯೇ ನೆಲೆಸುವುದು ಬಹುತೇಕ ಫಿಕ್ಸ್ ಆದಂತಿದೆ.
ಐಪಿಎಲ್ 2026ರಲ್ಲಿ ಮುಂಬೈ ಇಂಡಿಯನ್ಸ್ ತಂಡವನ್ನು ಮುನ್ನೆಡೆಸುವಲ್ಲಿ ವಿಫಲರಾಗಿರುವ ಹಾರ್ದಿಕ್ ಪಾಂಡ್ಯ ಸದ್ಯ ಮುಂಬೈ ತೊರೆದು ಬೆಂಗಳೂರಿಗೆ ಶಿಫ್ಟ್ ಆಗಿದ್ದಾರೆ. ಬರೋಡ ಮೂಲದ ಹಾರ್ದಿಕ್ ಪಾಂಡ್ಯ ಶಾಶ್ವತವಾಗಿ ಬೆಂಗಳೂರಿನಲ್ಲಿಯೇ ನೆಲೆಸುವುದು ಬಹುತೇಕ ಫಿಕ್ಸ್ ಆದಂತಿದೆ.
ಮುಂಬೈ ಇಂಡಿಯನ್ಸ್ ತಂಡವನ್ನು ಸೇರ್ಪಡೆ ಆದ ದಿನದಿಂದಲೂ ಹಾರ್ದಿಕ್ ಪಾಂಡ್ಯ ಅವರಿಗೆ ತರಬೇತಿ ಪಡೆಯುವುದು ದುಸ್ಸಾಹಸವಾಗಿತ್ತು. ಮುಂಬೈ ಇಂಡಿಯನ್ಸ್ ತಂಡದ ಅಧಿಕೃತ ಘಾನ್ಸೋಲಿಯಲ್ಲಿರುವ ರಿಲಯನ್ಸ್ ಕಾರ್ಪೊರೇಟ್ ಪಾರ್ಕ್‌ನಲ್ಲಿ ತರಬೇತಿ ಪಡೆಯುವುದು ಕಷ್ಟಕರವಾಗಿತ್ತು.
ಗಾಯಾಳುವಾಗಿರುವ ಹಾರ್ದಿಕ್ ಪಾಂಡ್ಯ ಸದ್ಯ ಮುಂಬೈ ತೊರೆದು ಬೆಂಗಳೂರಿನ ಸೆಂಟರ್ ಆಫ್ ಎಕ್ಸಲೆನ್ಸ್ (ಸಿಒಇ) ನಲ್ಲಿ ಸಾಕಷ್ಟು ಸಮಯ ಕಳೆಯುತ್ತಿದ್ದಾರೆ. ವರ್ಷದ ಆರಂಭದಿಂದಲೂ 32 ವರ್ಷದ ಹಾರ್ದಿಕ್ ಪಾಂಡ್ಯ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯ (BCCI) ಸೌಲಭ್ಯದ ಸೌಲಭ್ಯಕ್ಕೆ ಒಳಪಟ್ಟಿದ್ದಾರೆ. ಆದರೆ ಇಂಡಿಯನ್ ಪ್ರೀಮಿಯರ್ ಲೀಗ್ IPL- 2026ರ ಸೀಸನ್ ನಿಂದಾಗಿ ಅವರು ಕ್ವಾಡ್ರೈಸ್ಪ್ಸ್ ಗಾಯಕ್ಕೆ ಚಿಕಿತ್ಸೆ ಪಡೆಯುತ್ತಿದ್ದಾರೆ.
ಶಾಶ್ವತವಾಗಿ ಬೆಂಗಳೂರಿಗೆ ಹಾರ್ದಿಕ್ ಶಿಫ್ಟ್
ಹಾರ್ದಿಕ್ ಪಾಂಡ್ಯ ಈಗಾಗಲೇ ಶಾಶ್ವತವಾಗಿ ಬೆಂಗಳೂರಿಗೆ ಸ್ಥಳಾಂತರಗೊಂಡಿದ್ದಾರೆ. ಬೆಂಗಳೂರು ನಗರದ ಹೊರವಲಯದಲ್ಲಿ, CoE ಗೆ ಹತ್ತಿರದಲ್ಲಿ ಬಾಡಿಗೆಗೆ ವಾಸ್ತವ್ಯ ಹೂಡಿದ್ದಾರೆ. ತಮ್ಮ ವೃತ್ತಿಜೀವನದ ಉಳಿದ ಅವಧಿಯನ್ನು ಸೆಂಟರ್ ಆಫ್ ಎಕ್ಸಲೆನ್ಸ್ ಅನ್ನು ಶಾಶ್ವತ ತರಬೇತಿ ನೆಲೆಯನ್ನಾಗಿ ಮಾಡಿಕೊಂಡ ಮೊದಲ ಭಾರತೀಯ ಕ್ರಿಕೆಟಿಗ ಎಂದು ಬಿಸಿಸಿಐ ಮೂಲವೊಂದು ಪಿಟಿಐಗೆ ತಿಳಿಸಿದೆ.
ಗಾಯದಿಂದಾಗಿ ಆಲ್ರೌಂಡರ್ ಭಾರತ ವಿರುದ್ಧ ಅಫ್ಘಾನಿಸ್ತಾನ ಏಕದಿನ ಸರಣಿ, ಐರ್ಲೆಂಡ್ T20Iಗಳು ಮತ್ತು ಇಂಗ್ಲೆಂಡ್ ವಿರುದ್ಧದ 8 ವೈಟ್-ಬಾಲ್ ಪಂದ್ಯಗಳನ್ನು ಕಳೆದುಕೊಂಡಿದ್ದಾರೆ. ಇದೀಗ ಬೆಂಗಳೂರಿನಲ್ಲಿ ತರಬೇತಿಯನ್ನು ಆರಂಭಿಸಿದ್ದಾರೆ.
ಹಾರ್ದಿಕ್ ಪಾಂಡ್ಯ ನಾನಾ ಕಾರಣಗಳಿಂದಾಗಿ ಅವರು ಶಾಶ್ವತವಾಗಿ ಬೆಂಗಳೂರಿಗೆ ಸ್ಥಳಾಂತರಗೊಳ್ಳಬೇಕು. ಅಲ್ಲದೇ ಬಾಡಿಗೆ ಆಸ್ತಿಯನ್ನು ಪಡೆದು ವೃತ್ತಿ ಜೀವನದ ಉಳಿದ ಸಮಯವನ್ನು ಬೆಂಗಳೂರಲ್ಲಿನೇ ಕಳೆಯುವ ಚಿಂತನೆಯಲ್ಲಿದ್ದರು.
ಕ್ರಿಕೆಟ್ ತರಬೇರಿಯ ಕಾರಣದಿಂದಾಗಿ ಅವರು ಲೋವರ್ ಪರೇಲ್ ನಿವಾಸದಿಂದ ಪ್ರತಿದಿನ ಪ್ರಯಾಣಿಸುವುದು ಸಮಸ್ಯೆಯಾತ್ತು. ಇದೇ ಕಾರಣದಿಂದಲೇ ಅವರು ಮುಂಬೈನಿಂದ ಹೊರಗೆ ಹೋಗಲು ಬಯಸಿದ್ದರು.
Also Read: Gautam Gambhir : ಐರ್ಲೆಂಡ್ ಎದುರು ಸೋತ ಬೆನ್ನಲ್ಲೇ ಟೀಮ್ ಇಂಡಿಯಾಗೆ ಹೊಸ ಕೋಚ್? ಗಂಭೀರ್‌ಗೆ ಬಿಗ್ ಶಾಕ್ !
ಬಿಸಿಸಿಐ ಒಪ್ಪಂದಕ್ಕೆ ಒಳಪಟ್ಟಿರುವ ಹಾರ್ದಿಕ್ ಪಾಂಡ್ಯ ಕ್ರಿಕೆಟಿಗನಾಗಿ, ಗಾಯ ನಿರ್ವಹಣೆಯಿಂದ ಹಿಡಿದು ಕೌಶಲ್ಯ ತರಬೇತಿಯವರೆಗೆ COE ನಲ್ಲಿರುವ ಪ್ರತಿಯೊಂದು ಸೌಲಭ್ಯಕ್ಕೂ ಅವರಿಗೆ ಅವಕಾಶವಿದೆ. ಆದ್ದರಿಂದ, ಅವರು IPL, ರಾಜ್ಯ ಅಥವಾ ರಾಷ್ಟ್ರೀಯ ಕರ್ತವ್ಯದಲ್ಲಿ ಇಲ್ಲದಿದ್ದಾಗಲೆಲ್ಲಾ COE ಅನ್ನು ತಮ್ಮ ಶಾಶ್ವತ ನೆಲೆಯನ್ನಾಗಿ ಮಾಡಲು ನಿರ್ಧರಿಸಿದರು ಎಂದು ಮೂಲಗಳು ತಿಳಿಸಿವೆ.
ಹಾರ್ದಿಕ್ ಪಾಂಡ್ಯ ಅವರು ಸಿಒಇಯಲ್ಲಿ ವಿಶೇಷ ತರಬೇತಿ ಪಡೆಯಲಿದ್ದಾರೆ. ಸದ್ಯ ತರಬೇತಿ ಪಡೆದು ಜುಲೈ ಅಂತ್ಯದಲ್ಲಿ ಜಿಂಬಾಬ್ವೆಯ ಭಾರತ ಪ್ರವಾಸಕ್ಕೆ ಫಿಟ್ ಆಗುತ್ತಾರೆಯೇ ಅನ್ನೋದು ಇನ್ನೂ ಖಚಿತವಾಗಿಲ್ಲ.
ಭಾರತ ತಂಡದ ಪರವಾಗಿ ವೈಟ್ ಬಾಲ್ ಕ್ರಿಕೆಟ್‌ಗೆ ಮರಳುವವರೆಗೆ ಕನಿಷ್ಠ ಐದಾರು ವರ್ಷಗಳ ಕಾಲ ಹಾರ್ದಿಕ್ ಪಾಂಡ್ಯ ಭಾರತ ತಂಡದ ಪರವಾಗಿ ಆಡಲು ಬಯಸಿದ್ದಾರೆ. ಇದೇ ಕಾರಣದಿಂದಲೇ ಅವರು ಬೆಂಗಳೂರಲ್ಲೇ ಕ್ರಿಕೆಟ್ ವೃತ್ತಿ ಬದುಕಿಗೆ ವಿರಾಮ ಹೇಳುವವರೆಗೂ ನೆಲೆಸುವುದು ಖಚಿತ.
Hardik Pandya leaves Mumbai Indians shifts Bengaluru coe

