7,200mAh ಬ್ಯಾಟರಿ, 50MP ಕ್ಯಾಮೆರಾ, 18,999 ರೂ. ಬೆಲೆಯ ಮೊಬೈಲ್‌ ಲಾಂಚ್‌! ಯಾವುದೀ ಗೇಮಿಂಗ್‌ ಫೋನ್‌?

iQOO ತನ್ನ ಹೊಸ 5G ಫೋನ್, iQOO Z11x 5G ಅನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ.

iQOO Z11x 5G: ಚೀನಾದ ಮಿಡ್‌–ರೇಂಜ್‌ನ ಉತ್ತಮ ಗೇಮಿಂಗ್‌ ಮೊಬೈಲ್‌ ಐಕ್ಯೂ (iQOO) ಭಾರತದಲ್ಲಿ ತನ್ನ ಮತ್ತೊಂದು 5ಜಿ ಫೋನ್‌ ಅನ್ನು ಬಿಡುಗಡೆ ಮಾಡಿದೆ. ಐಕ್ಯೂನ Z11x 5ಜಿ ಹೆಸರಿನ ಮೊಬೈಲ್‌ ಅನ್ನು ಕಂಪನಿ ಪರಿಚಯಿಸಿದೆ. ಇದು Z11 ಸರಣಿಯ ಲೇಟೆಸ್ಟ್ ಆವೃತ್ತಿಯಾಗಿದೆ ಎಂಬ ಮಾಹಿತಿಯನ್ನು ನೀಡಿದೆ. ಈ ಹೊಸ ಸ್ಮಾರ್ಟ್‌ಫೋನ್‌ ದೇಶಾದ್ಯಂತ ಇ–ಕಾಮರ್ಸ್‌ ವೇದಿಕೆ ಅಮೆಜಾನ್‌ ನಲ್ಲಿ ಖರೀದಿಸಲು ಲಭ್ಯವಿರುತ್ತದೆ. ಕಂಪನಿಯು ಭಾರತದಲ್ಲಿ ಈ ಫೋನ್‌ ಅನ್ನು 3 ಸ್ಟೊರೇಜ್‌ಗಳಲ್ಲಿ ಮತ್ತು 2 ಬಣ್ಣಗಳ ಆಯ್ಕೆಯಲ್ಲಿ ಖರೀದಿಸಲು ಅವಕಾಶ ಮಾಡಿಕೊಟ್ಟಿದೆ.

ಐಕ್ಯೂ Z11x 5G ಬೆಲೆ ಮತ್ತು ಲಭ್ಯತೆ

ಐಕ್ಯೂ Z11x 5G ಯ 6GB RAM ಮತ್ತು 128GB ಸ್ಟೊರೇಜ್‌ನ ಮೂಲ ರೂಪಾಂತರದ ಬೆಲೆ 18,999 ರೂ. ದಿಂದ ಪ್ರಾರಂಭವಾಗುತ್ತದೆ. 8GB RAM ಮತ್ತು 128GB ಸ್ಟೋರೇಜ್ ರೂಪಾಂತರದ ಬೆಲೆ 20,999 ರೂ. ಆಗಿದೆ. ಐಕ್ಯೂ Z11x 5G ಟಾಫ್‌ ಆಫ್‌–ಲೈನ್‌ ರೂಪಾಂತರದ 8GB RAM ಮತ್ತು 256GB ಸ್ಟೋರೇಜ್ ಹೊಂದಿರುವ ಮೊಬೈಲ್‌ ಬೆಲೆ 22,999 ರೂ. ಆಗಿದೆ.

ಈ ಫೋನ್‌ ಅನ್ನು ಇ–ಕಾಮರ್ಸ್‌ ವೇದಿಕೆ ಅಮೆಜಾನ್‌ ನಲ್ಲಿ ಮಾರ್ಚ್‌ 16 ರಿಂದ ಖರೀದಿಸಬಹುದಾಗಿದೆ. ಈ ಫೋನ್‌ ಅನ್ನು ಆಕ್ಸಿಸ್ ಬ್ಯಾಂಕ್ ಮತ್ತು ಎಸ್‌ಬಿಐ ಕ್ರೆಡಿಟ್ ಕಾರ್ಡ್‌ಗಳನ್ನು ಬಳಸಿ 2,000 ರೂ. ವರೆಗೆ ತಕ್ಷಣದ ರಿಯಾಯಿತಿಯನ್ನು ಪಡೆಯಬಹುದಾಗಿದೆ.

ಐಕ್ಯೂ Z11x 5G ವೈಶಿಷ್ಟ್ಯ

ಐಕ್ಯೂ Z11x 5G ಮೊಬೈಲ್‌ 6.76-ಇಂಚಿನ LCD ಡಿಸ್ಪ್ಲೇಯನ್ನು ಹೊಂದಿದೆ. 120Hz ವರೆಗೆ ರಿಫ್ರೆಶ್ ದರವನ್ನು ಬೆಂಬಲಿಸುವ ಇದು 382 ppi ಪಿಕ್ಸೆಲ್ ಸಾಂದ್ರತೆ ಮತ್ತು 1,200 nits ವರೆಗಿನ ಗರಿಷ್ಠ ಹೊಳಪನ್ನು ನೀಡುತ್ತದೆ. ಧೂಳು ಮತ್ತು ನೀರಿನ ಪ್ರತಿರೋಧಕ್ಕಾಗಿ ಫೋನ್ IP68 ಮತ್ತು IP69+ ರೇಟಿಂಗ್ ಅನ್ನು ಹೊಂದಿದೆ. ಆಂಡ್ರಾಯ್ಡ್ 16 ಆಧಾರಿತ OriginOS 6 ನಲ್ಲಿ ಇದು ಕಾರ್ಯನಿರ್ವಹಿಸುತ್ತದೆ. ಇದಕ್ಕೆ 4nm ಆಕ್ಟಾ-ಕೋರ್ ಮೀಡಿಯಾ ಟೆಕ್ 7400 ಟರ್ಬೊ ಚಿಪ್‌ಸೆಟ್ ಪ್ರೊಸೆಸರ್‌ ಅಳವಡಿಸಲಾಗಿದೆ. ಈ ಫೋನ್ 8GB ವರೆಗೆ LPDDR4x RAM ಮತ್ತು 256GB ವರೆಗೆ UFS 3.1 ಸಂಗ್ರಹಣೆ ಹೊಂದಿದೆ. ಸುರಕ್ಷತೆಗಾಗಿ, ಫೋನ್ ಸೈಡ್-ಮೌಂಟೆಡ್ ಫಿಂಗರ್‌ಪ್ರಿಂಟ್ ಸ್ಕ್ಯಾನರ್ ಅನ್ನು ಹೊಂದಿದೆ.

ಇದನ್ನೂ ಓದಿ: ಭಾರತದಲ್ಲಿ ಬಿಡುಗಡೆಯಾದ ನಥಿಂಗ್‌ ಫೋನ್‌ 4a ಮತ್ತು 4a ಪ್ರೋ: ಡಿಸೈನ್‌ ನೋಡಿ ಫಿದಾ ಆದ ಗ್ರಾಹಕರು

ಛಾಯಾಗ್ರಹಣಕ್ಕಾಗಿ, ಈ ಫೋನ್‌ನಲ್ಲಿ ಹಿಂಬದಿಯಲ್ಲಿ ಡ್ಯುಯಲ್ ಕ್ಯಾಮೆರಾ ಸೆಟಪ್ ಕಾಣಬಹುದು. f/2.45 ಅಪರ್ಚರ್ ಹೊಂದಿರುವ 50-ಮೆಗಾಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾವನ್ನು ಒಳಗೊಂಡಿದೆ. ಫೋನ್ ಸೆಕೆಂಡರಿ ಶೂಟರ್ ಅನ್ನು ಸಹ ಹೊಂದಿದೆ ಎಂದು ಸೋರಿಕೆಯಾದ ಮಾಹಿತಿಯಿಂದ ತಿಳಿದುಬಂದಿದೆ. ಇನ್ನು ಸೆಲ್ಫಿ ಮತ್ತು ವೀಡಿಯೊ ಕರೆಗಳಿಗಾಗಿ 32-ಮೆಗಾಪಿಕ್ಸೆಲ್ ಮುಂಭಾಗದ ಕ್ಯಾಮೆರಾವನ್ನು ಹೊಂದಿದೆ.

ಇನ್ನು ಇದರ ಬ್ಯಾಟರಿ ಕ್ಷಮತೆಯ ಬಗ್ಗೆ ಹೇಳುವುದಾದರೆ ಇದು 44W ವೈರ್ಡ್ ಫಾಸ್ಟ್ ಚಾರ್ಜಿಂಗ್ ಬೆಂಬಲದೊಂದಿಗೆ 7,200mAh ಬ್ಯಾಟರಿ ಪ್ಯಾಕ್ ನೊಂದಿಗೆ ಬರುತ್ತದೆ.

Archana V. Bhat |ಅರ್ಚನಾ ವಿ. ಭಟ್

ಅರ್ಚನಾ ವಿ. ಭಟ್‌ ಮೂಲತಃ ಉತ್ತರ ಕನ್ನಡ ಜಿಲ್ಲೆಯ ಕುಮಟಾ ಮೂಲದವರು. ಕಳೆದ ಹಲವು ವರ್ಷಗಳಿಂದಲೂ ಪತ್ರಕರ್ತರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ನ್ಯೂಸ್‌ನೆಕ್ಸ್ಟ್‌ ಕನ್ನಡ ಸುದ್ದಿ ಸಂಸ್ಥೆಯಲ್ಲಿ ನಾಲ್ಕು ವರ್ಷಗಳಿಂದ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ವ್ಯವಹಾರ, ಆಟೋಮೊಬೈಲ್‌, ಟೆಕ್ನಾಲಜಿ, ಕ್ರೀಡೆ ಸುದ್ದಿ ವಿಭಾಗದಲ್ಲಿ ಕಂಟೆಂಟ್‌ ಕ್ರಿಯೆಟರ್‌ ಆಗಿದ್ದಾರೆ.. ನೈಜ, ಸತ್ಯ ಸುದ್ದಿಯನ್ನು ಪ್ರಕಟಿಸುತ್ತಿದ್ದಾರೆ.

Related Stories