ಭಾರತದಲ್ಲಿ ಬಿಡುಗಡೆಯಾದ ನಥಿಂಗ್ ಫೋನ್ 4a ಮತ್ತು 4a ಪ್ರೋ: ಡಿಸೈನ್ ನೋಡಿ ಫಿದಾ ಆದ ಗ್ರಾಹಕರು
ಮಿಡ್–ರೇಂಜ್ ಸ್ಮಾ ರ್ಟ್‌ಫೋನ್ ನಂಥಿಂಗ್ ಫೋನ್ 4a ಮತ್ತು ನಂಥಿಂಗ್ ಫೋನ್ 4a ಪ್ರೋ ಹೇಗಿದೆ? ಬೆಲೆ, ವೈಶಿಷ್ಟ್ಯಗಳೇನು ಇಲ್ಲಿದೆ ಓದಿ.
ಸ್ಮಾರ್ಟ್‌ಫೋನ್ ಕಂಪನಿ ನಂಥಿಂಗ್ ತನ್ನ ಮಿಡ್–ರೇಂಜ್ ಸ್ಮಾರ್ಟ್‌ಫೋನ್ ನಂಥಿಂಗ್ ಫೋನ್ 4a ಮತ್ತು ನಂಥಿಂಗ್ ಫೋನ್ 4a ಪ್ರೋ ಅನ್ನು ಅಧಿಕೃತವಾಗಿ ಬಿಡಗಡೆ ಮಾಡಿದೆ. ಇದು ಕಂಪನಿಯ 2026ನೇ ಸಾಲಿನ ಮೊದಲ ಬಿಡುಗಡೆಯಾಗಿದೆ. ಈ ಬಿಡುಗಡೆಯಿಂದಾಗಿ ಮಧ್ಯಮ ಶ್ರೇಣಿಯ ವಿಭಾಗದಲ್ಲಿ ಇನ್ನೊಂದಿಷ್ಟು ಸ್ಪರ್ಧೆ ಹೆಚ್ಚಾಗಲಿದೆ. ತನ್ನ ವಿಶಿಷ್ಟ ವಿನ್ಯಾಸ ಮತ್ತು ಗ್ಲಿಫ್ ಎಲ್‌ಇಡಿ ಸಿಸ್ಟಮ್‌ನಿಂದಾಗಿ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಸಂಚಲನ ಮೂಡಿಸಿದೆ. ಈ ಫೋನಿನ ವೈಶಿಷ್ಟ್ಯ, ಬೆಲೆ ಮತ್ತು ಲಭ್ಯತೆ ಏನು? ಇಲ್ಲಿದೆ ಓದಿ.
ವಿನ್ಯಾಸ ಮತ್ತು ವೈಶಿಷ್ಟ್ಯ
ನಂಥಿಂಗ್ ಫೋನ್ 4a ವಿನ್ಯಾಸದ ವಿಷಯದಲ್ಲಿ ಬಹಳ ವಿಭಿನ್ನವಾಗಿ ಕಾಣುತ್ತದೆ. ಇದರ ಮುಭಾಗ ಮತ್ತು ಹಿಂಭಾಗ ಎರಡಕ್ಕೂ ಕೆಳಗೆ ಬಿದ್ದರೂ ಅಷ್ಟ ಬೇಗ ಒಡೆಯದ ಗೊರಿಲ್ಲಾ ಗ್ಲಾಸ್ 7i ನಿಂದ ರಕ್ಷಣೆ ನೀಡಲಾಗಿದೆ. ಇದರ ಅತಿ ದೊಡ್ಡ ವೈಶಿಷ್ಟವೆಂದರೆ ಗ್ಲಿಫ್ ಎಲ್‌ಇಡಿ ವ್ಯವಸ್ಥೆ. ಇದರ ಹಿಂಭಾಗದಲ್ಲಿ 63 ಸಣ್ಣ ಎಲ್‌ಇಡಿ ದೀಪಗಳನ್ನು ಅಳವಡಿಸಲಾಗಿದೆ. ಇದು ನೋಟಿಫಿಕೇಷನ್, ಕರೆ ಮತ್ತ ವಿವಿಧ ಕಾರ್ಯಗಳಿಗೆ ಬಳಸಬಹುದು. 8.6 ಮಿಮಿ ದಪ್ಪದ ಈ ಫೋನ್ 204 ಗ್ರಾಂ ಭಾರವಿರುತ್ತದೆ.6.78 ಇಂಚಿನ AMOLED ಡಿಸ್ಪ್ಲೇ ಹೊಂದಿರುವ ಈ ಫೋನ್ 120Hz ರಿಫ್ರೆಶ್ ದರ ಹಾಗೂ 4500 ನಿಟ್ ಗರಿಷ್ಠ ಹೊಳಪನ್ನು ನೀಡುತ್ತದೆ. ನಂಥಿಂಗ್ ಫೋನ್ 4a ಸ್ನಾಪ್‌ಡ್ರಾಗನ್ 7s Gen 4 ಪ್ರೊಸೆಸರ್ ಹೊಂದಿರುವುದರಿಂದ ದೈನಂದಿನ ಬಳಕೆ ಮತ್ತು ಲಘು ಗೇಮಿಂಗ್‌ಗೆ ಈ ಮಧ್ಯಮ ಶ್ರೇಣಿ ಮೊಬೈಲ್ ಉತ್ತಮ ಎನ್ನಬಹುದಾಗಿದೆ.
ಇನ್ನು ಇದರ ಕ್ಯಾಮೆರಾ ಬಗ್ಗೆ ಹೇಳುವಾದರೆ ನಥಿಂಗ್ ಫೋನ್ 4a ನ ಕ್ಯಾಮೆರಾ ಸೆಟಪ್ ಸ್ವಲ್ಪ ವಿಭಿನ್ನವಾಗಿದೆ. 50MP ಪ್ರಾಥಮಿಕ ಕ್ಯಾಮೆರಾ, 50MP ಪೆರಿಸ್ಕೋಪ್ ಟೆಲಿಫೋಟೋ ಕ್ಯಾಮೆರಾ ಮತ್ತು 8MP ಅಲ್ಟ್ರಾ-ವೈಡ್ ಕ್ಯಾಮೆರಾ ಇರುವ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್ ಹೊಂದಿದೆ. ಅಷ್ಟೇ ಅಲ್ಲದೇ ಇದರಲ್ಲಿ 4K ಡಾಲ್ಬಿ ವಿಷನ್ HDR ವೀಡಿಯೊ ರೆಕಾರ್ಡಿಂಗ್ ಅನ್ನು ಸಹ ಮಾಡಬಹುದಾಗಿದೆ. ಸಣ್ಣ ಕಂಟೆಂಟ್ ಕ್ರಿಯೇಟರ್‌ಗಳಿಗೆ ಇದು ಉತ್ತಮವಾಗಿದೆ. ಸೆಲ್ಫಿ ಮತ್ತು ವೀಡಿಯೊ ಕರೆಗಳಿಗಾಗಿ ಮುಂಭಾಗದಲ್ಲಿ 32MP ಕ್ಯಾಮೆರಾ ಇರಿಸಲಾಗಿದೆ.
ಇದನ್ನೂ ಓದಿ: ಭಾರತಕ್ಕೆ ಬಂದ ಆಪಲ್‌ನ ಮೊದಲ ಬಜೆಟ್ ಫ್ರೆಂಡ್ಲೀ ಲ್ಯಾಪ್‌ಟಾಪ್ ಮ್ಯಾಕ್‌ಬುಕ್ ನಿಯೋ: ವೈಶಿಷ್ಟ್ಯ, ಬೆಲೆ ಮತ್ತು ಲಭ್ಯತೆ
ಇದು 5400mAh ಬ್ಯಾಟರಿ ಕ್ಷಮತೆ ಹೊಂದಿದೆ. ಈ ಫೋನ್ 50W ವೇಗದ ಚಾರ್ಜಿಂಗ್ ಬೆಂಬಲಿಸುತ್ತದೆ. ಇದರ ಬ್ಯಾಟರಿ ದೀರ್ಘಾವಧಿ ಬಾಳಿಕೆ ಬರುತ್ತದೆ ಎಂದು ಕಂಪನಿ ಹೇಳಿಕೊಂಡಿದೆ.
ಬೆಲೆ ಎಷ್ಟು?
ಭಾರತದಲ್ಲಿ ನಥಿಂಗ್ ಫೋನ್ 4a ನ ಬೆಲೆ 8GB RAM ಮತ್ತು 128GB ಸ್ಟೋರೇಜ್ ರೂಪಾಂತರವು 31,999 ರೂ.ಗಳಿಂದ ಪ್ರಾರಂಭವಾಗುತ್ತದೆ. 8GB ಮತ್ತು 256GB ಮಾದರಿಯು ಫೋನ್ 34,999 ರೂ.ಗಳಾದರೆ ಇದರ 12GB + 256GB ರೂಪಾಂತರವು 37,999 ರೂ. ಇಂದ ಪ್ರಾರಂಭವಾಗುತ್ತದೆ. ನಥಿಂಗ್ ಫೋನ್ 4a ಪ್ರೊ ದ ಬೆಲೆ 39,999 ರೂ. ದಿಂದ ಪ್ರಾರಂಭವಾಗುತ್ತದೆ. ಇದರ 8GB + 256 GB ಗಳ ಬೆಲೆ ಕ್ರಮವಾಗಿ 42,999 ರೂ. ಮತ್ತು 45,999ರೂ. ಗೆ ಲಭ್ಯವಿದೆ.



