ಭಾರತೀಯ ಅಂಚೆಯಿಂದ ಬಿಗ್ ಅಪ್‌ಡೇಟ್; ಹೊಸ ಎಕ್ಸ್‌ಪ್ರೆಸ್ ಸೇವೆ ನೆಕ್ಸ್ಟ್ ಡೇ ಡೆಲಿವರಿ ’24 ಸ್ಪೀಡ್ ಪೋಸ್ಟ್’ ಆರಂಭ
India Post 24 Speed Post: '24 ಸ್ಪೀಡ್ ಪೋಸ್ಟ್' (ಒಂದು ದಿನದಲ್ಲಿ ವಿತರಣೆ) ಮತ್ತು '48 ಸ್ಪೀಡ್ ಪೋಸ್ಟ್' (ಎರಡು ದಿನದಲ್ಲಿ ವಿತರಣೆ) ಎಂಬ ಎರಡು ಆಯ್ಕೆಗಳು ಇರಲಿವೆ.
ಕಡಿಮೆ ಸಮಯದಲ್ಲಿ ಪಾರ್ಸೆಲ್ ಮತ್ತು ಪತ್ರಗಳನ್ನು ತಲುಪಿಸುವ ನಿಟ್ಟಿನಲ್ಲಿ ಭಾರತೀಯ ಅಂಚೆ ಇಲಾಖೆಯು (India Post) ಮಹತ್ವದ ಹೆಜ್ಜೆ ಇಟ್ಟಿದೆ. ತುರ್ತು ರವಾನೆಗಳಿಗಾಗಿ ’24 ಸ್ಪೀಡ್ ಪೋಸ್ಟ್’ ಎಂಬ (24 Speed Post) ಹೊಸ ಎಕ್ಸ್‌ಪ್ರೆಸ್ ಸೇವೆಯನ್ನು (Next-Day Deliver) ಮಂಗಳವಾರ (ಮಾರ್ಚ್ 17) ಚಾಲನೆ ನೀಡಲಿದೆ.
-
ವೇಗದ ವಿತರಣೆ: ಈ ಸೇವೆಯ ಅಡಿಯಲ್ಲಿ ಪಾರ್ಸೆಲ್ಗಳನ್ನು ಕೇವಲ 24 ಗಂಟೆಗಳ ಒಳಗೆ ತಲುಪಿಸಲಾಗುತ್ತದೆ.
-
ಮೊದಲ ಹಂತ: ಆರಂಭದಲ್ಲಿ ಬೆಂಗಳೂರು, ದೆಹಲಿ, ಮುಂಬೈ, ಚೆನ್ನೈ, ಕೋಲ್ಕತ್ತಾ ಮತ್ತು ಹೈದರಾಬಾದ್ ಸೇರಿದಂತೆ ಒಟ್ಟು 6 ಮೆಟ್ರೋ ನಗರಗಳಲ್ಲಿ ಈ ಸೌಲಭ್ಯ ದೊರೆಯಲಿದೆ.
-
ಸೇವೆಗಳು: ’24 ಸ್ಪೀಡ್ ಪೋಸ್ಟ್’ (ಒಂದು ದಿನದಲ್ಲಿ ವಿತರಣೆ) ಮತ್ತು ’48 ಸ್ಪೀಡ್ ಪೋಸ್ಟ್’ (ಎರಡು ದಿನದಲ್ಲಿ ವಿತರಣೆ) ಎಂಬ ಎರಡು ಆಯ್ಕೆಗಳು ಇರಲಿವೆ.
ಆಧಾರ್ ಕಾರ್ಡ್ ಉಚಿತ ಅಪ್‌ಡೇಟ್ ಗಡುವು ಮುಕ್ತಾಯ: ಇನ್ಮುಂದೆ ಹಣ ಪಾವತಿಸಬೇಕೆ? ಹೊಸ ನಿಯಮ ಮತ್ತು ದಂಡದ ವಿವರ ಇಲ್ಲಿದೆ
ಗ್ರಾಹಕರಿಗೆ ಸಿಗುವ ಸೌಲಭ್ಯಗಳು:
-
ಸುರಕ್ಷತೆ: OTP ಆಧಾರಿತ ವಿತರಣೆ ಮತ್ತು ಎಂಡ್-ಟು-ಎಂಡ್ ಟ್ರ್ಯಾಕಿಂಗ್ ವ್ಯವಸ್ಥೆ ಇರಲಿದೆ.
-
ವ್ಯಾಪಾರಸ್ಥರಿಗೆ ಅನುಕೂಲ: ಬೃಹತ್ ಬುಕಿಂಗ್ ಮಾಡುವವರಿಗೆ ಉಚಿತ ಪಿಕ್-ಅಪ್ ಮತ್ತು ‘ಈಗ ಖರೀದಿಸಿ ನಂತರ ಪಾವತಿಸಿ’ (BNPL) ಸೌಲಭ್ಯ ನೀಡಲಾಗುವುದು.
-
ಹಣ ಮರುಪಾವತಿ: ಒಂದು ವೇಳೆ ವಿತರಣೆಯಲ್ಲಿ ವಿಳಂಬವಾದರೆ, ಹಣವನ್ನು ಮರುಪಾವತಿಸುವ ಗ್ಯಾರಂಟಿಯನ್ನು ಇಲಾಖೆ ನೀಡಿದೆ.
ಕೇಂದ್ರ ಸಚಿವ ಜ್ಯೋತಿರಾದಿತ್ಯ ಎಂ. ಸಿಂದಿಯಾ ಮತ್ತು ರಾಜ್ಯ ಸಚಿವ ಡಾ. ಚಂದ್ರಶೇಖರ್ ಪೆಮ್ಮಸಾನಿ ಅವರು ನವದೆಹಲಿಯ ಆಕಾಶವಾಣಿ ಭವನದಲ್ಲಿ ಈ ಯೋಜನೆಗೆ ಚಾಲನೆ ನೀಡಲಿದ್ದಾರೆ. ಆಧುನಿಕ ತಂತ್ರಜ್ಞಾನದ ಬಳಕೆಯೊಂದಿಗೆ ಇ-ಕಾಮರ್ಸ್ ಕ್ಷೇತ್ರಕ್ಕೆ ಪೈಪೋಟಿ ನೀಡಲು ಅಂಚೆ ಇಲಾಖೆ ಈ ಸಿದ್ಧತೆ ನಡೆಸಿದೆ.
[youtube https://www.youtube.com/watch?v=ApMaJ-7pro4]



