ಕಾರ್ಕಳ: ಜಾನುವಾರು ಕಳ್ಳರ ಮೇಲೆ ಕೋಕಾ ಅಸ್ತ್ರ ! ಜಾಮೀನಿನ ಮೇಲೆ ಬಿಡುಗಡೆಯಾಗಿದ್ದ ಮೂವರು ಮತ್ತೆ ಜೈಲು ಪಾಲು.
ಕಾರ್ಕಳ (Karkala) ತಾಲೂಕಿನ ಅಜೆಕಾರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದ ದನಗಳ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ, ಇದೀಗ ಆರೋಪಿಗಳ ವಿರುದ್ಧ ಅತ್ಯಂತ ಕಠಿಣವಾದ 'ಕೋಕಾ' (ಕರ್ನಾಟಕ ಸಂಘಟಿತ ಅಪರಾಧ ನಿಯಂತ್ರಣ ಕಾಯಿದೆ) ಜಾರಿಗೊಳಿಸಿ ಮೂವರನ್ನು ಮತ್ತೆ ಜೈಲಿಗಟ್ಟಲಾಗಿದೆ.

ಉಡುಪಿ ( Udupi) : ಕರಾವಳಿ ಜಿಲ್ಲೆಯಲ್ಲಿ ಜಾನುವಾರು ಕಳ್ಳತನ ಮಾಡುವವರಿಗೆ ಉಡುಪಿ ಪೊಲೀಸರು ಬಿಸಿ ಮುಟ್ಟಿಸಿದ್ದಾರೆ. ಕಾರ್ಕಳ (Karkala) ತಾಲೂಕಿನ ಅಜೆಕಾರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದ ದನಗಳ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ, ಇದೀಗ ಆರೋಪಿಗಳ ವಿರುದ್ಧ ಅತ್ಯಂತ ಕಠಿಣವಾದ ‘ಕೋಕಾ’ (ಕರ್ನಾಟಕ ಸಂಘಟಿತ ಅಪರಾಧ ನಿಯಂತ್ರಣ ಕಾಯಿದೆ) ಜಾರಿಗೊಳಿಸಿ ಮೂವರನ್ನು ಮತ್ತೆ ಜೈಲಿಗಟ್ಟಲಾಗಿದೆ.
ಏನಿದು ಪ್ರಕರಣ ?
ಕಳೆದ 2025ರ ಸೆಪ್ಟೆಂಬರ್ 29ರಂದು ತಡರಾತ್ರಿ ಶಿರ್ಲಾಲು ಗ್ರಾಮದ ಹಾಡಿಯಂಗಡಿ ನಿವಾಸಿ ಜಯಶ್ರೀ ಪೂಜಾರಿ ಎಂಬವರ ಮನೆಯ ಹಟ್ಟಿಗೆ ನುಗ್ಗಿದ್ದ ಕಳ್ಳರ ತಂಡ, ಜಾನುವಾರುಗಳನ್ನು ಅಪಹರಿಸಲು ಯತ್ನಿಸಿತ್ತು. ಮನೆಯವರು ಎಚ್ಚರಗೊಂಡು ತಡೆಯಲು ಬಂದಾಗ, ಆರೋಪಿಗಳು ತಲವಾರು ತೋರಿಸಿ ಪ್ರಾಣ ಬೆದರಿಕೆ ಹಾಕಿದ್ದರು. ಬಳಿಕ ಸುಮಾರು 35,000 ರೂ. ಮೌಲ್ಯದ ಮೂರು ಜಾನುವಾರುಗಳನ್ನು ವಾಹನದಲ್ಲಿ ತುಂಬಿಸಿಕೊಂಡು ಪರಾರಿಯಾಗಿದ್ದರು.
Also Read : ಉಡುಪಿಯಲ್ಲಿ ವರುಣನ ಅಬ್ಬರ: ಸುರಿಯುವ ಮಳೆಯಲ್ಲೇ ಸಾಗಿದ ಶ್ರೀಕೃಷ್ಣನ ಚಿನ್ನದ ರಥೋತ್ಸವ
ಮತ್ತೆ ಬಂಧನಕ್ಕೊಳಗಾದವರು ಯಾರು ?
ಈ ಪ್ರಕರಣದಲ್ಲಿ ಈಗಾಗಲೇ ಬಂಧಿತರಾಗಿ ಜಾಮೀನಿನ ಮೇಲೆ ಬಿಡುಗಡೆಗೊಂಡಿದ್ದ ಈ ಕೆಳಗಿನ ಮೂವರನ್ನು ಪೊಲೀಸರು ಮತ್ತೆ ವಶಕ್ಕೆ ಪಡೆದಿದ್ದಾರೆ:
- ಮೊಹಮ್ಮದ್ ಯೂನಿಸ್ (31 ವರ್ಷ)
- ಮೊಹಮ್ಮದ್ ಇಕ್ಬಾಲ್ @ ಇಕ್ಕು (29 ವರ್ಷ)
- ನಾಸಿರ್ @ ಮೊಹಮ್ಮದ್ ನಾಸಿರ್ (28 ವರ್ಷ)
ಜಾನುವಾರು ಕಳ್ಳರ ವಿರುದ್ದ ‘ಕೋಕಾ’ ಜಾರಿಯಾಗಿದ್ದು ಏಕೆ ?
ಪ್ರಕರಣದ ಪ್ರಾಥಮಿಕ ತನಿಖೆಯ ನಂತರ ಕಾರ್ಕಳ ವೃತ್ತ ನಿರೀಕ್ಷಕರು ಆರೋಪಿಗಳನ್ನು ಬಂಧಿಸಿದ್ದರು. ಆದರೆ, ಹೆಚ್ಚಿನ ತನಿಖೆ ನಡೆಸಿದಾಗ ಇವರು ಕೇವಲ ಸಣ್ಣ ಕಳ್ಳತನವನ್ನಷ್ಟೇ ಮಾಡದೆ, ಒಂದು ಸಂಘಟಿತ ತಂಡವಾಗಿ ಸರಣಿ ಅಪರಾಧಗಳಲ್ಲಿ ತೊಡಗಿರುವುದು ಬೆಳಕಿಗೆ ಬಂದಿದೆ.
Also Read : ಉಡುಪಿ ಜಿಲ್ಲೆಯ ಮೂವರು ಪೊಲೀಸ್ ಸಾಧಕರಿಗೆ ಮುಖ್ಯಮಂತ್ರಿಗಳ ಚಿನ್ನದ ಪದಕ
ಈ ಹಿನ್ನೆಲೆಯಲ್ಲಿ ಇವರ ವಿರುದ್ಧ ಕಠಿಣವಾದ ಕೋಕಾ ಕಾಯಿದೆಯನ್ನು ಅನ್ವಯಿಸಲು ಹಿರಿಯ ಅಧಿಕಾರಿಗಳು ನಿರ್ಧರಿಸಿದರು. ಇದರ ಪರಿಣಾಮವಾಗಿ, ಜಾಮೀನಿನ ಮೇಲೆ ಹೊರಗಿದ್ದ ಆರೋಪಿಗಳನ್ನು ಮತ್ತೆ ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಜಾನುವಾರು ಕಳ್ಳರ ವಿರುದ್ದ ಸರಕಾರ ಕೈಗೊಂಡಿರುವ ಕ್ರಮ ಇದೀಗ ಜಿಲ್ಲೆಯಾದ್ಯಂತ ಸಂಚಲನ ಮೂಡಿಸಿದೆ.
udupi karkala cattle theft accused arrested under koca act Kannada News



