ಬ್ರಹ್ಮಾವರ: ಫೋಟೋಗ್ರಾಫರ್ ಆತ್ಮಹತ್ಯೆ: ಶೂಟಿಂಗ್ ಮುಗಿಸಿ ಮನೆಗೆ ಬಂದ ಬೆನ್ನಲ್ಲೇ ದುರಂತ

ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕಿನ ಮೂಡಹಡು ಗ್ರಾಮದ ನಿವಾಸಿಯಾದ ಗಣೇಶ ಮೆಂಡನ್ ಅವರು ಪೋಟೋಗ್ರಾಫರ್ ವೃತ್ತಿ ಮಾಡಿಕೊಂಡಿದ್ದರು. ಎಪ್ರಿಲ್‌ 4ರಂದು ಕೆಲಸದ ನಿಮಿತ್ತ ಕೊಮೆ ಬೀಚ್‌ಗೆ ತೆರಳಿದ್ದರು.

ಕೋಟ: ವೃತ್ತಿಯಲ್ಲಿ ಫೋಟೋಗ್ರಾಫರ್ ಆಗಿದ್ದ ವ್ಯಕ್ತಿಯೊಬ್ಬರು ಮನೆಯಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಮನಕಲಕುವ ಘಟನೆ ಬ್ರಹ್ಮಾವರ ತಾಲ್ಲೂಕಿನ ಮೂಡಹಡು ಗ್ರಾಮದಲ್ಲಿ ನಡೆದಿದೆ. ಮೃತರನ್ನು ಗಣೇಶ ಮೆಂಡನ್ (38 ವರ್ಷ) ಎಂದು ಗುರುತಿಸಲಾಗಿದೆ.

ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕಿನ ಮೂಡಹಡು ಗ್ರಾಮದ ನಿವಾಸಿಯಾದ ಗಣೇಶ ಮೆಂಡನ್ ಅವರು ಪೋಟೋಗ್ರಾಫರ್ ವೃತ್ತಿ ಮಾಡಿಕೊಂಡಿದ್ದರು. ಎಪ್ರಿಲ್‌ 4ರಂದು ಕೆಲಸದ ನಿಮಿತ್ತ ಕೊಮೆ ಬೀಚ್‌ಗೆ ತೆರಳಿದ್ದರು. ಅಲ್ಲಿ ಫೋಟೋ ಶೂಟ್ ಮುಗಿಸಿಕೊಂಡು ಸುಮಾರು ರಾತ್ರಿ 11:00 ಗಂಟೆಗೆ ಮನೆಗೆ ವಾಪಸ್ಸಾಗಿದ್ದರು. ಮನೆಯಲ್ಲಿ ಎಲ್ಲರೊಂದಿಗೂ ಇದ್ದ ಅವರು, ಬೆಳಕು ಹರಿಯುವ ಮೊದಲೇ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

Also Read : ಉಡುಪಿ: ಫ್ರಿಡ್ಜ್ ರಿಪೇರಿ ಮಾಡಲು ಹೋದವನಿಗೆ 3.5 ಲಕ್ಷದ ‘ಕಳ್ಳತನ’ದ ಪಟ್ಟ : ಮುಂದೇನಾಯ್ತು?

ಗಣೇಶ ಅವರ ಪತ್ನಿ ಅಕ್ಷತಾ (34) ಅವರು ಏಪ್ರಿಲ್ 5ರ ಬೆಳಗಿನ ಜಾವ ಸುಮಾರು 3:00 ಗಂಟೆಗೆ ಎದ್ದು ನೋಡಿದಾಗ ಈ ಭೀಕರ ದೃಶ್ಯ ಬೆಳಕಿಗೆ ಬಂದಿದೆ. ಗಣೇಶ ಅವರು ಮನೆಯ ಹಾಲಿನ ಫ್ಯಾನ್ ಹುಕ್ಕಿಗೆ ಸೀರೆಯನ್ನು ಕುತ್ತಿಗೆಗೆ ಸುತ್ತಿ, ನಂತರ ನೈಲಾನ್ ಹಗ್ಗದಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ತಕ್ಷಣವೇ ಕುಟುಂಬಸ್ಥರು ಮತ್ತು ನೆರೆಹೊರೆಯವರು ಗಮನಿಸಿದರೂ ಗಣೇಶ ಅವರು ಅದಾಗಲೇ ಮೃತಪಟ್ಟಿದ್ದರು.

Also Read : ಸಾಸ್ತಾನ : ತೇಜಸ್​ ಅಪಹರಣ ಪ್ರಕರಣ : 7 ಮಂದಿ ಆರೋಪಿಗಳಿಗೆ ನ್ಯಾಯಾಂಗ ಬಂಧನ

ಈ ಘಟನೆಗೆ ಸಂಬಂಧಿಸಿದಂತೆ ಮೃತರ ಪತ್ನಿ ಅಕ್ಷತಾ ಅವರು ನೀಡಿದ ದೂರಿನ ಮೇರೆಗೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಆದರೆ ಆತ್ಮಹತ್ಯೆ ನಿಖರವಾದ ಕಾರಣ ತಿಳಿದು ಬಂದಿಲ್ಲ.

brahmavar photographer ganesh mendan suicide case moodahadu kota police

Ashwath Acharya | ಅಶ್ವಥ್ ಆಚಾರ್ಯ

ನ್ಯೂಸ್‌ ನೆಕ್ಸ್ಟ್‌ನ ಹಿರಿಯ ವರದಿಗಾರರಾಗಿರುವ ಅಶ್ವಥ್‌ ಆಚಾರ್ಯ ಅವರು ಪತ್ರಕರ್ತರಾಗಿ ಸುಮಾರು 20 ವರ್ಷಗಳ ಅನುಭವ ಹೊಂದಿದ್ದಾರೆ. ಕರ್ನಾಟಕದ ಪ್ರಖ್ಯಾತ ಸುದ್ದಿವಾಹಿನಿ, ಕನ್ನಡ ಪ್ರತಿಷ್ಠಿತ ದಿನ ಪತ್ರಿಕೆಗಳಲ್ಲಿ ಹಾಗೂ ಡಿಜಿಟಲ್ ಸುದ್ದಿ ಮಾಧ್ಯಮದಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. More »

Related Stories