ಕಿರುತೆರೆಯ ಅಗ್ನಿಸಾಕ್ಷಿ ಸಿನಿಮಾದ ಮೂಲಕವೇ ಜನಪ್ರಿಯತೆಯನ್ನು ಪಡೆದಿರುವ ವಿಜಯ್ ಸೂರ್ಯ ಇದೀಗ ವೀರಪುತ್ರನಾಗಿ ತೆರೆಗೆ ಬರೋದಕ್ಕೆ ಸಿದ್ದವಾಗಿದ್ದಾರೆ.

ಈಗಾಗಲೇ ವೀರ ಪುತ್ರ ಸಿನಿಮಾದ ಪ್ರೋಮೋ ಬಿಡುಗಡೆಯಾಗಿದ್ದು, ಹೊಸ ಲುಕ್ ನಲ್ಲಿ ವಿಜಯ್ ಸೂರ್ಯ ಕಾಣಿಸಿಕೊಂಡಿದ್ದಾರೆ.

ಸ್ಯಾಂಡಲ್ ವುಡ್ ನಲ್ಲಿ ಈ ಹಿಂದೆ ಸಪ್ಲಿಮೆಂಟರಿ ಚಿತ್ರವನ್ನು ನಿರ್ದೇಶಿಸಿದ್ದ ಡಾ.ದೇವರಾಜ್ ನಿರ್ದೇಶನದ ಎರಡನೇ ಸಿನಿಮಾ ಇದಾಗಿದೆ.

ಸ್ವತಃ ವೈದ್ಯರಾಗಿರುವ ನಿರ್ದೇಶಕ ಡಾ.ದೇವರಾಜ್ ಅವರು ಆಯುರ್ವೇದಿಕ್ ಮತ್ತು ಆಲೋಪಥಿಕ್ ಔಷಧಗಳ ನಡುವಿನ ಸಂಫರ್ಷದ ಸುತ್ತಲೂ ಚಿತ್ರಕಥೆಯನ್ನು ಸಿದ್ದಪಡಿಸಿದ್ದಾರೆ.

ವೀರಪುತ್ರ ಸಿನಿಮಾಕ್ಕೆ ರಾಘವ್ ಸುಭಾಷ್ ಸಂಗೀತ ನೀಡಿದ್ರೆ, ಉದಯಪುತ್ರ ಛಾಯಾಗ್ರಹಣದ ಹೊಣೆ ಹೊತ್ತಿದ್ದಾರೆ. ತನ್ವಿ ಪ್ರೊಡಕ್ಷನ್ ಸಂಸ್ಥೆಯ ಮೂಲಕ ನಿರ್ಮಾಣವಾಗುತ್ತಿರುವ ಮೂರನೇ ಚಿತ್ರ ಇದಾಗಿದೆ.

ನಾಯಕ ವಿಜಯ್ ಸೂರ್ಯ ಮೂರು ಶೇಡ್ ಗಳಲ್ಲಿ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಸಿನಿಮಾದಲ್ಲಿ ಒಟ್ಟು 5 ಹಾಡುಗಳಿದ್ದು, ಹಾಡುಗಳಿಗೆ ಸಂಗೀತ ನೀಡುವ ಕಾರ್ಯ ನಡೆಯುತ್ತಿದೆ. ಸದ್ಯದಲ್ಲಿಯೇ ಚಿತ್ರದ ಚಿತ್ರೀಕರಣ ಆರಂಭಿಸುವ ಯೋಚನೆಯಲ್ಲಿದೆ ಚಿತ್ರತಂಡ.