AI ಫೇಸ್ ಅನ್‌ಲಾಕ್ ಭದ್ರತೆಯ ರೆಡ್ಮಿ ನೋಟ್‌ ವಿಶೇಷ ಆವೃತ್ತಿ 15 SE 5G ಮಾರಾಟ ಪ್ರಾರಂಭ: ಬೆಲೆ, ಲಭ್ಯತೆ ಹೀಗಿದೆ

Redmi Note 15 SE 5G: ಕಳೆದ ವಾರ ಭಾರತದಲ್ಲಿ ವಿಶೇಷ ಆವೃತ್ತಿಯಾಗಿ ಬಿಡುಗಡೆಯಾಗಿದ್ದ ರೆಡ್ಮಿ ನೋಟ್‌ 15 SE 5G ಮಂಗಳವಾರದಿಂದ ತನ್ನ ಮಾರಾಟ ಆರಂಭಿಸಿದೆ. ಈ ಫೋನ್‌ನ ವೈಶಿಷ್ಟ್ಯ, ಕ್ಯಾಮೆರಾ ಹಾಗೂ ಬೆಲೆ ಏನು? ಇಲ್ಲಿದೆ ಓದಿ.

Redmi Note 15 SE 5G: ಭಾರತದ ಸ್ಮಾರ್ಟ್‌ಫೋನ್‌ ಮಾರುಕಟ್ಟೆಯಲ್ಲಿ ರೆಡ್ಮಿಯ ಮತ್ತೊಂದು ಮಿಡ್‌ರೇಂಜ್‌ ಫೋನ್ ಖರೀದಿಗೆ ಲಭ್ಯವಿದೆ. ಕಳೆದ ವಾರ ಭಾರತದಲ್ಲಿ ವಿಶೇಷ ಆವೃತ್ತಿಯಾಗಿ ಬಿಡುಗಡೆಯಾಗಿದ್ದ ರೆಡ್ಮಿ ನೋಟ್‌ 15 SE 5G ಮಂಗಳವಾರದಿಂದ ತನ್ನ ಮಾರಾಟ ಆರಂಭಿಸಿದೆ ಎಂದು ಕಂಪನಿ ಅಧಿಕೃತವಾಗಿ ಘೋಷಿಸಿದೆ. ಇದು ಮೂರು ಶೇಖರಣಾ ರೂಪಾಂತರ ಹಾಗೂ ಮೂರು ಬಣ್ಣಗಳ ಆಯ್ಕೆಯಲ್ಲಿ ಲಭ್ಯವಿರಲಿದೆ. ಇದೊಂದು ಮಿಡ್‌ ರೇಂಜ್‌ನ ಫೋನ್‌ ಆಗಿದ್ದು ಹೊಸ ಮೊಬೈಲ್‌ ಹುಡುಕಾಟದಲ್ಲಿರುವವರಿಗೆ ಉತ್ತಮ ಆಯ್ಕೆಗಳಲ್ಲೊಂದಾಗಿದೆ. ಈ ಫೋನ್‌ನ ವೈಶಿಷ್ಟ್ಯ, ಕ್ಯಾಮೆರಾ ಹಾಗೂ ಬೆಲೆ ಏನು? ಇಲ್ಲಿದೆ ಓದಿ.

ರೆಡ್ಮಿ ನೋಟ್‌ 15 SE 5G ವೈಶಿಷ್ಟ್ಯ

ಈ ಫೋನ್‌ ರೆಡ್ಮಿ 15 5Gಯ ವಿಶೇಷ ಆವೃತ್ತಿಯಾಗಿದೆ. ರೆಡ್ಮಿ ನೋಟ್‌ 15 SE 5G ಡ್ಯುಯಲ್‌ ಸಿಮ್‌ ಅಳವಡಿಸಬಹುದಾದ ಫೋನ್‌ ಆಗಿದ್ದು ಹೈಪರ್‌ ಓಎಸ್‌ 2 ನೊಂದಿಗೆ ಬರುತ್ತದೆ. ಇದು ಆಂಡ್ರಾಯ್ಡ್‌ 15 ನಿಂದ ಕಾರ್ಯನಿರ್ವಹಿಸುತ್ತದೆ. 6.77 ಇಂಚಿನ ಕರ್ವ್ಡ್‌ AMOLED ಡಿಸ್ಪ್ಲೇಯನ್ನು ಹೊಂದಿದೆ. 120Hz ವರೆಗೆ ರಿಫ್ರೆಶ್ ದರ, 240Hz ಟಚ್ ಸ್ಯಾಂಪ್ಲಿಂಗ್ ದರ, 3,200 nits ವರೆಗೆ ಗರಿಷ್ಠ ಹೊಳಪು ಮತ್ತು DCI-P3 ಕಲರ್‌ ಗ್ಯಾಮಟ್ ನೀಡುತ್ತದೆ. ಇದು ಧೂಳು ಮತ್ತು ನೀರಿನ ನಿರೋಧಕವಾಗಿದ್ದು IP65 + IP66 ರೇಟಿಂಗ್ ಹೊಂದಿದೆ. ಕ್ವಾಲ್ಕಾಮ್‌ನ 4nm ಆಕ್ಟಾ-ಕೋರ್ ಸ್ನಾಪ್‌ಡ್ರಾಗನ್ 6 Gen 3 ಚಿಪ್‌ಸೆಟ್‌ನಿಂದ ಚಲಿಸುತ್ತದೆ. ಈ ಹ್ಯಾಂಡ್‌ಸೆಟ್ ಅಡ್ರಿನೊ GPU, 8GB ವರೆಗೆ LPDDR4x RAM ಮತ್ತು 256GB ವರೆಗೆ UFS 2.2 ಆಂತರಿಕ ಸಂಗ್ರಹಣೆಯನ್ನು ಹೊಂದಿದೆ, ಇದನ್ನು ಮೈಕ್ರೋ SD ಕಾರ್ಡ್ ಮೂಲಕ 1TB ವರೆಗೆ ವಿಸ್ತರಿಸಬಹುದಾಗಿದೆ.

ಇನ್ನು ಕ್ಯಾಮೆರಾದ ವಿಷಯದಲ್ಲಿ ಇದು ಹಿಂಬದಿಯಲ್ಲಿ ಡ್ಯುಯಲ್‌ ಕ್ಯಾಮೆರಾ ಸೆಟ್‌ಅಪ್‌ ಹೊಂದಿದೆ. ಕ್ಯಾಮೆರಾ 50 MP ಹಾಗೂ 2MP ಡೆಪ್ತ್‌ ಸೆನ್ಸಾರ್‌ ಹೊಂದಿದೆ. ಸೆಲ್ಫಿಗಾಗಿ ಮುಂಭಾಗದಲ್ಲಿ 20 MP ಕ್ಯಾಮೆರಾ ಅಳವಡಿಸಲಾಗಿದೆ. ರೆಡ್ಮಿ ನೋಟ್‌ 15 SE 5G ಫೋನ್‌ 5,800mAh ಬ್ಯಾಟರಿಯನ್ನು ಹೊಂದಿದ್ದು 45W ವೈರ್ಡ್ ಫಾಸ್ಟ್ ಚಾರ್ಜಿಂಗ್ ಬೆಂಬಲಿಸುತ್ತದೆ. ಭದ್ರತೆಗಾಗಿ ಡಿಸ್ಪ್ಲೇ ಅಡಿಯಲ್ಲಿ ಫಿಂಗರ್‌ ಪ್ರಿಂಟ್‌ ಮತ್ತು AI ಫೇಸ್ ಅನ್‌ಲಾಕ್ ಅನ್ನು ಸಹ ಹೊಂದಿದೆ.

ಇದನ್ನೂ ಓದಿ: ಸ್ಯಾಮ್‌ಸಂಗ್ ಪ್ರಿಯರಿಗೆ ಬಂಪರ್ ಆಫರ್: ಗ್ಯಾಲಕ್ಸಿ S26 ಅಲ್ಟ್ರಾ ಭರ್ಜರಿ ಡಿಸ್ಕೌಂಟ್‌

ಬೆಲೆ ಮತ್ತು ಲಭ್ಯತೆ

ರೆಡ್ಮಿ ನೋಟ್‌ 15 SE 5G ಫೋನ್‌ ಭಾರತದಲ್ಲಿ ಮೂರು ರೂಪಾಂತರಗಳಲ್ಲಿ ಲಭ್ಯವಿರುತ್ತದೆ. 6GB RAM + 128GB ಸಂಗ್ರಹಣೆಯ ಫೋನ್‌ ಬೆಲೆ 24,999 ರೂ. ಆಗಿದೆ. ಇದರ 8GB RAM+128GB ಶೇಖರಣೆ ಮತ್ತು 8GB RAM+256GB ಶೇಖರಣಾ ರೂಪಾಂತರಗಳ ಬೆಲೆ ಕ್ರಮವಾಗಿ 25,999 ರೂ. ಮತ್ತು 27,999 ರೂ. ಆಗಿದೆ. ಹೆಚ್ಚುವರಿಯಾಗಿ, ಕಂಪನಿಯು ICICI ಬ್ಯಾಂಕ್ ಕಾರ್ಡ್ ಪಾವತಿಗಳ ಮೇಲೆ ರೂ. 2,000 ರ ತ್ವರಿತ ರಿಯಾಯಿತಿಯನ್ನು ನೀಡುತ್ತಿದೆ. ಗ್ರಾಹಕರು ಆರು ತಿಂಗಳವರೆಗೆ EMI ಆಯ್ಕೆಗಳನ್ನು ಸಹ ಆಯ್ಕೆ ಮಾಡಿಕೊಳ್ಳಬಹುದಾಗಿದೆ. ರೆಡ್ಮಿ ಈ ಫೋನ್‌ ಅನ್ನು ಭಾರತದಲ್ಲಿ ಫ್ಲಿಪ್‌ಕಾರ್ಟ್‌ ಮತ್ತು ಶಿಯೋಮಿ ಆನ್‌ಲೈನ್‌ ಸ್ಟೋರ್‌ ಖರೀದಿಸಲು ಅವಕಾಶ ನೀಡಿದೆ. ಇದು ಗ್ರಾಹಕರಿಗೆ ಕಾರ್ಬನ್ ಬ್ಲಾಕ್, ಕ್ರಿಮ್ಸನ್ ರಿಸರ್ವ್ (ರೆಡ್) ಮತ್ತು ಫ್ರಾಸ್ಟೆಡ್ ವೈಟ್ ಬಣ್ಣಗಳ ಆಯ್ಕೆ ನೀಡುತ್ತದೆ.

Archana V. Bhat |ಅರ್ಚನಾ ವಿ. ಭಟ್

ಅರ್ಚನಾ ವಿ. ಭಟ್‌ ಮೂಲತಃ ಉತ್ತರ ಕನ್ನಡ ಜಿಲ್ಲೆಯ ಕುಮಟಾ ಮೂಲದವರು. ಕಳೆದ ಹಲವು ವರ್ಷಗಳಿಂದಲೂ ಪತ್ರಕರ್ತರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ನ್ಯೂಸ್‌ನೆಕ್ಸ್ಟ್‌ ಕನ್ನಡ ಸುದ್ದಿ ಸಂಸ್ಥೆಯಲ್ಲಿ ನಾಲ್ಕು ವರ್ಷಗಳಿಂದ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ವ್ಯವಹಾರ, ಆಟೋಮೊಬೈಲ್‌, ಟೆಕ್ನಾಲಜಿ, ಕ್ರೀಡೆ ಸುದ್ದಿ ವಿಭಾಗದಲ್ಲಿ ಕಂಟೆಂಟ್‌ ಕ್ರಿಯೆಟರ್‌ ಆಗಿದ್ದಾರೆ.. ನೈಜ, ಸತ್ಯ ಸುದ್ದಿಯನ್ನು ಪ್ರಕಟಿಸುತ್ತಿದ್ದಾರೆ.

Related Stories