ಶ್ರಾವಣ ಮಾಸದಲ್ಲಿ ಚಿನ್ನ ಖರೀದಿಸಬಹುದಾ? ಬಂಗಾರ ಕೊಳ್ಳುವ ಮೊದಲು ಇದನ್ನು ತಿಳಿದುಕೊಳ್ಳಿ

ಶ್ರಾವಣ ಮಾಸವೆಂದರೆ ಧಾರ್ಮಿಕ ಆಚರಣೆಗಳನ್ನು ನಡೆಸುವ ಮಾಸವಾಗಿದೆ. ಇಂತಹ ಪವಿತ್ರ ಮಾಸದಲ್ಲಿ ಕೆಲವರು ಚಿನ್ನ ಖರೀದಿಸಿದರೆ ಇನ್ನು ಕೆಲವರು ಈ ಸಮಯದಲ್ಲಿ ಚಿನ್ನ ಖರೀದಿಸಬಾರದು ಎಂದು ಹೇಳುತ್ತಾರೆ ನಿಜನಾ?

ಶ್ರಾವಣ ಮಾಸವನ್ನು ಹಿಂದೂ ಮಾಸಗಳಲ್ಲೇ ಅತ್ಯಂತ ಪವಿತ್ರ ಮಾಸವೆಂದು ಪರಿಗಣಿಸಲಾಗಿದೆ. ಈ ಮಾಸವನ್ನು ಶಿವನ ಆರಾಧನೆ, ಪೂಜೆಗೆ ಮೀಸಲಿಡಲಾಗಿದೆ. ಈ ಮಾಸದಲ್ಲೇ ಶಿವ ಮತ್ತು ಪಾರ್ವತಿಯನ್ನು ಪೂಜಿಸುವ ಸೋಲಹ ಸೋಮಾವಾರ ಅಥವಾ ಸೋಲಾ ಸೋಮವಾರ ವೃತವನ್ನು ಆಚರಿಸುತ್ತಾರೆ. ಶ್ರಾವಣ ಮಾಸದಲ್ಲಿ ಐಶ್ವರ್ಯ ನೀಡುವ ಲಕ್ಷ್ಮಿ ದೇವಿಯನ್ನು ಪೂಜಿಸಲಾಗುತ್ತದೆ. ಶ್ರಾವಣ ಮಾಸವೆಂದರೆ ಧಾರ್ಮಿಕ ಆಚರಣೆಗಳನ್ನು ನಡೆಸುವ ಮಾಸವಾಗಿದೆ. ಇಂತಹ ಪವಿತ್ರ ಮಾಸದಲ್ಲಿ ಕೆಲವರು ಚಿನ್ನ ಖರೀದಿಸಿದರೆ ಇನ್ನು ಕೆಲವರು ಈ ಸಮಯದಲ್ಲಿ ಚಿನ್ನ ಖರೀದಿಸಬಾರದು ಎಂದು ಹೇಳುತ್ತಾರೆ. ಆದರೆ ಶಾಸ್ತ್ರದಲ್ಲಿ ಹೇಳಿರುವುದೇನು? ಶ್ರಾವಣದಲ್ಲಿ ಚಿನ್ನವನ್ನು ಯಾವಾಗ ಖರೀದಿಸಬಹುದು? ಇಲ್ಲಿದೆ ಮಾಹಿತಿ.

ಶ್ರಾವಣದಲ್ಲಿ ಚಿನ್ನ ಖರೀದಿಸಬಾರದೇ?

ಜ್ಯೋತಿಷ್ಯ ಶಾಸ್ತ್ರ ಮತ್ತು ಧಾರ್ಮಿಕ ನಂಬಿಕೆಗಳ ಪ್ರಕಾರ ಶ್ರಾವಣ ಮಾಸದಲ್ಲಿ ಚಿನ್ನ ಖರೀದಿಸುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿಲ್ಲ. ಚಿನ್ನ ಖರೀದಿಸುವುದರಿಂದ ಅಶುಭವುಂಟಾಗುತ್ತದೆ ಎಂದೂ ಅದು ಹೇಳಿಲ್ಲ. ಆದರೆ ಕೆಲವು ಜಾನಪದ ನಂಬಿಕೆಗಳ ಪ್ರಕಾರ ಶ್ರಾವಣದಲ್ಲಿ ಚಿನ್ನ ಖರೀದಿಸಬಾರದು ಎಂದು ಹೇಳಲಾಗಿದೆ. ಆದರೆ ಇನ್ನೊಂದು ನಂಬಿಕಗಳ ಪ್ರಕಾರ ಶ್ರಾವಣ ಮಾಸದಲ್ಲಿ ಚಿನ್ನ ಖರೀದಿಸಿದರೆ ಶುಭವನ್ನು ತರುತ್ತದೆ ಎಂದೂ ಹೇಳಲಾಗಿದೆ.

ಶ್ರಾವಣ ಮಾಸದ ಮಹತ್ವ

ಹಿಂದೂಗಳಿಗೆ ಶ್ರಾವಣ ಮಾಸ ಅತ್ಯಂತ ಪವಿತ್ರವಾಗಿದೆ. ಈ ಸಮಯದಲ್ಲಿ ಶಿವನನ್ನು ಭಕ್ತಿ, ತಪಸ್ಸು, ಧ್ಯಾನ ಮತ್ತು ಪೂಜೆಯಿಂದ ಒಲಿಸಿಕೊಳ್ಳಲಾಗುತ್ತದೆ. ಈ ಸಮಯದಲ್ಲಿ ಜನರು ಆಧ್ಯಾತ್ಮಿಕ ಶಾಂತಿಯತ್ತ ಹೆಚ್ಚು ಗಮನಹರಿಸುತ್ತಾರೆ. ಶ್ರಾವಣ ಮಾಸದಲ್ಲಿ ಮಾಡುವ ಪೂಜೆಗಳಿಂದ ಪುಣ್ಯ ಲಭಿಸುತ್ತದೆ ಎಂಬ ನಂಬಿಕೆಯಿದೆ.

ಇದನ್ನೂ ಓದಿ: ದೇವರ ಮನೆಯಲ್ಲಿ ಎಷ್ಟು ಶಂಖ ಇಟ್ಟುಕೊಳ್ಳಬೇಕು, ಒಂದು ಅಥವಾ ಎರಡು? ಸಂಪತ್ತು ವೃದ್ಧಿಗೆ ಶಂಖವನ್ನು ಈ ದಿಕ್ಕಿನಲ್ಲಿಡಿ

ಶ್ರಾವಣದಲ್ಲಿ ಚಿನ್ನ ಖರೀದಿಗೆ ಇರುವ ನಿಯಮವೇನು?

ಶ್ರಾವಣ ಮಾಸದಲ್ಲಿ ಚಿನ್ನವನ್ನು ಶುಭ ಕಾರ್ಯಗಳಿಗೆ ಮತ್ತು ಹೂಡಿಕೆಗಾಗಿ ಖರೀದಿಸಲಾಗುತ್ತದೆ. ಆದರೆ ಹಾಗೆ ಖರೀದಿಸುವು ಮೊದಲು ಶುಭ ಸಮಯವನ್ನು ನೋಡಲಾಗುತ್ತದೆ. ಪಂಚಾಂಗ ಮುಂತಾದವುಗಳಲ್ಲಿ ತಿಳಿಸಿದ ದಿನದಂದು ಚಿನ್ನ ಖರೀದಿಸಿದರೆ ಶುಭ ಫಲಗಳು ಸಿಗುತ್ತವೆ ಎಂಬ ನಂಬಿಕೆಯಿರುವುದರಿಂದಲೇ ಆ ದಿನಗಳನ್ನು ಖರೀದಿಗೆ ಆಯ್ದುಕೊಳ್ಳಲಾಗುತ್ತದೆ.

Archana V. Bhat |ಅರ್ಚನಾ ವಿ. ಭಟ್

ಅರ್ಚನಾ ವಿ. ಭಟ್‌ ಮೂಲತಃ ಉತ್ತರ ಕನ್ನಡ ಜಿಲ್ಲೆಯ ಕುಮಟಾ ಮೂಲದವರು. ಕಳೆದ ಹಲವು ವರ್ಷಗಳಿಂದಲೂ ಪತ್ರಕರ್ತರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ನ್ಯೂಸ್‌ನೆಕ್ಸ್ಟ್‌ ಕನ್ನಡ ಸುದ್ದಿ ಸಂಸ್ಥೆಯಲ್ಲಿ ನಾಲ್ಕು ವರ್ಷಗಳಿಂದ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ವ್ಯವಹಾರ, ಆಟೋಮೊಬೈಲ್‌, ಟೆಕ್ನಾಲಜಿ, ಕ್ರೀಡೆ ಸುದ್ದಿ ವಿಭಾಗದಲ್ಲಿ ಕಂಟೆಂಟ್‌ ಕ್ರಿಯೆಟರ್‌ ಆಗಿದ್ದಾರೆ.. ನೈಜ, ಸತ್ಯ ಸುದ್ದಿಯನ್ನು ಪ್ರಕಟಿಸುತ್ತಿದ್ದಾರೆ.