ವಯಸ್ಸಿನ ವಿಚಾರದಲ್ಲಿ ಸುಳ್ಳು ಹೇಳಿದ್ರಾ ವೈಭವ್ ಸೂರ್ಯವಂಶಿ : ಅನುಮಾನ ಹುಟ್ಟಿಸಿದ ಯುವ ಬ್ಯಾಟರ್ ಹಳೆಯ ವಿಡಿಯೋ
ಈ ಕ್ರಿಕೆಟ್ ತಾರೆಯ ಹಳೆಯ ವಿಡಿಯೋವೊಂದು ವೈರಲ್ ಆಗಿದ್ದು, ವೈಭವ್ ಸೂರ್ಯವಂಶಿ ಅವರ ನಿಜವಾದ ವಯಸ್ಸೆಷ್ಟು ಎಂಬ ಅನುಮಾನ ಮೂಡಿಸಿದೆ.
ಭಾರತೀಯ ಕ್ರಿಕೆಟ್ ರಂಗದ ಭರವಸೆಯ ಆಟಗಾರ, ಐಪಿಎಲ್ ಹಾಗೂ ಅಂಡರ್ 19 ಪಂದ್ಯಗಳಲ್ಲಿ ದಾಖಲೆಯ ಮೇಲೆ ದಾಖಲೆ ಬರೆಯುತ್ತಿರುವ ಕ್ರಿಕೆಟಿಗ ವೈಭವ್ ಸೂರ್ಯವಂಶಿ (Vaibhav Suryavanshi age) ಇದೀಗ ಹೊಸ ವಿವಾದವೊಂದನ್ನು ಮೈಮೇಲೆ ಎಳೆದುಕೊಂಡಿದ್ದಾರೆ. ಈ ಕ್ರಿಕೆಟ್ ತಾರೆಯ ಹಳೆಯ ವಿಡಿಯೋವೊಂದು ವೈರಲ್ ಆಗಿದ್ದು, ವೈಭವ್ ಸೂರ್ಯವಂಶಿ ಅವರ ನಿಜವಾದ ವಯಸ್ಸೆಷ್ಟು ಎಂಬ ಅನುಮಾನ ಮೂಡಿಸಿದೆ.
ಇಂಟರ್ನೆಟ್ನಲ್ಲಿ ಸಖತ್ ವೈರಲ್ ಆಗಿರುವ ಈ ವಿಡಿಯೋ 2020ನೇ ಇಸ್ವಿಯದ್ದು. ಈ ವಿಡಿಯೋದಲ್ಲಿ ಕ್ರಿಕೆಟಿಗ ವೈಭವ್ ಸೂರ್ಯವಂಶಿ ತಮ್ಮ ವಯಸ್ಸು 12 ಎಂದು ಹೇಳಿಕೊಂಡಿದ್ದಾರೆ. ಈ ಲೆಕ್ಕಾಚಾರದ ಪ್ರಕಾರ , ಪ್ರಸ್ತುತ ವೈಭವ್ ಸೂರ್ಯವಂಶಿ ಅವರ ವಯಸ್ಸು 18 ತುಂಬಿರಬೇಕು. ಆದರೆ ಅಧಿಕೃತ ದಾಖಲೆಗಳಲ್ಲಿ ವೈಭವ್ ವಯಸ್ಸು ಕಡಿಮೆ ಇರುವುದು ಅನುಮಾನಕ್ಕೆ ಕಾರಣವಾಗಿದೆ.
ಇದನ್ನೂ ಓದಿ: RCB ಹಣೆಬರಹ ಬದಲಿಸಿದ ಬಿರ್ಲಾ ಎಂಟ್ರಿ : IPL 2027ಕ್ಕೆ ಆರ್ಸಿಬಿಗೆ ಹೊಸ ಹೆಸರು ?
ಕೇವಲ ಇದು ಮಾತ್ರವಲ್ಲ, ವೈಭವ್ ಸೂರ್ಯವಂಶಿ ವಯಸ್ಸಿಗೆ ಸಂಬಂಧಿಸಿದ ಅನೇಕ ಹಳೆಯ ವಿಡಿಯೋಗಳು ವೈರಲ್ ಆಗುತ್ತಲೇ ಇವೆ. ಒಂದೊಂದು ವಿಡಿಯೋಗಳಲ್ಲಿ ವೈಭವ್ ವಯಸ್ಸಿನ ಕುರಿತಂತೆ ಒಂದೊಂದು ರೀತಿಯ ಮಾಹಿತಿ ಇದೆ. ಹೀಗಾಗಿ ಯಾವುದನ್ನು ನಂಬುವುದು ಯಾವುದನ್ನು ಬಿಡುವುದು ಎಂಬುದೇ ಸದ್ಯದ ಗೊಂದಲವಾಗಿ ಮಾರ್ಪಟ್ಟಿದೆ.



