ಕಾರ್ಕಳ: ದೇವಸ್ಥಾನಕ್ಕೆ ನುಗ್ಗಿ ಹುಂಡಿ ಕಳವು – ಸಿಸಿಟಿವಿಯಲ್ಲಿ ಸೆರೆಯಾಯ್ತಾ ಕಳ್ಳನ ಕೈಚಳಕ ?

ಏಪ್ರಿಲ್ 26 ರಂದು ನಸುಕಿನ ಜಾವ ಸುಮಾರು 02:00 ಗಂಟೆಗೆ ಈ ಕೃತ್ಯ ನಡೆದಿದೆ. ದೇವಸ್ಥಾನದ ಆವರಣದಲ್ಲಿರುವ ಭರ್ಭರೇಶ್ವರ, ಕೊಡಮಣಿತ್ತಾಯ ಹಾಗೂ ನಾಗದೇವರ ಕಾಣಿಕೆ ಹುಂಡಿಗಳನ್ನು ಗುರಿಯಾಗಿಸಿಕೊಂಡಿದ್ದ ಕಳ್ಳ, ಯಾವುದೋ ಆಯುಧದಿಂದ ಹುಂಡಿಯ ಬೀಗವನ್ನು ಮುರಿದಿದ್ದಾನೆ.

ಅಜೆಕಾರು : ಕಾರ್ಕಳ ತಾಲೂಕಿನ ಕಡ್ತಲ ಗ್ರಾಮದ ಭರ್ಭರೇಶ್ವರ ದುರ್ಗಾ ಪರಮೇಶ್ವರಿ ದೇವಸ್ಥಾನದಲ್ಲಿ ತಡರಾತ್ರಿ ಕಳ್ಳತನ ನಡೆದಿದ್ದು, ಭಕ್ತರಲ್ಲಿ ಆತಂಕ ಮೂಡಿಸಿದೆ. ದೇವರ ದರ್ಶನಕ್ಕೆ ಬರುವ ಭಕ್ತರು ಅರ್ಪಿಸಿದ ಕಾಣಿಕೆ ಹಣವನ್ನು ದುಷ್ಕರ್ಮಿಯೊಬ್ಬ ಲೂಟಿ ಮಾಡಿದ್ದಾನೆ.

ಏಪ್ರಿಲ್ 26 ರಂದು ನಸುಕಿನ ಜಾವ ಸುಮಾರು 02:00 ಗಂಟೆಗೆ ಈ ಕೃತ್ಯ ನಡೆದಿದೆ. ದೇವಸ್ಥಾನದ ಆವರಣದಲ್ಲಿರುವ ಭರ್ಭರೇಶ್ವರ, ಕೊಡಮಣಿತ್ತಾಯ ಹಾಗೂ ನಾಗದೇವರ ಕಾಣಿಕೆ ಹುಂಡಿಗಳನ್ನು ಗುರಿಯಾಗಿಸಿಕೊಂಡಿದ್ದ ಕಳ್ಳ, ಯಾವುದೋ ಆಯುಧದಿಂದ ಹುಂಡಿಯ ಬೀಗವನ್ನು ಮುರಿದಿದ್ದಾನೆ. ಹುಂಡಿಯಲ್ಲಿದ್ದ ಸುಮಾರು 1,000 ರೂಪಾಯಿ ನಗದನ್ನು ದೋಚಿದ್ದಾನೆ.

Also Read : Udupi: ಉಡುಪಿಯ ಕುಖ್ಯಾತ ‘ಗರುಡ ಗ್ಯಾಂಗ್’ ಸದಸ್ಯನಿಗೆ ಗೂಂಡಾ ಕಾಯ್ದೆ

ಕಾವಲುಗಾರರನ್ನು ಕಂಡು ಪರಾರಿಯಾದ ಕಳ್ಳ

ದೇವಸ್ಥಾನದಲ್ಲಿ ರಾತ್ರಿ ಕಾವಲಿಗೆ ಇದ್ದ ಉಮೇಶ ಹೆಗ್ಡೆ ಮತ್ತು ಜನಾರ್ಧನ ಆಚಾರ್ಯ ಅವರಿಗೆ ಬೀಗ ಮುರಿಯುವ ಶಬ್ದ ಕೇಳಿಸಿದೆ. ತಕ್ಷಣ ಎಚ್ಚೆತ್ತ ಅವರು ಸ್ಥಳಕ್ಕೆ ಧಾವಿಸಿದಾಗ, ಕಳ್ಳನು ಅಲ್ಲಿಂದ ಓಡತೊಡಗಿದ್ದಾನೆ. ದೇವಸ್ಥಾನದ ಹೊರಗೆ ನಿಲ್ಲಿಸಿದ್ದ ಬೈಕ್ ಏರಿ ಕತ್ತಲಲ್ಲಿ ಕಳ್ಳ ಪರಾರಿಯಾಗಿದ್ದಾನೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

Also Read : Manipal: ಮಣಿಪಾಲದ ರಸ್ತೆಯಲ್ಲೇ ಯುವಜೋಡಿಯ ಅಸಭ್ಯ ವರ್ತನೆ; ಸಾರ್ವಜನಿಕರ ತರಾಟೆ

ಘಟನೆಗೆ ಸಂಬಂಧಿಸಿದಂತೆ ಕಡ್ತಲ ಗ್ರಾಮದ ನಿವಾಸಿ ಶರಣ್‌ ಹೆಗ್ಡೆ ಅವರು ನೀಡಿದ ದೂರಿನ ಮೇರೆಗೆ ಅಜೆಕಾರು ಪೊಲೀಸರು ತನಿಖೆ ಕೈಗೆತ್ತಿಕೊಂಡಿದ್ದಾರೆ. ಧಾರ್ಮಿಕ ಕೇಂದ್ರಗಳಲ್ಲಿ ಇತ್ತೀಚೆಗೆ ಕಳ್ಳತನದ ಪ್ರಕರಣಗಳು ಹೆಚ್ಚುತ್ತಿದ್ದು, ಸಾರ್ವಜನಿಕರು ಮತ್ತು ದೇವಸ್ಥಾನದ ಆಡಳಿತ ಮಂಡಳಿಗಳು ಹೆಚ್ಚಿನ ಎಚ್ಚರಿಕೆ ವಹಿಸುವಂತೆ ಪೊಲೀಸರು ಸೂಚಿಸಿದ್ದಾರೆ.

karkalla temple theft cctv viral

Related Stories