10 ಸಾವಿರ ರೂಪಾಯಿ ಒಳಗೆ ಖರೀದಿಗೆ ಯಾವ ಸ್ಮಾರ್ಟ್‌ಪೋನ್‌ ಬೆಸ್ಟ್‌ : Poco, Samsung, Moto ಬಿಗ್‌ ಫೈಟ್‌

ಅತ್ಯಂತ ಕಡಿಮೆ ಬೆಲೆಗೆ ಉತ್ತಮ ಮೊಬೈಲ್‌ ಖರೀದಿಗೆ ಕಾಯುತ್ತಿದ್ರೆ, ನಾವು ಕೊಡುವ ಆಯ್ಕೆ ನಿಮಗೆ ಬೆಸ್ಟ್‌ ಅನಿಸುತ್ತದೆ. ಇತ್ತೀಚೆಗಷ್ಟೇ ಬಿಡುಗಡೆಯಾದ Poco C81X, ಮೊಟೊರೊಲಾದ Moto G06 Power ಮತ್ತು ಸ್ಯಾಮ್‌ಸಂಗ್‌ನ Samsung Galaxy M07 ನಡುವೆ ಭಾರಿ ಪೈಪೋಟಿ ಏರ್ಪಟ್ಟಿದೆ.

ನೀವೇನಾದ್ರೂ ಅತ್ಯಂತ ಕಡಿಮೆ ಬೆಲೆಗೆ ಉತ್ತಮ ಮೊಬೈಲ್‌ ಖರೀದಿಗೆ ಕಾಯುತ್ತಿದ್ರೆ, ನಾವು ಕೊಡುವ ಆಯ್ಕೆ ನಿಮಗೆ ಬೆಸ್ಟ್‌ ಅನಿಸುತ್ತದೆ. ಇತ್ತೀಚೆಗಷ್ಟೇ ಬಿಡುಗಡೆಯಾದ Poco C81X, ಮೊಟೊರೊಲಾದ Moto G06 Power ಮತ್ತು ಸ್ಯಾಮ್‌ಸಂಗ್‌ನ Samsung Galaxy M07 ನಡುವೆ ಭಾರಿ ಪೈಪೋಟಿ ಏರ್ಪಟ್ಟಿದೆ.

ಸಾಮಾನ್ಯ ಬಳಕೆದಾರರಿಗೆ ಬೇಕಾದ ದೊಡ್ಡ ಡಿಸ್‌ಪ್ಲೇ, ದೀರ್ಘಕಾಲ ಬಾಳಿಕೆ ಬರುವ ಬ್ಯಾಟರಿ ಮತ್ತು ಸಾಧಾರಣ ಗೇಮಿಂಗ್‌ಗೆ ಪೂರಕವಾದ ಫೀಚರ್‌ಗಳು ಈ ಫೋನ್‌ಗಳಲ್ಲಿವೆ. ಈ ಮೂರರಲ್ಲಿ ನಿಮ್ಮ ಹಣಕ್ಕೆ ತಕ್ಕ ಮೌಲ್ಯ ನೀಡುವ ಫೋನ್ ಯಾವುದು? ಇಲ್ಲಿದೆ ಕಂಪ್ಲೀಟ್ ಡಿಟೇಲ್ಸ್.

ಬೆಲೆ ಸಮರ: ಸ್ಯಾಮ್‌ಸಂಗ್ ಅಗ್ಗ!

  • ಬೆಲೆಯ ವಿಷಯದಲ್ಲಿ ಸ್ಯಾಮ್‌ಸಂಗ್ ಸ್ವಲ್ಪ ಮುನ್ನಡೆಯಲ್ಲಿದೆ.
  • Samsung Galaxy M07: ₹9,499 ರಿಂದ ಆರಂಭ.
  • Moto G06 Power: ₹9,999 (4GB RAM ವೇರಿಯಂಟ್).
  • Poco C81X: ₹9,999 ರಿಂದ ಲಭ್ಯ.

ಪರ್ಫಾರ್ಮೆನ್ಸ್‌ನಲ್ಲಿ ಯಾರು ಕಿಂಗ್?

ಒಳ್ಳೆಯ ಪ್ರೊಸೆಸರ್ ಬೇಕು ಎನ್ನುವವರಿಗೆ ಸ್ಯಾಮ್‌ಸಂಗ್ ಸೂಕ್ತ ಆಯ್ಕೆ. ಇದರಲ್ಲಿ MediaTek Helio G99 ಚಿಪ್‌ಸೆಟ್ ಬಳಸಲಾಗಿದ್ದು, ಮಲ್ಟಿಟಾಸ್ಕಿಂಗ್‌ಗೆ ಇದು ಪೂರಕವಾಗಿದೆ. ಮೋಟೋ ಫೋನ್‌ನಲ್ಲಿ Helio G81 Extreme ಇದ್ದರೆ, ಪೊಕೊ ಫೋನ್ UNISOC T7250 ಪ್ರೊಸೆಸರ್ ಹೊಂದಿದೆ.

Also Read : DSLR ಕ್ಯಾಮೆರಾಗಳಿಗೂ ನಡುಕ ಹುಟ್ಟಿಸಿದ Oppo Find X9 Ultra

ಡಿಸ್‌ಪ್ಲೇ ಮತ್ತು ರಿಫ್ರೆಶ್ ರೇಟ್

  • ವಿಡಿಯೋ ನೋಡಲು ಅಥವಾ ಸ್ಕ್ರೋಲಿಂಗ್ ಮಾಡಲು ಪೊಕೊ ಮತ್ತು ಮೋಟೋ ಫೋನ್‌ಗಳು ಉತ್ತಮವಾಗಿವೆ.
  • Poco & Moto: 6.88 ಇಂಚಿನ ದೊಡ್ಡ ಡಿಸ್‌ಪ್ಲೇ ಹಾಗೂ 120Hz ರಿಫ್ರೆಶ್ ರೇಟ್ ಹೊಂದಿವೆ.
  • Samsung: 6.7 ಇಂಚಿನ ಡಿಸ್‌ಪ್ಲೇ ಮತ್ತು 90Hz ರಿಫ್ರೆಶ್ ರೇಟ್ ಹೊಂದಿದೆ.

ಬ್ಯಾಟರಿ ಬಾಳಿಕೆಯಲ್ಲಿ ಮೋಟೋಗೆ ಸಾಟಿಯಿಲ್ಲ!

ದಿನವಿಡೀ ಫೋನ್ ಬಳಸುವವರಿಗಾಗಿ ಮೋಟೋ ಕಂಪನಿಯು 7000mAh ನ ಬೃಹತ್ ಬ್ಯಾಟರಿ ನೀಡಿದೆ. ಇದು ಈ ವಿಭಾಗದಲ್ಲೇ ಅತಿ ದೊಡ್ಡ ಬ್ಯಾಟರಿ ಎನ್ನಬಹುದು. ಸ್ಯಾಮ್‌ಸಂಗ್‌ನಲ್ಲಿ 5000mAh ಬ್ಯಾಟರಿ ಇದ್ದರೂ, 25W ಫಾಸ್ಟ್ ಚಾರ್ಜಿಂಗ್ ಇರುವುದು ಪ್ಲಸ್ ಪಾಯಿಂಟ್. ಪೊಕೊ 5200mAh ಬ್ಯಾಟರಿಯನ್ನು ಹೊಂದಿದೆ.

Also Read : ಪವರ್‌ಫುಲ್‌ ಗೇಮಿಂಗ್ ಮೊಬೈಲ್‌ ನುಬಿಯಾ ನಿಯೋ 5 ಪ್ರೋ ಅನಾವರಣ: 50 MP ಕ್ಯಾಮೆರಾ, 80W ಫಾಸ್ಟ್‌ ಚಾರ್ಜಿಂಗ್‌ ವೈಶಿಷ್ಟ್ಯ

ಕ್ಯಾಮೆರಾ ಸಾಮರ್ಥ್ಯ

ಮೋಟೋ ಮತ್ತು ಸ್ಯಾಮ್‌ಸಂಗ್ ಎರಡು ಫೋನ್‌ಗಳಲ್ಲೂ 50MP ಮುಖ್ಯ ಕ್ಯಾಮೆರಾ ನೀಡಲಾಗಿದೆ. ಆದರೆ Poco C81X ನಲ್ಲಿ ಕೇವಲ 13MP ಕ್ಯಾಮೆರಾ ಇರುವುದು ಸ್ವಲ್ಪ ನಿರಾಸೆ ಮೂಡಿಸಬಹುದು. ಸೆಲ್ಫಿಗಾಗಿ ಮೂರೂ ಫೋನ್‌ಗಳಲ್ಲಿ 8MP ಕ್ಯಾಮೆರಾ ಇದೆ.

  • ನಿಮಗೆ ಬ್ಯಾಟರಿ ಮುಖ್ಯವಾದರೆ: Moto G06 Power ಆರಿಸಿ.
  • ವೇಗ ಮತ್ತು ಬ್ರ್ಯಾಂಡ್ ಮುಖ್ಯವಾದರೆ: Samsung Galaxy M07 ಬೆಸ್ಟ್.
  • ದೊಡ್ಡ ಸ್ಕ್ರೀನ್ ಮತ್ತು ಸ್ಮೂತ್ ಡಿಸ್‌ಪ್ಲೇ ಬೇಕಿದ್ದರೆ: Poco C81X ನೋಡಿ.

ಈ ಮೂರೂ ಫೋನ್‌ಗಳು ಲೇಟೆಸ್ಟ್ Android 15 ಸಾಫ್ಟ್‌ವೇರ್ ಮೇಲೆ ಕಾರ್ಯನಿರ್ವಹಿಸುತ್ತವೆ. ನಿಮ್ಮ ಅವಶ್ಯಕತೆಗೆ ತಕ್ಕಂತೆ ಸೂಕ್ತವಾದದ್ದನ್ನು ಆರಿಸಿಕೊಳ್ಳಿ.

Budget Phone Battle Under 10000 Which Device Offers the Best Value

Arun Gundmi | ಅರುಣ್ ಗುಂಡ್ಮಿ

Arun Gundmi Editor In Chief News Next Kannada. Working in more than 20 Years in Kannada News Media (Print, Digital and News Channels) Kannada News Next Live brings latest news from Karnataka, India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021 More »

Related Stories