ಗಂಡನ ಅಕ್ಕನನ್ನೇ ‘ಸವತಿ’ ಎಂದು ಬಿಂಬಿಸಿ ಡಿವೋರ್ಸ್ ಪಡೆದ ಕಿರಾತಕಿ ಪತ್ನಿ!

ತನ್ನ ಅತ್ತಿಗೆಯನ್ನೇ ಸವತಿ ಎಂದು ಕರೆಯುವ ಮೂಲಕ ಕೋರ್ಟ್​ಗೆ ಯಾಮಾರಿಸಿದ್ದಾಳೆ.

ಇತ್ತೀಚಿನ ದಿನಗಳಲ್ಲಿ ವಿಚ್ಛೇದನ ಪ್ರಕ್ರಿಯೆ ಸಾಮಾನ್ಯವಾಗಿಬಿಟ್ಟಿದೆ. ಪತಿ-ಪತ್ನಿ ಇಬ್ಬರಿಗೂ ಸಮ್ಮತಿ ಇದ್ದರೆ ಡಿವೊರ್ಸ್ ಪಡೆಯುವುದು ಮೊದಲಿಗಿಂತಲೂ ಸುಲಭ ಕೂಡ. ಆದರೆ ಮಧ್ಯಪ್ರದೇಶದ ಗ್ವಾಲಿಯರ್​ನಲ್ಲಿ ವಿಚಿತ್ರ ಘಟನೆಯೊಂದು ನಡೆದಿದ್ದು , ಪತ್ನಿಯ ಸುಳ್ಳು ಕತೆಗಳನ್ನೇ ನಂಬಿದ ಕೋರ್ಟ್, ಪತಿಯ ಅಭಿಪ್ರಾಯವನ್ನೂ ಕೇಳದೇ ವಿಚ್ಛೇದನ ನೀಡುವ ಮೂಲಕ ಏಕಪಕ್ಷೀಯ ನಿರ್ಧಾರ ಕೈಗೊಂಡ ಆರೋಪ ಎದುರಿಸುವಂತಾಗಿದೆ.

ಪತ್ನಿ ಪತಿಯಿಂದ ವಿಚ್ಛೇದನ ಪಡೆಯಲು ಖತರ್ನಾಕ್​ ಐಡಿಯಾವನ್ನೇ ಮಾಡಿದ್ದಾಳೆ. ತನ್ನ ಪತಿ ಹಾಗೂ ಆಕೆಯ ಅಕ್ಕ ಜೊತೆಯಾಗಿರುವ ಫೋಟೋಗಳನ್ನು ಕೋರ್ಟ್​ಗೆ ಹಾಜರುಪಡಿಸಿದ ಮಹಿಳೆಯು ತನ್ನ ಅತ್ತಿಗೆಯನ್ನೇ ಸವತಿ ಎಂದು ಕರೆಯುವ ಮೂಲಕ ಕೋರ್ಟ್​ಗೆ ಯಾಮಾರಿಸಿದ್ದಾಳೆ. ಇದನ್ನು ನಂಬಿದ ನ್ಯಾಯಾಧೀಶರು ಪತಿಯ ವಾದವನ್ನು ಆಲಿಸುವ ಗೋಜಿಗೇ ಹೋಗಿಲ್ಲ. ಪತಿಯು ಪತ್ನಿಗೆ ಮೋಸ ಮಾಡಿದ್ದಾನೆಂದು ತೀರ್ಪು ನೀಡಿದ ನ್ಯಾಯಾಧೀಶರು ಮಹಿಳೆಗೆ ವಿಚ್ಛೇದನ ಕೊಡಿಸಿದ್ದಾರೆ.

ಇದನ್ನೂ ಓದಿ : ಬಿರಿಯಾನಿ-ಕಲ್ಲಂಗಡಿ ಎಫೆಕ್ಟ್: ಒಂದೇ ಕುಟುಂಬದ ನಾಲ್ವರ ನಿಗೂಢ ಸಾವು!

ಮಾರ್ಕೆಟಿಂಗ್​ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿಯು 1998ರಲ್ಲಿ ಈ ಮಹಿಳೆಯನ್ನು ಮದುವೆಯಾಗಿದ್ದರು. ಪತಿ ದೂರದ ಊರಿನಲ್ಲಿ ಕೆಲಸ ಮಾಡುತ್ತಿದ್ದರಿಂದ ಇದೇ ವಿಚಾರಕ್ಕೆ ಇಬ್ಬರ ನಡುವೆ ಪದೇ ಪದೇ ವಾಗ್ವಾದ ಸಂಭವಿಸುತ್ತಿತ್ತು. ಬಳಿಕ 2015ರಲ್ಲಿ ಮಹಿಳೆಯು ತನ್ನ ಪತಿಯಿಂದ ದೂರಾಗಿ ಬೇರೆ ಮನೆಯಲ್ಲಿ ವಾಸಿಸಲು ಆರಂಭಿಸದಳು. ಅಲ್ಲಿಂದ ಆಕೆ ಪತಿಯಿಂದ ಡಿವೋರ್ಸ್​ ಕೇಳುತ್ತಾ ಬಂದಿದ್ದಳು. ಆದರೆ ಏನೇ ಆಗಲಿ , ನಾನಂತೂ ವಿಚ್ಛೇದನ ಕೊಡಲಾರೆ ಎನ್ನುವುದು ಪತಿಯ ಖಡಕ್​ ನಿರ್ಧಾರವಾಗಿತ್ತು.

ಇದನ್ನೂ ಓದಿ : ಹೆದ್ದಾರಿ ಪ್ರಯಾಣಿಕರಿಗೆ ಗುಡ್ ನ್ಯೂಸ್: ಡಿಸೆಂಬರ್‌ನಿಂದ ಟೋಲ್ ಪ್ಲಾಜಾಗಳು ಮಾಯ!

ಇದಾದ ಬಳಿಕ ಹೇಗಾದರೂ ಮಾಡಿ ಪತಿಯಿಂದ ಡಿವೋರ್ಸ್ ಪಡೆಯಲೇಬೇಕು ಎಂದು ಪಟ್ಟು ಹಿಡಿದಿದ್ದ ಮಹಿಳೆಯು 2021ರಲ್ಲಿ ಕೌಟುಂಬಿಕ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಕೆ ಮಾಡಿದ್ದಾಳೆ. ಪತಿಯ ವಿರುದ್ಧ ಬಲವಾದ ಸಾಕ್ಷ್ಯ ಇದ್ದರೆ ಮಾತ್ರ ತನಗೆ ವಿಚ್ಛೇದನ ಸಿಗುತ್ತದೆ ಎಂದು ತಿಳಿದಿದ್ದ ಮಹಿಳೆಯು, ಪತಿಯು ತನ್ನ ಅಕ್ಕನೊಂದಿಗೆ ಇರುವ ಫೋಟೋಗಳನ್ನೆಲ್ಲ ಸಂಗ್ರಹಿಸಿದ್ದಾಳೆ. ಕೊನೆ ಅದನ್ನು ಕೋರ್ಟ್​ಗೆ ಹಾಜರುಪಡಿಸಿ ನನಗೆ ಮೋಸವಾಗಿದೆ ಎಂದು ಮೊಸಳೆ ಕಣ್ಣೀರು ಹಾಕಿದ್ದಾಳೆ.
ಇದನ್ನೇ ನಂಬಿದ ಕೌಟುಂಬಿಕ ನ್ಯಾಯಾಲಯ, ವಿಚ್ಛೇದನ ಘೋಷಿಸಿದೆ. ತನ್ನ ಅನುಪಸ್ಥಿತಿಯಲ್ಲಿ ಕೋರ್ಟ್ ವಿಚ್ಛೇಧನ ನೀಡಿರುವುದು ಪತಿಗೆ ಶಾಕ್​ ಉಂಟುಮಾಡಿದೆ. ಅಲ್ಲದೇ ಪತ್ನಿ ಮಾಡಿರುವ ಘನಂದಾರಿ ಕೆಲಸ ಕಂಡು ಹೌಹಾರಿ ಹೋಗಿದ್ದಾನೆ. ಇದೀಗ ಪತ್ನಿಗೆ ತಕ್ಕ ಶಾಸ್ತಿ ಮಾಡಲು ಮುಂದಾಗಿರುವ ಪತಿಯು ಈ ಡಿವೋರ್ಸ್​ ಆದೇಶ ಪ್ರಶ್ನಿಸಿ ಹೈಕೋರ್ಟ್ ಮೆಟ್ಟಿಲೇರಿದ್ದಾನೆ.

 

Meghana Pranuth | ಮೇಘನಾ ಪ್ರಣೂತ್‌

ಮೇಘನಾ ಪ್ರಣೂತ್‌ ಮೂಲತಃ ಉಡುಪಿ ಜಿಲ್ಲೆಯವರು. ಪತ್ರಿಕೋದ್ಯಮದಲ್ಲಿ ಪದವಿ ಶಿಕ್ಷಣವನ್ನು ಪಡೆದಿದ್ದು, ಕಳೆದ ನಾಲ್ಕು ವರ್ಷಗಳಿಂದ ಪತ್ರಕರ್ತರಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಸಿನಿಮಾ, ಕ್ರೀಡೆ, ವಾಣಿಜ್ಯ, ಫ್ಯಾಷನ್‌ ಕ್ಷೇತ್ರದಲ್ಲಿ ಆಸಕ್ತಿ ಹೊಂದಿದ್ದಾರೆ. ಇದೀಗ ನ್ಯೂಸ್‌ ನೆಕ್ಸ್ಟ್‌ನಲ್ಲಿ ನಿರೂಪಕರಾಗಿ, ಕಂಟೆಂಟ್‌ ಕ್ರಿಯೆಟರ್‌ ಆಗಿ ಕೆಲಸ ಮಾಡುತ್ತಿದ್ದಾರೆ.

Related Stories