ವಾಟ್ಸಾಪ್ ನ ಹೊಸ ‘ಪ್ಲಸ್’ ಪ್ಲಾನ್ ಪರೀಕ್ಷೆ ಆರಂಭ: ಚಂದಾದಾರಿಕೆ ಪಡೆದ ಬಳಕೆದಾರರಿಗೆ ಏನೆಲ್ಲಾ ವೈಶಿಷ್ಟ್ಯ ಸಿಗಲಿದೆ?
ವಾಟ್ಸಾಪ್ ತನ್ನ ಹೊಸ ಯೋಜನೆ ‘ವಾಟ್ಸಾಪ್ ಪ್ಲಸ್‘ ಚಂದಾದಾರಿಕೆ ಪರಿಚಯಿಸುತ್ತಿದೆ. ಈ ಹೊಸ ಯೋಜನೆಯಲ್ಲಿ ಬಳಕೆದಾರರು ಏನೆಲ್ಲಾ ವೈಶಿಷ್ಟ್ಯ ಪಡೆಯುತ್ತಾರೆ? ಇಲ್ಲಿದೆ ಓದಿ.

WhatsApp Plus Plan: ಕಳೆದ ಕೆಲವು ತಿಂಗಳುಗಳಿಂದ ವಾಟ್ಸಾಪ್ ಹೊಸ ಪೇಡ್ ಚಂದಾದಾರಿಕೆ ಯೋಜನೆಯನ್ನು ಪ್ರಾರಂಭಿಸಲಿದೆ ಎಂಬ ಮಾಹಿತಿ ಎಲ್ಲ ಕಡೆ ಹರಿದಾಡುತ್ತಿತ್ತು. ಅದಕ್ಕೆ ಉತ್ತರವಾಗಿ ವಾಟ್ಸಾಪ್ ಈಗ ‘ವಾಟ್ಸಾಪ್ ಪ್ಲಸ್‘ ಎಂಬ ಹೊಸ ಯೋಜನೆಯೊಂದನ್ನು ಆಯ್ದ ಬಳಕೆದಾರರಿಗೆ ಬಿಡುಗಡೆ ಮಾಡಲು ಮುಂದಾಗಿದೆ. ವರದಿಗಳ ಪ್ರಕಾರ ಈ ಹೊಸ ಯೋಜನೆಯು ಹಲವಾರು ಹೊಸ ವೈಶಿಷ್ಟ್ಯಗಳನ್ನು ಹೊತ್ತುತರುತ್ತಿದೆ. ವಾಟ್ಸಾಪ್ ಬಳಕೆದಾರರು ವಿಶೇಷ್ ಐಕಾನ್‌ಗಳು, ಥೀಮ್, ರಿಂಗ್‌ಟೋನ್ ಇತ್ಯಾದಿ ಹೊಸ ವೈಶಿಷ್ಟ್ಯಗಳು ಈ ಚಂದಾದಾರಿಕೆಯಲ್ಲಿ ಇರಲಿದೆ. ಇದರಿಂದ ಚಾಟಿಂಗ್ ಇನ್ನಷ್ಟು ಆಕರ್ಷಕವಾಗಲಿದೆ.
ವಾಟ್ಸಾಪ್ ಪ್ಲಸ್ ಯೋಜನೆಯ ವಿವರಗಳು
ವಾಬೀಟಾಇನ್ಫೋ (WABetaInfo) ವರದಿಯ ಪ್ರಕಾರ ವಾಟ್ಸಾಪ್‌ನ ಹೊಸ ಪ್ಲಸ್ ಚಂದಾದಾರಿಕೆ ಯೋಜನೆಯ ಪರೀಕ್ಷೆ ನಡೆಯುತ್ತಿದೆ. ಇದು ವೈಯಕ್ತಿಕ ಬಳಕೆ ಮತ್ತು ಅನುಕೂಲಕ್ಕಾಗಿ ಕಸ್ಟಮೈಸ್ ಮಾಡಿಕೊಳ್ಳಬಹುದಾದ ವೈಶಿಷ್ಟ್ಯಗಳನ್ನು ನೀಡಬಹುದು. ಇದನ್ನು ಬಳಸಲು ಸಹ ಸುಲಭವಾಗಿರುತ್ತದೆ. ವರದಿಯ ಪ್ರಕಾರ ಈ ಚಂದಾದಾರಿಕೆ ಸಂಪೂರ್ಣವಾಗಿ ಐಚ್ಛಿಕವಾಗಿರುತ್ತದೆ. ಇದನ್ನು ಕಡ್ಡಾಯವಾಗಿ ಎಲ್ಲ ವಾಟ್ಸಾಪ್ ಬಳಕೆದಾರರು ತೆಗೆದುಕೊಳ್ಳಬೇಕೆಂದಿಲ್ಲ. ಚಂದಾದಾರಿಕೆಯನ್ನು ಪಡೆದುಕೊಂಡ ಬಳಕೆದಾರರು ವಾಟ್ಸಾಪ್ ಪ್ಲಸ್ ನ ಎಲ್ಲಾ ವೈಶಿಷ್ಟ್ಯಗಳನ್ನು ಪಡೆದುಕೊಳ್ಳುತ್ತಾರೆ. ಧ್ವನಿ ಕರೆಗಳಲ್ಲಿ, ಗ್ರೂಪ್ ಪೋಸ್ಟ್, ಚಾಟ್‌ಗಳಲ್ಲಿ ಹೊಸ ವೈಶಿಷ್ಟ್ಯಗಳನ್ನು ಬಳಸಿಕೊಳ್ಳಲು ಸಾಧ್ಯವಾಗುತ್ತದೆ.
ವರದಿಯಲ್ಲಿ ಹಂಚಿಕೊಂಡ ಮಾಹಿತಿಯ ಪ್ರಕಾರ ಈ ಹೊಸ ಚಂದಾದಾರಿಕೆ ಯೋಜನೆಯು ಆಯ್ದ ಬೀಟಾ ಆಂಡ್ರಾಯ್ಡ್ ಪರೀಕ್ಷಕರಿಗೆ ತಿಂಗಳಿಗೆ €2.49 (ಸರಿಸುಮಾರು ₹274) ಲಭ್ಯವಿರಲಿದೆ. ಈ ಐಚ್ಛಿಕ ಚಂದಾದಾರಿಕೆಯಲ್ಲಿ ಹಲವಾರು ಹೊಸ ವೈಶಿಷ್ಟ್ಯಗಳನ್ನು ನಿರೀಕ್ಷಿಸಬಹುದಾಗಿದೆ.
ಇದನ್ನೂ ಓದಿ: Find My Device : ಮೊಬೈಲ್ ಕಳವಾದ್ರೂ ಸಿಗುತ್ತೆ ! ಕೂಡಲೇ ಈ 1 ಸೆಟ್ಟಿಂಗ್ ಆನ್ ಮಾಡಿ
ಮಾಹಿತಿಯ ಪ್ರಕಾರ ಚಂದಾದಾರಿಕೆ ಪಡೆದುಕೊಂಡ ಬಳಕೆದಾರರು ಸ್ಟಿಕ್ಕರ್ ಸ್ಟೋರ್‌ನಿಂದ ಸ್ಟಿಕ್ಕರ್‌ಗಳನ್ನು ನೇರವಾಗಿ ಡೌನ್‌ಲೋಡ್ ಮಾಡಿಕೊಳ್ಳಬಹುದು. ಅದಕ್ಕಾಗಿ ವಿಶೇಷ ಸ್ಟಿಕ್ಕರ್ ಪ್ಯಾಕ್‌ಗಳಿಗೆ ಪ್ರವೇಶವನ್ನು ಪಡೆಯಬಹುದಾಗಿದೆ. ಇದಲ್ಲದೇ ಈ ಯೋಜನೆಯಲ್ಲಿ18 ಥೀಮ್‌ಗಳು ಮತ್ತು ಬಣ್ಣಗಳ ಆಯ್ಕೆಗಳನ್ನು ಕಸ್ಟಮೈಸ್ ಮಾಡಲು ಅನುಮತಿ ನೀಡುತ್ತದೆ. ಇದರಿಂದ ಆಪ್‌ಗೆ ಹೊಸ ನೋಟವನ್ನು ನೀಡುತ್ತದೆ.
ಸಾಮಾನ್ಯ ವಾಟ್ಸಾಪ್ ಬಳೆಕದಾರರು ಕೇವಲ 3 ಚಾಟ್‌ಗಳನ್ನು ಮಾತ್ರ ಪಿನ್ ಮಾಡಲು ಸಾಧ್ಯವಾಗುತ್ತದೆ. ಆದರೆ ವಾಟ್ಸಾಪ್ ಪ್ಲಸ್ ಚಂದಾದಾರಿಕೆಯಲ್ಲಿ ಒಂದೇ ಬಾರಿಗೆ 20 ಚಾಟ್‌ಗಳನ್ನು ಪಿನ್ ಮಾಡಲು ಸಾಧ್ಯವಾಗುತ್ತದೆ. ಚಾಟ್‌ಗಳನ್ನು ಪಿನ್ ಮಾಡಿ ಇಡುವುದರಿಂದ ಪ್ರಮುಖ ಚಾಟ್‌ಗಳನ್ನು ಹುಡುಕುವುದು ಸುಲಭವಾಗುತ್ತದೆ. ಸ್ಕ್ರಾಲ್ ಮಾಡುವ ಅಗತ್ಯ ನಿವಾರಿಸುತ್ತದೆ. ಇನ್ನು ಮುಂದುವರಿದು ಕೆಲವು ಚಾಟ್‌ಗಳಿಗೆ ವಿಶೇಷ ಥೀಮ್, ರಿಂಗ್‌ಟೋನ್ ಮತ್ತು ನೋಟಿಫೀಕೇಷನ್ ಗಳನ್ನು ಸಹ ಸೆಟ್ ಮಾಡಬಹುದಾಗಿದೆ ಎಂದು ವರದಿ ಹೇಳುತ್ತಿದೆ.
ಒಟ್ಟಾರೆಯಾಗಿ ಈ ಚಂದಾದಾರಿಕೆ ಸಂಪೂರ್ಣವಾಗಿ ಐಚ್ಛಿಕವಾಗಿದೆ. ಆದರೆ ಈ ಚಂದಾದರಿಕೆಯನ್ನು ಪಡೆದುಕೊಳ್ಳದ ಬಳಕೆದಾರರು ಎಂದಿನಂತೆ ವಾಟ್ಸಾಪ್ ಬಳಕೆಯನ್ನು ಮುಂದುವರಿಸಬಹುದು ಎಂದು ವರದಿಯಾಗಿದೆ. ಸದ್ಯ ಈ ವೈಶಿಷ್ಟ್ಯ ಆರಂಭಿಕವಾಗಿ ಆಂಡ್ರಾಯ್ಡ್ ಬಳಕೆದಾರು ಪಡೆದುಕೊಂಡಿದ್ದರೂ ಮುಂಬರುವ ದಿನಗಳಲ್ಲಿ ಐಒಎಸ್‌ನ ಬಳಕೆದಾರರಿಗೂ ಸಿಗುವ ನಿರೀಕ್ಷೆಯಿದೆ.


