ಜಿಮ್‌ಗೆ ಸೇರಿದ ಪತ್ನಿ ಸೌಂದರ್ಯದ ಮೇಲೆ ಪತಿಗೆ ಅಸೂಯೆ! ಪತಿ ಮಾಡಿದ ಕೆಲಸ ಕೇಳಿದ್ರೆ ಬೆಚ್ಚಿಬೀಳ್ತೀರಾ!
ಪತ್ನಿ ಫಿಟ್ ಆದರೆ ಆಕೆ ಸುಂದರವಾಗಿಬಿಡ್ತಾಳೆ ಎಂಬ ಭಯದಲ್ಲಿ ಸ್ವತಃ ಪತಿಯೇ ಆಕೆಯ ಕೊಲೆಗೈದಿದ್ದಾನೆ.

ಮದುವೆ, ಮಕ್ಕಳು, ಸಂಸಾರದ ಗೋಜಿನಲ್ಲಿ ಮಹಿಳೆಯರು ಕೆಲ ವರ್ಷಗಳ ಕಾಲ ತಮ್ಮ ದೇಹ ಸೌಂದರ್ಯದ ಬಗ್ಗೆ ಕಾಳಜಿ ವಹಿಸುವುದನ್ನೇ ಮರೆತುಬಿಟ್ಟಿರುತ್ತಾರೆ. ಮಕ್ಕಳೆಲ್ಲ ದೊಡ್ಡವರಾದಮೇಲೆ ಮತ್ತೆ ದೇಹ ಸೌಂದರ್ಯದ ಕಡೆ ಮಹಿಳೆಯರು ಗಮನ ಹರಿಸಲು ಆರಂಭಿಸುತ್ತಾರೆ. ಇದೇ ರೀತಿ ಫಿಟ್ ಆಗಬೇಕೆಂದು ಜಿಮ್ ಸೇರಿದ ಮಹಿಳೆಯೊಬ್ಬರು ದಾರುಣವಾಗಿ ಅಂತ್ಯಕಂಡ ಘಟನೆಯೊಂದು ಉತ್ತರ ಪ್ರದೇಶದ ಮೊರಾದಾಬಾದ್ನಲ್ಲಿ ಸಹಿಸಿದೆ. ಪತ್ನಿ ಫಿಟ್ ಆದರೆ ಆಕೆ ಸುಂದರವಾಗಿಬಿಡ್ತಾಳೆ ಎಂಬ ಭಯದಲ್ಲಿ ಸ್ವತಃ ಪತಿಯೇ ಆಕೆಯ ಕೊಲೆಗೈದಿದ್ದಾನೆ.
ಕತಘರ್ನ ನಿವಾಸಿಗಳಾದ ಶೋಭಿತ್ ಗುಪ್ತಾ ಹಾಗೂ ಪೂನಂ ಗುಪ್ತಾ 10 ವರ್ಷಗಳಿಂದ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಶೋಭಿತ್ ಗುಜರಿ ಅಂಗಡಿಯ ವ್ಯಾಪಾರಿಯಾಗಿದ್ದರು. ಕೆಲವು ದಿನಗಳ ಹಿಂದೆ ಪೂನಂ ತನ್ನ ಪತಿಯ ಬಳಿ ಜಿಮ್‌ಗೆ ಸೇರುವ ಇಂಗಿತ ವ್ಯಕ್ತಪಡಿಸಿದ್ದಳು. ಅಲ್ಲದೇ ಪತಿಯ ವಿರೋಧದ ನಡುವೆಯೇ ಜಿಮ್‌ಗೆ ಸೇರಿದ್ದಳು. ಹೆಂಡತಿ ಜಿಮ್ ಸೇರಿದರೆ ಆಕೆ ಸುಂದರವಾಗುತ್ತಾಳೆ. ಆಮೇಲೆ ಆಕೆಯನ್ನು ಕಂಡೊಡನೆ ಪುರುಷರು ಆಕರ್ಷಿತರಾಗುತ್ತಾರೆ ಎಂಬ ಅನುಮಾನ ಶೋಭಿತ್ನನ್ನು ಕಾಡಲು ಆರಂಭಿಸಿದೆ.
ಇದನ್ನೂ ಓದಿ : ಕಳ್ಳಾಟವಾಡುವ ಪಿಡಿಓಗಳಿಗೆ ಸರ್ಕಾರದ ಶಾಕ್! ಇನ್ಮುಂದೆ ಬಯೋಮೆಟ್ರಿಕ್ ಹಾಜರಾತಿ ಕಡ್ಡಾಯ.!
ಹೀಗಾಗಿ ಜಿಮ್ ಹೋಗದಂತೆ ಪತ್ನಿಯ ಮೇಲೆ ಶೋಭಿತ್ ಹಲವು ಬಾರಿ ಒತ್ತಡ ಹೇರಿದ್ದ. ಆದರೆ ಕ್ಯಾರೆ ಎನ್ನದ ಪತ್ನಿ ಪೂನಂ ಜಿಮ್ ಮುಂದುವರಿಸಿದ್ದರು.ಕೊನೆಗೊಂದು ದಿನ ಇಬ್ಬರ ನಡುವೆ ಜಗಳ ವಿಕೋಪಕ್ಕೆ ತಿರುಗಿದ್ದು, ಪತ್ನಿ ಪೂನಂಳನ್ನು ಪತಿ ಶೋಭಿತ್ ಕೊಂದೇ ಬಿಟ್ಟಿದ್ದಾನೆ. ರಕ್ತದ ಮಡುವಿನಲ್ಲಿ ಬಿದ್ದಿದ್ದ ಪತ್ನಿಯ ಶವದ ಬಳಿ 7 ಗಂಟೆಗಳ ಕಾಲ ಕುಳಿತು ವಿಕೃತಿ ಮೆರೆದಿದ್ದಾನೆ. ಈ ಸಂಬಂದ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿ ಶೋಭಿತ್ನನ್ನು ವಶಕ್ಕೆ ಪಡೆಯಲಾಗಿದೆ.



