ಗಂಡಂದಿರಿಗೆ ಬಿಗ್ ರಿಲೀಫ್! ಓದಿದ ಪತ್ನಿಯರಿಗೆ ಶಾಕ್!” “ಹೈಕೋರ್ಟ್ ನೀಡಿದ ಈ ತೀರ್ಪು ಗೊತ್ತಾ?”

ಆರ್ಥಿಕವಾಗಿ ಸಬಲ ಮಹಿಳೆಯು ಪತಿಯಿಂದ ಜೀವನಾಂಶ ಕೇಳುವಂತಿಲ್ಲ ’ : ಹೈಕೋರ್ಟ್

ಆರ್ಥಿಕವಾಗಿ ಸದೃಢಳಾಗಿರುವ ಪತ್ನಿಯು ಪತಿಯಿಂದ ಜೀವನಾಂಶ ಕೇಳಲು ಅರ್ಹಳಲ್ಲ ಎಂದು ಅಲಹಾಬಾದ್​ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ. ಅತ್ಯಂತ ಸುಶಿಕ್ಷಿತಳಾಗಿದ್ದು, ಆರ್ಥಿಕವಾಗಿ ಸ್ವಾವಲಂಬಿಯಾಗಿ ಬದುಕುವ ಎಲ್ಲಾ ಅರ್ಹತೆಗಳ ಬಳಿಕವೂ ಆಕೆ ದುಡಿಯುವ ನಿರ್ಧಾರ ಕೈಗೊಳ್ಳದೇ ಇರುವ ಮೂಲಕ ಮಾಜಿ ಪತಿಯ ಮೇಲೆ ಆರ್ಥಿಕ ಹೊರೆ ಹಾಕುವುದನ್ನು ನ್ಯಾಯಾಂಗ ಒಪ್ಪಿಕೊಳ್ಳುವುದಿಲ್ಲ ಎಂದು ಅಲಹಬಾದ್​ ಹೈಕೋರ್ಟ್​ ಹೇಳಿದೆ.

ಪ್ರಯಾಗ್​ರಾಜ್​ನ ನಿವಾಸಿಯಾದ ಪತಿಯು ನರರೋಗ ತಜ್ಞರಾಗಿದ್ದರೆ ಪತ್ನಿ ಪ್ರಸೂತಿ ತಜ್ಞೆಯಾಗಿದ್ದರು. ಈ ದಂಪತಿಗೆ ಮೂವರು ಮಕ್ಕಳಿದ್ದಾರೆ. ವಿಚ್ಛೇದನ ಪಡೆದ ಬಳಿಕ ಪತ್ನಿಯು ತನಗೂ ಹಾಗೂ ತನ್ನ ಮೂವರು ಮಕ್ಕಳಿಗೆ ಪತಿಯಿಂದ ಜೀವನಾಂಶ ಬೇಕೆಂದು ಕೋರ್ಟ್​ ಮೆಟ್ಟಿಲೇರಿದ್ದರು. ಈ ಅರ್ಜಿ ವಿಚಾರಣೆ ನಡೆಸಿದ ಕೌಟುಂಬಿಕ ನ್ಯಾಯಾಲಯ ಮಕ್ಕಳಿಗೆ ಪ್ರತಿ ತಿಂಗಳು 60 ಸಾವಿರ ರೂಪಾಯಿ ಜೀವನಾಂಶ ನೀಡುವಂತೆ ಪತಿಗೆ ಆದೇಶಿಸಿತ್ತು. ಆದರೆ ಪತ್ನಿಗೆ ಯಾವುದೇ ಜೀವನಾಂಶ ನೀಡಲು ಸಾಧ್ಯವಿಲ್ಲ ಎಂದು ಕೋರ್ಟ್​ ಹೇಳಿತ್ತು. ಕೌಟುಂಬಿಕ ನ್ಯಾಯಾಲಯದ ಈ ಆದೇಶ ಪ್ರಶ್ನಿಸಿ ವೈದ್ಯೆ ಹೈಕೋರ್ಟ್​ ಮೆಟ್ಟಿಲೇರಿದ್ದರು.

ಇದನ್ನೂ ಓದಿ : ಯಾರಿಗೆ ಪಟ್ಟ? ಯಾರಿಗೆ ಲಕ್? ಪಂಚರಾಜ್ಯಗಳ ಚುನಾವಣೋತ್ತರ ಸಮೀಕ್ಷೆಯ ಕಂಪ್ಲೀಟ್ ಡೀಟೇಲ್ಸ್ ಇಲ್ಲಿದೆ

ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಅತುಲ್ ಶ್ರೀಧರನ್ ಮತ್ತು ವಿವೇಕ್ ಸರನ್ ನೇತೃತ್ವದ ನ್ಯಾಯಪೀಠ, ಜೀವನಾಂಶಕ್ಕೆ ಅರ್ಜಿ ಸಲ್ಲಿಕೆ ಮಾಡಿರುವ ಪತ್ನಿಯು ವಾರ್ಷಿಕ 31 ಲಕ್ಷ ರೂಪಾಯಿ ಆದಾಯ ಹೊಂದಿದ್ದಾರೆ ಎಂದು ತಿಳಿದುಕೊಂಡಿದೆ. ಪತ್ನಿಯು ಸ್ತ್ರೀರೋಗ ತಜ್ಞೆಯಾಗಿದ್ದು ಆರ್ಥಿಕವಾಗಿ ಅತ್ಯಂತ ಸದೃಢರಾಗಿದ್ದಾರೆ. ಆದರೆ ತಾನು ಉದ್ಯೋಗ ಮಾಡಲು ಇಚ್ಛಿಸುವುದಿಲ್ಲ ಎಂಬ ಕಾರಣ ನೀಡಿ ಪತಿಯಿಂದ ಜೀವನಾಂಶ ಪಡೆಯುವುದನ್ನು ನ್ಯಾಯಾಂಗ ಒಪ್ಪಿಕೊಳ್ಳುವುದಿಲ್ಲ ಎಂದು ಹೇಳುವ ಮೂಲಕ ಕೌಟುಂಬಿಕ ನ್ಯಾಯಾಲಯದ ತೀರ್ಪನ್ನು ಎತ್ತಿ ಹಿಡಿದಿದೆ.

Meghana Pranuth | ಮೇಘನಾ ಪ್ರಣೂತ್‌

ಮೇಘನಾ ಪ್ರಣೂತ್‌ ಮೂಲತಃ ಉಡುಪಿ ಜಿಲ್ಲೆಯವರು. ಪತ್ರಿಕೋದ್ಯಮದಲ್ಲಿ ಪದವಿ ಶಿಕ್ಷಣವನ್ನು ಪಡೆದಿದ್ದು, ಕಳೆದ ನಾಲ್ಕು ವರ್ಷಗಳಿಂದ ಪತ್ರಕರ್ತರಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಸಿನಿಮಾ, ಕ್ರೀಡೆ, ವಾಣಿಜ್ಯ, ಫ್ಯಾಷನ್‌ ಕ್ಷೇತ್ರದಲ್ಲಿ ಆಸಕ್ತಿ ಹೊಂದಿದ್ದಾರೆ. ಇದೀಗ ನ್ಯೂಸ್‌ ನೆಕ್ಸ್ಟ್‌ನಲ್ಲಿ ನಿರೂಪಕರಾಗಿ, ಕಂಟೆಂಟ್‌ ಕ್ರಿಯೆಟರ್‌ ಆಗಿ ಕೆಲಸ ಮಾಡುತ್ತಿದ್ದಾರೆ.

Related Stories