ಅಮೆಜಾನ್ ಗ್ರೇಟ್ ಸಮ್ಮರ್ ಸೇಲ್ ಮೇ 8ರಿಂದ ಆರಂಭ.. ಭರ್ಜರಿ ಡಿಸ್ಕೌಂಟ್ಗೆ ಸಿದ್ಧರಾಗಿ!
ಅಮೆಜಾನ್ ಗ್ರೇಟ್ ಸಮರ್ ಸೇಲ್ ಮೇ 8ರಿಂದ ಆರಂಭವಾಗಲಿದ್ದು, ಸ್ಮಾರ್ಟ್ಫೋನ್, ಲ್ಯಾಪ್ಟಾಪ್, ಟಿವಿ ಹಾಗೂ ಗೃಹೋಪಯೋಗಿ ವಸ್ತುಗಳ ಮೇಲೆ ಭಾರೀ ರಿಯಾಯಿತಿ ಮತ್ತು ಬ್ಯಾಂಕ್ ಆಫರ್ಗಳು ಗ್ರಾಹಕರನ್ನು ಆಕರ್ಷಿಸುತ್ತಿವೆ.

ಆನ್ಲೈನ್ ಶಾಪಿಂಗ್ ಪ್ರಿಯರಿಗೆ ಮತ್ತೊಮ್ಮೆ ಸಿಹಿ ಸುದ್ದಿ ಸಿಕ್ಕಿದೆ. ಬೇಸಿಗೆ ಹಂಗಾಮಿಯನ್ನು ಗಮನದಲ್ಲಿಟ್ಟುಕೊಂಡು ಅಮೆಜಾನ್ ತನ್ನ ಬಹು ನಿರೀಕ್ಷಿತ “Great Summer Sale” ಅನ್ನು ಮೇ 8ರಿಂದ ಆರಂಭಿಸಲು ಸಜ್ಜಾಗಿದೆ. ಈ ಸೇಲ್ನಲ್ಲಿ ಸ್ಮಾರ್ಟ್ಫೋನ್ಗಳಿಂದ ಹಿಡಿದು ಗೃಹೋಪಯೋಗಿ ವಸ್ತುಗಳವರೆಗೆ ಹಲವು ಉತ್ಪನ್ನಗಳ ಮೇಲೆ ದೊಡ್ಡ ಮಟ್ಟದ ರಿಯಾಯಿತಿ ದೊರೆಯಲಿದೆ.
ಇತ್ತೀಚಿನ ದಿನಗಳಲ್ಲಿ ಡಿಜಿಟಲ್ ಖರೀದಿ ಹೆಚ್ಚಾಗುತ್ತಿರುವ ಹಿನ್ನೆಲೆ, ಅಮೆಜಾನ್ ಈ ಬಾರಿ ಗ್ರಾಹಕರಿಗೆ ಇನ್ನಷ್ಟು ಆಕರ್ಷಕ ಆಫರ್ಗಳನ್ನು ನೀಡಲು ಮುಂದಾಗಿದೆ. ಬ್ಯಾಂಕ್ ಡಿಸ್ಕೌಂಟ್, ನೋ-ಕಾಸ್ಟ್ EMI, ಎಕ್ಸ್ಚೇಂಜ್ ಡೀಲ್ಗಳು ಹಾಗೂ ಕ್ಯಾಶ್ಬ್ಯಾಕ್ಗಳು ಈ ಸೇಲ್ನ ಪ್ರಮುಖ ಆಕರ್ಷಣೆಯಾಗಿವೆ.
Prime ಸದಸ್ಯರಿಗೆ ಹೆಚ್ಚುವರಿ ಲಾಭ
ಅಮೆಜಾನ್ Prime ಸದಸ್ಯರಿಗೆ ಸಾಮಾನ್ಯ ಗ್ರಾಹಕರಿಗಿಂತ ಮೊದಲೇ ಸೇಲ್ ಪ್ರವೇಶ ಅವಕಾಶ ಸಿಗಲಿದೆ. ಜೊತೆಗೆ Amazon Pay ICICI ಕಾರ್ಡ್ ಬಳಸಿ ಖರೀದಿ ಮಾಡಿದರೆ ಹೆಚ್ಚುವರಿ ಕ್ಯಾಶ್ಬ್ಯಾಕ್ ಕೂಡ ಲಭ್ಯವಾಗಲಿದೆ.
HDFC ಬ್ಯಾಂಕ್ ಕ್ರೆಡಿಟ್ ಕಾರ್ಡ್ ಮೂಲಕ ಪಾವತಿ ಮಾಡಿದರೆ ಅಥವಾ EMI ಆಯ್ಕೆ ಮಾಡಿಕೊಂಡರೆ ಶೇಕಡಾ 10ರವರೆಗೆ ತಕ್ಷಣದ ರಿಯಾಯಿತಿ ಸಿಗುವ ಸಾಧ್ಯತೆ ಇದೆ. ದುಬಾರಿ ಉತ್ಪನ್ನಗಳನ್ನು ಕಂತುಗಳಲ್ಲಿ ಖರೀದಿಸಲು ಬಯಸುವವರಿಗೆ ನೋ-ಕಾಸ್ಟ್ EMI ಯೋಜನೆ ಸಹಾಯಕವಾಗಲಿದೆ.
ಸ್ಮಾರ್ಟ್ಫೋನ್ ಮತ್ತು ಗ್ಯಾಜೆಟ್ಗಳ ಮೇಲೆ ಭರ್ಜರಿ ಬೆಲೆ ಇಳಿಕೆ
ಈ ಸೇಲ್ನಲ್ಲಿ ಮೊಬೈಲ್, ಟ್ಯಾಬ್ಲೆಟ್, ಲ್ಯಾಪ್ಟಾಪ್, ಆಡಿಯೋ ಸಾಧನಗಳು ಸೇರಿದಂತೆ ಹಲವು ಎಲೆಕ್ಟ್ರಾನಿಕ್ ಉತ್ಪನ್ನಗಳ ಬೆಲೆಯಲ್ಲಿ ದೊಡ್ಡ ಮಟ್ಟದ ಕಡಿತ ನಿರೀಕ್ಷಿಸಲಾಗಿದೆ. ಕೆಲವು ಜನಪ್ರಿಯ ಬ್ರ್ಯಾಂಡ್ಗಳ ಗ್ಯಾಜೆಟ್ಗಳು ಸಾಮಾನ್ಯ ಬೆಲೆಗೆ ಹೋಲಿಸಿದರೆ ಸಾವಿರಾರು ರೂಪಾಯಿ ಕಡಿಮೆ ದರದಲ್ಲಿ ಸಿಗಬಹುದು.
Xiaomi, iQOO, JBL ಸೇರಿದಂತೆ ಹಲವು ಕಂಪನಿಗಳ ಉತ್ಪನ್ನಗಳು ವಿಶೇಷ ಆಫರ್ನಲ್ಲಿ ಲಭ್ಯವಾಗಲಿವೆ ಎನ್ನಲಾಗಿದೆ. ಬ್ಯಾಂಕ್ ಆಫರ್ ಹಾಗೂ ಎಕ್ಸ್ಚೇಂಜ್ ಡೀಲ್ ಸೇರಿಸಿದರೆ ಗ್ರಾಹಕರಿಗೆ ಇನ್ನಷ್ಟು ಉಳಿತಾಯ ಸಾಧ್ಯ.
ಬೇಸಿಗೆ ಉಪಕರಣಗಳಿಗೆ ಭಾರೀ ಬೇಡಿಕೆ
ಬೇಸಿಗೆಯ ಕಾರಣದಿಂದ ಏರ್ ಕಂಡೀಷನರ್, ಫ್ಯಾನ್, ವಾಷಿಂಗ್ ಮೆಷಿನ್ ಹಾಗೂ ಇತರ ಗೃಹೋಪಯೋಗಿ ವಸ್ತುಗಳ ಬೇಡಿಕೆ ಹೆಚ್ಚಾಗಿದೆ. ಇದನ್ನು ಗಮನದಲ್ಲಿಟ್ಟುಕೊಂಡು ಅಮೆಜಾನ್ ಈ ವಿಭಾಗದಲ್ಲೂ ವಿಶೇಷ ರಿಯಾಯಿತಿಗಳನ್ನು ಘೋಷಿಸಿದೆ.
ಹಳೆಯ ಉಪಕರಣಗಳನ್ನು ಎಕ್ಸ್ಚೇಂಜ್ ಮಾಡಿ ಹೊಸ ಉತ್ಪನ್ನಗಳನ್ನು ಕಡಿಮೆ ಬೆಲೆಗೆ ಖರೀದಿಸುವ ಅವಕಾಶವೂ ಲಭ್ಯವಾಗಲಿದೆ. ಡಿಜಿಟಲ್ ಕೂಪನ್ ಹಾಗೂ ಕ್ಯಾಶ್ಬ್ಯಾಕ್ ಆಫರ್ಗಳಿಂದ ಖರೀದಿ ವೆಚ್ಚ ಇನ್ನಷ್ಟು ಕಡಿಮೆಯಾಗುವ ಸಾಧ್ಯತೆ ಇದೆ.
AI ಆಧಾರಿತ ಹೊಸ ಶಾಪಿಂಗ್ ಅನುಭವ
ಈ ಬಾರಿ ಅಮೆಜಾನ್ AI ತಂತ್ರಜ್ಞಾನ ಬಳಸಿ ಶಾಪಿಂಗ್ ಅನುಭವವನ್ನು ಮತ್ತಷ್ಟು ಸುಲಭಗೊಳಿಸಲು ಪ್ರಯತ್ನಿಸುತ್ತಿದೆ. “ರೂಫಸ್” ಎಂಬ AI ಅಸಿಸ್ಟೆಂಟ್ ಮೂಲಕ ಗ್ರಾಹಕರು ತಮ್ಮ ಬಜೆಟ್ಗೆ ತಕ್ಕ ಡೀಲ್ಗಳನ್ನು ಸುಲಭವಾಗಿ ಹುಡುಕಬಹುದು.
ಉತ್ಪನ್ನಗಳ ಹಿಂದಿನ 30ರಿಂದ 90 ದಿನಗಳ ಬೆಲೆ ಇತಿಹಾಸವನ್ನು ಕೂಡ ನೋಡಬಹುದಾಗಿದೆ. ಇದರಿಂದ ನಿಜವಾಗಿಯೂ ಉತ್ತಮ ಡಿಸ್ಕೌಂಟ್ ಇದೆಯೇ ಎಂಬುದನ್ನು ಗ್ರಾಹಕರು ಸುಲಭವಾಗಿ ಅರ್ಥಮಾಡಿಕೊಳ್ಳಬಹುದು.
ಇದಲ್ಲದೆ “View In Your Room” ಫೀಚರ್ ಮೂಲಕ ಮನೆಯೊಳಗೆ ಫರ್ನಿಚರ್ ಅಥವಾ ಉಪಕರಣ ಹೇಗೆ ಕಾಣುತ್ತದೆ ಎಂಬುದನ್ನು ವರ್ಚುವಲ್ ರೀತಿಯಲ್ಲಿ ಪರಿಶೀಲಿಸುವ ಅವಕಾಶವೂ ಸಿಗಲಿದೆ.



