ಫೋನ್ ಓವರ್‌ಹೀಟ್ ಸಮಸ್ಯೆಗೆ ತಜ್ಞರ ಸಲಹೆ! ತಪ್ಪಾದ ಚಾರ್ಜಿಂಗ್ ವಿಧಾನಗಳು ತಪ್ಪಿಸಿ

ಬೇಸಿಗೆಯ ತೀವ್ರ ಬಿಸಿಲಿನಲ್ಲಿ ಫೋನ್ ನಿಧಾನವಾಗಿ ಚಾರ್ಜ್ ಆಗುವುದು ಸಾಮಾನ್ಯವಾಗಿದ್ದು, ತಪ್ಪಾದ ಚಾರ್ಜಿಂಗ್ ವಿಧಾನಗಳು ಬ್ಯಾಟರಿ ಮತ್ತು ಮೊಬೈಲ್ ಸುರಕ್ಷತೆಗೆ ಅಪಾಯ ಉಂಟುಮಾಡಬಹುದು.

ಬೇಸಿಗೆಯ ಬಿಸಿ ಕೇವಲ ಜನರನ್ನಷ್ಟೇ ಅಲ್ಲ, ಸ್ಮಾರ್ಟ್‌ಫೋನ್‌ಗಳ ಮೇಲೂ ಪರಿಣಾಮ ಬೀರುತ್ತಿದೆ. ಇತ್ತೀಚೆಗೆ ಅನೇಕ ಬಳಕೆದಾರರು ಫೋನ್ ನಿಧಾನವಾಗಿ ಚಾರ್ಜ್ ಆಗುತ್ತಿದೆ, ಕೆಲವೊಮ್ಮೆ ಸಂಪೂರ್ಣ ಚಾರ್ಜಿಂಗ್ ನಿಂತುಹೋಗುತ್ತಿದೆ ಎಂದು ದೂರುತ್ತಿದ್ದಾರೆ.

ಮೊಬೈಲ್ ತಜ್ಞರ ಪ್ರಕಾರ, ಫೋನ್ ಹೆಚ್ಚು ಬಿಸಿಯಾದಾಗ ಅದರ ಒಳಗಿನ ಸೆನ್ಸರ್ ಸುರಕ್ಷತಾ ಕ್ರಮವಾಗಿ ಚಾರ್ಜಿಂಗ್ ವೇಗವನ್ನು ಕಡಿಮೆ ಮಾಡುತ್ತದೆ. ಇದರಿಂದ ಬ್ಯಾಟರಿ ಹಾನಿಯಾಗುವುದನ್ನು ತಡೆಯಲು ಸಾಧ್ಯವಾಗುತ್ತದೆ.

ಬಿಸಿಲಿನಲ್ಲೇ ಹೆಚ್ಚು ಹೊತ್ತು ಮೊಬೈಲ್ ಬಳಸುವುದು, ವಿಡಿಯೋ ಗೇಮ್ ಆಡುವುದು ಹಾಗೂ ಭಾರೀ ಆ್ಯಪ್‌ಗಳನ್ನು ನಿರಂತರ ಬಳಸುವುದು ಫೋನ್ ತಾಪಮಾನವನ್ನು ಹೆಚ್ಚಿಸುತ್ತದೆ. ಇದರ ಪರಿಣಾಮವಾಗಿ ಫೋನ್ ಸ್ಲೋ ಆಗುವುದು, ಸ್ಕ್ರೀನ್ ಬ್ರೈಟ್‌ನೆಸ್ ಕಡಿಮೆಯಾಗುವುದು ಹಾಗೂ ಕೆಲವೊಮ್ಮೆ ಹ್ಯಾಂಗ್ ಆಗುವುದೂ ಕಂಡುಬರುತ್ತದೆ.

ಚಾರ್ಜಿಂಗ್ ವೇಳೆ ಫೋನ್ ಕವರ್ ತೆಗೆದುಿಡುವುದು ಉತ್ತಮ ಎಂದು ತಜ್ಞರು ಸಲಹೆ ನೀಡಿದ್ದಾರೆ. ಕವರ್ ಇದ್ದರೆ ಫೋನ್‌ನ ಬಿಸಿ ಹೊರಬರದೆ ಒಳಗೇ ಉಳಿಯುತ್ತದೆ. ಇದರಿಂದ ಬ್ಯಾಟರಿ ಹೆಚ್ಚು ಬಿಸಿಯಾಗಬಹುದು.

ಲೋಕಲ್ ಅಥವಾ ಕಡಿಮೆ ಗುಣಮಟ್ಟದ ಚಾರ್ಜರ್ ಬಳಸುವುದು ಅಪಾಯಕಾರಿ ಎಂದು ಎಚ್ಚರಿಸಲಾಗಿದೆ. ಕೆಲ ಸಂದರ್ಭಗಳಲ್ಲಿ ಕೆಟ್ಟ ಚಾರ್ಜರ್‌ಗಳಿಂದ ಬೆಂಕಿ ಅವಘಡಗಳೂ ಸಂಭವಿಸಿವೆ.

ಬೇಸಿಗೆಯಲ್ಲಿ ಮೊಬೈಲ್ ಸುರಕ್ಷಿತವಾಗಿರಲು ಕೆಲವು ಸರಳ ಕ್ರಮಗಳನ್ನು ಪಾಲಿಸಬೇಕು. ಫೋನ್ ಅನ್ನು ನೇರ ಬಿಸಿಲಿನಲ್ಲಿ ಇರಿಸಬಾರದು, ಬ್ಯಾಟರಿಯನ್ನು ಸಂಪೂರ್ಣ 0% ಆಗುವವರೆಗೆ ಬಳಸಬಾರದು ಹಾಗೂ ನೀರು ತಗುಲಿದ ಫೋನ್ ಸಂಪೂರ್ಣ ಒಣಗಿದ ಬಳಿಕ ಮಾತ್ರ ಚಾರ್ಜ್ ಮಾಡಬೇಕು ಎಂದು ತಜ್ಞರು ಹೇಳಿದ್ದಾರೆ.

Arun Gundmi | ಅರುಣ್ ಗುಂಡ್ಮಿ

Arun Gundmi Editor In Chief News Next Kannada. Working in more than 20 Years in Kannada News Media (Print, Digital and News Channels) Kannada News Next Live brings latest news from Karnataka, India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021 More »

Related Stories