jwala gutta : 60 ಲೀಟರ್ ಎದೆಹಾಲು ದಾನ ಮಾಡಿದ ಜ್ವಾಲಾ ಗುಟ್ಟಾ : ಅಕಾಲಿಕ ಶಿಶುಗಳ ಜೀವ ಉಳಿಸುವ ‘ಅಮೃತ’ದ ಕಥೆ
jwala gutta donates 60 liters breastmilk : ಹೈದರಾಬಾದ್ ಮತ್ತು ಚೆನ್ನೈನ ಸರ್ಕಾರಿ ಆಸ್ಪತ್ರೆಗಳಿಗೆ ಸುಮಾರು 60 ಲೀಟರ್ ಎದೆಹಾಲನ್ನು ದಾನ ಮಾಡಿದ್ದೇನೆ. ಕೇವಲ 100 ಮಿಲಿ ದಾನಿ ಹಾಲು 1 ಕೆಜಿ ತೂಕವಿರುವ ಪುಟ್ಟ ಮಗುವಿಗೆ ಹಲವಾರು ದಿನಗಳವರೆಗೆ ಆಹಾರವಾಗಬಲ್ಲದು.

jwala gutta donates 60 liters breastmilk : ಭಾರತದ ಖ್ಯಾತ ಬ್ಯಾಡ್ಮಿಂಟನ್ ಆಟಗಾರ್ತಿ ಜ್ವಾಗುಟ್ಟಾ ಸದ್ಯ ಮೊದಲ ವರ್ಷದ ತಾಯ್ತನದ ಸಂಭ್ರಮದಲ್ಲಿದ್ದಾರೆ. ಈ ನಡುವಲ್ಲೇ 60 ಲೀಟರ್ ಹಾಲು ದಾನ ಮಾಡುವ ಮೂಲಕ ಜ್ವಾಲಾಗುಟ್ಟ ಮಾದರಿಯ ಕಾರ್ಯವನ್ನು ಮಾಡಿದ್ದಾರೆ. ಹೈದರಾಬಾದ್ ಹಾಗೂ ಚೆನ್ನೈನ ಸರ್ಕಾರಿ ಆಸ್ಪತ್ರೆಗಳಿಗೆ ಎದೆಹಾಲನ್ನು ದಾನ ಮಾಡುವ ಮೂಲಕ ನವಜಾತ ಶಿಶುಗಳ ಆರೈಕೆ, ಎದೆಹಾಲು ದಾನದ ಮಹತ್ವವನ್ನು ಜಗತ್ತಿಗೆ ಸಾರಿದ್ದಾರೆ.
ಭಾರತದ ಹೆಮ್ಮೆಯ ಬ್ಯಾಡ್ಮಿಂಟನ್ ತಾರೆ ಜ್ವಾಲಾ ಗುಟ್ಟಾ (jwala gutta) ಮತ್ತು ಅವರ ಪತಿ, ಖ್ಯಾತ ನಟ ವಿಷ್ಣು ವಿಶಾಲ್ 2025 ರ ಏಪ್ರಿಲ್‌ನಲ್ಲಿ ಹೆಣ್ಣು ಮಗುವಿನ ಪೋಷಕರಾಗಿದ್ದರು. ಸದ್ಯ ತಾಯ್ತನದ ಒಂದು ವರ್ಷದ ಸಂಭ್ರಮದಲ್ಲಿರುವ ಜ್ವಾಲಾ, ಇತ್ತೀಚೆಗೆ ತಮ್ಮ ಸಾಮಾಜಿಕ ಜಾಲತಾಣ ‘X’ (ಟ್ವಿಟರ್) ಖಾತೆಯಲ್ಲಿ ಎದೆಹಾಲಿನ ಶೇಖರಣಾ ಚೀಲಗಳ ಫೋಟೋವನ್ನು ಹಂಚಿಕೊಂಡಿದ್ದಾರೆ.

“ನನ್ನ ಪ್ರಸವಾನಂತರದ ಮೊದಲ ವರ್ಷದಲ್ಲಿ ನಾನು ಹೈದರಾಬಾದ್ ಮತ್ತು ಚೆನ್ನೈನ ಸರ್ಕಾರಿ ಆಸ್ಪತ್ರೆಗಳಿಗೆ ಸುಮಾರು 60 ಲೀಟರ್ ಎದೆಹಾಲನ್ನು ದಾನ ಮಾಡಿದ್ದೇನೆ. ಕೇವಲ 100 ಮಿಲಿ ದಾನಿ ಹಾಲು 1 ಕೆಜಿ ತೂಕವಿರುವ ಪುಟ್ಟ ಮಗುವಿಗೆ ಹಲವಾರು ದಿನಗಳವರೆಗೆ ಆಹಾರವಾಗಬಲ್ಲದು. ಇದು ಎನ್‌ಐಸಿಯು (NICU) ನಲ್ಲಿರುವ ಹತ್ತಾರು ಶಿಶುಗಳ ಜೀವ ಉಳಿಸುತ್ತದೆ” ಎಂದು ಬರೆದುಕೊಳ್ಳುವ ಮೂಲಕ ಇತರ ತಾಯಂದಿರಿಗೆ ಅವರು ಪ್ರೇರಣೆಯಾಗಿದ್ದಾರೆ.
jwala gutta : ಅಕಾಲಿಕ ಶಿಶುಗಳಿಗೆ ದಾನಿ ಹಾಲು ಏಕೆ ಮುಖ್ಯ ?
ತಾಯಂದಿರ ಮಾನಸಿಕ ಒತ್ತಡ ಅಥವಾ ಅಕಾಲಿಕ ಹೆರಿಗೆಯಿಂದಾಗಿ (Premature Delivery) ಎನ್‌ಐಸಿಯುನಲ್ಲಿರುವ ಅನೇಕ ನವಜಾತ ಶಿಶುಗಳಿಗೆ ತಕ್ಷಣಕ್ಕೆ ತಾಯಿಯ ಹಾಲು ಸಿಗುವುದಿಲ್ಲ. ಇಂತಹ ಸಂದರ್ಭದಲ್ಲಿ ದಾನಿಗಳ ಎದೆಹಾಲು ಜೀವ ಉಳಿಸುವ ಸಂಜೀವಿನಿಯಾಗುತ್ತದೆ ಎನ್ನುತ್ತಾರೆ ತಜ್ಞ ವೈದ್ಯರು.
Also Read : ಕಿಂಗ್ ಕೊಹ್ಲಿ ಸೆಂಚುರಿ ಆರ್ಭಟ: ಕೋಲ್ಕತ್ತಾ ಕದನ ಗೆದ್ದು ಅಂಕಪಟ್ಟಿಯ ಅಗ್ರಸ್ಥಾನಕ್ಕೇರಿದ ಆರ್‌ಸಿಬಿ!
ನೆಕ್ರೋಟೈಸಿಂಗ್ ಎಂಟರೊಕೊಲೈಟಿಸ್ ತಡೆಗೆ ಎದೆ ಹಾಲು ಸಹಕಾರಿ
ಅಕಾಲಿಕ ಶಿಶುಗಳಲ್ಲಿ ಕರುಳಿನ ತೀವ್ರ ಕಾಯಿಲೆಯಾದ ‘ನೆಕ್ರೋಟೈಸಿಂಗ್ ಎಂಟರೊಕೊಲೈಟಿಸ್’ ಬಾರದಂತೆ ತಡೆಯಲು ದಾನಿ ಹಾಲು ಅತ್ಯಂತ ಪರಿಣಾಮಕಾರಿ. ಫಾರ್ಮುಲಾ ಮಿಲ್ಕ್‌ಗೆ (ಪೌಡರ್ ಹಾಲು) ಹೋಲಿಸಿದರೆ ದಾನಿ ಮಾನವ ಹಾಲು ಮಗುವಿಗೆ ನೈಸರ್ಗಿಕ ರೋಗನಿರೋಧಕ ಶಕ್ತಿಯನ್ನು ನೀಡುತ್ತದೆ.
ವಿಶ್ವ ಆರೋಗ್ಯ ಸಂಸ್ಥೆ (WHO) ಮಾರ್ಗಸೂಚಿ ಏನು ?
ವಿಶ್ವ ಆರೋಗ್ಯ ಸಂಸ್ಥೆಯ (WHO) ಪ್ರಕಾರ, ಜಗತ್ತಿನಲ್ಲಿ ವಾರ್ಷಿಕವಾಗಿ 20 ಮಿಲಿಯನ್‌ಗಿಂತಲೂ ಹೆಚ್ಚು ಶಿಶುಗಳು 2.5 ಕೆಜಿಗಿಂತ ಕಡಿಮೆ ತೂಕದೊಂದಿಗೆ ಜನಿಸುತ್ತವೆ. ಇಂತಹ ಕಡಿಮೆ ತೂಕದ (LBW) ಶಿಶುಗಳಿಗೆ ತಾಯಿಯ ಹಾಲು ಲಭ್ಯ ಇಲ್ಲದೇ ಇದ್ದಾಗ. ಸುರಕ್ಷಿತ ಹಾಲು ಬ್ಯಾಂಕಿಂಗ್ ಸೌಲಭ್ಯಗಳ ಮೂಲಕ ‘ದಾನಿ ಮಾನವ ಹಾಲು’ (Donor Human Milk) ನೀಡುವುದು ಅತ್ಯಗತ್ಯ ಎಂದು WHO ಶಿಫಾರಸ್ಸು ಮಾಡಿದೆ.
Also Read : ವಿರಾಟ್ ಕೊಹ್ಲಿ ವಿರುದ್ಧ ಷಡ್ಯಂತ್ರ? ಜರ್ಮನ್ ಮಾಡೆಲ್ ಅಚ್ಚರಿ ಹೇಳಿಕೆ
ಕರ್ನಾಟಕದಲ್ಲೂ ‘ಮಾನವ ಹಾಲಿನ ಬ್ಯಾಂಕ್‌ಗಳು’ (Human Milk Banks)
ಎದೆಹಾಲು ದಾನದ ಮಹತ್ವ ಅರಿತು ಕರ್ನಾಟಕ ಸರ್ಕಾರ ಮತ್ತು ಖಾಸಗಿ ಆಸ್ಪತ್ರೆಗಳು ಹಲವು ಹಾಲಿನ ಬ್ಯಾಂಕುಗಳನ್ನು ಸ್ಥಾಪಿಸಿವೆ. ಅಮೃತಧಾರೆ (ವಾಣಿ ವಿಲಾಸ್), ಶಾರದಾ ಬ್ಯಾಂಕ್ (ರಂಗದೊರೆ ಸ್ಮಾರಕ), ಜೀವಾಮೃತ (ಸೇಂಟ್ ಜಾನ್ಸ್), ಬ್ಯಾಪ್ಟಿಸ್ಟ್ ಮತ್ತು ಫೋರ್ಟಿಸ್ ಆಸ್ಪತ್ರೆ, ಮೈಸೂರಿನ ಅಮೃತ ವರ್ಷಿಣಿ ಹಾಲಿನ ಬ್ಯಾಂಕ್, ಶಿಶು ಸಂಜೀವಿನಿ ಘಟಕ, ಶಿವಮೊಗ್ಗಅಮೃತಧಾರೆ ಹಾಲಿನ ಬ್ಯಾಂಕುಗಳು ಸದ್ಯ ಕಾರ್ಯನಿರ್ವಹಿಸುತ್ತಿವೆ. ಜ್ವಾಲಾ ಗುಟ್ಟಾ ಅವರ ಈ ಶ್ಲಾಘನೀಯ ಕಾರ್ಯ ಸಮಾಜದಲ್ಲಿ ಎದೆಹಾಲು ದಾನದ ಬಗೆಗಿನ ಕಲ್ಪನೆಗಳನ್ನು ಬದಲಾಯಿಸಲು ಮತ್ತು ಹಾಲಿನ ಕೊರತೆಯಿಂದ ನರಳುವ ನವಜಾತ ಶಿಶುಗಳಿಗೆ ಹೊಸ ಜೀವನ ನೀಡಲು ಪ್ರಮುಖ ಹೆಜ್ಜೆಯಾಗಿದೆ.
jwala gutta donates 60 liters breastmilk human milk banks bangalore




