ವಿರಾಟ್‌ ಕೊಹ್ಲಿ ವಿರುದ್ಧ ಷಡ್ಯಂತ್ರ? ಜರ್ಮನ್‌ ಮಾಡೆಲ್‌ ಅಚ್ಚರಿ ಹೇಳಿಕೆ!

ಕ್ರಿಕೆಟ್ ಜಗತ್ತಿನ 'ಕಿಂಗ್' ಎಂದೇ ಖ್ಯಾತರಾಗಿರುವ ವಿರಾಟ್ ಕೊಹ್ಲಿ ಅವರ ವಿರುದ್ಧ ಅಂತರಾಷ್ಟ್ರೀಯ ಮಟ್ಟದಲ್ಲಿ ಅಪಪ್ರಚಾರ ಮಾಡಲು ಮತ್ತು ಅವರ ಘನತೆಗೆ ಧಕ್ಕೆ ತರಲು ಕೆಲವು ಕಿಡಿಗೇಡಿಗಳು ನಡೆಸಿದ್ದ ಸ್ಫೋಟಕ ಷಡ್ಯಂತ್ರವೊಂದು ಇದೀಗ ಬಯಲಾಗಿದೆ.

ಕ್ರಿಕೆಟ್ ಜಗತ್ತಿನ ‘ಕಿಂಗ್’ ಎಂದೇ ಖ್ಯಾತರಾಗಿರುವ ವಿರಾಟ್ ಕೊಹ್ಲಿ ಅವರ ವಿರುದ್ಧ ಅಂತರಾಷ್ಟ್ರೀಯ ಮಟ್ಟದಲ್ಲಿ ಅಪಪ್ರಚಾರ ಮಾಡಲು ಮತ್ತು ಅವರ ಘನತೆಗೆ ಧಕ್ಕೆ ತರಲು ಕೆಲವು ಕಿಡಿಗೇಡಿಗಳು ನಡೆಸಿದ್ದ ಸ್ಫೋಟಕ ಷಡ್ಯಂತ್ರವೊಂದು ಇದೀಗ ಬಯಲಾಗಿದೆ. ಜರ್ಮನ್ ಮೂಲದ ಖ್ಯಾತ ಮಾಡೆಲ್ ಲಿಜ್‌ಲ್ಯಾಜ್ ಅವರು ನೀಡಿರುವ ಅಚ್ಚರಿಯ ಹೇಳಿಕೆಯು ಕ್ರೀಡಾ ಲೋಕದಲ್ಲಿ ಸಂಚಲನ ಮೂಡಿಸಿದೆ.

ಕಳೆದ ತಿಂಗಳು ಛಾಯಾಗ್ರಾಹಕ ಅದ್ವೈತ್ ವೈದ್ಯ ಅವರು ಮಾಡೆಲ್ ಲಿಜ್‌ಲ್ಯಾಜ್ ಅವರ ಹಳೆಯ ಫೋಟೋವೊಂದನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದರು. ಈ ಫೋಟೋವನ್ನು ವಿರಾಟ್ ಕೊಹ್ಲಿ ಅವರ ಅಧಿಕೃತ ಖಾತೆಯಿಂದ ‘ಲೈಕ್’ ಮಾಡಲಾಗಿದೆ ಎಂದು ತೋರಿಸುವ ಸ್ಕ್ರೀನ್‌ಶಾಟ್‌ಗಳು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದ್ದವು. ಈ ಒಂದು ಸಣ್ಣ ವಿಚಾರವನ್ನು ಇಟ್ಟುಕೊಂಡು ವಿರಾಟ್ ಕೊಹ್ಲಿ ಅವರ ಚಾರಿತ್ರ್ಯ ಹರಣ ಮಾಡಲು ಸಂಚು ರೂಪಿಸಲಾಗಿತ್ತು ಎಂಬ ವಿಚಾರ ಈಗ ಬೆಳಕಿಗೆ ಬಂದಿದೆ.

ಖಾಸಗಿ ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಈ ಬಗ್ಗೆ ಮೌನ ಮುರಿದಿರುವ ಲಿಜ್‌ಲ್ಯಾಜ್, ತಮಗೆ ಎದುರಾದ ಆಘಾತಕಾರಿ ಅನುಭವವನ್ನು ಹಂಚಿಕೊಂಡಿದ್ದಾರೆ. ವಿರಾಟ್ ಕೊಹ್ಲಿ ನನ್ನ ಫೋಟೋವನ್ನು ಲೈಕ್ ಮಾಡಿದ್ದಾರೆ ಎಂಬ ಸುದ್ದಿ ಹರಡುತ್ತಿದ್ದಂತೆ, ವಿವಿಧ ನಿಯತಕಾಲಿಕೆಗಳು ಮತ್ತು ಕೆಲವು ಪತ್ರಕರ್ತರಿಂದ ನನಗೆ ನಿರಂತರ ಕರೆಗಳು ಬರಲಾರಂಭಿಸಿದವು.

ಅವರು ವಿರಾಟ್ ವಿರುದ್ಧ ಸುಳ್ಳು ಆರೋಪಗಳನ್ನು ಮಾಡಲು ನನ್ನ ಮೇಲೆ ತೀವ್ರ ಒತ್ತಡ ಹೇರಿದರು. ಕೊಹ್ಲಿ ಮಾಡದೇ ಇರುವ ತಪ್ಪುಗಳನ್ನು ಮಾಡಿದ್ದಾರೆ ಎಂದು ಹೇಳಿಕೆ ನೀಡಿದರೆ ದೊಡ್ಡ ಮೊತ್ತದ ಹಣ ನೀಡುವುದಾಗಿ ಆಮಿಷ ಒಡ್ಡಿದ್ದರು ಎಂದು ಅವರು ಸ್ಫೋಟಕ ಮಾಹಿತಿ ನೀಡಿದ್ದಾರೆ.

ಹಣಕ್ಕಾಗಿ ವಿರಾಟ್ ಕೊಹ್ಲಿ ಅವರ ವಿರುದ್ಧ ಸುಳ್ಳು ಹೇಳಲು ನಿರಾಕರಿಸಿದ ಲಿಜ್‌ಲ್ಯಾಜ್, ತಮ್ಮ ನಿಲುವನ್ನು ಸ್ಪಷ್ಟಪಡಿಸಿದ್ದಾರೆ. ನಾನು ಅಂತಹ ಕೆಟ್ಟ ಬುದ್ಧಿಯ ವ್ಯಕ್ತಿಯಲ್ಲ. ವಿರಾಟ್ ಕೊಹ್ಲಿ ನನ್ನ ನೆಚ್ಚಿನ ಕ್ರಿಕೆಟಿಗ ಎಂದು ನಾನೇ ಹೇಳಿಕೊಂಡಿದ್ದೇನೆ. ಕೇವಲ ಹಣಕ್ಕಾಗಿ ಒಬ್ಬ ವ್ಯಕ್ತಿಯ ವ್ಯಕ್ತಿತ್ವಕ್ಕೆ ಮಸಿ ಬಳಿಯುವ ಕೆಲಸವನ್ನು ನಾನು ಎಂದಿಗೂ ಮಾಡುವುದಿಲ್ಲ.

Also Read: ಐಸಿಸಿ ಹೊಸ ರ‍್ಯಾಂಕಿಂಗ್‌ ಪಟ್ಟಿ ಪ್ರಕಟ: ಭಾರತ ನಂ.1, ಪಾಕ್‌ 5ನೇ ಸ್ಥಾನಕ್ಕೆ ಕುಸಿತ!

ನನ್ನ ನೆಚ್ಚಿನ ಕ್ರಿಕೆಟಿಗ ನನ್ನ ಪೋಸ್ಟ್ ಲೈಕ್ ಮಾಡಿದ್ದು ನನಗೆ ಸಂತೋಷ ನೀಡಿತ್ತು, ಆದರೆ ಅದರ ಬೆನ್ನಲ್ಲೇ ಇಂತಹ ಷಡ್ಯಂತ್ರಗಳು ನಡೆಯುತ್ತವೆ ಎಂದು ನಾನು ಊಹಿಸಿರಲಿಲ್ಲ ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ. ಸದ್ಯ ಈ ಘಟನೆಯ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಚರ್ಚೆಗಳು ನಡೆಯುತ್ತಿದ್ದು, ಲಿಜ್‌ ಲ್ಯಾಜ್‌ ಅವರ ಪ್ರಾಮಾಣಿಕ ನಡೆಗೆ ವಿರಾಟ್‌ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Conspiracy against Virat Kohli German model makes surprising statement

Darshan Shetty Narkali | ದರ್ಶನ್‌ ಶೆಟ್ಟಿ ನಾರ್ಕಳಿ

ದರ್ಶನ್‌ ಶೆಟ್ಟಿ ನಾರ್ಕಳಿ (Darshan Shetty Narkali) ಅವರು ನ್ಯೂಸ್‌ ನೆಕ್ಸ್ಟ್ ಕನ್ನಡ ( News Next Kannada) ವಿಭಾಗದ ಪತ್ರಕರ್ತ. ಮಂಗಳೂರು ವಿವಿಯಲ್ಲಿ ಪದವಿ ಪಡೆದಿದ್ದಾರೆ. ಕಳೆದ 1 ವರ್ಷಗಳಿಂದ ವೆಬ್‌ಸೈಟ್‌ನಲ್ಲಿ ವರದಿಗಾರಿಕೆಯ ಅನುಭವ ಹೊಂದಿದ್ದಾರೆ. ನ್ಯೂಸ್‌ ನೆಕ್ಸ್ಟ್‌ ( News Next Digital) ಸುದ್ದಿ ವಾಹಿನಿಯಲ್ಲಿ ನಿರೂಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ರಾಜಕೀಯ, ಪರಿಸರ, ವಿಜ್ಞಾನ -ತಂತ್ರಜ್ಞಾನ ರಂಗಗಳಲ್ಲಿ ಆಸಕ್ತಿ ಹೊಂದಿದ್ದಾರೆ. ಪ್ರವಾಸ, ಕ್ರಿಕೆಟ್ ,ಫೋಟೋಗ್ರಾಫಿ, ಓದು, ಸಿನಿಮಾ ಇವರ ಹವ್ಯಾಸಗಳು. More »

Related Stories