ರಾಷ್ಟ್ರೀಯ ಮಟ್ಟದ ಸ್ಪೀಡ್​ ಸ್ಕೇಟಿಂಗ್​ ಚಾಂಪಿಯನ್​ಶಿಪ್​ : ಬ್ರಹ್ಮಾವರದ ಅದ್ವಿತ​ ಗುರುಪ್ರಸಾದ್​ ಶೆಟ್ಟಿಗಾರ್ ಗೆ ಚಿನ್ನದ ಪದಕ

ಬ್ರಹ್ಮಾವರ : 4 ವರ್ಷದ ಒಳಗಿನ ಪ್ರಾಯದ ಮಕ್ಕಳಿಗಾಗಿ ಚೆನ್ನೈನಲ್ಲಿ ನಡೆದ 25ನೇ ರಾಷ್ಟ್ರೀಯ ಮಟ್ಟದ ಸ್ಪೀಡ್​ ಸ್ಕೇಟಿಂಗ್​ ಚಾಂಪಿಯನ್​ಶಿಪ್​ನಲ್ಲಿ (National Speed Skating Championship) ಉಡುಪಿ ಜಿಲ್ಲೆ ಬ್ರಹ್ಮಾವರದ ಬಾಲಕಿ ಅದ್ವಿತ​ ಗುರುಪ್ರಸಾದ್​ ಶೆಟ್ಟಿಗಾರ್​ ಚಿನ್ನದ ಪದಕ ಗಳಿಸುವ ಮೂಲಕ ವಿಶಿಷ್ಟ ಸಾಧನೆಗೈದಿದ್ದಾಳೆ.

National Speed Skating Championship Advit Guruprasad Shettigar from Brahmavar Wins Gold Medal 2

400 ಮೀಟರ್​ ಮತ್ತು 1000 ಮೀಟರ್​​ ಸ್ಪರ್ಧೆಯಲ್ಲಿ ತಮಿಳುನಾಡಿನ ಸ್ಪರ್ಧಿಯನ್ನು ಹಿಂದಿಕ್ಕುವ ಮೂಲಕ ಚಾಂಪಿಯನ್​ ಆಗಿ ಅದ್ವಿತ್​ ಹೊರಹೊಮ್ಮಿದ್ದು ಅಂತಾರಾಷ್ಟ್ರೀಯ ಮಟ್ಟದ ಸ್ಪೀಡ್​ ಸ್ಕೇಟಿಂಗ್​ ಸ್ಪರ್ಧೆಯಲ್ಲಿ ಭಾಗವಹಿಸುವ ಅವಕಾಶ ಪಡೆದುಕೊಂಡಿದ್ದಾಳೆ.

ಗುರುಪ್ರಸಾದ್​ ಶೆಟ್ಟಿಗಾರ್​ ಹಾಗೂ ಸಂಧ್ಯಾ ಜಿ. ಶೆಟ್ಟಿಗಾರ್​ ದಂಪತಿಯ ಪುತ್ರಿಯಾಗಿರುವ ಅದ್ವಿತ ​ಬೆಂಗಳೂರಿನ ಕಾಂಪ್ಲೆಕ್ಸ್​ ಸ್ಪೋರ್ಟ್ಸ್​ ಅಕಾಡೆಮಿಯಲ್ಲಿ ತನ್ನ 3ನೇ ವರ್ಷ ಪ್ರಾಯದಿಂದಲೂ ​​ ಸ್ಕೇಟಿಂಗ್​ ತರಬೇತಿ ಪಡೆಯುತ್ತಿದ್ದಾಳೆ..

National Speed Skating Championship Advit Guruprasad Shettigar from Brahmavar Wins Gold Medal 2

ಇದನ್ನೂ ಓದಿ : ಕುಂದಾಪುರ : ಎಸ್‌ಪಿಜಿ ಗೋಲ್ಡ್ ಅಂಡ್ ಡೈಮಂಡ್ ಅಂಗಡಿಯಲ್ಲಿ ಕಳವು, ಆರೋಪಿ ಅರೆಸ್ಟ್ಇದನ್ನೂ ಓದಿ :

ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಧನೆಗೈದಿರುವ ಮಂಗಳೂರಿನ ಮಹೇಶ್​ ಕುಮಾರ್​ ಅದ್ವಿಕ್​​ನ ಸ್ಕೇಟಿಂಗ್​ ಗುರುಗಳು. ಇವರ ಮಾರ್ಗದರ್ಶನದಲ್ಲಿ ಸಾಧನೆಗೈದಿರುವ ಅದ್ವಿತ್​ ಶೀಘ್ರದಲ್ಲಿಯೇ ಮಲೇಷಿಯಾದಲ್ಲಿ ನಡೆಯಲಿರುವ ಅಂತಾರಾಷ್ಟ್ರೀಯ ಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಲಿದ್ದಾಳೆ.

ಅತ್ಯಂತ ಚಿಕ್ಕ ವಯಸ್ಸಿನಲ್ಲಿ ರಾಷ್ಟ್ರಮಟ್ಟದ ಸಾಧನೆಗೈದಿರುವ ಅದ್ವಿತ್​, ಅಂತಾರಾಷ್ಟ್ರೀಯ ಮಟ್ಟದಲ್ಲಿಯೂ ಚಾಂಪಿಯನ್​ ಆಗಿ ಹೊರಹೊಮ್ಮುವ ಮೂಲಕ ಉಡುಪಿ ಜಿಲ್ಲೆಗೆ ಹಾಗೂ ಸಂಪೂರ್ಣ ಭಾರತಕ್ಕೆ ಕೀರ್ತಿ ತರಲಿ ಎಂದು ಬ್ರಹ್ಮಾವರದ ಜನತೆ ಶುಭ ಹಾರೈಸುತ್ತಿದ್ದಾರೆ.

ಇದನ್ನೂ ಓದಿ : ಅಪ್ರಾಪ್ತ ವಯಸ್ಕನಿಗೆ ಸ್ಕೂಟರ್ ನೀಡಿದ ಮಾಲೀಕಳ ವಿರುದ್ಧ ಪ್ರಕರಣ ದಾಖಲು

National Speed Skating Championship Advit Guruprasad Shettigar from Brahmavar Wins Gold Medal

Kannada News Next Desk

Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021

Related Stories